• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Happy Deepavali Wishes : ಶುಭವ ತರಲಿ ದೀಪಾವಳಿ : ಇಲ್ಲಿದೆ ಪ್ರೀತಿಪಾತ್ರರಿಗೆ ಕಳುಹಿಸುವಂತಹ ಶುಭಾಶಯ, ಸಂದೇಶಗಳು

|
Google Oneindia Kannada News

ದೀಪಾವಳಿ ಅಂದರೆ ಅದೇನೋ ಉತ್ಸಾಹ ಉಲ್ಲಾಸ. ದೀಪಗಳ ಅಲಂಕಾರಕ್ಕೆ ಮನಸ್ಸು ಹಾತೊರಿಯುತ್ತೆ. ಸಿಹಿಖಾದ್ಯಗಳತ್ತ ಕಣ್ಣು ಹಾಯುತ್ತಲೇ ಇರುತ್ತೆ. ಮನೆ ಜನ ಮಾತ್ರವಲ್ಲದೇ ನಾವು ನಮ್ಮವರೊಂದಿಗೆ ಪಟಾಕಿ ಸಿಡಿಸಿ ಸಂಭ್ರವಿಸುವುದೇ ಒಂದು ಸಡಗರ. ಮನೆಯಂಗಳದಲ್ಲಿ ರಂಗೋಲಿ ಹಾಕಿ ದೀಪಗಳಿಂದ ಅಲಂಕರಿಸುವುದೇ ಆನಂದ. ಈ ಸಡಗರ ಸಂಭ್ರಮದಲ್ಲಿ ನೀವು ಯಾರನ್ನಾದರು ಮಿಸ್‌ ಮಾಡಿಕೊಳ್ಳುತ್ತಿದ್ದರೆ ಅವರಿಗೆ ದೀಪಾವಳಿಯ ಶುಭ ಕೋರುವ ಮೂಲಕ ನಿಮ್ಮ ಸಡಗರ ಸಂಭ್ರಮದಲ್ಲಿ ಅವರನ್ನೂ ಭಾಗಿಯನ್ನಾಗಿಸಬಹುದು.

ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ. ರಾವಣನನ್ನು ಸಂಹಾರ ಮಾಡಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಲಂಕೆಯಿಂದ ಆಯೋಧ್ಯೆಗೆ ಹಿಂದಿರುಗಿದ ದಿನ. ಅಲ್ಲದೇ ರಾಮ ಪಟ್ಟಾಭಿಷೇಕಗೊಂಡ ದಿನ. ಹಾಗಾಗಿ ಜನರು ಆ ದಿನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮನನ್ನು ಸ್ವಾಗತಿಸಿದ್ದರು. ಅಲ್ಲದೇ ಪಾಂಡವರು ಕೂಡ ಅದೇ ದಿನ ತಮ್ಮ ಅಜ್ಞಾತವಾಸವನ್ನು ಮುಗಿಸಿದ ದಿನ ಎನ್ನುವ ಕಥೆಯು ಇದೆ.

ದೀಪಾವಳಿ 2022: ಪಟಾಕಿಯಿಂದ ಸಾಕುಪ್ರಾಣಿಗಳನ್ನು ರಕ್ಷಿಸುವುದು ಹೇಗೆ? ದೀಪಾವಳಿ 2022: ಪಟಾಕಿಯಿಂದ ಸಾಕುಪ್ರಾಣಿಗಳನ್ನು ರಕ್ಷಿಸುವುದು ಹೇಗೆ?

ದೀಪಾವಳಿಯು ಐದು ದಿನಗಳ ಹಬ್ಬವಾಗಿದ್ದು, ಇದು ಧನ್ತೇರಸ್‌ನೊಂದಿಗೆ ಪ್ರಾರಂಭವಾಗಿ ಭಾಯಿ ದೂಜ್‌ನೊಂದಿಗೆ ಕೊನೆಗೊಳ್ಳುತ್ತದೆ. ಇದನ್ನು ದೇಶಾದ್ಯಂತ ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಸಂಕೇತಿಸುತ್ತದೆ. ಈ ವರ್ಷ ಇದನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಈ ದಿನ ದೀಪಾವಳಿಯ ಶುಭಾಶಯಗಳನ್ನು ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವ ಮೂಲಕ ಆಚರಿಸಿ.

* ದೀಪಾವಳಿಯ ನಿಜವಾದ ಅರ್ಥ ಎಲ್ಲಾ ದುಷ್ಟತೆಗಳು, ಕ್ರೌರ್ಯ ಮತ್ತು ಪರಸ್ಪರ ದ್ವೇಷವನ್ನು ಕೊನೆಗೊಳಿಸುವುದು ಎಂದರ್ಥ. ಹಬ್ಬದ ಉತ್ಸಾಹವನ್ನು ಆಚರಿಸಲು ಒಟ್ಟಿಗೆ ಸೇರಿಕೊಳ್ಳಿ. ದೀಪಾವಳಿಯ ಶುಭಾಶಯಗಳು!

* ಇದು ಬಾಲ್ಯದ ಸಿಹಿ ನೆನಪುಗಳಿಂದ ತುಂಬಿದ ಹಬ್ಬ. ಪಟಾಕಿಗಳಿಂದ ತುಂಬಿದ ಆಕಾಶ ನೋಡಿ ಸಿಹಿತಿಂಡಿಗಳನ್ನು ಆನಂದಿಸಿ. ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

* ಲಕ್ಷಾಂತರ ದೀಪಗಳು ನಿಮ್ಮ ಜೀವನವನ್ನು ಅಂತ್ಯವಿಲ್ಲದ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಸಂಪತ್ತಿನಿಂದ ಸದಾ ಬೆಳಗಿಸಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅತ್ಯಂತ ಸಂತೋಷ ಮತ್ತು ಸುರಕ್ಷಿತ ದೀಪಾವಳಿಯ ಶುಭಾಶಯಗಳು!

* ನಿಮ್ಮೆಲ್ಲಾ ಕನಸುಗಳು ಈಡೇರಲಿ, ನಿಮ್ಮ ಬದುಕಿನ ಹಾದಿಯಲ್ಲಿದ್ದ ಅಡೆತಡೆಗಳು ಬೆಳಕಿನ ಹಬ್ಬದಲ್ಲಿ ನಿವಾರಣೆಯಾಗಲಿ, ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗಲಿ. ಸರ್ವರಿಗೂ ಬೆಳಕಿನ ಹಬ್ಬದ ಶುಭಾಶಯಗಳು

Happy Deepavali 2022 : Diwali Wishes, Quotes, Messages, SMS, Poster,Status in Kannada

* ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ., ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ಕರುಣಾಮಯಿ ದೇವರು ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಆರೋಗ್ಯ, ಆಯುಷ್ಯ, ಸಂತೋಷ, ಶಾಂತಿಯನ್ನು ನಿಮಗೆ ಆಶೀರ್ವದಿಸಲಿ. ಎಲ್ಲರಿಗೂ ಶುಭವ ತರಲಿ ದೀಪಾವಳಿ

* ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ಇದು ಬಲು ಕಷ್ಟದ ವರ್ಷ. ಆದರೆ, ಈ ಕಷ್ಟದಲ್ಲೂ ನಾವು ಸಾಕಷ್ಟು ಕಲಿತಿದ್ದೇವೆ. ಈ ದೀಪಾವಳಿ ನಿಮ್ಮ ಬದುಕಿನ ಈ ಎಲ್ಲಾ ಕಷ್ಟಗಳನ್ನು ದೂರ ಮಾಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು

* ಅಜ್ಞಾನ, ಅಂಧಕಾರ ದೂರವಾಗಲಿ, ದ್ವೇಷ, ಅಸೂಯೆ ದೂರವಾಗಲಿ, ಬಾಳಲ್ಲಿ ಸಂತಸ ಬೆಳಗಲಿ, ದೀಪಾವಳಿ ಹಬ್ಬದ ಶುಭಾಶಯಗಳು -ನೀವು ಉರಿಸುವ ಒಂದೊಂದು ದೀಪವೂ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಸುಟ್ಟು ಹಾಕಲಿ, ಖುಷಿಯೊಂದೇ ನಿಮ್ಮ ಬದುಕಿನಲ್ಲಿ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬೆಳಕಿನ ಹಬ್ಬದ ಶುಭಾಶಯಗಳು

English summary
Happy Deepavali 2022 Wishes in Kannada: Happy Diwali 2022 wishes, quotes, SMS, greetings, posters, greetings, wallpapers, WhatsApp and Facebook status to share with friends & family. Take a look
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X