ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರಮಹಾಲಕ್ಷ್ಮಿ ವ್ರತ 2022: ಶುಭ ಮೂಹರ್ತ, ಪೂಜಾ ವಿಧಾನ, ಮಹತ್ವ ಮತ್ತು ಹಬ್ಬದ ಸಂಪೂರ್ಣ ವಿವರ...

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಸಾಲು ಸಾಲು ಹಬ್ಬಗಳು, ಅದರೊಂದಿಗೆ ಮನೆ ಮನ ತುಂಬುವ ಸಂಭ್ರಮವನ್ನು ಶ್ರಾವಣ ಮಾಸ ತನ್ನೊಂದಿಗೇ ತಂದುಕೊಡುತ್ತದೆ. ಈ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವೆಂದರೆ ಹೆಂಗಳೆಯರಿಗೆ ಮತ್ತಷ್ಟು ಹುಮ್ಮಸ್ಸು.

ಸಮೃದ್ಧಿ, ಏಳ್ಗೆಯ ಸಂಕೇತವಾದ ಲಕ್ಷ್ಮೀದೇವಿಯನ್ನು ಮನೆಗೆ ಬರಮಾಡಿಕೊಳ್ಳುವ ಕಾತರ. ಹಿಂದೂ ಧರ್ಮದಲ್ಲಿ ಸಂಪತ್ತಿನ ಅಧಿದೇವತೆಯೆಂದೇ ಕರೆಸಿಕೊಳ್ಳುವ ಲಕ್ಷ್ಮೀ ದೇವಿಯನ್ನು ಆರಾಧಿಸಿ ವಿಶೇಷ ವರ ಕೊಡು ಎಂದು ಬೇಡಿಕೆಯಿಡುವ ಈ ಹಬ್ಬ "ವರಮಹಾಲಕ್ಷ್ಮಿ ವೃತ"ವೆಂದು ಕರೆಸಿಕೊಳ್ಳುತ್ತದೆ.

ದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ ದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ

ಬಹುಮುಖ್ಯವಾಗಿ ಮನೆಯಲ್ಲಿನ ದಾರಿದ್ರ್ಯ, ಕಿರಿಕಿರಿ, ಅಸಮಾಧಾನವನ್ನು ತೊಲಗಿಸಿ ತಮ್ಮ ಕುಟುಂಬದ ಸುಖ ಸಮೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ಆಕೆಯನ್ನು ಒಲಿಸಿಕೊಳ್ಳಲು ಮಹಿಳೆಯರು ಈ ವೃತವನ್ನು ಕೈಗೊಳ್ಳುತ್ತಾರೆ.

Varalakshmi Vratham 2021 Date, History, Timings, Puja Vidhi, Why we celebrate and Significance

ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣೆಮೆಗೆ ಮೊದಲಿನ ಶುಕ್ರವಾರದಂದು ಈ ವೃತ ಆಚರಿಸಲಾಗುವುದು. ಈ ವರ್ಷ ವರಮಹಾಲಕ್ಷ್ಮಿ ಪೂಜೆಯನ್ನು ಎಲ್ಲೆಡೆ ಆಗಸ್ಟ್‌ 05ರಂದು ಆಚರಿಸಲಾಗುತ್ತಿದೆ.

ವರಮಹಾಲಕ್ಷ್ಮಿ ವೃತವನ್ನು ಏಕೆ ಆಚರಿಸುತ್ತಾರೆ?
ವರಮಹಾಲಕ್ಷ್ಮಿ ಆಚರಣೆಗೆ ಸಂಬಂಧಿಸಿದಂತೆ ಪುರಾಣದಲ್ಲಿ ಹಿನ್ನೆಲೆಯಿದೆ. ಅದರಲ್ಲಿ ಚಾರುಮತಿ ಕಥೆ ಜನಪ್ರಿಯವಾಗಿದೆ. ಶಿವನಲ್ಲಿ ಒಮ್ಮೆ ಪಾರ್ವತಿದೇವಿ ಪ್ರಶ್ನೆಯೊಂದನ್ನು ಕೇಳುವಳು. ಮಹಿಳೆಯರು ತಮ್ಮ ಕುಟುಂಬದ ಸುಖಸಮೃದ್ಧಿಗೆ ಏನು ಮಾಡಬೇಕು? ಎಂದು. ಆಗ ಚಾರುಮತಿ ಕಥೆಯನ್ನು ಶಿವ ವಿವರಿಸಿದನು.

ವರಮಹಾಲಕ್ಷ್ಮಿ ಹಬ್ಬದಂದು ಗ್ರಾಹಕರಿಗೆ ಟ್ರೆಂಡ್ಸ್ ವಿಶಿಷ್ಟ ಸ್ಪರ್ಧೆ ವರಮಹಾಲಕ್ಷ್ಮಿ ಹಬ್ಬದಂದು ಗ್ರಾಹಕರಿಗೆ ಟ್ರೆಂಡ್ಸ್ ವಿಶಿಷ್ಟ ಸ್ಪರ್ಧೆ

ಮಗಧ ದೇಶದಲ್ಲಿ ಸದ್ಗುಣದ ಪ್ರತೀಕದಂತಿದ್ದ ಚಾರುಮತಿ ಎಂಬ ಮಹಿಳೆ ಪರಿಪೂರ್ಣ ಪತ್ನಿ, ಸೊಸೆ ಮತ್ತು ತಾಯಿಯಾಗಿದ್ದಳು. ಆಕೆಯ ನಿಷ್ಠೆ, ಭಕ್ತಿಯಿಂದ ಪ್ರಭಾವಿತಳಾದ ಲಕ್ಷ್ಮೀ ದೇವಿ ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ತಿಂಗಳಲ್ಲಿ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ ತನ್ನನ್ನು ಪೂಜಿಸುವಂತೆ ಹೇಳುವಳು. ನೀನು ಭಕ್ತಿಪೂರ್ವಕವಾಗಿ ಪೂಜಿಸಿದರೆ ಜೀವನದಲ್ಲಿ ಇಚ್ಛಿಸಿರುವುದನ್ನು ವರ ನೀಡುವೆನು ಎಂದು ಲಕ್ಷ್ಮೀ ದೇವಿ ಹೇಳುವಳು. ಅದರಂತೆಯೇ ಚಾರುಮತಿ ನೆರೆಹೊರೆಯವರು, ಸಂಬಂಧಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸುವಳು.

Varalakshmi Vratham 2021 Date, History, Timings, Puja Vidhi, Why we celebrate and Significance

ಪೂಜೆ ನಂತರ ಚಾರುಮತಿ ಮನೆ ಬಂಗಾರದಂತೆ ಸಮೃದ್ಧವಾಯಿತು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುವ ಪರಿಪಾಠ ಬೆಳೆದುಕೊಂಡು ಬಂದಿತು. ಕುಟುಂಬದ ಶ್ರೇಯಸ್ಸು, ಸಮೃದ್ಧಿಯಂಥ ವರವನ್ನು ಕೊಡು ತಾಯಿ ಎಂದು ಮನೆ ಮಹಿಳೆಯರು ಪೂಜಿಸುವುದು ಪದ್ಧತಿಯಾಯಿತು.

ಯಾವ ಸಮಯದಲ್ಲಿ ಲಕ್ಷ್ಮೀ ಪೂಜೆ ಮಾಡಬೇಕು?
ರಾಹುಕಾಲ ಅಶುಭ ಎಂದು ಪರಿಗಣಿಸುವುದರಿಂದ ಈ ಸಮಯದಲ್ಲಿ ಲಕ್ಷ್ಮೀ ಪೂಜೆ ಮಾಡಬಾರದು.

ವರಲಕ್ಷ್ಮಿ ವ್ರತ 2022 ಪೂಜೆ ಮುಹೂರ್ತ:

- ಬೆಳಿಗ್ಗೆ ಮುಹೂರ್ತ - ಮುಂಜಾನೆ 6:00 ರಿಂದ ಬೆಳಗ್ಗೆ 8.20 ರವರೆಗೆ

- ಮಧ್ಯಾಹ್ನ ಮುಹೂರ್ತ - ಬೆಳಗ್ಗೆ 9.20 ರಿಂದ ಬೆಳಗ್ಗೆ 11.05 ರವರೆಗೆ ಮತ್ತು

Recommended Video

ಕಾಬೂಲ್ ನಲ್ಲಿ ಹಿಂದು ಅರ್ಚಕರ ದೇವಾಲಯ ಪ್ರೇಮ! | Oneindia Kannada

- ಬೆಳಗ್ಗೆ 11.54 ರಿಂದ ಮಧ್ಯಾಹ್ನ 12.35 ರವರೆಗೆ.

ಸಂಜೆ ಮುಹೂರ್ತ - ಸಂಜೆ 6.40 ರಿಂದ ಸಂಜೆ 7.40 ರವರೆಗೆ (ಪ್ರದೋಷ ಕಾಲ ಪೂಜೆ ಸಮಯ).

ಶುಭ ಮುಹೂರ್ತ:

ಅಭಿಜಿತ್ ಮುಹೂರ್ತ : ಬೆಳಗ್ಗೆ11:50 ರಿಂದ ಮಧ್ಯಾಹ್ನ 12:42 ರವರೆಗೆ

ಅಮೃತ ಕಾಲ: ಬೆಳಗ್ಗೆ 09:53 ರಿಂದ ಬೆಳಗ್ಗೆ 11:29 ರವರೆಗೆ

Varalakshmi Vratham 2021 Date, History, Timings, Puja Vidhi, Why we celebrate and Significance

ಪೂಜೆ ನೆರವೇರಿಸುವಾಗ ಲಕ್ಷ್ಮೀ ಸಹಸ್ರನಾಮ ಹಾಗೂ ಲಕ್ಷ್ಮೀ ಅಷ್ಟೋತ್ತರಗಳನ್ನು ಪಠಿಸಬೇಕು. ಕೆಲವರು ಪೂಜೆ ನೆರವೇರಿಸಲು ಉಪವಾಸ ಇರುತ್ತಾರೆ. ಮತ್ತೂ ಕೆಲವರು ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ ಅರ್ಪಿಸಿ ನಂತರ ಸೇವಿಸುತ್ತಾರೆ. ಪೂಜೆ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು.

ಕೆಲವು ಕಾರಣವಾಗಿ ಈ ದಿನದಂದು ಪೂಜೆ ನೆರವೇರಿಸಲಾಗದ ಮಹಿಳೆಯರು ಮುಂದಿನ ಶುಕ್ರವಾರ ನೆರವೇರಿಸಬಹುದು. ಅದೂ ಸಾಧ್ಯವಾಗದಿದ್ದ ಪಕ್ಷದಲ್ಲಿ ನವರಾತ್ರಿಯ ಶುಕ್ರವಾರದಂದು ನೆರವೇರಿಸಬಹುದು.

ಅಲಂಕಾರಪ್ರಿಯೆಗೆ ಸಂಭ್ರಮದ ಪೂಜೆ ಪುನಸ್ಕಾರ
ಲಕ್ಷ್ಮೀ ಅಲಂಕಾರಪ್ರಿಯೆ. ಹೀಗಾಗಿ ಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸುವುದು ಈ ಹಬ್ಬದ ಒಂದು ವೈಶಿಷ್ಟ್ಯವೆಂದೇ ಹೇಳಬಹುದು. ಕಳಸಕ್ಕೆ ಸೀರೆ ಉಡಿಸಿ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡುವುದರೊಂದಿಗೆ ಸಾಂಪ್ರದಾಯಿಕ ರಂಗೋಲಿ ಹಾಕಿ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಪೂಜೆ ಬಳಿಕ 9 ಗಂಟುಗಳು ಇರುವ ಮತ್ತು ಮಧ್ಯದಲ್ಲಿ ಹೂವಿರುವ ದಾರವನ್ನು ಬಲ ಕೈಗೆ ಕಟ್ಟಿಕೊಳ್ಳಬೇಕು. ಇದು ಆಚರಣೆಯ ಪ್ರಮುಖ ಅಂಶ.

English summary
Why we celebrate varalakshmi vratha? Here is its prominance. Details about Varalakshmi Vratham 2021 Date, History, Timings, Puja Vidhi, Why we celebrate and Significance...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X