ಸಂಕ್ರಾಂತಿ ದಿನ ಎಳ್ಳು-ಬೆಲ್ಲ ಯಾಕೆ ತಿನ್ನಬೇಕು?

By: ವನಿತ ವೈ.ಜೈನ್
Subscribe to Oneindia Kannada

ಸಂಕ್ರಾಂತಿ ಹಬ್ಬದಲ್ಲಿ ಪೊಂಗಲ್, ಎಳ್ಳು ಬೆಲ್ಲ ಪ್ರಮುಖ ವಿಶೇಷ. ಇವೆರಡೂ ಇಲ್ಲದಿದ್ದರೆ ಸಂಕ್ರಾಂತಿ ಪರಿಪೂರ್ಣಗೊಳ್ಳುವುದೂ ಇಲ್ಲ, ಕಳೆಗಟ್ಟುವುದೂ ಇಲ್ಲ. ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು, ಅರಿಶಿಣ ಕುಂಕುಮ ಇಟ್ಟುಕೊಂಡು ಸಾಂಪ್ರದಾಯಿಕ ಉಡುಗೆ ತೊಟ್ಟು, ಮುಗುಳ್ನಗುತ್ತಾ ಮನೆಮನೆಗೂ ಎಳ್ಳು ಬೆಲ್ಲ ಕೊಟ್ಟು, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎಂದು ಹೇಳುತ್ತಾ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವುದು ಶತಮಾನದಿಂದಲೂ ನಡೆದುಕೊಂಡು ಬಂದಿರುವ ಆಚರಣೆ.

ಚಳಿಗಾಲದ ಸಂಕ್ರಾಂತಿಯ ಈ ಆಚರಣೆ ಧಾರ್ಮಿಕ ಹಿನ್ನೆಲೆಯಾಗಿ ಪ್ರಧಾನ್ಯತೆ ಪಡೆದುಕೊಂಡಂತೆ, ವೈಜ್ಞಾನಿಕ ಪರಿಭಾಷೆಯಾಗಿಯೂ ಉಳಿದುಕೊಂಡಿದೆ. ಈ ಹಬ್ಬದಲ್ಲಿ ಹಿರಿಯರು ತಯಾರು ಮಾಡುವ ಎಳ್ಳು ಬೆಲ್ಲದಲ್ಲಿ ಯಾವ ಪದಾರ್ಥಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಎಳ್ಳು ಬೆಲ್ಲಕ್ಕೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯವಿದೆ.[ಮಕರ ಸಂಕ್ರಾಂತಿಗೆ ನಕ್ಷತ್ರಗಳಿಗನುಗುಣವಾಗಿ ಫಲಾಫಲ]

ಚಳಿಗಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೈ ಚರ್ಮಗಳು ಬಿಳಿಚಿಕೊಂಡು, ಒಣಗಿದಂತೆ ಕಂಡು ಬರುತ್ತದೆ. ಕಾಂತಿಯತೆ ಕೊಂಚವೂ ಕಾಣುವುದಿಲ್ಲ. ಅದು ಅಲ್ಲದೇ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ ಯಾಕಾದ್ರೂ ಚಳಿಗಾಲ ಬರುತ್ತಪ್ಪಾ ಎಂದು ನಾವೇ ಕೈ ಹಿಚುಕಿಕೊಳ್ಳುತ್ತಿರುತ್ತೇವೆ. ಅಲ್ಲದೇ ಚರ್ಮ ಸುಕ್ಕು ಗಟ್ಟುವುದು, ಕೆಮ್ಮು ಶೀತ, ಗಾಯ ಮಾಗುವುದು ತಡವಾಗುವುದು ಹೀಗೆ ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣವೇ ಈ ಎಳ್ಳು ಬೆಲ್ಲ.[ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ]

ಹಿಂದೆ ಎಳ್ಳು ಮತ್ತು ಬೆಲ್ಲವನ್ನು ಮಾತ್ರ ನೀಡುತ್ತಿದ್ದರು. ಆದರೆ ಇದರಲ್ಲಿ ಹಲವಾರು ಪದಾರ್ಥಗಳು ಕಾಲಕ್ಕೆ ತಕ್ಕಂತೆ ಸೇರ್ಪಡೆಗೊಂಡವು. ಹಾಗಾದರೆ ಬನ್ನಿ ಚಳಿಗಾಲಕ್ಕೂ ಎಳ್ಳು ಬೆಲ್ಲ, ಶೇಂಗಾಕ್ಕೂ ಏನು ಸಂಬಂಧವಿದೆ? ಇದರಲ್ಲಿರುವ ವೈಜ್ಞಾನಿಕ ಅಂಶಗಳೇನು ಎಂದು ತಿಳಿದುಕೊಂಡು ಬರೋಣ.

ಬೆಲ್ಲದಲ್ಲಿ ಏನೆಲ್ಲಾ ಅಂಶಗಳಿವೆ.

ಬೆಲ್ಲದಲ್ಲಿ ಏನೆಲ್ಲಾ ಅಂಶಗಳಿವೆ.

ಸಕ್ಕರೆಗಿಂತ ಬೆಲ್ಲವನ್ನು ಉಪಯೋಗಿಸುವುದು ಬಹಳ ಉತ್ತಮ. ಬೆಲ್ಲದಲ್ಲಿ ಕ್ಯಾಲ್ಷಿಯಂ, ಮೆಗ್ನೀಶಿಯಂ, ಕಬ್ಬಿಣ, ರಂಜಕ ಮುಂತಾದ ಲವಣಗಳು, ಪ್ರೋಟಿನ್ ಹಾಗೂ ಕೊಬ್ಬಿನಾಂಶಗಳಿವೆ. ಲವಣಾಂಶವೂ ಹೆಚ್ಚಾಗಿರುತ್ತದೆ. ಬೆಲ್ಲ ಸಿಹಿಯ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ನೀಡುತ್ತದೆ. ಅಂದರೆ ಬೆಲ್ಲ ಆಹಾರ ಮಾತ್ರವಲ್ಲ ಔಷಧಿಯೂ ಆಗಿದೆ.

ಎಳ್ಳಿನ ಇನ್ನಿತರ ಉಪಯೋಗಗಳು:

ಎಳ್ಳಿನ ಇನ್ನಿತರ ಉಪಯೋಗಗಳು:

ಕಬ್ಬಿನಿಂದ ಉತ್ಪಾದಿಸುವ ಪದಾರ್ಥದಲ್ಲಿ ಬೆಲ್ಲವೇ ಅತಿ ಶ್ರೇಷ್ಠ ಎನ್ನುತ್ತದೆ ಆಯುರ್ವೇದ. ಬೆಲ್ಲವು ದೇಹಕ್ಕೆ ತಂಪು ಹಾಗೂ ಚೈತನ್ಯ ನೀಡುತ್ತದೆ. ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಅನಾರೋಗ್ಯಕ್ಕೆ ಬೆಲ್ಲವನ್ನು ಔಷಧಿಯಾಗಿ ಬಳಸಲಾಗುತ್ತದೆ.

ಬೆಲ್ಲದಲ್ಲಿ ಏನೆಲ್ಲಾ ಅಂಶಗಳಿವೆ.

ಬೆಲ್ಲದಲ್ಲಿ ಏನೆಲ್ಲಾ ಅಂಶಗಳಿವೆ.

ಸಕ್ಕರೆಗಿಂತ ಬೆಲ್ಲವನ್ನು ಉಪಯೋಗಿಸುವುದು ಬಹಳ ಉತ್ತಮ. ಬೆಲ್ಲದಲ್ಲಿ ಕ್ಯಾಲ್ಷಿಯಂ, ಮೆಗ್ನೀಶಿಯಂ, ಕಬ್ಬಿಣ, ರಂಜಕ ಮುಂತಾದ ಲವಣಗಳು, ಪ್ರೋಟಿನ್ ಹಾಗೂ ಕೊಬ್ಬಿನಾಂಶಗಳಿವೆ. ಲವಣಾಂಶವೂ ಹೆಚ್ಚಾಗಿರುತ್ತದೆ. ಬೆಲ್ಲ ಸಿಹಿಯ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ನೀಡುತ್ತದೆ. ಅಂದರೆ ಬೆಲ್ಲ ಆಹಾರ ಮಾತ್ರವಲ್ಲ ಔಷಧಿಯೂ ಆಗಿದೆ.

ಚಳಿಗಾಲದಲ್ಲಿ ಬೆಲ್ಲ ಯಾಕೆ ತಿನ್ನಬೇಕು?

ಚಳಿಗಾಲದಲ್ಲಿ ಬೆಲ್ಲ ಯಾಕೆ ತಿನ್ನಬೇಕು?

ಕಬ್ಬಿನಿಂದ ಉತ್ಪಾದಿಸುವ ಪದಾರ್ಥದಲ್ಲಿ ಬೆಲ್ಲವೇ ಅತಿ ಶ್ರೇಷ್ಠ ಎನ್ನುತ್ತದೆ ಆಯುರ್ವೇದ. ಬೆಲ್ಲವು ದೇಹಕ್ಕೆ ತಂಪು ಹಾಗೂ ಚೈತನ್ಯ ನೀಡುತ್ತದೆ. ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಅನಾರೋಗ್ಯಕ್ಕೆ ಬೆಲ್ಲವನ್ನು ಔಷಧಿಯಾಗಿ ಬಳಸಲಾಗುತ್ತದೆ.

ಕಡಲೇ ಕಾಯಿ

ಕಡಲೇ ಕಾಯಿ

ಬಡವರ ಬಾದಾಮಿ ಕಡಲೆಕಾಯಿ ಅಥವಾ ಶೇಂಗಾವು ಜನ ಇಷ್ಟಪಡುವ ಕೆಲವು ಆಹಾರ ಪದಾರ್ಥಗಳಲ್ಲಿ ಹೆಸರು ಪಡೆದಿರುತ್ತದೆ. ಶೇಂಗಾ ಪ್ರೋಟೀನ್, ಫಾಲೆಟ್ ಕಾಪರ್, ಮ್ಯಾಂಗನೀಸ್, ಪೊಟ್ಯಾಷಿಯಮ್, ಕ್ಯಾಲ್ಷಿಯಂ, ಐರಾನ್, ಮೆಗ್ನೀಷಿಯಂ, ಸತು ಇನ್ನಿತರ ಅಂಶಗಳಿವೆ. ಇವೆಲ್ಲ ಅಂಶಗಳು ದೇಹದ ಶಕ್ತಿ ಹೆಚ್ಚಿಸುವುದಲ್ಲದೇ ದೇಹಕ್ಕೆ ಬೆಚ್ಚನೆಯ ಅನುಭವ ನೀಡುತ್ತದೆ.

ಕಡ್ಲೆಕಾಯಿಯ ಉಪಯೋಗಗಳು

ಕಡ್ಲೆಕಾಯಿಯ ಉಪಯೋಗಗಳು

ಕಡಲೇ ಕಾಯಿಯಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಅನುಕೂಲಕರ. ಮೂಳೆಗಳು ಗಟ್ಟಿಯಾಗುವಿಕೆ ಸಹಾಯಕವಾಗುತ್ತದೆ. ನಾರಿನಾಂಶ ಹೆಚ್ಚಿರುವುದರಿಂದ ಜೀರ್ಣಶಕ್ತಿಗೆ ಅನುಕೂಲವಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Let`s begin the year with positive thoughts and celebrate harvest festival Makara Sankranthi with good cheer!. Karnataka state had a different culture. Here is the importance of Ellu-Bella
Please Wait while comments are loading...