ಶ್ರಾವಣ ಮಾಸ 2022: ದಿನಾಂಕ, ಸಮಯ, ಪೂಜಾ ವಿಧಿ, ನೀವು ತಿಳಿದುಕೊಳ್ಳಬೇಕಾದ ಮಾಹಿತಿ
ಹಿಂದೂ ಸಮುದಾಯದ ಪ್ರಕಾರ ಶ್ರಾವಣ ಮಾಸ ವರ್ಷದ ಅತ್ಯಂತ ಮಂಗಳಕರ ತಿಂಗಳು. ಶ್ರಾವಣ ಮಾಸ ಜುಲೈ 29, 2022 ರಂದು ಪ್ರಾರಂಭವಾಗುತ್ತದೆ. ಇದನ್ನು ಶಿವನ ಆರಾಧನೆಗೆ ಮಂಗಳಕರವಾದ ತಿಂಗಳು ಎನ್ನಲಾಗುತ್ತದೆ. ಇದು ಈ ವರ್ಷ ಆಗಸ್ಟ್ 27 ರವರೆಗೆ ಮುಂದುವರಿಯುತ್ತದೆ. ಈ ಸಂಪೂರ್ಣ ಅವಧಿ ಪ್ರತಿ ಸೋಮವಾರ ಶಿವನ ಆರಾಧನೆಗೆ ಮೀಸಲಾಗಿರುತ್ತದೆ. ಇದನ್ನು ಶ್ರಾವಣ ಸೋಮವಾರ ಎಂದೂ ಕರೆಯುತ್ತಾರೆ.
ಶ್ರಾವಣ ಮಾಸದಲ್ಲಿ ಶಿವನ ಮೂರ್ತಿಗಳಿಗೆ ವಿಶೇಷ ನೈವೇದ್ಯಗಳನ್ನು ಸಲ್ಲಿಸಲಾಗುತ್ತದೆ. ಈ ಸಮಯದ ನಾಲ್ಕು ಸೋಮವಾರಗಳಲ್ಲಿ 8 ರವಿಯೋಗ ಮತ್ತು 7 ಸರ್ವಾರ್ಥಸಿದ್ಧಿ ಯೋಗವನ್ನು ಒಳಗೊಂಡಿರುತ್ತದೆ. ಈ ಸಮಯದಲ್ಲಿ ಜನರು ಹಾಲು, ಹೂವುಗಳು, ಪವಿತ್ರ ನೀರು ಮತ್ತು ಬಿಲ್ವಪತ್ರೆ ಎಲೆಗಳನ್ನು ಅರ್ಪಿಸುವ ಮೂಲಕ ಶಿವನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಒಂದು ಸೋಮವಾರ ಆಚರಿಸಿದರೆ 16 ಸೋಮವಾರ ಆಚರಿಸಬೇಕೆಂಬ ನಿಯಮವಿದೆ.

ಶಿವನ ಆರಾಧನೆಯ ತಿಂಗಳು
ಶ್ರಾವಣ ಮಾಸದಲ್ಲಿ ಶಿವನನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸುವುದರಿಂದ ಸಾಕಷ್ಟು ಸಂತೋಷ ಮತ್ತು ಯಶಸ್ಸು ಸಿಗುವುದರ ಜೊತೆಗೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಏನಾದರೂ ಸಂಕಲ್ಪ ತೆಗೆದುಕೊಂಡು ಶ್ರಾವಣ ಸೋಮವಾರ ಆಚರಿಸಿದರೆ ಅದು ನೆರವೇರುವುದು ಎಂದು ಹೇಳಲಾಗುವುದು. ಶ್ರಾವಣ ಸೋಮವಾರದಂದು ಭಕ್ತರು ಬೆಳಗ್ಗೆ ಎದ್ದು ಸ್ನಾನ ಮಾಡೊ ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಕೆಲವರು ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ. ಇದೇ ವೇಳೆ ಶಿವಭಕ್ತರು ಪವಿತ್ರ ನದಿಗಳ ನೀರನ್ನು ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. ಇದರ ಜೊತೆಗೆ ಶ್ರಾವಣ ಸೋಮವಾರದಂದು ಉಪವಾಸವನ್ನು ಮಾಡುವ ಮೂಲಕ ಭೋಲೆನಾಥನನ್ನು ಮೆಚ್ಚಿಸಲು ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಈ ವರ್ಷ ಜುಲೈ 29 ರಂದು ಶ್ರಾವಣ ಮಾಸ ಆರಂಭವಾಗಿದ್ದು ಆಗಸ್ಟ್ 27ಕ್ಕೆ ಕೊನೆಗೊಳ್ಳುತ್ತದೆ.

ಶ್ರಾವಣ ಪದದ ಅರ್ಥ
ಶಿವನು ಗೌಮುಖದಿಂದ ಹರಿದ್ವಾರಕ್ಕೆ ಗಂಗಾಜಲವನ್ನು ಪಡೆಯುತ್ತಾನೆ. ಆದ್ದರಿಂದ ಈ ದಿನ ಭಕ್ತರು ಗಂಗಾಜಲಕ್ಕೆ ಹೋಗಲು ಕಾಲ್ನಡಿಗೆಯಲ್ಲಿ ನಡೆಯುತ್ತಾರೆ. ಅವರು ಶಿವನಿಗೆ ಅರ್ಪಿಸಲು ಗಂಗಾಜಲವನ್ನು ಹೊಂದಿರುವ ಕನ್ವರ್ ಅನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ. ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ ತ್ರಯೋದಶಿ ತಿಥಿಯಲ್ಲಿ ಬರುವ ಈ ದಿನವನ್ನು ಶಿವರಾತ್ರಿ ಎಂದು ಸ್ಮರಿಸಲಾಗುತ್ತದೆ.
ಶಿವನು ತನ್ನ ಶಿರದಲ್ಲಿ ಚಂದ್ರನನ್ನು ಧರಿಸಿದ್ದು ಈ ಮಾಸದಲ್ಲಾಗಿದೆ. ವಿಷದ ಪರಿಣಾಮವನ್ನು ಶಮನಗೊಳಿಸಲು ಚಂದ್ರನನ್ನು ಬಳಸಲಾಗಿದೆ. ಇದೇ ಕಾರಣಕ್ಕಾಗಿ ಭಕ್ತರು ಶಿವನಿಗೆ ಹಾಲು, ಮೊಸರು, ಹೂವುಗಳು ಮತ್ತು ಬಿಲ್ವ ಪತ್ರೆಯನ್ನು ಈ ಮಾಸದಲ್ಲಿ ಅರ್ಪಿಸುತ್ತಾರೆ.
ಪುರಾಣ ಕಥೆಗಳ ಪ್ರಕಾರ ಕ್ಷೀರಸಾಗರ ಮಂಥನದ ಸಮಯದಲ್ಲಿ ಉದ್ಭವಿಸಿದ ಭಯಾನಕ ಹಾಲಾಹಲದಿಂದ ಎಲ್ಲಾ ಜೀವಿಗಳಿಗೂ ಅಪಾಯವೊದಗುವ ಸಂದರ್ಭ ಬಂದಾಗ ಶಿವನು ಮಧ್ಯ ಪ್ರವೇಶಿಸಿ ಅದನ್ನು ಸೇವಿಸಿದನು. ಇದನ್ನು ಸೇವಿಸಿದ ನಂತರ ಶಿವನು ಮೂರ್ಛೆ ತಪ್ಪಿದನು. ಆಗ ದೇವತೆಗಳ ಸಲಹೆಯಂತೆ ಬ್ರಹ್ಮದೇವನು ಶಿವನಿಗೆ ಜಲಾಭಿಷೇಕವನ್ನು ಮಾಡಿ, ಹಲವಾರು ಗಿಡಮೂಲಿಕೆಗಳಿಂದ ಶಿವನಿಗೆ ಚಿಕಿತ್ಸೆ ನೀಡಿದನು. ಆಗ ಶಿವನು ಪ್ರಜ್ಞೆಗೆಮರಳಿದನು. ಇದರಿಂದಾಗಿಯೇ ಲಿಂಗದ ಮೇಲೆ ಜಲಾಭಿಷೇಕವನ್ನು ಮಾಡುವ ಪದ್ಧತಿ ಅನುಷ್ಟಾನಕ್ಕೆ ಬಂದಿತು.
ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸು. ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕ ಪ್ರವಚನಗಳು, ಧರ್ಮೋಪದೇಶಗಳು ಮತ್ತು ಉದಾತ್ತ ಪದಗಳನ್ನು ಆಲಿಸಬೇಕೆಂಬ ಉದಾತ್ತ ಉದ್ದೇಶವನ್ನು ಹೊಂದಿದೆ. ಈ ಸಮಯದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಜನರು ಆಲಿಸಬೇಕು ಎಂದೇ ಇದರರ್ಥವಾಗಿದೆ. ಶಿವನ ಕುರಿತಾದ ಸ್ತ್ರೋತ್ರಗಳ ಪಠನೆ, ಶಿವನ ಧ್ಯಾನ ಮೊದಲಾದ ಸತ್ಕಾರ್ಯಗಳನ್ನು ಈ ತಿಂಗಳಿನಲ್ಲಿ ಭಕ್ತರು ನಡೆಸಬೇಕು.

ಅವಿವಾಹಿತ ಹುಡುಗಿಯರಿಂದ ಪೂಜೆ
ಶಂಕರ, ಭೋಲೇನಾಥ, ಭಕ್ತವತ್ಸಲ, ಮಹಾದೇವ, ಶಿವ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಮಹಾದೇವ ಭಕ್ತರ ಮೊರೆಯನ್ನು ಕೇಳುವ ಕರುಣಾಜನಕ ಎಂದೆನಿಸಿಕೊಂಡಿದ್ದಾರೆ. ಸರಳ ಭಕ್ತಿಗೆ ಒಲಿಯುವ ಶಂಕರನಿಗೆ ಅಬ್ಬರದ ಪೂಜೆಯೇ ಬೇಕಾಗಿಲ್ಲ. ಮನಸ್ಸಿನಿಂದ ಪೀಜೆ ಮಾಡಿದರೆ ಸಾಕು ಶಿವ ಒಲಿಯುತ್ತಾನೆ ಎನ್ನುವ ನಂಬಿಕೆ ಇದೆ. ಮಹಿಳೆಯರು ತಮ್ಮ ಪತಿಯ ದೀರ್ಘ ಆಯುಷ್ಯಕ್ಕಾಗಿ ಮತ್ತು ಕನ್ಯೆಯರು ಶಿವನಂತಹ ಪತಿ ತಮಗೆ ದೊರೆಯಬೇಕೆಂದು, ಇಚ್ಛಿಸುವ ಪತಿ ತಮಗೆ ಪತಿಯಾಗಿ ದೊರೆಯಬೇಕೆಂದು ಶಿವನಿಗೆ ಉಪವಾಸವನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಶಿವನ ಪೂಜೆಯನ್ನು ನಡೆಸಿ ಆಹಾರವನ್ನು ತೆಗೆದುಕೊಳ್ಳದೆಯೇ ತಮ್ಮ ದೈನಂದಿನ ಕೆಲಸವನ್ನು ಮಾಡುತ್ತಾರೆ. ನಂತರ ಸಂಜೆ ಪುನಃ ಶಿವನ ಪೂಜೆಯನ್ನು ಮಾಡಿ ಆಹಾರವನ್ನು ಸೇವಿಸುತ್ತಾರೆ.
ಜೊತೆಗೆ ಶಿವನ ಗುಣಗಳನ್ನು ಹೊಂದಿರುವ ಪತಿಯನ್ನು ಪಡೆಯುವ ಬಯಕೆಯಿಂದ ಅವಿವಾಹಿತ ಹುಡುಗಿಯರು ಸೋಮವಾರದಂದು ಉಪವಾಸ ಮಾಡುತ್ತಾರೆ. ಇದರಿಂದ ಭಕ್ತರಿಗೆ ಆಧ್ಯಾತ್ಮಿಕ ಆಶೀರ್ವಾದವು ಲಭ್ಯವಾಗುತ್ತದೆ. ವ್ಯಕ್ತಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇಚ್ಛಾಶಕ್ತಿಯನ್ನು ಮತ್ತು ಸ್ಮರಣಾಶಕ್ತಿಯನ್ನು ಹೆಚ್ಚಿಸುತ್ತದೆ. ಶ್ರಾವಣ ಸೋಮವಾರದಂದು ಮದುವೆಯಾಗದ ಕನ್ಯೆಯರು ಉಪವಾಸ ವ್ರತವನ್ನು ಕೈಗೊಂಡರೆ ಉತ್ತಮ ಪತಿಯನ್ನು ಪಡೆಯುತ್ತಾರೆ. ಶ್ರಾವಣ ಸೋಮವಾರದ ಉಪವಾಸ ವ್ರತವು ನಕಾರಾತ್ಮಕ ಶಕ್ತಿಗಳನ್ನು ದೂರಾಗಿಸುತ್ತದೆ.

ಆಚರಿಸಬೇಕಾದ ಆಚರಣೆಗಳು
ಭಕ್ತರು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಾರೆ.
ಬೆಳಿಗ್ಗೆ ಬೇಗನೆ ಎದ್ದು ಪವಿತ್ರ ಸ್ನಾನ ಮಾಡಿ, ಶಿವನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಓಂ ನಮಃ ಶಿವಾಯ ಎಂದು ಜಪಿಸುತ್ತಾರೆ.
ತಿಂಗಳ ಈ ಸಮಯದಲ್ಲಿ ಜನರು ಸೋಮವಾರದ ಉಪವಾಸವನ್ನು ಆಚರಿಸುತ್ತಾರೆ.
ಮಹಾಮೃತುಂಜಯ ಮಂತ್ರವನ್ನು ಶಿವನ ಹೆಸರಿನಲ್ಲಿ 108 ಬಾರಿ ಜಪಿಸಲಾಗುತ್ತದೆ.
ಹಾಲು, ಮೊಸರು, ತುಪ್ಪ, ಜೇನುತುಪ್ಪ, ಗಂಗಾಜಲ ನೀಡಿ ರುದ್ರಾಭಿಷೇಕ ಮಾಡಲಾಗುತ್ತದೆ.
ಮಾಸವನ್ನು ಅನುಸರಿಸಿ ಯಾರೊಂದಿಗೂ ಜಗಳವಾಡಬೇಡಿ ಮತ್ತು ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಬದನೆ ಮುಂತಾದ ಕೆಲವು ಆಹಾರ ಪದ್ಧತಿಗಳನ್ನು ತಪ್ಪಿಸಿ.
ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಶಿವನನ್ನು ಮೆಚ್ಚಿಸಲು ಶಿವ ಚಾಲೀಸಾ ಮತ್ತು ಶಿವ ಆರತಿಯನ್ನು ಪಠಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಪಠಿಸಬೇಕಾದ ಮಂತ್ರ
ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಶಿವ ಮಂತ್ರಗಳನ್ನು ಜಪಿಸಬೇಕು. 108 ಬಾರಿ ಈ ಮಂತ್ರಗಳನ್ನು ಅಥವಾ ಇದಕ್ಕೂ ಹೆಚ್ಚು ಬಾರಿ ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು. ಶ್ರಾವಣ ಮಾಸದಲ್ಲಿ ಬೆಳಗ್ಗೆ ಅಥವಾ ಸಂಜೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಅಥವಾ ದಿನನಿತ್ಯ ಕೂಡ ಮಂತ್ರವನ್ನು ಪಠಿಸಬಹುದು.
ಓಂ ನಮಃ ಶಿವಾಯ ||
ಮಹಾಮೃತ್ಯುಂಜಯ ಮಂತ್ರ:
ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ||
ರುದ್ರ ಗಾಯತ್ರಿ ಮಂತ್ರ:
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ
ತನ್ನೋ ರುದ್ರ ಪ್ರಚೋದಯಾತ್ ||
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications