Get Updates
Get notified of breaking news, exclusive insights, and must-see stories!

Saphala Ekadashi 2024: ಸಫಲ ಏಕಾದಶಿ ದಿನಾಂಕ, ಮಂಗಳಕರ ಸಮಯ ಮತ್ತು ಮಹತ್ವವನ್ನು ತಿಳಿಯಿರಿ

ವರ್ಷದ ಮೊದಲ ಏಕಾದಶಿ ಸಫಲ ಏಕಾದಶಿ. ಅದನ್ನು ಜನವರಿ 7ರಂದು ಆಚರಿಸಲಾಗುತ್ತದೆ. ಸಫಲ ಏಕಾದಶಿಯಂದು ಉಪವಾಸ ಮಾಡುವುದರಿಂದ ಇಬ್ಬ ವ್ಯಕ್ತಿ ಎಲ್ಲಾ ಶುಭ ಕಾರ್ಯಗಳಲ್ಲಿ ಯಶಸ್ಸಿನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಕಾಣುತ್ತಾನೆ.

ಸಫಲ ಏಕಾದಶಿಯ ದಿನ ಉಪವಾಸವಿದ್ದು ವಿಷ್ಣುವನ್ನು ಪೂಜಿಸುವುದರಿಂದ ಎಲ್ಲಾ ಪಾಲಗಳು ಕಳೆದು ಸಂತೋಷದ ಜೀವನ ನಡೆಸಬಹುದು. ಮಾತ್ರವಲ್ಲದೆ ಮರಣದ ನಂತರ ವಿಷ್ಣುವಿನ ಲೋಕಕ್ಕೆ ಹೋಗುವ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ.

Saphala Ekadashi 2024: Know When, Auspicious Timing and Significance of Saphala Ekadashi in kannada

ಸಫಲ ಏಕಾದಶಿಯು ಪುಷ್ಯ ಮಾಸದ ಮೊದಲ ಏಕಾದಶಿಯಾಗಿದೆ. ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರ ಜೊತೆಗೆ ವಿಷ್ಣು ದೇವನನ್ನು ಪೂಜಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಸಫಲ ಏಕಾದಶಿ ಉಪವಾಸದ ಶುಭ ಸಮಯ ಮತ್ತು ಈ ದಿನದಂದು ಉಪವಾಸ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

ಸಫಲ ಏಕಾದಶಿ ಯಾವಾಗ? ಜನವರಿ 7? ಅಥವಾ 8?

ಪಂಚಾಗದ ಪ್ರಕಾರ, ಏಕಾದಶಿ ತಿಥಿಯು ಜನವರಿ 6 ರಂದು ಮಧ್ಯರಾತ್ರಿ 12 ಗಂಟೆಯ ನಂತರ ಪ್ರಾರಂಭವಾಗುತ್ತದೆ ಮತ್ತು ಜನವರಿ 7 ರಂದು ಮಧ್ಯರಾತ್ರಿ 12:41 ಕ್ಕೆ ಕೊನೆಗೊಳ್ಳುತ್ತದೆ. ಇದು ಜನವರಿ 7 ರ ರಾತ್ರಿ 12 ಗಂಟೆಯ ನಂತರ ಜನವರಿ 8 ರಂದು 12:46 ಕ್ಕೆ ಕೊನೆಗೊಳ್ಳುತ್ತದೆ. ಅಂದರೆ ಉದಯ ತಿಥಿಯ ನಿಯಮಗಳ ಪ್ರಕಾರ ಜನವರಿ 7 ರಂದು ಸಫಲ ಏಕಾದಶಿಯ ಉಪವಾಸವನ್ನು ಆಚರಿಸಲಾಗುತ್ತದೆ.

ಸಫಲ ಏಕಾದಶಿಯ ಮಹತ್ವ

ಸಫಲ ಏಕಾದಶಿಯ ಶುಭ ಸಂದರ್ಭದಲ್ಲಿ ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಇದು ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಸಫಲ ಏಕಾದಶಿಯಂದು ಉಪವಾಸ ಮಾಡಲು ಸಾಧ್ಯವಾಗದಿದ್ದರೂ ವಿಧಿವಿಧಾನಗಳ ಪ್ರಕಾರ ಪೂಜೆಯನ್ನೂ ಮಾಡಬಹುದು. ಹೀಗೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದವೂ ಸಿಗುತ್ತದೆ. ಸಫಲ ಏಕಾದಶಿಯ ದಿನದಂದು ಭಗವಾನ್ ವಿಷ್ಣುವಿಗೆ ಸಿಹಿಯನ್ನು ಅರ್ಪಿಸಬೇಕು. ಅದಕ್ಕೆ ತುಳಸಿ ಎಲೆಗಳನ್ನು ಕೂಡ ಸೇರಿಸಬೇಕು. ಇದು ಉತ್ತಮ ಫಲವನ್ನು ನೀಡುತ್ತದೆ.

Saphala Ekadashi 2024: Know When, Auspicious Timing and Significance of Saphala Ekadashi in kannada

ಸಫಲ ಏಕಾದಶಿಯಂದು ಪೂಜೆಗೆ ಪ್ರಶಸ್ತ ಸಮಯ

ಸಫಲ ಏಕಾದಶಿಯನ್ನು ಪೂಜಿಸಲು ಅನುಕೂಲಕರ ಸಮಯವೆಂದರೆ ಜನವರಿ 7 ರಂದು ಬೆಳಿಗ್ಗೆ 8:33 ರಿಂದ ಮಧ್ಯಾಹ್ನ 12:27 ರವರೆಗೆ. ಏಕಾದಶಿಯ ದಿನದಂದು ರಾತ್ರಿ ಜಾಗರಣೆ ಮಾಡುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಜನವರಿ 8 ರಂದು ಬೆಳಿಗ್ಗೆ 6:39 ರಿಂದ 8:59 ರವರೆಗೆ ಏಕಾದಶಿ ವ್ರತವನ್ನು ಬಿಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+