ಚಾಂದ್ರಮಾನ ಪಂಚಾಂಗ ಡೌನ್ ಲೋಡ್ ಮಾಡಿಕೊಳ್ಳಿ

ಮದುವೆ, ಉಪನಯನ, ಅನ್ನಪ್ರಾಶನ, ನಾಮಕರಣ, ಗೃಹಪ್ರವೇಶ, ಪ್ರಯಾಣ..ಇತ್ಯಾದಿ ಶುಭ ಕಾರ್ಯಗಳಿಗೆ ಅಥವಾ ಕೆಟ್ಟ ನಕ್ಷತ್ರದಲ್ಲಿ ಮರಣ ಹೊಂದಿದ್ದರಿಂದ ಮನೆ ತೊರೆಯುವುದು, ರಾಹುಕಾಲ, ಗುಳಿಕಾಲ ಲೆಕ್ಕಾಚಾರ, ದೋಷ, ಪ್ರದೋಷ, ಗ್ರಹಣ, ಗ್ರಹಚಾರ ಫಲಾಫಲಗಳ ವಿವೇಚನೆ, ಆಚರಣೆ ಎಲ್ಲಕ್ಕೂ ಪಂಚಾಂಗ ನೋಡುವುದು ಮಾಮೂಲಿ. ಸೌರಮಾನ, ಚಾಂದ್ರಮಾನ ಪದ್ಧತಿಗನುಸಾರವಾಗಿ ಪಂಚಾಂಗಗಳಿವೆ. ಒಂಟಿಕೊಪ್ಪಲ್ ಪಂಚಾಂಗ, ಶೃಂಗೇರಿ ಮಠದ ಪಂಚಾಂಗ ಪ್ರಸಿದ್ಧವಾಗಿದೆ. ಇದರಂತೆ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಚಾಂದ್ರಮಾನ ಪಂಚಾಂಗದ ಲಭ್ಯತೆಯನ್ನು ಎಲ್ಲಾ ಆಸ್ತಿಕರಿಗೂ ತಲುಪಿಸುವ ನಿಟ್ಟಿನಲ್ಲಿ ಹಲವು ಯೋಜನೆ ಹಮ್ಮಿಕೊಂಡಿದೆ.
ಪ್ರತಿ ವರ್ಷ ಪಂಚಾಂಗಗಳನ್ನು ಮುದ್ರಿಸಿ, ಶ್ರೀಮಠದ ಕಚೇರಿಗಳಲ್ಲಿ, ಮಧ್ವ ಸಂಘಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ನೀಡುತ್ತಾ ಬರಲಾಗಿದೆ. ವೆಬ್ ಲೋಕ ನೆಚ್ಚಿಕೊಂಡಿರುವವರ ಅನುಕೂಲಕ್ಕೆ ರಾಯರಮಠದ ವೆಬ್ ತಾಣದಲ್ಲಿ (ಶ್ರೀಖರ ನಾಮ ಸಂವತ್ಸರ) ಪಂಚಾಂಗವನ್ನು ಡೌನ್ ಲೋಡ್ಗೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
The Principal,
Sri Gurusarvabhouma Sanskrit Vidyapeetha
Sri Raghavendra Swamy Matha,
Mantralayam - 518345
Ph: (08512)279 496
ಮಂತ್ರಾಲಯ ರಾಯರ ಮಠದ ಈ ವೆಬ್ ತಾಣದಲ್ಲಿ ಮಂತ್ರಾಲಯ ಸೇರಿದಂತೆ ಹಲವು ಶಾಖಾ ಮಠಗಳಲ್ಲಿ ನಡೆಯುವ ಪೂಜೆ ಪುನಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರವಿದೆ. ಇದಕ್ಕಿಂತ ಹೆಚ್ಚಾಗಿ ಮಂತ್ರಾಲಯಕ್ಕೆ ಬರಲಿಚ್ಛಿಸುವ ಆಸ್ತಿಕರಿಗೆ ಮಾರ್ಗಸೂಚಿ, ವಸತಿ ವ್ಯವಸ್ಥೆ, ಸೇವಾ ವಿವರಗಳು ಬೆರಳು ತುದಿಯಲ್ಲಿ ಲಭ್ಯವಿದೆ. ರಾಯರ ಪೂಜಾ ಕೈಂಕರ್ಯಗಳ ಸಚಿತ್ರಗಳ ಜೊತೆ, ಮಠ ನಡೆಸುತ್ತಿರುವ ಶಾಲೆಗಳು, ತಿರುಪತಿಯ ವೈದಿಕ ಸಂಶೋಧನಾ ಕೇಂದ್ರ, ವಧು ವರರ ಅನ್ವೇಷಣಾ ಕೇಂದ್ರದ ಬಗ್ಗೆ ಕೂಡ ಮಾಹಿತಿ ಇದೆ.












Click it and Unblock the Notifications