ಕಂಗ್ಲಿಷ್ ಎನ್ನಡ ನಡುವೆ ಕುಗ್ಗದ ಕನ್ನಡಕ್ಕೆ ಜೈ

ನಮ್ಮ ಕನ್ನಡ ಕ್ಷೀಣಿಸಲು ನಮ್ಮ ಕನ್ನಡಿಗರು ಬಿಡುತ್ತಾರ? ಸಿನಿಮಾ, ಪುಸ್ತಕ, ಕಿರುತೆರೆ, ಪತ್ರಿಕೆ, ಹಾಡು, ರೇಡಿಯೊ ಇವುಗಳು ತಮ್ಮ ವ್ಯಾಪ್ತಿ ಹೆಚ್ಚಾಗುತ್ತಿರುವಾಗ ಅದು ಕನ್ನಡ ಭಾಷೆಯ ಸುಗಂಧವನ್ನು ಮತ್ತಷ್ಟು ಹರಡುತ್ತಿದೆ ಎಂಬ ಅರ್ಥವಲ್ಲವೆ? ಮತ್ತೇಕೆ ಕನ್ನಡ ಕ್ಷೀಣಿಸುತ್ತಿದೆ ಎಂದು ಬೊಬ್ಬೆ ಹಾಕುತ್ತಿದ್ದೇವೆ?
ಹೌದು, ಕರ್ನಾಟಕದ ಹೃದಯವಾಗಿರುವ ಬೆಂಗಳೂರಿಗೆ ಬಂದಾಗ ಕನ್ನಡಕ್ಕಿಂತ ಬೇರೆ ಭಾಷೆಯ ಕಾರುಬಾರು ಹೆಚ್ಚಾಗಿ ಕಂಡು ಬರುತ್ತದೆ ಬಸ್ ಹತ್ತಿದರೆ ಸಾಕು, ಅಂಗಡಿಗಳಿಗೆ ಹೋದರೆ ಸಾಕು ಅರಕಲು ಮುರುಕಲು ಇಂಗ್ಲೀಷ್ ನಲ್ಲಿಯೆ ಹೆಚ್ಚಾಗಿ ವ್ಯವಹರಿಸುತ್ತಾರೆ.
ಮುಖ್ಯವಾಗಿ ನಗರಗಳ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ ಅಂಗಡಿಯಲ್ಲಿ ಕುಳಿತ ಆಂಟಿ, ಅಂಕಲ್ ಗಳು ಸೇರಿದಂತೆ ನಮ್ಮ ಹಾವಭಾವ ನೋಡಿ ಭಾಷೆ ಬದಲಾಯಿಸುತ್ತಾರೆ. ನಿಂಬೆ ಹಣ್ಣು ಬೇಕೆಂದು ಕೇಳಿದ್ರೆ ಕಿತ್ ನಾ ಅಂತಾರೆ. ಇದು ಒಂದು ಉದಾಹರಣೆಯಷ್ಟೇ.
ಹಾಗಂತ ಕನ್ನಡಿಗರು ನಾವು ಕೋಪ ಮಾಡಿಕೊಂಡರೆ ಹೇಗೆ ಹೇಳಿ ? ಎಲ್ಲಾ ಕಡೆಯ ಜನರು ಬಂದು ಜೀವನ ಮಾಡುವ ಈ ಬೆಂಗಳೂರಿನಲ್ಲಿ ಪಾಪ ಅವರು ಹೊಟ್ಟೆ ಪಾಡಿಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಹಾಗಂತ ನಾವೇನು ಮಾಡುತೇವೆ ಎಂದು ಯೋಚಿಸಿ ನಾವೂ ಕನ್ನಡ ಮರೆತು ಇಂಗ್ಲೀಷ್ ನಲ್ಲಿಯೆ ಉತ್ತರಿಸಿ ಬರುತ್ತೇವೆ ನಂತರ ಕನ್ನಡ ಮಾತನಾಡುವರಿಲ್ಲ ಅಂತ ಲಭೋ ಲಭೋ ಬಡ್ಕೊಳ್ತೇವೆ!
ನಾವು ಹೊರ ನಾಡಿನಿಂದ ಬಂದವರ ಜೊತೆ ಕನ್ನಡದಲ್ಲಿ ಮಾತನಾಡದಿದ್ದರೆ ಆವರು ಕೂಡ ನಿಧಾನಕ್ಕೆ ಕಲಿತು ಮಾತನಾಡತೊಡಗುತ್ತಾರೆ , ಆದರೆ ಕೆಲ ಕನ್ನಡಿಗರ ಮನೆಯಲ್ಲಿ ಇಂಗ್ಲೀಷ್ ಅನ್ನವುದಕ್ಕಿಂತಾ ಕಂಗ್ಲೀಷ್ ದೆ ಕಾರುಬಾರು ಹೀಗಾದರೆ ಕನ್ನಡ ಮಾತನಾಡುವರು ಯಾರು ಹೇಳಿ.
ದಿನನಿತ್ಯ ಕನ್ನಡ ಹೆಚ್ಚು ಮಾತನಾಡೋಣ. ಯಾರಾದರೂ ಬೇರೆ ಭಾಷೆಯಲ್ಲಿ ಏನಾದರೂ ಕೇಳಿದರೆ ಮೊದಲು ಕನ್ನಡದಲ್ಲಿ ಉತ್ತರಿಸಿ ಅವರ ತಲೆಗೆ ಹೊಕ್ಕಿಲ್ಲ ಅಂತ ಅನಿಸಿದರೆ ಮತ್ತೊಂದು ಭಾಷೆಯಲ್ಲಿ ಉತ್ತರಿಸೋಣ. ಅಚ್ಚ ಕನ್ನಡ, ಸ್ವಚ್ಛ ಕನ್ನಡಕ್ಕೆ ನಮ್ಮ ಆದ್ಯತೆ ಇರಲಿ.
ಈಗ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಶೇ. 10ರಷ್ಟು ಹೆಚ್ಚಾಗಿದೆ, ಟಿವಿ ಮಾರುಕಟ್ಟೆ ದುಪ್ಪಟವಾಗಿದೆ. ಇ ಪೇಪರ್ , ಬ್ಲಾಗ್ ನಿಂದಾಗಿ ವಿದೇಶಗಳಲ್ಲೂ ಕನ್ನಡ ಕರ್ನಾಟಕದ ಗಡಿ ದಾಟಿ ವಿದೇಶಗಳಲ್ಲೂ ತನ್ನ ಕಂಪನ್ನು ಸೂಸುತ್ತಿದೆ. ಕನ್ನಡದಲ್ಲಿ ಕೂಡ ಕೋಟಿ ಬಜೆಟ್ ಸಿನಿಮಾಗಳು ಬರುತ್ತಿವೆ(ನೋಡುವಂತಹ ಸಿನಿಮಾ ಕಡಿಮೆ ಇದೆ ಅಂತಿರಾ? ಕ್ಷಮಿಸಿ).
ಕನ್ನಡದ ಕಂದಮ್ಮಗಳು ನಾವು ಅಚ್ಚ ಕನ್ನಡ, ಸ್ವಚ್ಛ ಕನ್ನಡದಲ್ಲಿ ಮಾತನಾಡಿದರೆ, ಇತರರು ಮಾತನಾಡುವಂತೆ ಪ್ರೋತ್ಸಾಹಿಸಿದರೆ ಕನ್ನಡ ಕೊರಗಲು ಹೇಗೆ ಸಾಧ್ಯ? ಅಲ್ಲವೇ?












Click it and Unblock the Notifications