ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊರವನಳ್ಳಿ ಮಾತೆ ಬಾರೆ : ಕ್ಯಾಸೆಟ್‌ ದರ್ಶನ

By Staff
|
Google Oneindia Kannada News

ಶೀರ್ಷಿಕೆ : ಗೊರವನಳ್ಳಿ ಮಾತೆ ಬಾರೆ
ಸಂಗೀತ : ಕೆ. ಯುವರಾಜ್‌
ಕಂಪನಿ : ಝೇಂಕಾರ್‌
ಬೆಲೆ : 25 ರುಪಾಯಿ

ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲೊಂದಾಗಿ ಈಚಿನ ದಿನಗಳಲ್ಲಿ ಬೆಳೆಯುತ್ತಿರುವ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿಯ ಲಕ್ಷ್ಮಿ ದೇವತೆಯನ್ನು ಸ್ತುತಿಸುವ ಗೀತಗುಚ್ಛ 'ಗೊರವನಹಳ್ಳಿ ಮಾತೆ ಬಾರೆ" ಧ್ವನಿ ಸುರುಳಿ. ಸಂಗೀತಾ ಕಟ್ಟಿ , ಕೆ. ಯುವರಾಜ್‌, ಸುಜಾತ ಹಾಗೂ ಸುನೀತ ಅವರ ಕಂಠಗಳಲ್ಲಿ ಗೊರವನಹಳ್ಳಿ ಲಕ್ಷ್ಮಿಯ ಮಹಿಮೆಯು ಎಂಟು ಹಾಡುಗಳಲ್ಲಿ ಹರಿದು ಬಂದಿದೆ. ಗೀತೆಗಳ ಸಾಹಿತ್ಯ ಪುರುಷೋತ್ತಮ್‌ ಅವರದು. ಯುವರಾಜ್‌ ಕಂಠದೊಂದಿಗೆ ಸಂಗೀತವನ್ನೂ ನೀಡಿದ್ದಾರೆ.

ಧ್ವನಿಸುರುಳಿ ಬಿಚ್ಚಿಕೊಳ್ಳುವುದು ಮಹಾಲಕ್ಷ್ಮಿ ಮನೆಗೆ ಬಾರೆ ಗೀತೆಯಿಂದ. ಕಾಂಚಾಣದೊಡತಿ ಮಹಾಲಕ್ಷ್ಮಿಯನ್ನು ಮನೆಗೆ ಆಹ್ವಾನಿಸುವ ಗೀತೆಯಿದು. ಭಾಗ್ಯದ ಲಕ್ಷ್ಮೀ ಬಾರಮ್ಮ .. ಜನಪ್ರಿಯ ಗೀತೆಯೂ ಇಲ್ಲಿ ಸ್ಥಾನಪಡೆದಿದೆ. ನಂತರದ ಹರಿಯ ಸತಿ ನೀನು ಗೀತೆಗೆ ಸಂಗೀತಾ ಕಟ್ಟಿ ತಮ್ಮ ತುಂಬು ಕಂಠದ ಸೊಬಗ ತುಂಬಿದ್ದಾರೆ. 'ಎ" ಭಾಗದಲ್ಲಿನ ಕೊನೆಯ ಗೀತೆ ತುಪ್ಪದ ಆರತಿಯ ಬೆಳಗುವೆ ವಿಶೇಷಗಳಿಲ್ಲದ ಸಾಧಾರಣ ಗೀತೆ.

'ಬಿ" ವಿಭಾಗ ಶುರುವಾಗುವುದು ಮಹಾಲಕ್ಷ್ಮಿ ಶ್ಲೋಕದೊಂದಿಗೆ. ಲಕ್ಷ್ಮಿಯ ವಿವಿಧ ಗುಣ ಲಕ್ಷಣಗಳನ್ನು ವರ್ಣಿಸಿ ಶರಣಾಗುವ ಶ್ಲೋಕವಿದು. ಅಮ್ಮಾ ತಾಯಿ ಮಹಾಲಕ್ಷ್ಮಿ ಹಾಡಿನ ಸಾಹಿತ್ಯ ಮನ ಮುಟ್ಟುವಂತಿದೆ. ಶ್ರೀ ಕ್ಷೇತ್ರ ಗೊರವನಹಳ್ಳಿ ಹಾಡು ಕ್ಷೇತ್ರದ ಮಹಿಮೆಯನ್ನು ಸಾರುತ್ತದೆ. ಲಕ್ಷ್ಮಿ ಭಕ್ತರಿಗೆ ಈ ಕ್ಯಾಸೆಟ್‌ ಹೆಚ್ಚು ಇಷ್ಟವಾಗಬಲ್ಲ ದು.

ವರಮಹಾಲಕ್ಷ್ಮಿ ಹಬ್ಬಕ್ಕೆ 5 ಕ್ಯಾಸೆಟ್‌

ಕೀರ್ತಿ-ಶಿ-ಲ್ಪ ಕ್ಯಾಸೆ-ಟ್‌ ಸಂ-ಸ್ಥೆ ಮಹಾ-ಲ-ಕ್ಷ್ಮಿ-ಯ-ನ್ನು ಕುರಿ-ತ 5 ಸು-ರು-ಳಿ-ಗ-ಳ-ನ್ನು ಮಾರು-ಕ-ಟ್ಟೆ-ಗೆ ಬಿಡು-ಗ-ಡೆ ಮಾಡಿ-ದೆ. ಲಕ್ಷ್ಮಿ ಭಕ್ತ-ರಿ-ಗೆ ಮೆಚ್ಚಾ-ಗ-ಬ-ಹು-ದಾ-ದ ಭಕ್ತಿ ರಸಾ-ಯ-ನ ಈ ಕ್ಯಾಸೆ-ಟ್‌-ಗ-ಳ-ಲ್ಲಿ ಧಾರೆ-ಯಾ-ಗಿ-ದೆ.

ಹರಿ-ದಾ-ಸ-ರು ಕಂಡ ಮಹಾ-ಲ-ಕ್ಷಿ ್ಮ: ಈ ಸುರು-ಳಿ-ಯ-ಲ್ಲಿ 9 ಹಾಡು-ಗ-ಳಿ-ವೆ. ಭಾಗ್ಯ-ದ ಲಕ್ಷ್ಮಿ ಬಾರ-ಮ್ಮಾ, ಪಾಲಿ-ಸೆ-ನ್ನ ಮಹಾ-ಲ-ಕ್ಷ್ಮಿ, ಬಾರೆ ಭಾಗ್ಯ-ದ ನಿಧಿ-ಯೆ, ಏನು ಧನ್ಯ-ಳೋ ಲಕುಮಿ, ಕಾಪಾ-ಡೆ-ಲೆ ಆಪ-ದ್ಹಾ-ರಿ-ಣಿ ಮುಂತಾ-ದ ದಾಸ-ರ ರಚ-ನೆ-ಗ-ಳು ಇ-ಲ್ಲಿ-ವೆ. ಎಲ್ಲ ಕೀರ್ತ-ನೆ-ಗಳಿ-ಗೆ ಜೀವ ತುಂ-ಬಿ-ರು-ವು-ದು ಕೆ.ಎಸ್‌. ಸುರೇ-ಖ. ಜ-ಯ-ಶ್ರೀ ಅರ-ವಿಂ-ದ್‌ ಸಂಗೀ-ತ ನೀಡಿ-ದ್ದಾ-ರೆ. ವಾದ್ಯ-ಸಂ-ಯೋ-ಜ-ನೆ ವಿ.ಕೆ. ರಾಮ-ನ್‌ ಅವ-ರ-ದ್ದು.

ಬಳೆ- ತ-ನ್ನಿ ಭಾಗ್ಯ ಲಕ್ಷ್ಮೀ-ಗೆ : ಎ-ರ-ಡೂ ಕಡೆ-ಗ-ಳ-ಲ್ಲಿ ಸೇರಿ ಒಟ್ಟು 9 ಹಾಡು-ಗ-ಳಿ-ವೆ. ಕ್ಯಾ-ಸೆ-ಟ್‌-ನ ಎ ಬದಿ-ಯ-ಲ್ಲಿ ಝಣ-ರು ಝಣ-ರು, ಪಿಲ್ಲಿ-ಪಾ-ದ, ಅರಿ-ಶಿ-ನ ಕುಂಕು-ಮ, ಬಳೆ ತನ್ನಿ-ರ-ಮ್ಮ ಹಾಡು-ಗ-ಳಿ-ವೆ. ಬಿ ಬದಿ-ಯ-ಲ್ಲಿ ಕಪ್ಪ-ನ್ನ-ಚ್ಚಿ-ರಿ, ಕೊಡು ಕೊಡು, ಮುತ್ತ ಐದು, ಶುಕ್ರ-ವಾ-ರ-ದ-ಲ್ಲಿ , ಹೊನ್ನಿ-ನಾ-ರ-ತಿ ಎನ್ನು-ವ ಐದು ಹಾಡು-ಗ-ಳಿ-ವೆ. ಎಲ್ಲಾ ಹಾಡು-ಗ-ಳ-ನ್ನು ಕೆ.ಎಸ್‌. ಸು-ರೇ-ಖಾ ಮತ್ತು ಬಿ.ಆರ್‌. ಛಾಯಾ ಹಾಡಿ-ದ್ದಾ-ರೆ. ಸಾಹಿ-ತ್ಯ ಹಾಗೂ ಸಂಗೀ-ತ ಎರ-ಡ-ರ ಹೊಣೆ-ಯ-ನ್ನೂ ಜಯ-ಶ್ರೀ ಅರ-ವಿಂ-ದ್‌ ನಿ-ಭಾ-ಯಿ-ಸಿ-ದ್ದಾ-ರೆ. ವಿ. ಶ್ರೀನಿ-ವಾ-ಸ್‌ ವಾದ್ಯ-ಸಂ-ಯೋ-ಜ-ನೆ ನೀಡಿ-ದ್ದಾ-ರೆ.

-ಬಾರ-ಮ್ಮ ಭಾಗ್ಯ-ಲ-ಕ್ಷ್ಮಿ : ಎಂ.ಎಸ್‌. ಮಾರು-ತಿ ಸಂಗೀ-ತ ನೀಡಿ-ರುವ ಬಾರ-ಮ್ಮ ಭಾಗ್ಯ-ಲ-ಕ್ಷ್ಮಿ -ಕ್ಯಾ-ಸೆ-ಟ್‌-ನ-ಲ್ಲಿ-ನ ಹಾಡು-ಗ-ಳ ಸಾಹಿ-ತ್ಯ ಜಯ-ಶ್ರೀ ಅರ-ವಿಂ-ದ್‌ ಅವ-ರ-ದ್ದು. ಇಲ್ಲಿ-ನ ಹಾಡು-ಗ-ಳಿ-ಗೂ ಛಾಯಾ ಹಾಗೂ ಸುರೇ-ಖಾ ದ-ನಿ ನೀಡಿ-ದ್ದಾ-ರೆ. ಗೊರ-ವ-ನ-ಹ-ಳ್ಳಿ-ಯ-ಲಿ ಬಳೆ, ಸಿರಿ-ಲ-ಕ್ಷ್ಮಿ ಕೊಡು-ವ-ಳು, ಬೃಂದಾ-ವ-ನ-ದ-ಲಿ, ಇಂದಿ-ರೆ ರಂಗ-ನ ರಾಣಿ ಹಾಡು-ಗ-ಳು ಇಂಪಾ-ಗಿ-ವೆ.

ಏಳ-ಮ್ಮ ಲಕ್ಷ್ಮೀ ಬೆಳ-ಗಾ-ಯಿ-ತು : ಲಕ್ಷ್ಮಿ-ಗೆ ಸುಪ್ರ-ಭಾ-ತ ಹೇಳು-ವ ಏಳ-ಮ್ಮ ಲಕ್ಷ್ಮೀ ಬೆಳ-ಗಾ-ಯಿ-ತು ಸುಪ್ರ-ಭಾ-ತ ಶೈಲಿ-ಯ ಸುರು-ಳಿ-ಯ-ಲ್ಲಿ-ನ ಹಾಡು-ಗ-ಳನ್ನು ಛಾಯಾ ಹಾಗೂ ಸುರೇ-ಖಾ ಹಾಡಿ-ದ್ದಾ-ರೆ. ಮೂಡಣ ಕೆಂಪಾ-ಗಿ, ಪ-ದು-ಮಾ-ಕ್ಷಿ , ತೂಗಿ-ರೆ ಉಯ್ಯಾ-ಲೆ ಹಾಡು-ಗ-ಳು -ಮ-ತ್ತೆ ಕೇಳು-ವಂ-ತಿ-ದ್ದು , ಸಾಹಿ--ತ್ಯ ನೀಡಿ-ರು-ವ ಜಯ-ಶ್ರೀ ಅರ-ವಿಂ-ದ್‌ ಅವ-ರ ಬಗೆ-ಗೆ ಭರ-ವ-ಸೆ ಹುಟ್ಟಿ-ಸು-ತ್ತ-ವೆ.

ಮಡಿ-ಲು ತುಂಬಿ-ರೆ ಶ್ರೀಲ-ಕ್ಷ್ಮಿ- : ಈ ಧ್ವನಿ-ಸು-ರು-ಳಿ-ಯ-ಲ್ಲಿ ಏಳು ಹಾಡು-ಗ-ಳಿ-ವೆ. ಚಂ--ದ್ರು ಹಾಗೂ ಜಯ-ಶ್ರೀ ಅರ-ವಿಂ-ದ್‌ ಹಾಡು-ಗ-ಳ-ನ್ನು ರಚಿ-ಸಿ-ದ್ದಾ-ರೆ. ಸಂಗೀ-ತ ಬಾಲು-ಶ-ರ್ಮ ಹಾಗೂ ಎಲ್‌. ಕೃಷ್ಣ-ನ್‌ ಅವ-ರ-ದ್ದು . ವಾ-ಣಿ ಜಯ-ರಾಂ -ಅವರ ದನಿ-ಯ-ನ್ನು ಬಹ-ಳ ಕಾಲ-ದ ನಂತರ ಕೇಳು-ವ ಅವ-ಕಾ-ಶ-ವ-ನ್ನು ಈ ಸುರು-ಳಿ ಒದ-ಗಿ-ಸಿ-ದೆ. ಅವ-ರೊಂ-ದಿ-ಗೆ ಎಸ್‌.ಪಿ. ಬಾ-ಲಸು-ಬ್ರ-ಹ್ಮ-ಣ್ಯಂ ಹಾಗೂ ಬಿ.ಕೆ. ಸುಮಿ-ತ್ರಾ ಹಾಡಿ-ದ್ದು, ಸುರು-ಳಿ-ಯ ಶ್ರೀಮಂ-ತಿ-ಕೆ-ಯ-ನ್ನು ಹೆಚ್ಚಿ-ಸಿ--ದೆ. ಕುಂದ-ನ-ದ ಪೀಠ-ದ-ಲ್ಲಿ -ಕು-ಳಿ-ತ ಲಕು-ಮಿ-ಗೆ, ಕಮ-ಲ ನೇ-ತ್ರೆ ವಿಮ-ಲ ಗಾತ್ರೆ, ವರ-ದೇ ತಾಯೇ ಕರ-ಪುರ ಮುಂತಾ-ದ ಏಳು ಹಾಡು-ಗ-ಳ ಕ್ಯಾಸೆ-ಟ್‌-ನ-ಲ್ಲಿ-ವೆ.

ಲಕ್ಷ್ಮೀ ಭಕ್ತ-ರಿ-ಗೆ- ವರ- ಮ-ಹಾ-ಲ-ಕ್ಷ್ಮೀ ಹಬ್ಬ-ಕ್ಕೆ ಕೀರ್ತಿ-ಶಿ-ಲ್ಪ ಕ್ಯಾಸೆ-ಟ್‌ ಸಂ-ಸ್ಥೆ ನೀಡಿ-ರು-ವ ಕೊಡು-ಗೆ, ಈ ಕ್ಯಾಸೆ-ಟ್‌-ಗ-ಳು. ಪ್ರ-ತಿ ಕ್ಯಾಸೆ-ಟ್‌-ನ ಬೆಲೆ 35 ರುಪಾ-ಯಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X