Naga panchami 2023: ನಾಗ ಪಂಚಮಿ ಯಾವಾಗ? ಪೂಜೆಗೆ ಶುಭ ಸಮಯ ಯಾವುದು?
ಶ್ರಾವಣ ಮಾಸವನ್ನು ಹಬ್ಬಗಳ ತಿಂಗಳು ಎಂದು ಕರೆಯಲಾಗುತ್ತದೆ. ನಾಗ ಪಂಚಮಿಯನ್ನು ಶ್ರಾವಣ ಶುಕ್ಲದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬ ಆಗಸ್ಟ್ 21 ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದಲ್ಲಿ ಎರಡು ರೀತಿಯಲ್ಲಿ ಆಚರಿಸಲಾಗುತ್ತದೆ.
ಬಿಹಾರ, ಬಂಗಾಳ, ಒಡಿಶಾ, ರಾಜಸ್ಥಾನದ ಜನರು ಕೃಷ್ಣ ಪಕ್ಷದ ಪಂಚಮಿಯಂದು ಈ ಹಬ್ಬವನ್ನು ಆಚರಿಸುತ್ತಾರೆ, ಆದರೆ ಉಳಿದ ರಾಜ್ಯಗಳು ಶುಕ್ಲ ಪಕ್ಷದ ಪಂಚಮಿಯಂದು ಈ ಹಬ್ಬವನ್ನು ಆಚರಿಸುತ್ತಾರೆ.

ಈ ಬಾರಿ ಸೋಮವಾರದಂದು ಪಂಚಮಿ ಬರುವ ಕಾರಣ ಇದರ ಮಹತ್ವ ಹೆಚ್ಚಿದೆ. ಏಕೆಂದರೆ ಈ ದಿನ ಶ್ರಾವಣ ಸೋಮವಾರವಾಗಿದೆ. ಅಂದರೆ ಈ ದಿನ ಶಿವನನ್ನು ಪೂಜಿಸಲಾಗುತ್ತದೆ. ಇದೇ ದಿನ ನಾಗರ ಪಂಚಮಿ ಕೂಡ ಇರುವುದರಿಂದ ಇಬ್ಬರನ್ನೂ ಒಂದೇ ದಿನ ಪೂಜಿಸುವ ಮೂಲಕ ಭಕ್ತರು ಇಬ್ಬರ ಆಶೀರ್ವಾದವನ್ನು ಪಡೆಯುತ್ತಾರೆ.
ನಾಗ ಪಂಚಮಿಯಂದು ಜನರು ಹಾವಿನ ಮೂರ್ತಿಯನ್ನು ಪೂಜಿಸುತ್ತಾರೆ. ನಮಗೆ ಮತ್ತು ನಮ್ಮ ಕುಟುಂಬಕ್ಕೆ ನೋವುಂಟು ಮಾಡದಂತೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಶೀರ್ವದಿಸುವಂತೆ ಪ್ರಾರ್ಥಿಸುತ್ತಾರೆ. ಈ ಬಾರಿಯ ಪಂಚಮಿ ಆಗಸ್ಟ್ 21 ರಂದು 12.21 ನಿಮಿಷಕ್ಕೆ ಆರಂಭವಾಗಲಿದೆ.
ಪೂಜೆಯ ಮಂಗಳಕರ ಸಮಯ
ನಾಗ ಪಂಚಮಿ ಪೂಜಾ ಸಮಯ 21 ಆಗಸ್ಟ್ ಬೆಳಿಗ್ಗೆ 5:53 ರಿಂದ ಬೆಳಿಗ್ಗೆ 8:30ವರೆಗೆ ಇರುತ್ತದೆ. ನಾಗ ಪಂಚಮಿ ದಿನಾಂಕ 22 ಆಗಸ್ಟ್ ಬೆಳಿಗ್ಗೆ 2:00ಕ್ಕೆ ಕೊನೆಗೊಳ್ಳುತ್ತದೆ.
ಪೂಜಾ ವಿಧಾನ
ಬೆಳಿಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ನಂತರ ಶಿವಲಿಂಗ ಮತ್ತು ನಾಗದೇವತೆಯನ್ನು ಪೂಜಿಸಿ. ಸಾಧ್ಯವಾದರೆ ಶಿವ ಮತ್ತು ಹಾವು ಎರಡನ್ನೂ ಒಟ್ಟಿಗೆ ಪೂಜಿಸಿ, ಹೀಗೆ ಮಾಡುವುದರಿಂದ ದುಪ್ಪಟ್ಟು ಫಲ ಸಿಗುತ್ತದೆ. ಮುಖ್ಯ ದ್ವಾರದ ಮೇಲೆ ನಾಗದೇವತೆಯ ಫೋಟೋ ಇಟ್ಟು ಪೂಜೆಯನ್ನೂ ಮಾಡಬೇಕು. ಕಲಸರ್ಪ ದೋಷದಿಂದ ಬಳಲುತ್ತಿರುವವರು ಕೂಡ ಈ ದಿನ ಉಪವಾಸವಿದ್ದರೆ ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ದೋಷ ಮುಕ್ತರಾಗುತ್ತದೆ. ಶಿವಲಿಂಗಕ್ಕೆ ನೀರು, ಹಾಲು, ಮೊಸರು, ಜೇನುತುಪ್ಪ, ಸಕ್ಕರೆಯನ್ನು ಅರ್ಪಿಸಿ ಮತ್ತು ಮನೆಯ ಸಂತೋಷ ಮತ್ತು ಶಾಂತಿಗಾಗಿ ಪ್ರಾರ್ಥಿಸಿ.
ನಾಗ ಪಂಚಮಿಯಂದು ಈ ಮಂತ್ರವನ್ನು ಪಠಿಸಿ
ಓಂ ಭುಜಂಗೇಶಾಯ ವಿದ್ಮಹೇ, ಸರ್ಪರಾಜಾಯ ಧೀಮಹಿ, ತನ್ನೋ ನಾಗ: ಪ್ರಚೋದಯಾತ್. ಶಂಕರಾಯ ನಮಃ । ಓಂ ಮಹಾದೇವಾಯ ನಮಃ । ಓಂ ಮಹೇಶ್ವರಾಯ ನಮಃ । ಓಂ ಶ್ರೀ ರುದ್ರಾಯ ನಮಃ । ಓಂ ನೀಲಕಂಠಾಯ ನಮಃ












Click it and Unblock the Notifications