ಯಡಿಯೂರಪ್ಪ ಬಂಧನದಿಂದ ತಲೆತಗ್ಗಿಸಿದ ಕರ್ನಾಟಕ

ಯಡಿಯೂರಪ್ಪ ಅಲ್ಲದೆ ತನ್ನ ಮಾಜಿ ಕ್ಯಾಬಿನೆಟ್ ಸದಸ್ಯರುಗಳಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ಮಾಜಿ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಕೂಡಾ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಕಠಿಣ ನಿಲುವು ತಳೆದಿರುವ ನ್ಯಾಯಾಲಯ ಎಲ್ಲರಿಗೂ ಜಾಮೀನು ನೀಡಲು ನಿರಾಕರಿಸಿದೆ (ಕಟ್ಟಾ ನಾಯ್ಡು ಹೊರತಾಗಿ).
ಮೇಲೆ ತಿಳಿಸಿರುವ ಎಲ್ಲಾ ಘಟನೆಗಳಿಗಿಂತ ಮಾಜಿ ಮುಖ್ಯಮಂತ್ರಿ ಬಂಧನ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕಕ್ಕೇ ಆದ ಅವಮಾನ ಎನ್ನಬಹುದು. ಏಕೆಂದರೆ ಇಡೀ ರಾಜ್ಯವನ್ನು ಮುನ್ನಡೆಸಲು ಇವರನ್ನು ಆರಿಸಿ ಕಳುಹಿಸಿದವರು ನಾವೇ ತಾನೇ?
ರಾಜ್ಯೋತ್ಸವದ ಈ ದಿನದಂದು ಪ್ರಕಟವಾಗುತ್ತಿರುವ ಈ ಲೇಖನ ಮತ್ತೆ ಮತ್ತೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಾರದಿರಲಿ, ಕನ್ನಡಿಗರ ತಾಳ್ಮೆ ಯಾರೂ ಪರೀಕ್ಷಿಸದಿರಲಿ ಎನ್ನುವ ಉದ್ದೇಶದಿಂದ. ಜೈ ಭುವನೇಶ್ವರಿ!












Click it and Unblock the Notifications