ಶರದ್ ಪೂರ್ಣಿಮಾ ದಿನವೇ ಚಂದ್ರಗ್ರಹಣ: ಎಚ್ಚರ..! ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಶರದ್ ಪೂರ್ಣಿಮಾ ಹಿಂದೂ ಆಚರಣೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ಭಗವಾನ್ ಸತ್ಯನಾರಾಯಣನನ್ನು ಪೂಜಿಸಲು ಸಮರ್ಪಿಸಲಾಗಿದೆ. ಈ ಪವಿತ್ರವಾದ ದಿನದಂದು ಜನರು ವಿಷ್ಣು, ಲಕ್ಷ್ಮೀ ಮತ್ತು ಚಂದ್ರನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಶರದ್ ಪೂರ್ಣಿಮಾ ದಿನದಂದೇ ಚಂದ್ರಗ್ರಹಣ ಬಂದಿದೆ.
ಜನರು ಜೀವನದಲ್ಲಿ ಸಂಪತ್ತು, ಸಂತೋಷ, ಆರೋಗ್ಯ ಹಾಗೂ ಸೌಭಾಗ್ಯವನ್ನು ಪಡೆಯಲು ಶರದ್ ಪೂರ್ಣಿಮಾ ಅತ್ಯಂತ ವಿಶೇಷವಾದ ದಿನವಾಗಿದೆ. ಶರದ್ ಪೂರ್ಣಿಮೆಯಂದು ರಾತ್ರಿ ಲಕ್ಷ್ಮಿ ದೇವಿಯು ಭೂಲೋಕಕ್ಕೆ ಆಗಮಿಸಿ, ಭಕ್ತರಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ ಎನ್ನುವ ನಂಬಿಕೆ ಜರರಲ್ಲಿದೆ.

ಶರದ್ ಪೂರ್ಣಿಮಾವನ್ನು ಅಶ್ವಿನ್ ಮಾಸದಲ್ಲಿ ಆಚರಿಸಲಾಗುತ್ತದೆ ಮತ್ತು ಇದನ್ನು ಅಶ್ವಿನ್ ಪೂರ್ಣಿಮಾ ಅಥವಾ ಶೀಗಿ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಈ ದಿನದಂದು ಹಲವರು ಉಪವಾಸ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ವರ್ಷ ಶರದ್ ಪೂರ್ಣಿಮಾವನ್ನು ಅಕ್ಟೋಬರ್ 28, 2023 ರಂದು ಆಚರಿಸಲಾಗುತ್ತಿದೆ.
ಶೀಗಿ ಹುಣ್ಣಿಮೆಯ ದಿನದಂದು ಆಕಾಶದಿಂದ ಅಮೃತವು ಪರಿಸರ ಸೇರಿಕೊಳ್ಳುತ್ತದೆ ಎಂದು ಜನರಲ್ಲಿ ನಂಬಿಕೆ ಇದೆ. ಈ ಕಾರಣಕ್ಕಾಗಿ ಶೀಗಿ ಹುಣ್ಣಿಮೆ ದಿನದಂದು ಸಿಹಿ ತಯಾರಿಸಿ ಚಂದ್ರನಿಗೆ ಇಟ್ಟು ಸೇವಿಸಲಾಗುತ್ತದೆ. ಆದರೆ ಈ ವರ್ಷ ಶರದ್ ಪೂರ್ಣಿಮಾ ದಿನದಂದೇ ಚಂದ್ರ ಗ್ರಹಣವೂ ಸಂಭವಿಸಲಿದೆ. ಹೀಗಾಗಿ ಈ ವೇಳೆ ತಪ್ಪು ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ.
ಶರದ್ ಪೂರ್ಣಿಮಾ 2023ರಂದು ಏನು ಮಾಡಬೇಕು..?
ಭಕ್ತರು ಪೂರ್ಣ ಭಕ್ತಿ ಹಾಗೂ ಸಮರ್ಪಣೆಯೊಂದಿಗೆ ಉಪವಾಸ ಕೈಗೊಳ್ಳಬೇಕು.
ಭಗವಾನ್ ವಿಷ್ಣುವಿಗೆ, ಶ್ರೀಕೃಷ್ಣ ಮತ್ತು ರಾಧೆ ಪ್ರಾರ್ಥನೆ ಸಲ್ಲಿಸಬೇಕು.
ಚಂದ್ರಗ್ರಹಣ ಇರುವುದರಿಂದ ಶಿವನನ್ನು ಪೂಜಿಸಬೇಕು.
ಚಂದ್ರಗ್ರಹಣ ಪ್ರಾರಂಭವಾಗುವ ಮೊದಲು ಸಿಹಿ ತಯಾರಿಸಿ ಚಂದ್ರನಿಗೆ ಇರಿಸಬೇಕು.
ಭಕ್ತರು ದೇವರಿಗೆ ಪೂಜೆ ಸಂಪೂರ್ಣಗೊಳಿಸಿ ಆಹಾರ ಸೇವಿಸಬಹುದು.

ಶರದ್ ಪೂರ್ಣಿಮಾ 2023ರಂದು ಏನು ಮಾಡಬಾರದು..?
ಶರದ್ ಪೂರ್ಣಿಮೆಯ ಈ ಮಂಗಳಕರ ದಿನದಂದು ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ, ಮಾಂಸ ತಿನ್ನಬೇಡಿ
ಈ ದಿನ ನಿಮ್ಮ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ.
ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಥವಾ ಜೀವನ ಸಂಗಾತಿಯೊಂದಿಗೆ ಜಗಳನ್ನು ತಪ್ಪಿಸಿ.
ಇದೇ ದಿನ ಚಂದ್ರಗ್ರಹಣ ಇರುವುದರಿಂದ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ.
ಈ ದಿನ ಕೆಟ್ಟ ಪದಗಳನ್ನು ಬಳಸಿ ಬೈದಾಡಿಬೇಡಿ.
ಶರದ್ ಪೂರ್ಣಿಮೆಯ ದಿನ ಧೂಮಪಾನ ಹಾಗೂ ಮದ್ಯ ಸೇವಿಸಬೇಡಿ.












Click it and Unblock the Notifications