ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ಫಲ ... ಚಿತ್ರಭಾನು ಸಂವತ್ಸರದಲ್ಲಿ ಲೋಕ ವ್ಯಾಪಾರ ಹೇಗೆ?

By Staff
|
Google Oneindia Kannada News

ಚಿತ್ರಭಾನು ಸಂವತ್ಸರದಲ್ಲಿ ಶನಿಯು ದೊರೆ, ಸೇನಾಪತಿ ಅರ್ಘಾಧಿಪತಿ ಮತ್ತು ಮೇಘಾಧಿಪತಿಯೂ ಆಗಿರುವುದರಿಂದ-

ವಿಚಿತ್ರ ಖಂಡವೃಷ್ಟಿ, ಸಸ್ಯದ ಬೆಳವಣಿಗೆ ಮಧ್ಯಮ, ಹಿಂಗಾರು ಬೆಳೆಗೆ ಅನುಕೂಲವಾಗಲಿದೆ. ಆದರೆ, ಪ್ರಜೆಗಳಿಗೆ ಕಳ್ಳಕಾಕರ ಭಯ, ವ್ಯಾಧಿಯಿಂದ ಭಯ ಮತ್ತು ತೊಂದರೆ ಉಂಟಾಗುತ್ತದೆ. ದುಷ್ಟ ನಿಗ್ರಹಕ್ಕೆ ಸೈನ್ಯದ ನೆರವು ಒದಗುತ್ತದೆ. ಜನರು ಧರ್ಮದ ಭೀತಿ ಇಲ್ಲದೆ ಅಧರ್ಮದಲ್ಲಿ ನಿರತರಾಗುತ್ತಾರೆ.

ಕಪ್ಪು ಧಾನ್ಯದ ಫಸಲು ಚಿತ್ರಭಾನು ಸಂವತ್ಸರದಲ್ಲಿ ಹುಲುಸಾಗಿರುತ್ತದೆ. ಸೂರ್ಯನು ಮಂತ್ರಿಯಾಗಿರುವುದರಿಂದ ರಾಜ್ಯಾಧಿಕಾರಿಗಳಲ್ಲಿ ಪರಸ್ಪರ ವೈಮನಸ್ಯ, ಪ್ರತಿಬಂಧಕ ಇರುತ್ತದೆ. ಜನರು ಅಧರ್ಮ ನಿರತರಾಗಿರುತ್ತಾರೆ. ಪರಸ್ಪರ ಘರ್ಷಣೆಯ ಸಂಭವವಿರುತ್ತದೆ.

ಬುಧನು ಸಸ್ಯಾಧಿಪತಿ ಆಗಿರುವುದರಿಂದ ಗಾಳಿ ಅಧಿಕ , ಮಳೆ ಕಡಿಮೆ. ಸಾಮಾನ್ಯ ಜನರು ಭಯಭೀತರಾಗಿರುತ್ತಾರೆ. ಚಂದ್ರನು ಧಾನ್ಯಾಧಿಪತಿ ಆಗಿರುವುದರಿಂದ ಹಸುಗಳು ಹೆಚ್ಚಾಗಿ ಹಾಲನ್ನು ಕೊಡುತ್ತವೆ. ಮಧ್ಯೆ ಮಧ್ಯೆ ಮಳೆ ಬೀಳುವ ಸಂಭವವಿದೆ. ಧಾನ್ಯದ ಫಸಲು ಮಧ್ಯಮ.

ಶುಕ್ರನು ರಸಾಧಿಪತಿ ಆಗಿರುವುದರಿಂದ ಸುಗಂಧ ವಸ್ತುಗಳು ಗೆಡ್ಡೆ ಗೆಣಸು, ಪುಷ್ಪಗಳ ಸಮೃದ್ಧಿ ಇರುತ್ತದೆ. ಕುಜನು, ನೀರಸಾಧಿಪತಿ ಆಗಿರುವುದರಿಂದ ಶ್ರೀಗಂಧ, ಕರ್ಪೂರ, ಕಸ್ತೂರಿ, ಕೆಂಪು ಬಟ್ಟೆ ಇವುಗಳ ಬೆಲೆ ಅಧಿಕವಾಗಿರುತ್ತದೆ.

ಬಲಭದ್ರನು, ಪಶುನಾಯಕನಾಗಿರುವುದರಿಂದ ಮಳೆ ಬೆಳೆ ಅನುಕೂಲ, ಮಧ್ಯಪ್ರದೇಶದಲ್ಲಿ ಸುಭಿಕ್ಷ.

ಮುಖಪುಟ / ಯುಗಾದಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X