ಅಂಥ ಹಸಿರಿನ ನಡುವೆ ದಾಸಭೋಗ ಎಂದರೆ....
ಚಳಿಗಾಲ, ಬೇಸಿಗೆಯಲ್ಲಿ ಮರುಭೂಮಿಯಂತೆ ಕಾಣುವ ಬಯಲುಸೀಮೆ ತಾಣಗಳನ್ನು ಶ್ರಾವಣದಿಂದ ಕಾರ್ತೀಕ ಮುಗಿಯುವವರಿಗೆ ನೋಡಲು ಚೆನ್ನ. ಅಂಥ ಹಸುರಿನ ನಡುವೆ ನಡೆವ ದಾಸಭೋಗ ಎಂದರೆ ಆ ನೆನಪು ಮಾಸಲು ಮತ್ತೆ ಶ್ರಾವಣವೇ ಬರಬೇಕು.
*ಕೆ. ಕರಿಸ್ವಾಮಿ
ಶ್ರಾವಣವೆಂದರೆ ಪ್ರತಿ ಶನಿವಾರ, ಸೋಮವಾರ ಮೃಷ್ಟಾನ್ನದ ನೆನಪು ಬಯಲುಸೀಮೆಯ ಹುಡುಗರಿಗೆ.
ವಾರವೊಂದಕ್ಕೆ ಇಡೀ ಹಳ್ಳಿಯ ಕನಿಷ್ಠ 25 ಮನೆಯಲ್ಲಿ ಶನಿದೇವರ ಕಥೆ ಪಠಣ, ತುಂಬಿ ತೊನೆದಾಡುವ ರಾಗಿ ಹೊಲದ ನಡುವೆ ನಡೆಯುವ ದಾಸಭೋಗದ ಊಟ, ದಾಸಯ್ಯನ ಜಾಗಟೆ ಸದ್ದು, ಶನಿದೇವರ ದೇವಸ್ಥಾನದ ಗಂಟೆಗಳ ಸದ್ದು ... ಶ್ರಾವಣವೆಂದರೆ ಬಯಲು ಸೀಮೆಯ ಜನತೆಗೆ ಥಟ್ಟನೆ ನೆನಪಿಗೆ ಬರುವುದು ಇವಿಷ್ಟು.
ಬಯಲುಸೀಮೆ ನೆಲಗಡಲೆಗೆ ಪ್ರಸಿದ್ದ. ಹೀಗಾಗಿ ಜೂನ್ ಮೊದಲ ವಾರದಲ್ಲಿ ಬಿತ್ತನೆಯಾಗುವ ನೆಲಗಡಲೆ ಆಗಸ್ಟ್ ತಿಂಗಳಲ್ಲಿ ನೆಲಕ್ಕೆ ಹಸಿರು ಸಮುದ್ರವನ್ನೇ ಹಾಸಿರುತ್ತದೆ. ಚಳಿಗಾಲ, ಬೇಸಿಗೆಯಲ್ಲಿ ಮರುಭೂಮಿಯಂತೆ ಕಾಣುವ ಬಯಲುಸೀಮೆ ತಾಣಗಳನ್ನು ಶ್ರಾವಣದಿಂದ ಕಾರ್ತೀಕ ಮುಗಿಯುವವರಿಗೆ ನೋಡಲು ಚೆನ್ನ. ಅಂಥ ಹಸುರಿನ ನಡುವೆ ನಡೆವ ದಾಸಭೋಗ ಎಂದರೆ ಆ ನೆನಪು ಮಾಸಲು ಮತ್ತೆ ಶ್ರಾವಣವೇ ಬರಬೇಕು. ಇಡೀ ತಿಂಗ-ಳು ಹಬ್ಬ-ದಂ--ತಿ-ರು-ವ ಶ್ರಾವ-ಣ-ದ ನೆನ-ಪು ಅವಿ-ಸ್ಮ-ರ-ಣೀ-ಯ.
ದಾಸ-ಭೋ-ಗ ಅ-ಥ-ವಾ ಸುಗ್ಗಿ ಹ-ಬ್ಬ-ಕ್ಕೆ ಇ-ಡೀ ಮನೆ-ಗೆ ಸುಣ್ಣ-ಬ-ಣ್ಣ ಬಳಿ-ದು ಸಾರಿ-ಸಿ ಸಿಂ-ಗ-ರಿ-ಸ-ಲಾ-ಗು-ತ್ತ-ದೆ. ಸಾಮಾ--ನ್ಯ-ವಾಗಿ ಸಿಹಿ ತಿಂಡಿ-ಯೇ ಪ್ರಧಾ-ನ-ವಾ-ಗಿ-ರು-ವು--ದ-ರಿಂ-ದ ಪಾಯ-ಸ ಅಥ-ವಾ ರಾಗಿಮುದ್ದೆ ಸೇರಿ-ದ ಅಡಿ-ಗೆ ತಯಾ-ರಾ-ಗು-ತ್ತ-ದೆ. ಸಂಜೆ-ಯಾ-ಗು-ತ್ತ--ಲೇ ಮಾಡಿ-ದ ಅಡು-ಗೆ-ಯ-ನ್ನು ಹೊ-ತ್ತು-ಕೊಂ-ಡು ಹೊಲ-ದ ಬಳಿ-ಗೆ ಬರು-ತ್ತಾ-ರೆ. ಅಲ್ಲಿ-ಗೆ ಆ ಪ್ರದೇ-ಶ-ದ ವ್ಯಾಪ್ತಿ-ಯ ದೇವ-ರ ಪೂಜಾ-ರಿ ಅಥ-ವಾ ಪೂಜಾ-ರಿ-ಯಿಂ-ದ ಅನು-ಮ-ತಿ ಪಡೆ-ದ ಕೆಲ-ವ-ರು ಜಾಗ-ಟೆ, ಭವ-ನಾ-ಸಿ(ದೇವ-ರಿ-ಗೆ ಹಾ-ಕು-ವ ಎಡೆ- ಅಥ-ವಾ ಭಿಕ್ಷೆ-ಯ-ನ್ನು ಹಾಕಿ-ಕೊ-ಳ್ಳು-ವ ಭಿಕ್ಷಾ-ಪಾ-ತ್ರೆ) ಹಾಗೂ ದೇವ-ರ ಪ್ರತಿ-ರೂ-ಪ- ಎಂದು ನಂಬಲಾಗಿರುವ ಗರು-ಡ-ಗಂ-ಬವ-ನ್ನು ಹೊತ್ತು ಆ ಸ್ಥಳ-ಕ್ಕೆ ಬರು-ತ್ತಾ-ನೆ. ಕಂಬ-ದ ಅಡಿ-ಗೆ ರಾಗಿ-ಯ-ನ್ನೋ, ಭತ್ತ-ವ-ನ್ನೋ ಹಾ-ಕಿ ಹೂಗ-ಳಿಂ-ದ ಸಿಂಗ-ರಿಸಿದ ಮೇ-ಲೆ ಅ-ಲ್ಲಿ ಪೂಜೆ ನ-ಡೆ-ಯು-ತ್ತ-ದೆ. ನಂತ-ರ ಊಟ. ಇಡೀ ತಿಂಗ-ಳು ಇಂಥ ಔತ-ಣ-ಕೂ-ಟ ಒಂ-ದ-ಲ್ಲಾ ಒಂದು ಹೊಲ-ದ-ಲ್ಲಿ ಪ್ರತಿ ಶನಿ-ವಾ-ರ ಅಥ-ವಾ ಸೋಮ-ವಾ-ರ ನಡೆ--ದೇ ಇರು-ತ್ತ-ದೆ.
ಸಾಮಾ-ನ್ಯ-ವಾ-ಗಿ ಅದೇ ವಷ-ರ್ ಮದು-ವೆ-ಯಾ-ದ ಎಲ್ಲ ಹೆಣ್ಣು ಮಕ್ಕ-ಳೂ ಹ-ಬ್ಬ-ಗ-ಳಿ-ಗಾ-ಗಿ ತ-ವ-ರಿ-ನ-ಲ್ಲಿ-ರು-ತ್ತಾ-ರೆ ಅ-ವ-ರ ಹಿಂದೆ- ಯೇ ಊ-ರಿ-ನ ಅಳಿ-ಯಂ-ದಿ-ರು ತ-ಮ್ಮ ಹೆಂಡ-ತಿ-ಯ-ರ -ಹಿಂದೆ ಅತ್ತೆ-ಮ-ನೆ-ಯ ರಾ-ಜ-ವೈ-ಭೋ-ಗ-ದ ಅ-ತಿ-ಥ್ಯ-ಕ್ಕೆ ಸಜ್ಜಾ-ಗಿ ಬರು-ತ್ತಾ-ರೆ. ಮನೆ-ಯ-ಲ್ಲಿ ಪ್ರತಿ-ವ-ರ್ಷ-ವೂ ತ-ಪ್ಪ-ದೇ ಶನಿ-ದೇ-ವ- ವಿ-ಕ್ರ-ಮಾ-ಧಿ-ತ್ಯ-ನಿ-ಗೆ ಹೆಗ-ಲೇ-ರಿ-ದ ಕಥೆ ಪಠ-ಣ ನಡೆ-ಯು-ತ್ತ-ದೆ-. ಶನಿ-ದೇ-ವಾ ನಿ-ನ್ನ ಕರಿ ನೆರ-ಳು ನಮ್ಮ ಮೇಲೆ ಬೀಳ-ದಿ-ರ-ಲಿ ಎಂದು -ಬನ್ನಿ , ಬಿಲ್ವ, ಲ-ಕ್ಳಿ, ಕಾಮ-ಕ-ಸ್ತೂ-ರಿ ಮ-ತ್ತು ತುಳ-ಸಿ -ಪ-ತ್ರೆಗಳ-ನ್ನು ಇಟ್ಟು, ಎಳ್ಳು ತುಪ್ಪ-ದ ದೀ-ಪ ಹಚ್ಚಿ ಪ್ರಾರ್ಥಿ-ಸು-ತ್ತಾ-ರೆ. ಶನಿ-ದೇ-ವಾ ಎಂದ-ರೆ ತಂದೆ-ಯಾ-ದ ಸೂರ್ಯ-ನ-ನ್ನೇ ಬಿಡ-ದೆ ಕಾಡಿ-ದ ಮ-ಹಾತ್ಮ. ಅ-ವ-ನ ಬಗೆ-ಗೆ ನಿರ್ಲ-ಕ್ಷ್ಯ ಬೇಡ. ಭಯ ಭಕ್ತಿ-ಯಿಂ-ದ ನ-ಡೆ-ದು-ಕೊ-ಳ್ಳಿ ಎಂದು ಹಿರಿ-ಯ-ರು ಮಕ್ಕ-ಳಿ-ಗೆ ಬೋ-ಧಿ-ಸು-ತ್ತಾ-ರೆ.
ಶ್ರಾವಣಕ್ಕೆ ಇನ್ನೊಂದು ಮೆರಗು : ಇನ್ನೂ ಕೆಲ-ವ-ರು ತಮ್ಮ ಮನೆ ದೇವ-ರು-ಗೆ ಗಾಡಿ ಕ-ಟ್ಟಿ-ಕೊಂ-ಡು ಕುರಿ-ಯ-ನ್ನೂ, ಕೋಳಿ-ಯ-ನ್ನೂ ತೆಗೆ-ದು-ಕೊಂ-ಡು ಹೊರ-ಡು-ತ್ತಾ-ರೆ. ದೇ-ವ-ರು ಸಿಹಿ-ಪ್ರಿ-ಯ-ನಾ-ದ-ರೆ ಒಬ್ಬ-ಟ್ಟೋ-ಳಿ-ಗೆ ಊಟದ ಆರಾ-ಧ-ನೆ-ಯಾ-ಗು-ತ್ತ-ದೆ. ಕೌಟುಂ-ಬಿ-ಕ ಹೊರ-ಸಂ-ಚಾ-ರ-ದಂ-ತಿ-ರು-ವ ಕೆಲ-ವು ಯಾತ್ರೆ-ಗ-ಳು, ಕೆಲ-ವು ಜಾತ್ರೆ-ಗ-ಳೂ ನಡೆ-ಯು-ವು-ದು ಶ್ರಾವ-ಣ-ಕ್ಕೆ ಮತ್ತೊಂ-ದು ಮೆರು-ಗು.
ಅ-ಕ್ಕ-ಪಕ್ಕ-ದ ಊರು-ಗ-ಳ-ಲ್ಲಿ ಶನಿ-ದೇ-ವ-ನ ಮ-ಹಾ-ತ್ಮೆ-ಯ-ನ್ನು ಕೊಂಡಾ-ಡು-ವ ನಾಟ-ಕ, ಹ-ರಿ-ಕ-ತೆ, ಕಥಾ-ಕಾ-ಲ-ಕ್ಷೇ-ಪ ತಿಂಗ-ಳಿಡೀ ನಡೆ-ಯು-ತ್ತ-ಲೇ ಇರು-ತ್ತ-ವೆ. ಬೆಳೆ ಚೆನ್ನಾ-ಗಿ-ದ್ದ-ರೆ ಹ-ಬ್ಬ-ದ ರಂಗು ಇನ್ನೂ ಹೆಚ್ಚು. ಇ-ನ್ನು- ಮದು-ವೆ ಮತ್ತು ಗೃಹ-ಪ್ರ-ವೇ-ಶ-ಗ-ಳಿ-ಗೆ ಶ್ರಾವ-ಣ ಹೇಳಿ ಮಾಡಿ-ಸಿ-ದ ಕಾಲ. ಇನ್ನೂ ಕೆಲವರು ಮೊದಲ ಬಾರಿ ಮೈನೆರೆದ ಹೆಣ್ಣುಮಕ್ಕಳ ಒಸಗೆ ಕಾರ್ಯಕ್ರಮ (ಇದನ್ನು ಗುಡ್ಲಾಕುವುದು, ಹೊರಕ್ಕಾಕುವುದು ಎಂದೂ ಕರೆಯುತ್ತಾರೆ.) ವನ್ನೂ ಇಟ್ಟುಕೊಂಡು ಪಡ್ಡೆಗಳ ಸಂಭ್ರಮ ಹೆಚ್ಚಿಸುತ್ತಾರೆ. ಐದು ಅಥವಾ ಒಂಬತ್ತು ದಿನ ನಡೆವ ಒಸಗೆ ಕಾರ್ಯಕ್ರಮ ಶ್ರಾವಣಕ್ಕೆ ಮತ್ತೊಂದು ಮೆರುಗು ಕೊಡುತ್ತದೆ. ಹುಡುಗಿಗಾಗಿ ಬೇವು, ಮಾವಿನ ಸೊಪ್ಪು ಬಳಸಿ ಸೋದರ ಮಾವ ಕಟ್ಟುವ ಪುಟಾಣಿ ಗುಡಿಸಲು, ಅಲ್ಲಿ ಅವಳು ಓರಗೆಯವರೊಡನೆ (ಕುಂಟಾಬಿಲ್ಲೆಗೆ ವಿದಾಯ ಹೇಳಿ) ಕುಳಿತು ಚೌಕಾಬಾರ, ಅಟ್ಟಗುಣಿ ಆಡುವಾಗ ರೇಗಿಸಿಕೊಂಡು ಓಡಾಡುವ ತುಂಟರು, ಖುಷಿಯ ದಿನಗಳಿಗೆ ಸಂತಸದ ತೋರಣ ಕಟ್ಟುತ್ತಾರೆ.
ತಿಂಗ-ಳಿ-ಡೀ ಭೂರಿ-ಭೋ-ಜ-ನ ಕಲ್ಪಿ-ಸು-ವ ಶ್ರಾವ-ಣ ಒಮ್ಮೆ ನಾಡಿ-ಗೆ ಬಂದರೆ ಹೋ-ಗು-ವ-ವ-ರೆ-ಗೂ ತಿಂಗ-ಳು ಕಳೆ-ದ-ದ್ದೇ ಗೊತ್ತಾ-ಗು-ವು-ದಿ-ಲ್ಲ. ಶನಿ-ದೇ-ವ-ನ ಹೆಸ-ರ-ಲ್ಲಿ ತಿಂಗ-ಳಿಡೀ ಎಲ್ಲ-ರ ಮ-ನೆ-ಗ-ಳ-ಲ್ಲಿ ದೀಪ ಉರಿ-ಸು-ವ ಶ್ರಾ-ವ-ಣ ಬಯ-ಲು-ಸೀ-ಮೆ-ಯ ದೀಪಾವಳಿ.












Click it and Unblock the Notifications