ವಿಜಯ ಕಾಲೇಜು ಕ್ಯಾಂಪಸ್ಸಿನಲ್ಲಿ ಕನ್ನಡ ಕಂಪು
ಬೆಂಗಳೂರು,
ನ.1: ನಗರದ ಯುವ ಸಮುದಾಯ ಹೆಚ್ಚು ಹೆಚ್ಚಾಗಿ ಕನ್ನಡದಲ್ಲೇ ವ್ಯವಹರಿಸುವಂತೆ ಹುರುದುಂಬಿಸಲು ಬೆಂಗಳೂರಿನ ವಿಜಯ ಕಾಲೇಜು ಮಹತ್ವದ ನಿರ್ಧಾರ ಕೈಗೊಂಡಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸೋಮವಾರ (ನ.1) ಚಾಲನೆ ನೀಡಲಾಯಿತು. id="toptextpromo">ಸಾಂಪ್ರದಾಯಿಕ
ನೃತ್ಯ ಕಾರ್ಯಕ್ರಮ ಯಕ್ಷಗಾನ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜು ಕ್ಯಾಂಪಸ್ಸಿನಲ್ಲಿ ಚಿತ್ರಕಲೆ, ಭಾವಗೀತೆ, ಛಾಯಾಗ್ರಹಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳೇ ರೂಪಿಸಿರುವ ಈ ಕಾರ್ಯಕ್ರಮಗಳ ಮೂಲಕ ನಾಡಿನ ಸಾಂಸ್ಕೃತಿಕ ವೈಭವವನ್ನು ಬಿಂಬಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಸಮಸ್ತ
ಕನ್ನಡ ಕುಲಬಾಂಧವರಿಗೆ ಕಾರ್ಯಕ್ರಮದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ವಿಜಯ ಕಾಲೇಜು ಸಂಗೀತ ಸಭಾಂಗಣ, 53, 4ನೇ ಬ್ಲ್ಯಾಕ್ ಜಯನಗರ, ಬಿಡಿಎ ಕಾಂಪ್ಲೆಕ್ಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದು ನೆರೆದಿದ್ದರು. ಕ್ಯಾಂಪಸ್ ನಲ್ಲಿ ಕನ್ನಡ ಕಹಳೆ ಪ್ರತಿಧ್ವನಿಸಿತು.











Click it and Unblock the Notifications