Vaikuntha Ekadashi 2025: ಏಕಾದಶಿ ದಿನಾಂಕ, ಪಾರಣ ಸಮಯ, ಪೂಜಾ ವಿಧಿಗಳು, ಮಹತ್ವ
ವೈಕುಂಠ ಏಕಾದಶಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಈ ದಿನವನ್ನು ವಿಷ್ಣು ದೇವನನ್ನು ಪೂಜಿಸಲು ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಭಕ್ತರು ವಿಷ್ಣು ದೇವನನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ಏಕಾದಶಿ ತಿಥಿಯಿಂದ ಕಠಿಣ ಉಪವಾಸವನ್ನು ಪ್ರಾರಂಭಿಸಿ ದ್ವಾದಶಿ ತಿಥಿಯಂದು ಕೊನೆಗೊಳಿಸಲಾಗುತ್ತದೆ. ಹಾಗಾದರೆ 2025ರ ಮೊದಲ ವೈಕುಂಠ ಏಕಾದಶಿ ದಿನಾಂಕ, ಶುಭ ಸಮಯ, ಮಹತ್ವ, ಪ್ರಾಮುಖ್ಯತೆಯನ್ನು ತಿಳಿಯೋಣ.
ಏಕಾದಶಿ ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಉಪವಾಸವಾಗಿದೆ. ಇದನ್ನು ಪ್ರತಿ ತಿಂಗಳ ದ್ವಾದಶಿ ತಿಥಿಯಂದು ಆಚರಿಸಲಾಗುತ್ತದೆ. 'ಏಕ' ಅಂದರೆ 'ಒಂದು' ಮತ್ತು 'ದಶ' ಅಂದರೆ 'ಹತ್ತು'. ವೈಕುಂಠ ಏಕಾದಶಿ ಉಪವಾಸವನ್ನು ಮಾಡುವುದರಿಂದ ವಿಷ್ಣುವಿನ ಆಶೀರ್ವಾದವನ್ನು ಭಕ್ತರು ಪಡೆಯುತ್ತಾರೆ. ಇದು ವ್ಯಕ್ತಿಗಳ ಪಾಪಗಳನ್ನು ದೂರ ಮಾಡುತ್ತದೆ. ಹೀಗಾಗಿ ಈ ದಿನ ಭಕ್ತರು ಕಠಿಣ ಉಪವಾಸವನ್ನು ಕೈಗೊಳ್ಳುತ್ತಾರೆ. 2025ನೇ ವರ್ಷದ ಮೊದಲ ತಿಂಗಳು ಅಂದರೆ ಜನವರಿ 9ನೇ ತಾರೀಕು ವೈಕುಂಠ ಏಕಾದಶಿ ಆರಂಭವಾಗುತ್ತದೆ. ಹಾಗಾದರೆ ಏಕಾದಶಿ ತಿಥಿ ಪ್ರಾರಂಭವಾಗುವ ದಿನಾಂಕ ಸಮಯದ ಬಗ್ಗೆ ತಿಳಿಯೋಣ.

ಏಕಾದಶಿ ದಿನಾಂಕ ಹಾಗೂ ಸಮಯ:-
*ಏಕಾದಶಿ ತಿಥಿ ಪ್ರಾರಂಭವಾಗುತ್ತದೆ - ಜನವರಿ 9, 2025 - ಮಧ್ಯಾಹ್ನ 12:22ಕ್ಕೆ
* ಏಕಾದಶಿ ತಿಥಿ ಕೊನೆಗೊಳ್ಳುತ್ತದೆ - ಜನವರಿ 10, 2025 - ಬೆಳಗ್ಗೆ 10:19ಕ್ಕೆ
*ಪರಾನಾ ಸಮಯ - ಜನವರಿ 11, 2025 - ಬೆಳಗ್ಗೆ 07:14 ರಿಂದ ಬೆಳಗ್ಗೆ 08:21ರವರೆಗೆ
*ಪಾರಣ ದಿನದ ದ್ವಾದಶಿ ಅಂತ್ಯದ ಕ್ಷಣ - ಜನವರಿ 11, 2025 - ಬೆಳಗ್ಗೆ 08:21ರವರೆಗೆ
ಷಟ್ಟಿಲ ಏಕಾದಶಿ 2025: ಮಾಘ ಮಾಸ (ಕೃಷ್ಣ ಪಕ್ಷ)
ಏಕಾದಶಿ ತಿಥಿ ಆರಂಭ - ಜನವರಿ 24, 2025 - ಸಂಜೆ 07:25 ನಿಮಿಷಕ್ಕೆ
ಏಕಾದಶಿ ತಿಥಿ ಕೊನೆಗೊಳ್ಳುತ್ತದೆ - ಜನವರಿ 25, 2025 - ರಾತ್ರಿ 08:31 ನಿಮಿಷಕ್ಕೆ
ಪರಾನಾ ಸಮಯ - ಜನವರಿ 26, 2025 - ಬೆಳಗ್ಗೆ 07:11 ರಿಂದ ಬೆಳಗ್ಗೆ 09:20ನಿಮಿಷಕ್ಕೆ
ಪಾರಣ ದಿನದ ದ್ವಾದಶಿ ಅಂತ್ಯದ ಕ್ಷಣ - ಜನವರಿ 26, 2025- ರಾತ್ರಿ 08:54ಕ್ಕೆ
ಮಹತ್ವ
ವೈಕುಂಠ ಏಕಾದಶಿ ಹಿಂದೂಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ವಿಷ್ಣುವನ್ನು ಪೂಜಿಸಲು ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಆತನನ್ನು ಪೂರ್ಣ ಭಕ್ತಿಯಿಂದ ಪೂಜಿಸುವ ಭಕ್ತರು ಮತ್ತು ಅವನಲ್ಲಿ ನಂಬಿಕೆಯನ್ನು ಹೊಂದುವವರಿಗೆ ಸಂತೋಷ, ಸಮೃದ್ಧಿ ಮತ್ತು ಇತರ ಎಲ್ಲಾ ಲೌಕಿಕ ಸಂತೋಷಗಳು ಸಿಗಲಿವೆ ಎಂಬ ನಂಬಿಕೆ ಇದೆ.
ಪ್ರಾಮುಖ್ಯತೆ
1. ಏಕಾದಶಿಯನ್ನು ಆತ್ಮಾವಲೋಕನ, ಸ್ವಯಂ ಪರೀಕ್ಷೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪರಿಪೂರ್ಣ ದಿನವೆಂದು ಪರಿಗಣಿಸಲಾಗಿದೆ.
2. ಬ್ರಹ್ಮಾಂಡದ ರಕ್ಷಕ ಎಂದು ಪರಿಗಣಿಸಲ್ಪಟ್ಟ ಭಗವಾನ್ ವಿಷ್ಣುವನ್ನು ಏಕಾದಶಿಯಂದು ಪೂಜಿಸಲಾಗುತ್ತದೆ.
3. ಜನಪ್ರಿಯ ನಂಬಿಕೆಯ ಪ್ರಕಾರ ಏಕಾದಶಿಯು ಶುದ್ಧೀಕರಣದ ದಿನವಾಗಿದೆ. ಈ ಸಮಯದಲ್ಲಿ ವಿಷ್ಣುವಿನ ಭಕ್ತರು ತಮ್ಮ ಮನಸ್ಸು ಮತ್ತು ಹೃದಯಗಳನ್ನು ಶುದ್ಧೀಕರಿಸಿಕೊಳ್ಳುತ್ತಾರೆ. ಹಿಂದಿನ ಅಪರಾಧಗಳಿಗೆ ಕ್ಷಮೆ ಕೇಳಿ ಪೂಜೆ ಮಾಡುತ್ತಾರೆ.
4. ಭಕ್ತರು ಏಕಾದಶಿಯಂದು ಮೋಕ್ಷವನ್ನು ಸಾಧಿಸುವ ದಿನ ಎಂದು ನಂಬುತ್ತಾರೆ.
ಪೂಜಾ ವಿಧಿಗಳು
1. ಉಪವಾಸ: ಏಕಾದಶಿಯಂದು ಭಕ್ತರು ಇಡೀ ದಿನ ಆಹಾರವನ್ನು ಸೇವಿಸುವುದನ್ನು ಬಿಟ್ಟು ವಿಷ್ಣವಿನ ಆರಾಧನೆ ಮಾಡಲಾಗುತ್ತದೆ.
2. ವಿಷ್ಣುವನ್ನು ಪೂಜಿಸುವುದು: ಭಕ್ತರು ಈ ದಿನ ವಿಷ್ಣು ದೇವನ ಆಶೀರ್ವಾದ ಪಡೆಯಲು ಪ್ರಾರ್ಥನೆಗಳನ್ನು ಮಾಡುತ್ತಾರೆ, ಹೂವು, ಹಣ್ಣು ಇತರ ವಸ್ತುಗಳನ್ನು ಅರ್ಪಿಸಿ ಪೂಜಿಸುತ್ತಾರೆ.
3. ಪೂಜೆ: ಏಕಾದಶಿಯಂದು ದೇವಸ್ಥಾನ ಹಾಗೂ ಮನೆಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ, ಇದರಲ್ಲಿ ಭಗವಾನ್ ವಿಷ್ಣುವನ್ನು ಪ್ರಾರ್ಥಿಸುವುದು ಮತ್ತು ಮಂತ್ರಗಳನ್ನು ಪಠಿಸುವುದು ಒಳಗೊಂಡಿರುತ್ತದೆ.
4. ದಾನ: ಈ ದಿನ ಅಗತ್ಯವಿರುವವರಿಗೆ ಸಹಾಯ ಮಾಡುವುದು ತುಂಬಾ ಉತ್ತಮ ಫಲ ನೀಡುತ್ತದೆ. ಹೀಗಾಗಿ ಭಕ್ತರು ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುತ್ತಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications