ಕೆಂಪು ಬಟ್ಟೆ ಧರಿಸಿ, ಹೃದಯದ ಬಗ್ಗೆ ಜಾಗೃತಿ ಮೂಡಿಸಿ

Posted By:
Subscribe to Oneindia Kannada

ಕೆಂಪು ಅಂದ್ರೆ ರಕ್ತ, ಆಘಾತದ ಸಂಕೇತ ಮಾತ್ರವಲ್ಲ, ಕೆಂಪೆಂದರೆ ಶಕ್ತಿ, ದೃಢಸಂಕಲ್ಪ, ಭಾವೋತ್ಕಟತೆ, ಆಸೆಯ ಸಂಕೇತವೂ ಹೌದು. ಕೆಂಪು ಎಂದರೆ ಅದು ಒಲವಿನ ಬಣ್ಣ, ಚೆಲುವಿನ ಬಣ್ಣ. ಕೆಂಪಿನಲ್ಲಿ ಕಾಮ, ಹಿಂಸೆ, ಸಾಹಸ ಕೂಡ ಸೇರಿಕೊಂಡಿದೆ. ಕೆಂಪು ಬಣ್ಣದಷ್ಟು ಆಕರ್ಷಕವಾದದ್ದು ಬಹುಶಃ ಯಾವುದೂ ಇಲ್ಲ.

ಜೀವಂತಿಕೆಯ ಸಂಕೇತವಾಗಿರುವ ಕೆಂಪು ಬಣ್ಣದ ಬಟ್ಟೆ ಧರಿಸಿ ವಿಶ್ವದಾದ್ಯಂತ ಮಹಿಳಾಮಣಿಗಳು ಫೆಬ್ರವರಿ 3, ಶುಕ್ರವಾರದಂದು ವಿಭಿನ್ನವಾದ ಚಳವಳಿ ನಡೆಸುತ್ತಿದ್ದಾರೆ. ಅದು, ಹೃದಯಾಘಾತ ಮತ್ತು ಲಕ್ವದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ಕೆಂಪುಬಟ್ಟೆ ತೊಡಿ ಎಂದು ಕರೆ ನೀಡಿದ್ದಾರೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಅಮೆರಿಕನ್ ಸ್ಟ್ರೋಕ್ ಅಸೋಸಿಯೇಷನ್ ಈ ಆಂದೋಲನಕ್ಕೆ ನಾಂದಿ ಹಾಡಿವೆ. ಈ ಎರಡು ಅನಾರೋಗ್ಯಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಮೂವರರಲ್ಲಿ ಒಬ್ಬ ಮಹಿಳೆ ಹೃದಯಾಘಾತ ಮತ್ತು ಲಕ್ವದಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.

ಆದರೆ, ಶೇ.80 ಪ್ರಕರಣಗಳಲ್ಲಿ ಸಾವನ್ನು ಮುಂಜಾಗೃತೆಯಿಂದ ತಡೆಗಟ್ಟಲು ಸಾಧ್ಯವಿದೆ. ಇದಕ್ಕಾ ಈ ಸಂಗತಿಗಳ ಅಂಕಿಸಂಖ್ಯೆಯನ್ನು ತಿಳಿದುಕೊಳ್ಳಲು ನಿಮ್ಮ ಸುತ್ತಲಿರುವ ಮಹಿಳೆಯರನ್ನು ಪ್ರೇರೇಪಿಸಬೇಕು. ಈ ಕಾರಣಕ್ಕಾಗಿ ಶುಕ್ರವಾರ ಕೆಂಪುಬಣ್ಣದ ಬಟ್ಟೆ ಧರಿಸಿ ಎಂದು ಕರೆ ನೀಡಲಾಗಿದೆ.

ಆ ಸಂಖ್ಯೆಗಳು ಯಾವುವು?

ಆ ಸಂಖ್ಯೆಗಳು ಯಾವುವು?

ಮಹಿಳೆಯರು ದೇಹದ ಸುತ್ತಳತೆ, ತೂಕದ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಆದರೆ, ಅವರಿಗೆ ಅವರ ರಕ್ತದೊತ್ತಡ, ಕೊಲೆಸ್ಟ್ರಾಲ್ ಪ್ರಮಾಣ, ಸಕ್ಕರೆ ಪ್ರಮಾಣ, ಬಾಡಿ ಮಾಸ್ ಇಂಡೆಕ್ಸ್ ಗಳ ಬಗ್ಗೆ ತಿಳಿದುಕೊಂಡಿರುತ್ತಾರಾ? ಯಾವತ್ತಿಗೂ ಇಲ್ಲ. ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಮಾತ್ರ ಇವು ಗಮನಕ್ಕೆ ಬರುತ್ತವೆ.

ಎಲ್ಲವೂ ಚೆನ್ನಾಗಿಯೇ ಇದೆ

ಎಲ್ಲವೂ ಚೆನ್ನಾಗಿಯೇ ಇದೆ

ಹಠಾತ್ ಹೃದಯಾಘಾತ ಮಹಿಳೆಯರನ್ನು ಜಾಗತಿಕವಾಗಿ ಕಂಗೆಡಿಸುತ್ತಿದೆ. ನನಗೇನೂ ಆಗಿಲ್ಲ, ಎಲ್ಲವೂ ಚೆನ್ನಾಗಿಯೇ ಇದೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ನಿಯಮಿತವಾದ ವ್ಯಾಯಾಮ ಮಾಡುತ್ತಿದ್ದರೆ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ.

ಹೃದ್ರೋಗ ಆನುವಂಶಿಕ, ಎಚ್ಚರ

ಹೃದ್ರೋಗ ಆನುವಂಶಿಕ, ಎಚ್ಚರ

ನಮ್ಮ ಆರೋಗ್ಯದ ಬಗ್ಗೆ ಮಾತ್ರವಲ್ಲ ಇಡೀ ಕುಟುಂಬದ ಸದಸ್ಯರ ಆರೋಗ್ಯ, ಅನಾರೋಗ್ಯದ ಮಾಹಿತಿಯನ್ನು ನಾವು ತಿಳಿದುಕೊಂಡಿರಬೇಕು. ಕೆಲ ರೋಗಗಳು ಆನುವಂಶಿಕವಾಗಿರುವುದರಿಂದ ರೋಗ ಅಮರಿಕೊಳ್ಳುವ ಮೊದಲೇ ಜಾಗೃತರಾಗಬಹುದು. ಅನಾರೋಗ್ಯ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಬರಬಹುದು.

ಹೃದಯದ ಬಗ್ಗೆ ತಿಳಿದುಕೊಳ್ಳಿ

ಹೃದಯದ ಬಗ್ಗೆ ತಿಳಿದುಕೊಳ್ಳಿ

ಹೃದಯದ ಆರೋಗ್ಯದ ಬಗ್ಗೆ ಮೊದಲೇ ತಿಳಿದುಕೊಂಡಿದ್ದರೆ ಏನು ತಪ್ಪಿದೆ? ಹೃದಯ ನಿಮಿಷಕ್ಕೆ 72 ಬಾರಿ ಬಡಿಕೊಳ್ಳುತ್ತದೆ ಎಂದು ಮಾತ್ರ ತಿಳಿದರೆ ಸಾಲದು, ಇಡೀ ರಕ್ತಸಂಚಲನ ವ್ಯವಸ್ಥೆಯ ಬಗ್ಗೆ, ಹೃದಯದ ಆರೋಗ್ಯದ ಬಗ್ಗೆ ನೆಟ್ ಮುಖಾಂತರವಾಗಲಿ, ಪುಸ್ತಕಗಳನ್ನು ಓದಿಯಾಗಲಿ, ತಜ್ಞರೊಂದಿಗೆ ಚರ್ಚಿಸಿಯಾಗಲಿ ತಿಳಿದುಕೊಳ್ಳಬೇಕು.

ಆಹಾರದ ಬಗ್ಗೆ ಗಮನವಿರಲಿ

ಆಹಾರದ ಬಗ್ಗೆ ಗಮನವಿರಲಿ

ಎಲ್ಲಕ್ಕಿಂತ ಮುಖ್ಯವಾಗಿ ನಾವು ಎಂಥ ಆಹಾರ ಸೇವಿಸುತ್ತೇವೆ ಎಂಬುದರ ಬಗ್ಗೆ ಹೆಚ್ಚಿನ ಗಮನವಿಡಬೇಕು. ಹೃದಯದ ಆರೋಗ್ಯ ಕಾಪಾಡುವ ಈ ಖಾದ್ಯಗಳನ್ನು ರೆಡ್ ರೆಸಿಪಿ ಎಂದೇ ಕರೆಯಲಾಗುತ್ತದೆ. ನಿಮ್ಮ ದೇಹಕ್ಕೆ ಎಂಥ ಆಹಾರಗಳು ಒಗ್ಗುತ್ತವೆಯೋ ಅವನ್ನೇ ವೈದ್ಯರ ಸಲಹೆ ಪಡೆದು ಸೇವಿಸಿ. ಹೃದಯ ಹದಗೆಡಿಸುವ ಯಾವ ಪದಾರ್ಥವನ್ನೂ ತಿನ್ನಬೇಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National Wear Red Day is observed annually on the first Friday in February to create awareness about heart attack and strokes among women. Create awareness by wearing red color dress on February 3.
Please Wait while comments are loading...