ಭಾರತ-ನೇಪಾಳದಲ್ಲಿ ಸಂಕ್ರಾಂತಿ... ಬಂತು ಸಂಕ್ರಾಂತಿ!

ಪ್ರಾದೇಶಿಕ ವೈವಿಧ್ಯತೆಗಳಿದ್ದರೂ ಸಂಕ್ರಾಂತಿಯ ಭಾವ ಮಾತ್ರ ಒಂದೇ. ಎಲ್ಲಿಯೂ ಸಂಭ್ರಮ ಮತ್ತು ಸಡಗರಕ್ಕೇನೂ ಕೊರತೆಯಿಲ್ಲ.

ಎಳ್ಳು, ಬೆಲ್ಲ , ಸಕ್ಕರೆ ಅಚ್ಚು , ಕಬ್ಬು, ಅವರೆಕಾಯಿ.. ಹೀಗೆ ಹಬ್ಬದ ನೆಪದಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುವುದು ಕೆಲವರ ಪಾಲಿಗೆ ಹಬ್ಬ. ಮನೆಯಲ್ಲಿನ ಬಂಗಾರವನ್ನು ಮೈಮೇಲೆ ಹೇರಿಕೊಂಡು, ಲಂಗ ದಾವಣಿ ಉಟ್ಟು-ಕೊಂಡು ಮೊಗ್ಗಿನ ಜಡೆ ಹಾಕಿ-ಕೊಂಡು ಮನೆಮನೆಗೆ ತೆರಳಿ ಎಳ್ಳು-ಬೆಲ್ಲ ತಿನ್ನುವ ಸಡಗರ ಹೆಣ್ಣು ಮಕ್ಕಳದು. ಈ ಸಂಕ್ರಾಂತಿ ಸಡಗರ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಲ್ಲಿ ಮಾತ್ರವಲ್ಲ, ನೇಪಾಳದಲ್ಲೂ ಉಂಟು.

ಭಾರತ ಮತ್ತು ನೇಪಾಳದಲ್ಲಿ ಮಕರ ಸಂಕ್ರಾಂತಿಯನ್ನು ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಪ್ರಾದೇಶಿಕ ವೈವಿಧ್ಯತೆಗಳಿದ್ದರೂ ಸಂಕ್ರಾಂತಿಯ ಭಾವ ಮಾತ್ರ ಒಂದೇ. ಎಲ್ಲಿಯೂ ಸಂಭ್ರಮ ಮತ್ತು ಸಡಗರಕ್ಕೇನೂ ಕೊರತೆಯಿಲ್ಲ.

ಉತ್ತರ ಭಾರತದ ಪಂಜಾಬ್‌ನಲ್ಲಿ ಲಹೋರಿ, ಪಶ್ಚಿಮ ಬಂಗಾಲ ಮತ್ತು ಅಸ್ಸೋಮ್‌ನಲ್ಲಿ ಬೋಗಳಿ ಬಿಹು, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಉತ್ತರಾಯಣ(ಗಾಳಿ ಪಟದ ಹಾರಟದ ಹಬ್ಬ), ದಕ್ಷಿಣ ಭಾರತದ ಕೇರಳ ಮತ್ತು ತಮಿಳು ನಾಡಿನಲ್ಲಿ ಪೊಂಗಲ್‌, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿ, ಭಾರತದ ವಿವಿಧ ಭಾಗಗಳಲ್ಲಿ ಮಕರ ಸಂಕ್ರಾಂತಿ ಎಂಬ ಹೆಸರುಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.

ನೇಪಾಳದಲ್ಲಿ ಮಾಘಿ ಮತ್ತು ಮಾಘಿ ಸಂಕ್ರಾಂತಿ ಎನ್ನಲಾಗುತ್ತದೆ. ಸಂಕ್ರಾಂತಿ ಸಾಮಾನ್ಯವಾಗಿ ಜ.14ರಂದು ಬರುತ್ತದೆ. ಆದರೆ ಈ ಸಲ(2006) ಜ.15ರ ಸೋಮವಾರ ಬಂದಿದೆ. ಹೀಗಾಗಿ ವಾರಾಂತ್ಯದ ರಜೆಗಳ ಜೊತೆಗೆ ಮತ್ತೊಂದು ರಜೆ ಸೇರ್ಪಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+