ರಕ್ಷಾ ಬಂಧನ 2021: ಇಲ್ಲಿದೆ ಸೋದರಿ ಸೋದರಗೆ ಕಳುಹಿಸುವ ಶುಭ ಸಂದೇಶಗಳು
ಯಾವುದೇ ಹಬ್ಬ, ವ್ರತ ಅಥವಾ ಆಚರಣೆಗಳಿರಲಿ ಅದರ ಮಹತ್ವವನ್ನು ಅರಿತಾಗ ಮಾತ್ರ ಪರಿಪೂರ್ಣವಾಗುತ್ತದೆ. ಹಾಗೆಯೇ ನಮ್ಮೆಲ್ಲರಿಗೂ ರಕ್ಷಾ ಬಂಧನ ಎಂದರೇ ತಿಳಿದಿರುವುದು ಒಂದೇ ಅದು ತಂಗಿ ಅಣ್ಣನಿಗೆ, ಅಕ್ಕ ತಮ್ಮನಿಗೆ ರಾಖಿಯನ್ನು ಕಟ್ಟುವುದು ಎಂದಷ್ಟೇ ತಿಳಿದಿದೆ. ಹಾಗಾದರೆ ಯಾಕೆ ರಾಖಿ ಕಟ್ಟುತ್ತಾರೆ ಎನ್ನುವ ಕುರಿತು ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ.
ರಾಖಿ ಎಂದರೆ ರಕ್ಷಣೆ ಎಂದರ್ಥ, ರಾಖಿ ಹಬ್ಬವನ್ನೇ ರಕ್ಷಾ ಬಂಧನದ ಹಬ್ಬ ಅಂತ ಕರೆಯೋದ್ಯಾಕೆ ಅಂದರೆ, ರಕ್ಷ ಎಂದರೆ ರಕ್ಷಿಸುವುದು, ಬಂಧನ್ ಎಂದರೆ ಸೂತ್ರ ಕಟ್ಟುವುದು ಎಂದರ್ಥ. ಸಹೋದರಿಯು ಅಣ್ಣ ಅಥವಾ ತಮ್ಮ ಯಶಸ್ಸಿನ ಕಡೆಗೆ ಹೆಜ್ಜೆ ಹಾಕಬೇಕೆಂದು, ಉತ್ತಮ ಸ್ಥಾನಕ್ಕೇರಬೇಕೆಂದು ಬಯಸುತ್ತಾ ರಾಖಿ ಕಟ್ಟುತ್ತಾಳೆ.
ಸಹೋದರನ ಯಶಸ್ಸನ್ನು ಸಹೋದರಿ ಬಯಸುತ್ತ ಅಣ್ಣ ಅಥವ ತಮ್ಮ ನಮಗೆ ರಕ್ಷಣೆಯನ್ನು ನೀಡುತ್ತಾನೆ ಹಾಗೂ ಒಳ್ಳೆ ಮಾರ್ಗದಲ್ಲಿ ನಮ್ಮನ್ನು ಕರೆದುಕೊಂಡು ಹೋಗುತ್ತಾನೆ ಮತ್ತು ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು. ಸಹೋದರರಿಗೆ ರಾಖಿ ಕಟ್ಟಿ ಅವರ ಏಳಿಗೆಯನ್ನು ಬಯಸುವುದು ಮತ್ತು ಆತ ತನ್ನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲಿ ಎಂಬುದು ಈ ಹಬ್ಬದ ಉದ್ದೇಶವಾಗಿದೆ.

ಹಿಂದೂ ಪಂಚಾಂಗದ ಪ್ರಕಾರ, ರಕ್ಷಾ ಬಂಧನ ಹಬ್ಬವನ್ನು ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಈ ವರ್ಷ ಹುಣ್ಣಿಮೆಯ ತಿಥಿ ಭಾನುವಾರ ಅಂದರೆ ಆಗಸ್ಟ್ 22, 2021 ರಂದು ಆಚರಿಸಲಾಗುತ್ತಿದೆ.
ಜ್ಯೋತಿಷ್ಯಾಚಾರ್ಯರಪ್ರಕಾರ ಭದ್ರಾಕಾಲದಲ್ಲಿ ರಾಖಿ ಕಟ್ಟುವುದು ಅಶುಭಕರ. ವಾಸ್ತವವಾಗಿ, ರಾಹುಕಾಲ ಮತ್ತು ಭದ್ರ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಭದ್ರಾಕಾಲದಲ್ಲಿ ರಾಖಿ ಕಟ್ಟದಿರುವುದರ ಹಿಂದಿನ ಕಾರಣವೆಂದರೆ ಲಂಕಾಧೀಶ ರಾವಣ ತನ್ನ ಸಹೋದರಿಗೆ ಭದ್ರಾದಲ್ಲಿ ರಾಖಿ ಕಟ್ಟಿದ್ದ ಮತ್ತು ಒಂದು ವರ್ಷದೊಳಗೆ ರಾವಣ ಸರ್ವನಾಶವಾದ.
ಆದ್ದರಿಂದ, ಈ ಸಮಯವನ್ನು ಹೊರತುಪಡಿಸಿ, ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟುತ್ತಾರೆ. ಇನ್ನೊಂದೆಡೆ ಭದ್ರಾ ಶನಿ ಮಹಾರಾಜರ ಸಹೋದರಿ ಎಂದೂ ಹೇಳಲಾಗುತ್ತದೆ.

ಆಕೆಗೆ ಪರಬ್ರಹ್ಮನ ಶಾಪಕ್ಕೆ ಗುರಿಯಾಗಿದ್ದಳು. ಬ್ರಹ್ಮನ ಶಾಪದ ಪ್ರಕಾರ, ಭದ್ರಾ ಕಾಲದಲ್ಲಿ ಯಾರು ಶುಭ ಕೆಲಸಗಳನ್ನು ನೆರವೆರಿಸುತ್ತಾರೆಯೋ ಅವರಿಗೆ ಶುಭ ಫಲಗಳು ಪ್ರಾಪ್ತಿಯಾಗುವುದಿಲ್ಲ ಮತ್ತು ಅವರಿಗೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಇದಲ್ಲದೆ ರಾಹುಕಾಲದಲ್ಲಿಯೂ ಕೂಡ ರಾಖಿ ಧರಿಸಬಾರದು ಅಥವಾ ಕಟ್ಟಬಾರದು.
ಯಾವುದೇ ಒಂದು ಕಾರಣಾಂತರದಿಂದ ಒಂದು ವೇಳೆ ಆಗಸ್ಟ್ 22 ರಂದು ನೀವು ನಿಮ್ಮ ಸಹೋದರನಿಗೆ ರಾಖಿ ಕಟ್ಟದೆ ಹೋದರೆ, ಶ್ರೀ ಕೃಷ್ಣ ಜನ್ಮಾಷ್ಟಮಿಯವರೆಗೆ ನೀವು ರಾಖಿ ಕಟ್ಟಬಹುದು. ಆದರೆ, ಈ ಅವಧಿಯಲ್ಲಿ ನೀವು ಭದ್ರಾ ಕಾಲ ಬೀಳುವ ಕಾರಣ ಅದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಭದ್ರಾ ಕಾಲ ಆಗಸ್ಟ್ 23, 2021ರ ಬೆಳಗ್ಗೆ 5.34 ರಿಂದ ಬೆಳಗ್ಗೆ 06.12 ರವರೆಗೆ ಇರಲಿದೆ. ಏಕೆಂದರೆ ಭದ್ರಾ ಕಾಲದಲ್ಲಿ ಎಲ್ಲ ಶುಭಕಾರ್ಯಗಳಿಗೆ ನಿಷಿದ್ಧ ವಿಧಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ರಾಖಿ ಕಟ್ಟಬೇಡಿ.
ಈ ಬಾರಿಯ ರಕ್ಷಾಬಂಧನದ ದಿನ ಕುಂಭ ರಾಶಿಯಲ್ಲಿ ಗುರು ವಕ್ರಿ ನಡೆಯಲ್ಲಿ ಇರಲಿದ್ದಾನೆ. ಇದಲ್ಲದೆ ಚಂದ್ರ ಕೂಡ ಅಲ್ಲಿಯೇ ಇರಲಿದ್ದಾನೆ. ಗುರು ಹಾಗು ಚಂದ್ರರ ಉಪಸ್ಥಿತಿಯ ಹಿನ್ನೆಲೆ ರಕ್ಷಾ ಬಂಧನದ ದಿನ ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ವ್ಯಕ್ತಿಗಳ ಎಲ್ಲಾ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ. ಗಜಕೇಸರಿ ಯೋಗದಿಂದ ರಾಜ ಸುಖ ಹಾಗೂ ಸಮಾಜದಲ್ಲಿ ಪ್ರತಿಷ್ಠೆ ಪಾಪ್ತಿಯಾಗುತ್ತದೆ. ಜಾತಕದಲ್ಲಿ ಗುರು ಹಾಗೂ ಚಂದ್ರರು ಪರಸ್ಪರ ಮುಖಾಮುಖಿ ವಿರಾಜಮಾನರಾದರೆ ಅದನ್ನು ಗಜ ಕೇಸರಿ ಯೋಗ ಎಂದು ಕರೆಯಲಾಗುತ್ತದೆ.

ಹಾಗೆಯೇ ಕೆಲವು ಸಂದೇಶಗಳು ಇಲ್ಲಿವೆ:
*ನನ್ನನ್ನು ಕಣ್ಣಿಗೆ ರೆಪ್ಪೆಯಂತೆ ನೋಡಿಕೊಳ್ಳುವ ಅಣ್ಣಾ
ನಿನ್ನ ಹಾರೈಕೆಗಳೇ ನನಗೆ ಶ್ರೀರಾಮ ರಕ್ಷೆ.
* ನಿನ್ನಣ್ಣನಂತಹ ಅಣ್ಣ ಬೇಕು ಎಂದು ಗೆಳತಿಯರು ಹೇಳುವಾಗ
ರಾಣಿ ಎಲಿಜೆಬೆತ್ ಸಿಂಹಾಸನ ಏರಿದ ಖುಷಿ ನನ್ನಲ್ಲುಂಟಾಗುತ್ತದೆ.
* ಅಣ್ಣ ಅಂದರೆ ಪ್ರೀತಿ, ಕಾಳಜಿ, ಗೌರವ, ಮೌಲ್ಯ, ಅಷ್ಟೇ ಏಕೆ ಅಣ್ಣ ಅಂದ್ರೆ ನನ್ನ ಇಡೀ ಜಗತ್ತು.
ನನ್ನಣ್ಣನೇ ನನಗೆ ಹೀರೋ.
* ನನ್ನಲ್ಲಿ ಆಶೋತ್ತರಗಳಿಗೆ ಸ್ಪಂದಿಸಿ, ಕೆಲವೊಮ್ಮೆ ತಂದೆಯಾಗಿ, ತಾಯಿಯಾಗಿ, ಅಕ್ಕನಾಗಿ, ಸ್ನೇಹಿತನಾಗಿ, ಗುರುವಾಗಿ, ಮಾರ್ಗದರ್ಶಕನಾಗಿ, ನನ್ನ ಜೀವನದ ಎಲ್ಲ ಆಯಾಮಗಳಿಗೆ ಶಕ್ತಿ ಕೇಂದ್ರ ಅಣ್ಣನಿಗೆ ರಾಖಿ ಹಬ್ಬದ ಶುಭಾಶಯಗಳು.
* ಗುಟ್ಟು ಹೇಳುವಾಗ ಸ್ನೇಹಿತನಾಗಿ, ಬುದ್ಧಿ ಹೇಳುವಾಗ ತಂದೆಯಾಗಿ, ಸಮಾಧಾನ ಮಾಡುವಾಗ ಅಮ್ಮನಾಗಿ, ಕಾಪಾಡುವಾಗ ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯಗಳು.
* ಅಣ್ಣನೆಂದರೆ ಪ್ರೀತಿಯ ಚಿಲುಮೆ
ಅದಕ್ಕೆ ಸರಿಸಾಟಿಯಾಗಿರುವುದು ನನ್ನ ಪ್ರೀತಿಯ ಒಲುಮೆ
ಆ ಬಾನು ಜಗತ್ತಿಗೆಲ್ಲ ಬೆಳಕಾಗಿರುವನು
ಈ ಭಾನುವಿನ ಜಗತ್ತೇ ತನ್ನ ಅಣ್ಣನಾಗಿರುವನು
ಅಣ್ಣ ನಿನ್ನ ಕನಸುಗಳ ಸರಮಾಲೆಯಲ್ಲಿ
ಯಶಸ್ಸಿನ ಗಾಳಿಪಟ ಹಾರಲಿ ಇಲ್ಲಿ
ಏಳೆಂಟು ಸಾಲುಗಳಲ್ಲಿ ಹೇಳಲಾರದಷ್ಟು ಭಾವನೆಗಳಲ್ಲಿ
ಈ ಕವನಗಳನ್ನು ಮುಗಿಸಲು ಮನಸ್ಸಿಲ್ಲ
ಆದರೂ ಕೆಲವು ಸಾಲುಗಳಲ್ಲಿ ಸೋದರ ಬಾಂಧವ್ಯದ
ನಮ್ಮ ಸಂಬಂಧವನ್ನು ಹೇಳಿರುವೆನಿಲ್ಲಿ.
*ನೀನೆಷ್ಟೇ ದೊಡ್ಡವಳಾದರೂ ನನ್ನ ಕಣ್ಣಿಗೆ ಇನ್ನೂ ಚಿಕ್ಕವಳೇ
ಬೆಟ್ಟದಷ್ಟು ಪ್ರೀತಿಯನ್ನು ಹಂಚಿ
ತುಂಬು ಹಾರೈಸುವ ಚಿನ್ನದ ತಂಗಿಗೆ
ರಾಖಿ ಹಬ್ಬದ ಶುಭಾಶಯಗಳು.
* ಪ್ರೀತಿಯ ಕೀಟಲೆ, ಸಮಾಧಾನದ ಮಾತು, ಒಂದು ಕೂಡ ಗುಟ್ಟು ಇರದ
ನಮ್ಮ ಸೋದರ ಸಂಬಂಧಕ್ಕೆ ನಿಮ್ಮೆಲ್ಲರ ಹಾರೈಕೆ-ಆಶೀರ್ವಾದ ಎಂದಿಗೂ ಇರಲಿ.
* ಆಕಾಶದಲ್ಲಿ ಎಷ್ಟೇ ನಕ್ಷತ್ರಗಳಿದ್ದರೂ, ಭೂಮಿಗೆ ಬೆಳಕು ನೀಡುವ ನಕ್ಷತ್ರವೆಂದರೆ ಸೂರ್ಯ ಮಾತ್ರ.
ಭೂಮಿಯ ಮೇಲೆ ಎಷ್ಟೇ ಸಂಬಂಧಗಳಿದ್ದರೂ ಶ್ರೇಷ್ಠವಾದ ಪ್ರೀತಿಯ ಸಂಬಂಧವೆಂದರೆ ನಮ್ಮ ಅಣ್ಣ-ತಂಗಿ ಸಂಬಂಧ ಮಾತ್ರ.
* ಕನಸುಗಳು ನೂರಿರಲಿ, ಸಂರಕ್ಷಣೆಯ ಹೊಣೆ ನನಗಿರಲಿ
ಎಂಬ ಸಂದೇಶ ಸಾರುವ ಸೋದರತೆಯ ಸಂಭ್ರಮದ ಹಬ್ಬಕ್ಕೆ ಶುಭಾಶಯ.
* ನಿನ್ನ ಜೊತೆಗೆ ಬೆಳೆದೆ,
ನಿನ್ನ ಹಿಂದೆಯೇ ಓಡಾಡಿದೆ
ನೀನು ಮುದ್ದು ಮಾಡುತ್ತಿದ್ದರೆ ಹಸುಗೂಸಾಗುತ್ತೇನೆ
ಈ ರಕ್ಷಾ ಬಂಧನ ಸಾಕ್ಷಿಯಾಗಿ ಆಶೀರ್ವದಿಸಿದರೆ ಖುಷಿಪಡುತ್ತೇನೆ
ಅಣ್ಣ ನನಗೆ ಆಶೀರ್ವದಿಸು
ಅನುಗಾಲ ನನ್ನನು ಹೀಗೆಯೇ ಪ್ರೀತಿಸು
ಇಂತಿ ನಿನ್ನ ಪ್ರೀತಿಯ ನಿನ್ನ ತಂಗಿ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications