ಮಧ್ಯಪ್ರದೇಶದಲಿ ಸುಕಾರತಿ, ಒಡಿಸ್ಸಾದಲಿ ಮಕರ‍್ಮೇಳ

ಕೇರಳದ ಮಕರ ವಿಳಕ್ಕು ವಿಷೇಷತೆಯ ಎಲ್ಲರಿಗೂ ಗೊತ್ತಿರುವ ವಿಷಯ. ಆಂಧ್ರದಲಿ ಪೆದ್ದ ಪಂಡುಗ ಸಂಕ್ರಾಂತಿ, ಅಸ್ಸಾಂನಲ್ಲಿ ಬೋಗಾಲಿ ಬಿಹು, ಪಂಜಾಬ್, ಜಮ್ಮು ಹಿಮಾಚಲ ಪ್ರದೇಶಗಳಲಿ ಲೋಹ್ರಿ, ಮಧ್ಯಪ್ರದೇಶದಲಿ ಸುಕಾರತಿ, ಒಡಿಸ್ಸಾದಲಿ ಮಕರ‍್ಮೇಳ ಎಂದು ಕರೆಯುವ ಸಂಕ್ರಾಂತಿ ಒಂದು ರಾಷ್ಟ್ರೀಯ ಹಬ್ಬ.
ಸಂಕ್ರಾಂತಿಯ ಪುರುಷ : ಸಂಕ್ರಾಂತಿ ಪುರುಷನಿಗೆ ಮೂರು ತಲೆಗಳು, ಎರಡು ಮುಖಗಳು, ಐದು ಬಾಯಿಗಳು, ಮೂರು ಕಣ್ಣುಗಳು, ಜೋಲಾಡುವ ಕಿವಿ ಮತ್ತು ಹುಬ್ಬುಗಳು, ಕೆಂಪು ಹಲ್ಲು, ಉದ್ದವಾದ ಮೂಗು, ಎಂಟು ತೋಳುಗಳು, ಎರಡು ಕಾಲುಗಳು, ಕಪ್ಪುಬಣ್ಣದ ಅರ್ಧ ಗಂಡು ಅರ್ಧ ಹೆಣ್ಣಿನ ರೂಪ ಇರುವುದು. ಅದು ಬಂದಿರುವ ವಾರದ ಫಲ, ಪಕ್ಷದ ಫಲ, ತಿಥಿಯ ಫಲ, ನಕ್ಷತ್ರದ ಫಲ, ಯೋಗಕರಣಗಳ ಫಲ, ಅದರ ದೃಷ್ಟಿ ಮತ್ತು ಪ್ರಯಾಣದ ದಿಕ್ಕು, ಕಾಲ, ಅದರ ಸ್ನಾನ ತೀರ್ಥದ ಫಲ, ವಸ್ತ್ರಲೇಪನ, ಧರಿಸಿರುವ ಹೂ, ಅಲಂಕಾರ, ಆಹಾರ, ಏರಿರುವ ವಾಹನ, ಹೊಂದಿರುವ ಆಯುಧಗಳು, ಇತ್ಯಾದಿಗಳ ಫಲಗಳೇನೆಂಬುದನ್ನು ರೈತಾಪಿಗಳು ಜ್ಯೋತಿಷಿಗಳಿಂದ ಓದಿಸಿ, ತಿಳಿಯುವ ಪದ್ದತಿಯು ಅನೇಕೆಡೆಗಳಲ್ಲಿ ಉಂಟು.
ನಾವಿಂದು ದೂರವನ್ನು ಸನಿಹವಾಗಿಸಿಕೊಂಡಿದ್ದೇವೆ. ಜಾಗೃತರಾಗುತ್ತಿದ್ದೇವೆ, ಬಹುತೇಕ ವಿಷಯಗಳಲ್ಲಿ ಬಹಳ ಮುಂದುವರೆದಿದ್ದೇವೆ, ಆದರೆ ನಮ್ಮ ಸಂಬಂಧಗಳ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ಮಾತ್ರ ಹಿಂದೆ ಬೀಳುತ್ತಿದ್ದೇವೆ. ಎಲ್ಲದರಲ್ಲೂ ಮುನ್ನುಗ್ಗಬೇಕು, ಸಿದ್ಧಹಸ್ತರು ಎನಿಸಿಕೊಳ್ಳಬೇಕೆಂಬ ಭರದಲ್ಲಿ ಸಂಬಂಧಗಳ ನಡುವಿನ ಆಪ್ತತೆಯನು ಉಳಿಸಿಕೊಳ್ಳುವುದನು ಮರೆಯುತ್ತಿದ್ದೇವೆ. ಬನ್ನಿ, ಹೊಸ ಜೀವನೋತ್ಸಾಹದಿಂದ ಎಳ್ಳು-ಬೆಲ್ಲದ ಸ್ನೇಹ ಸೌಹಾರ್ದತೆಗಳನ್ನು ಹಂಚಿ ಬಾಂಧವ್ಯಗಳ ಆಪ್ತತೆಯನು ಉಳಿಸೋಣ, ಬೆಳೆಸೋಣ. ಅದುವೆ ಕನ್ನಡದ ಸಮಸ್ತ ಓದುಗರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications