ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Tulsi Vivah 2022 : ತುಳಸಿ ವಿವಾಹ ಶುಭ ಮುಹೂರ್ತ, ಮಂತ್ರ ಹಾಗೂ ಪೂಜಾ ವಿಧಾನದ ಬಗ್ಗೆ ತಿಳಿಯಿರಿ

|
Google Oneindia Kannada News

ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಮಹತ್ವವಿದೆ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯನ್ನು ಮಾಡಿ ಮತ್ತು ತುಳಸಿಯ ಮುಂದೆ ದೀಪ ಹಚ್ಚುವುದರಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಇದರಿಂದ ವಿಷ್ಣುವಿನ ಆಶೀರ್ವಾದವನ್ನು ಪಡೆಯಬಹುದು. ಕಾರ್ತಿಕ ಮಾಸದ ಯಾವುದೇ ದಿನದಂದು ಶ್ರೀಹರಿಗೆ ತುಳಸಿಯನ್ನು ಅರ್ಪಿಸಿದರೆ ಅದರ ಫಲವು ಗೋದಾನಕ್ಕಿಂತ ಅನೇಕ ಪಟ್ಟು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನದಂದು ತುಳಸಿ ವಿವಾಹವನ್ನು ನಡೆಸುವ ಸಂಪ್ರದಾಯವು ಬಹಳ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕೆಲವರು ಏಕಾದಶಿಯಂದು ತುಳಸಿ ವಿವಾಹವನ್ನು ನಡೆಸುತ್ತಾರೆ, ಇನ್ನು ಕೆಲವರು ದ್ವಾದಶಿ ತಿಥಿಯಂದು ತುಳಸಿ ವಿವಾಹವನ್ನು ಮಾಡುತ್ತಾರೆ. ಈ ವರ್ಷ ತುಳಸಿ ವಿವಾಹ 5ನೇ ನವೆಂಬರ್ 2022 ರಂದ ತುಳಿಸಿ ವಿವಾಹ ಮಾಡಲಾಗುತ್ತದೆ. ತುಳಸಿ ವಿವಾಹದ ಮುಹೂರ್ತ, ಮಹತ್ವ ಮತ್ತು ಪೂಜಾ ವಿಧಾನದ ಬಗ್ಗೆ ತಿಳಿಯೋಣ.

ದತ್ತ ಜಯಂತಿ: ತುಳಸಿ ಕಟ್ಟೆ ಜಾಗದಲ್ಲಿ ಹೋಮ ಮಾಡಲು ಭಜರಂಗ ದಳ ಪಟ್ಟು ದತ್ತ ಜಯಂತಿ: ತುಳಸಿ ಕಟ್ಟೆ ಜಾಗದಲ್ಲಿ ಹೋಮ ಮಾಡಲು ಭಜರಂಗ ದಳ ಪಟ್ಟು

ತುಳಸಿ ಮದುವೆ ದಿನಾಂಕ ಮತ್ತು ಮಂಗಳಕರ ಸಮಯ

05 ನವೆಂಬರ್ 2022, ಸಂಜೆ 06:08 ರಿಂದ (ಶನಿವಾರ) ಕಾರ್ತಿಕ ದ್ವಾದಶಿ ದಿನಾಂಕ ಪ್ರಾರಂಭವಾಗುತ್ತದೆ ಮತ್ತು 06 ನವೆಂಬರ್ 2022 ರಿಂದ 05:06 PM (ಭಾನುವಾರ) ಕಾರ್ತಿಕ ದ್ವಾದಶಿ ದಿನಾಂಕ ಕೊನೆಗೊಳ್ಳುತ್ತದೆ.

ತುಳಸಿ ವಿವಾಹ ಪೂಜಾ ವಿಧಾನ

ತುಳಸಿ ವಿವಾಹ ಪೂಜಾ ವಿಧಾನ

ಈ ದಿನ ಮಹಿಳೆಯರು ಬೆಳಗ್ಗೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತಾರೆ. ಇದರ ನಂತರ ಪೂಜಾ ಸ್ಥಳವನ್ನು ಚೆನ್ನಾಗಿ ಅಲಂಕರಿಸುತ್ತಾರೆ. ನಂತರ ಶುಭ ಮುಹೂರ್ತದಲ್ಲಿ ಪೂಜೆ ಮಾಡುತ್ತಾರೆ.

ಪೂಜೆಗೂ ಮುನ್ನ ಒಂದು ಬದಿ ತುಳಸಿ ಗಿಡವನ್ನು ಇಟ್ಟು ಮತ್ತು ಇನ್ನೊಂದು ಬದಿಯಲ್ಲಿ ಶಾಲಿಗ್ರಾಮವನ್ನು ಸ್ಥಾಪಿಸುತ್ತಾರೆ. ಅವುಗಳ ಪಕ್ಕದಲ್ಲಿ ನೀರು ತುಂಬಿದ ಹೂದಾನಿ ಇರಿಸಿ, ಅದರ ಮೇಲೆ ಐದು ಮಾವಿನ ಎಲೆಗಳನ್ನು ಇಡುತ್ತಾರೆ. ಗಂಗಾಜಲದೊಂದಿಗೆ ತುಳಸಿ ಮತ್ತು ಶಾಲಿಗ್ರಾಮನಿಗೆ ಸ್ನಾನ ಮಾಡಿಸುತ್ತಾರೆ. ಇದಾದ ನಂತರ ಶ್ರೀಗಂಧವನ್ನು ಹಚ್ಚುತ್ತಾರೆ.

ತುಳಸಿ ಸುತ್ತಲು ಕಬ್ಬಿನಿಂದ ಮಂಟಪ ಮಾಡುತ್ತಾರೆ. ಬಳಿಕ ತುಳಸಿಗೆ ಸೀರೆ, ಬಳೆ ಹೀಗೆ ವಧುವಿನಂತೆ ಸಿಂಗಾರಗೊಳ್ಳಲು ಬೇಕಾದ ವಸ್ತುಗಳನ್ನೆಲ್ಲ ಇರಿಸುತ್ತಾರೆ. ಇದಾದ ನಂತರ ಶಾಲಿಗ್ರಾಮವನ್ನು ಕೈಯಲ್ಲಿ ಹಿಡಿದುಕೊಂಡು ತುಳಸಿಯೊಂದಿಗೆ ಏಳು ಬಾರಿ ಪ್ರದಕ್ಷಿಣೆ ಹಾಕಿಸುತ್ತಾರೆ. ಇದರ ನಂತರ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಆರತಿ ಮಾಡಿ. ತುಳಸಿ ವಿವಾಹ ಮುಗಿದ ನಂತರ ಎಲ್ಲರಿಗೂ ಪ್ರಸಾದ ವಿತರಿಸುತ್ತಾರೆ.

ತುಳಸಿ ವಿವಾಹದ ಮಹತ್ವ

ತುಳಸಿ ವಿವಾಹದ ಮಹತ್ವ

ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ಶಾಲಿಗ್ರಾಮ ದೇವರೊಂದಿಗೆ ಮದುವೆ ಮಾಡುವ ಭಕ್ತರಿಗೆ ಅವರ ಹಿಂದಿನ ಜನ್ಮದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗುತ್ತದೆ. ಈ ದಿನ ಮಹಿಳೆಯರು ಮನೆ ಮನೆಗೆ ಶಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ನೆರವೇರಿಸುತ್ತಾರೆ. ತುಳಸಿಯನ್ನು ವಿಷ್ಣುಪ್ರಿಯಾ ಎಂದೂ ಕರೆಯಲಾಗುತ್ತದೆ. ಕಾರ್ತಿಕ ಮಾಸದ ನವಮಿ, ದಶಮಿ ಮತ್ತು ಏಕಾದಶಿಯಂದು ಉಪವಾಸ ಮತ್ತು ಪೂಜೆಯ ಮೂಲಕ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಮರುದಿನ ಬ್ರಾಹ್ಮಣನಿಗೆ ತುಳಸಿ ಗಿಡವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ವಿವಾಹ ಮಾಡುವವರಿಗೆ ದಾಂಪತ್ಯ ಸುಖ ಸಿಗುತ್ತದೆ.

ಉಪವಾಸ ಹೇಗೆ ಮಾಡಬೇಕು?

ಉಪವಾಸ ಹೇಗೆ ಮಾಡಬೇಕು?

ದಂತಕಥೆಯ ಪ್ರಕಾರ, ಒಮ್ಮೆ ತಾಯಿ ತುಳಸಿಯು ಕೋಪದಿಂದ ಭಗವಾನ್ ವಿಷ್ಣುವನ್ನು ಕಪ್ಪು ಕಲ್ಲಾಗುವಂತೆ ಶಪಿಸುತ್ತಾಳೆ. ಈ ಶಾಪ ವಿಮೋಚನೆಗಾಗಿ ದೇವರು ಶಾಲಿಗ್ರಾಮ ಶಿಲೆಯ ರೂಪದಲ್ಲಿ ಅವತರಿಸುತ್ತಾನೆ. ಬಳಿಕ ತುಳಸಿಯನ್ನು ವಿವಾಹವಾಗುತ್ತಾನೆ. ಮತ್ತೊಂದೆಡೆ, ತುಳಸಿಯನ್ನು ಲಕ್ಷ್ಮಿ ದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ತುಳಸಿ ಪೂಜೆಯ ಸಮಯದಲ್ಲಿ "ಓಂ ನಮೋ ಭಗವತೇ ವಾಸುದೇವಾಯ ನಮಃ" ಎಂಬ ಮಂತ್ರವನ್ನು ಪಠಿಸಲಾಗುತ್ತದೆ. ಈ ಉಪವಾಸದ ಸಮಯದಲ್ಲಿ ಎಣ್ಣೆ, ಬದನೆಕಾಯಿ, ಹಾಲು, ಸಕ್ಕರೆ, ಮೊಸರು, ಎಲೆಗಳ ತರಕಾರಿಗಳು, ಉಪ್ಪು ಅಥವಾ ಮಸಾಲೆಯುಕ್ತ ಆಹಾರ, ಸಿಹಿತಿಂಡಿಗಳು, ವೀಳ್ಯದೆಲೆ, ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಭಕ್ತರಿಗೆ ಸಂತೋಷ ಮತ್ತು ಅದೃಷ್ಟ

ಭಕ್ತರಿಗೆ ಸಂತೋಷ ಮತ್ತು ಅದೃಷ್ಟ

ಹಿಂದೂ ನಂಬಿಕೆಯ ಪ್ರಕಾರ ತುಳಸಿ ವಿವಾಹ ಮಾಡುವುದರಿಂದ ಕನ್ಯಾದಾನದಿಂದ ಸಿಗುವ ಪುಣ್ಯ ಸಿಗುತ್ತದೆ. ಆದ್ದರಿಂದ ಯಾರಾದರೂ ಕನ್ಯಾದಾನ ಮಾಡದಿದ್ದರೆ ಜೀವನದಲ್ಲಿ ಒಮ್ಮೆ ತುಳಸಿ ವಿವಾಹ ಮಾಡಿ ಕನ್ಯಾ ದಾನ ಮಾಡಿದ ಪುಣ್ಯವನ್ನು ಪಡೆಯಬಹುದು. ನಂಬಿಕೆಗಳ ಪ್ರಕಾರ, ತುಳಸಿ ವಿವಾಹವನ್ನು ಆಚರಣೆಗಳೊಂದಿಗೆ ನಡೆಸುವ ಭಕ್ತರು ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತಾರೆ. ವಿಷ್ಣುವಿನ ಅನುಗ್ರಹದಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಯಾರಿಗಾದರೂ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಆ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎನ್ನಲಾಗುತ್ತದೆ.

ತುಳಸಿ ಎಂಬ ಸಂಜೀವಿನಿ

ತುಳಸಿ ಎಂಬ ಸಂಜೀವಿನಿ

ಪವಿತ್ರ ತುಳಸಿ ಎಲ್ಲ ದೈವಿಕ ಕೆಲಸಗಳಿಗೂ ಅತ್ಯಗತ್ಯ. ಅದರ ಎಲೆ, ಹೂವು, ಬೀಜ ಎಲ್ಲವೂ ಪವಿತ್ರ. ಯಾರು ತನ್ನ ಬಳಿ ತುಳಸಿಯನ್ನಿಟ್ಟುಕೊಳ್ಳುತ್ತಾನೋ ಅವನೊಂದಿಗೆ ಶ್ರೀಕೃಷ್ಣ ಸದಾ ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ. ತುಳಸಿವನವನ್ನು ಬೆಳೆಸುವವನು ಎಲ್ಲ ಪಾಪದಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ, ಮನೆಯ ಸುತ್ತ ತುಳಸಿವನ ನಿರ್ಮಿಸುವುದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಗಣನೀಯ ಪ್ರಮಾಣದ ಸುಧಾರಣೆ ಕಾಣಬಹುದು ಎಂಬುದು ವೈದ್ಯಕೀಯವಾಗಿಯೂ ಸಾಬೀತಾದ ಸತ್ಯ. ಹಿಂದೂಗಳ ಪಾಲಿಗೆ ಪೌರಾಣಿಕವಾಗಿ ಮಹತ್ವ ಹೊಂದಿರುವ ತುಳಸಿ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಒಳ್ಳೆಯದು ಎಂದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ತುಳಸಿಗೆ ಅಗ್ರಸ್ಥಾನ.

English summary
Tulsi Vivah 2022: Here is Tulsi Vivah Date, Time, Shubh Muhurat, Rituals, Puja Vidhi, Vrat Katha and Significance in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X