Deepavali Lighting Rules: ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಬೇಕೇ? ಹಾಗಾದರೆ ಹೀಗೆ ಮಾಡಿ

ಹಿಂದೂ ಸಂಸ್ಕೃತಿಯಲ್ಲಿ ದೀಪಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಆದ್ದರಿಂದ ಭಕ್ತರು ಪೂಜೆ ಮಾಡುವಾಗ ದೀಪಗಳನ್ನು ಬೆಳಗಿಸುವ ಪದ್ಧತಿ ಇದೆ. ದೀಪಗಳನ್ನು ಬೆಳಗಿಸದೆ ಒಂದೇ ಒಂದು ಪವಿತ್ರ ಆಚರಣೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ. ಹೀಗಾಗಿ ದೀಪಗಳನ್ನು ಬೆಳಗಿಸುವುದೇ ಒಂದು ಹಬ್ಬವಾಗಿ ಆಚರಿಸಲಾಗುತ್ತದೆ. ಅದನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ.

ಬೆಳಕಿನ ಹಬ್ಬ ದೀಪಾವಳಿಯು ಅತ್ಯಂತ ಪ್ರಮುಖವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ದೇಶದಾದ್ಯಂತ ಉತ್ಸಾಹ ಮತ್ತು ಸಡಗರದಿಂದ ಆಚರಿಸಲಾಗುವ ಹಬ್ಬ. ಪ್ರಾಚೀನ ಹಿಂದೂ ಪುರಾಣಗಳ ಪ್ರಕಾರ, ರಾಕ್ಷಸ ರಾಜ ರಾವಣನ ಮೇಲೆ ಭಗವಾನ್ ರಾಮನ ವಿಜಯವನ್ನು ಸ್ಮರಿಸಲು ಮತ್ತು ತರುವಾಯ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸ್ಮರಿಸಲು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತದೆ.

Need to please Goddess Lakshmi on Diwali? Rules To Follow While Lighting Diyas

ಈ ದಿನ ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸಿ ಲಕ್ಷ್ಮಿ ದೇವಿ ಹಾಗೂ ಗಣಪತಿಯನ್ನು ಸ್ವಾಗತಿಸುತ್ತಾರೆ. ಆದರೆ ನೀವು ದೀಪವನ್ನು ಬೆಳಗಿಸುವ ವಿಧಾನ ಮತ್ತು ಅದರಲ್ಲಿ ನೀವು ಬಳಸುವ ಎಣ್ಣೆಯು ಧನಾತ್ಮಕತೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದಿಯೇ....? ಹಾಗಾದರೆ ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಹೇಗೆ ಬೆಳಗಿಸಬೇಕು ಎನ್ನುವುದನ್ನು ತಿಳಿಯೋಣ.

1. ದೀಪಗಳಲ್ಲಿ ಬಳಸಬೇಕಾದ ತೈಲಗಳ ವಿಧಗಳು

ದೀಪಗಳಲ್ಲಿ ಬೆಳಗುವ ಜ್ವಾಲೆಯು ಲಕ್ಷ್ಮಿ ದೇವಿ ಜನರಿಗೆ ನೀಡಿದ ಆಶೀರ್ವಾದವನ್ನು ಸೂಚಿಸುತ್ತದೆ. ದೀಪಗಳನ್ನು ಬೆಳಗಿಸುವಾಗ ಅನೇಕ ತೈಲಗಳನ್ನು ಬಳಸಲಾಗುತ್ತದೆ. ಆದರೆ ಪ್ರತಿಯೊಂದು ತೈಲವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಆದ್ದರಿಂದ ನೀವು ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲೇಬೇಕು...

ತುಪ್ಪ:

ಹಿಂದೂ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಇದು ಅತ್ಯಂತ ಸಾಮಾನ್ಯವಾದ ವಸ್ತುವಾಗಿದೆ. ತುಪ್ಪದ ದೀಪವನ್ನು ಬೆಳಗಿಸುವುದರಿಂದ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಕುಟುಂಬದಲ್ಲಿ ಸಂತೋಷದ ಕೊರತೆಯಿದ್ದರೆ, ಕತ್ತಲೆಯಲ್ಲಿ ಜೀವನ ಮುಳುಗಿದ್ದರೆ ತುಪ್ಪದ ದೀಪವನ್ನು ಬೆಳಗಿಸುವುದು ಒಳ್ಳೆಯದು.

Need to please Goddess Lakshmi on Diwali? Rules To Follow While Lighting Diyas

ಎಳ್ಳಿನ ಎಣ್ಣೆ:

ಎಳ್ಳಿನ ಎಣ್ಣೆಯು ನಿಮ್ಮ ಜೀವನದಲ್ಲಿ ನಿಮ್ಮನ್ನು ಕಾಡುವ ಎಲ್ಲಾ ರೀತಿಯ ಅಡೆತಡೆಗಳು ಮತ್ತು ದುಷ್ಟ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜನರು ಸಾಮಾನ್ಯವಾಗಿ ಶನಿ ದೇವರನ್ನು ಮೆಚ್ಚಿಸಲು ದೀಪಗಳನ್ನು ಬೆಳಗಿಸಲು ಎಳ್ಳಿನ ಎಣ್ಣೆಯನ್ನು ಬಳಸುತ್ತಾರೆ. ದೀಪಾವಳಿಯ ಸಮಯದಲ್ಲಿ ಈ ಎಣ್ಣೆಯಲ್ಲಿ ದೀಪ ಹಚ್ಚುವುದರಿಂದ ಲಕ್ಷ್ಮಿ ಮತ್ತು ಗಣಪತಿಯಿಂದ ಆಶೀರ್ವಾದ ಪಡೆಯಬಹುದು ಎನ್ನುವ ನಂಬಿಕೆ ಇದೆ.

ಕ್ಯಾಸ್ಟರ್ ಆಯಿಲ್:

ನೀವು ಯಶಸ್ಸು ಮತ್ತು ಖ್ಯಾತಿಯನ್ನು ಸಾಧಿಸಲು ಬಯಸಿದರೆ ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಬೆಳಗಿಸಲು ಕ್ಯಾಸ್ಟರ್ ಆಯಿಲ್ ಅನ್ನು ಬಳಸುವುದು ಒಳ್ಳೆಯದು. ಆ ಕಾರಣಕ್ಕಾಗಿ ಕ್ಯಾಸ್ಟರ್ ಆಯಿಲ್ ಖ್ಯಾತಿ, ಸಂತೋಷ ಮತ್ತು ಮನಸ್ಸಿನ ಶಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

ತೆಂಗಿನ ಎಣ್ಣೆ:

ತೆಂಗಿನೆಣ್ಣೆಯನ್ನು ಬಳಸುವುದು ಗಣೇಶನನ್ನು ಮೆಚ್ಚಿಸಲು ಮತ್ತು ಆತನ ಆಶೀರ್ವಾದವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಗಣೇಶನು ಜ್ಞಾನ ಮತ್ತು ಕಲಿಕೆಯ ಪೋಷಕನೆಂದು ಹೇಳಲಾಗುತ್ತದೆ. ತನ್ನ ಭಕ್ತರು ಎದುರಿಸುತ್ತಿರುವ ಅಡೆತಡೆಗಳನ್ನು ನಿವಾರಿಸುತ್ತಾನೆ.

Need to please Goddess Lakshmi on Diwali? Rules To Follow While Lighting Diyas

ಬೇವಿನ ಎಣ್ಣೆ:

ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಕಠಿಣ ಸಮಯವನ್ನು, ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನೀವು ದೀಪವನ್ನು ಬೆಳಗಿಸುವಾಗ ಬೇವಿನ ಎಣ್ಣೆಯನ್ನು ಬಳಸಿ. ಇದು ನಕಾರಾತ್ಮಕತೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಗಣಪತಿಯನ್ನು ಮೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ.

2. ದೀಪದಲ್ಲಿ ಬಳಸುವ ಬತ್ತಿ ಯಾವುದಿರಬೇಕು?

ರೋಸ್ ವಾಟರ್ ಬತ್ತಿ:

ರೋಸ್ ವಾಟರ್ ಬತ್ತಿಯನ್ನು ಬಳಸಿ ದೀಪ ಬೆಳಗಿಸುವುದು ಮನೆಯಲ್ಲಿ ಶಾಂತಿಯನ್ನು ಕಾಪಾಡುತ್ತದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ರೋಸ್ ವಾಟರ್‌ನಲ್ಲಿ ಸ್ವಚ್ಛವಾದ ಬಿಳಿ ಹತ್ತಿಯನ್ನು ಅದ್ದಬೇಕು. ಅದರ ನಂತರ, ನೀವು ಹತ್ತಿಯನ್ನು ಒಣಗಿಸಬೇಕು. ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಬೆಳಗಿಸುವಾಗ ಈ ಬತ್ತಿಗಳನ್ನು ಬಳಸಿ, ಅದು ಸುಂದರವಾದ ಪರಿಮಳವನ್ನು ಬೀರುತ್ತದೆ.

ಬಾಳೆ ಬತ್ತಿ:

ನೀವು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪುಗಳಿಗೆ ಕ್ಷಮೆಯನ್ನು ಪಡೆಯಲು ಮತ್ತು ಪೂರ್ವಜರ ಶಾಪಗಳಿಂದ ಮುಕ್ತಿ ಪಡೆಯಲು, ನೀವು ಬಾಳೆ ಕಾಂಡದ ನಾರುಗಳಿಂದ ಮಾಡಿದ ಬತ್ತಿಗಳನ್ನು ಬಳಸಬಹುದು.

ಹತ್ತಿ ಬತ್ತಿ:

ಇವುಗಳು ಪ್ರತಿಯೊಂದು ಮನೆಯಲ್ಲೂ ಬಳಸುವ ಅತ್ಯಂತ ಸಾಮಾನ್ಯವಾದ ಬತ್ತಿಗಳಾಗಿವೆ. ನೀವು ಮಾಡಬೇಕಾಗಿರುವುದು ಶುದ್ಧವಾದ ಹತ್ತಿಯನ್ನು ತೆಗೆದುಕೊಂಡು ಅದರಿಂದ ದೀಪವನ್ನು ಬೆಳಗಿಸಿ.

ಕಮಲದ ಕಾಂಡ:

ನಿಮ್ಮ ಹಿಂದಿನ ಜನ್ಮದ ಕರ್ಮದಿಂದ ನೀವು ತೊಂದರೆಗೊಳಗಾಗಿದ್ದರೆ ಮತ್ತು ಹೊಸ ಪ್ರಾರಂಭವನ್ನು ಮಾಡಲು ಅವುಗಳನ್ನು ತೆಗೆದುಹಾಕಲು ಬಯಸಿದರೆ ಕಮಲದ ಕಾಂಡದ ಬತ್ತಿಗಳನ್ನು ಬಳಸಬಹುದು. ಕಮಲದ ಕಾಂಡಗಳನ್ನು ಬಳಸಿ ಈ ಬತ್ತಿಗಳನ್ನು ತಯಾರಿಸಲಾಗುತ್ತದೆ.

ಹಳದಿ ಬಟ್ಟೆ ಬತ್ತಿ:

ಶುಭ್ರವಾದ ಹಳದಿ ಬಟ್ಟೆಯಿಂದ ಮಾಡಿದ ಬತ್ತಿಯಿಂದ ದೀಪ ಬೆಳಗಿಸುವುದು ವೈವಾಹಿಕ ಆನಂದವನ್ನು ಸಾಧಿಸಲು ಮತ್ತು ನಿಮ್ಮ ಪ್ರೀತಿಯ ಜೀವನದಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಕೆಂಪು ಬಟ್ಟೆ ಬತ್ತಿ:

ನೀವು ದಾಂಪತ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಮಗುವನ್ನು ಹೊಂದಲು ಸಾಧ್ಯವಾಗದಿದ್ದರೆ ಕೆಂಪು ಬಟ್ಟೆಯಿಂದ ಮಾಡಿದ ಬತ್ತಿಯನ್ನು ಬಳಸುವುದರಿಂದ ಅಡೆತಡೆಗಳನ್ನು ತೆಗೆದುಹಾಕಲು ನಿಮಗಿದು ಸಹಾಯ ಮಾಡುತ್ತದೆ.

3. ದೀಪಗಳನ್ನು ಇಡುವ ದಿಕ್ಕು

ಉತ್ತರದಲ್ಲಿ ದೀಪಗಳನ್ನು ಇಡುವುದು:

ನೀವು ಉತ್ತರ ದಿಕ್ಕಿನಲ್ಲಿ ದೀಪಗಳನ್ನು ಇಟ್ಟರೆ ಲಕ್ಷ್ಮಿ ದೇವಿಯ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ತನ್ನ ಭಕ್ತರಿಗೆ ಅಷ್ಟಐಶ್ವರ್ಯ (ಸಂಪತ್ತು ಮತ್ತು ಐಷಾರಾಮಿಗಳ 8 ರೂಪಗಳು) ಅನುಗ್ರಹಿಸುತ್ತಾಳೆ.

ಪೂರ್ವದಲ್ಲಿ ದೀಪಗಳನ್ನು ಇಡುವುದು:

ನೀವು ನಿರಂತರ ಅನಾರೋಗ್ಯವನ್ನು ಎದುರಿಸುತ್ತಿದ್ದರೆ, ಪೂರ್ವ ದಿಕ್ಕಿನಲ್ಲಿ ದೀಪಗಳನ್ನು ಇಡಿ. ಇದರಿಂದ ಅನಾರೋಗ್ಯದಿಂದ ಹೊರಬರಲು ಸಹಾಯವಾಗುತ್ತದೆ ಮತ್ತು ಮನಸ್ಸಿನ ಶಾಂತಿ ಹೆಚ್ಚಾಗುತ್ತದೆ.

ಪಶ್ಚಿಮದಲ್ಲಿ ದೀಪಗಳನ್ನು ಇಡಿ:

ದೀಪದ ದೀಪಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡಿ, ನೀವು ಸಮೃದ್ಧಿ ಮತ್ತು ನಿಮ್ಮ ಶತ್ರುಗಳ ಮೇಲೆ ವಿಜಯವನ್ನು ಹೊಂದುವಿರಿ. ಇದು ಎಲ್ಲಾ ಸಾಲಗಳಿಂದ ಮುಕ್ತರಾಗಲು ಸಹಾಯ ಮಾಡುತ್ತದೆ.

ದಕ್ಷಿಣದಲ್ಲಿ ದೀಪಗಳನ್ನು ಇಡಿ:

ದಕ್ಷಿಣ ದಿಕ್ಕಿನಲ್ಲಿ ದೀಪಗಳನ್ನು ಇಡುವುದು ನಿಮಗೆ ದುರಾದೃಷ್ಟವನ್ನು ತರುತ್ತದೆ. ಆದ್ದರಿಂದ ಯಾವುದೇ ದೀಪಗಳನ್ನು ಇರಿಸುವಾಗ ಈ ದಿಕ್ಕನ್ನು ತಪ್ಪಿಸಿ.

ದೀಪ ಹಚ್ಚಲು ಸೂರ್ಯಕಾಂತಿ ಮತ್ತು ಕಡಲೆಕಾಯಿ ಎಣ್ಣೆಯನ್ನು ಬಳಸಬೇಡಿ. ಏಕೆಂದರೆ ಇದು ಕುಟುಂಬದಲ್ಲಿ ಬಡತನ ಮತ್ತು ಅಪಶ್ರುತಿಗಳನ್ನು ತರುತ್ತದೆ. ಇದಲ್ಲದೆ ಅಡುಗೆಯಲ್ಲಿ ಬಳಕೆ ಮಾಡಿದ ಅಥವಾ ಉಳಿದ ಎಣ್ಣೆಯನ್ನು ಬಳಸಬೇಡಿ. ಇದು ಸಂಪತ್ತಿನ ನಷ್ಟವನ್ನು ಸೂಚಿಸುತ್ತದೆ. ಜೊತೆಗೆ ಯಾವಾಗಲು ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಬಳಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+