• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುವನ್ನು ಅರಸಿ ಆರಿಸಿ ವಿದ್ಯಾರ್ಜನೆ ಮಾಡಬೇಕು

By Prasad
|
ಇಂದು ಶಿಕ್ಷಕರ ದಿನ. ಭಾರತದ ಪ್ರಥಮ ಉಪರಾಷ್ಟ್ರಪತಿ(1952-1962) ಮತ್ತು ದ್ವಿತೀಯ ರಾಷ್ಟ್ರಪತಿ(1962-1967) ಆಗಿದ್ದ ಭಾರತೀಯತತ್ವಶಾಸ್ತ್ರಜ್ಞ ಭಾರತರತ್ನ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅವರದೇ ಇಚ್ಛೆಯಂತೆ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ.

* ಮಾಲತಿ, ಬೆಂಗಳೂರು

ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿಸಿದವರನ್ನೆ ನಾವು ಇಂದು ಗುರು ಎಂಬುದಾಗಿ ತಿಳಿದಿದ್ದೇವೆ. ಆದರೆ 'ತೃಣಮಾತ್ರಂ ಕಲಿಸದಾತಂ ಗುರು' ಎಂಬ ಪಂಪನ ಉಕ್ತಿಯಂತೆ ನಮ್ಮಲ್ಲಿ ಧನಾತ್ಮಕ ಬದಲಾವಣೆ ತಂದ ಪ್ರತಿಯೊಬ್ಬರೂ ನಮ್ಮ ಗುರುವೇ ಸರಿ. ಹುಟ್ಟಿದ ಕ್ಷಣದಿಂದ ನಮ್ಮ ಆರೈಕೆ ಮಾಡಿ ಮಾನವರನ್ನಾಗಿಸಿದ ನಮ್ಮ ತಾಯಿ, ಸಮಾಜದ ರೀತಿ ನೀತಿಗಳನ್ನು ಕಲಿಸಿದ ನಮ್ಮ ತಂದೆ, ನಮ್ಮ ನೋವು ನಲಿವುಗಳನ್ನು ಹಂಚಿಕೊಂಡ ಅಣ್ಣ, ತಮ್ಮ, ಅಕ್ಕ, ತಂಗಿ, ಬಂಧು, ಮಿತ್ರರೆಲ್ಲರೂ ನಮ್ಮ ಗುರುಗಳೇ. ಈ ಎಲ್ಲರನ್ನು ನೆನೆದು ವಂದನೆಯನ್ನು ಅರ್ಪಿಸುವ ಸಲುವಾಗಿ ಈ ದಿನ.

ನಮ್ಮ ಸನಾತನ ಧರ್ಮದಲ್ಲಿ ಗುರುವಿನ ಬಗ್ಗೆ ಈ ವಿಶ್ಲೇಷಣೆಯನ್ನು ಕಾಣಬಹುದು:

ಆಚಿನೋತಿ ಚ ಶಾಸ್ತ್ರಾರ್ಥಂ ಆಚಾರೇ ಸ್ಥಾಪಯತ್ಯಪಿ|

ಸ್ವಯಮಾಚರತೆ ಯಸ್ಮಾತ್ ತಸ್ಮಾದಚಾರ್ಯ ಉಚ್ಯತೇ||

ವೈಜ್ಞಾನಿಕ, ವೈಚಾರಿಕ ಪದ್ಧತಿಗಳಿಂದ ಶಾಸ್ತ್ರಾರ್ಥವನ್ನು ಸಂಗ್ರಹಿಸುತ್ತಾ, ಶಾಸ್ತ್ರಾರ್ಥವನ್ನು ಶಿಷ್ಯರ ಮೂಲಕ ಅನುಷ್ಥಾನಗೊಳಿಸುತ್ತ ಸ್ವತಃ ತಾನೂ ಅದರಂತೆ ನಡೆಯುವವನೇ ಆಚಾರ್ಯನೆನಿಸಿಕೊಳ್ಳುತ್ತಾನೆ. ಆದ್ದರಿಂದ ಅಂತಹ ಗುರುವನ್ನು ನಾವು ಅರಸಿ, ಆರಿಸಿಕೊಂಡು, ಅವರ ಮಾರ್ಗದರ್ಶನದಲ್ಲಿ ಅಧ್ಯಯನಮಾಡಿ, ವಿದ್ಯಾರ್ಜನೆಯಿಂದ ಜ್ಞಾನಸಂಪನ್ನರಾಗಿ, ಸಮಷ್ಟಿಹಿತಕ್ಕಾಗಿ, ರಾಷ್ಟ್ರಹಿತಕ್ಕಾಗಿ ಜೀವನ ನಡೆಸಬೇಕು.

ಅಂತಹ ವಿಷಯಗಳನ್ನು ಬೋಧಿಸಿ ಜ್ಞಾನ ಸೃಷ್ಟಿ ಮಾಡುವ ಗುರುವೇ ಬ್ರಹ್ಮ, ನಮ್ಮ ತಪ್ಪುಗಳನ್ನು ತಿದ್ದಿ ನಮ್ಮ ಬುದ್ಧಿಯನ್ನು ಸಮಸ್ಥಿತಿಯಲ್ಲಿಡುವ ಅವನೇ ವಿಷ್ಣು, ಹಾಗೆಯೇ ನಮ್ಮ ಅಜ್ಞಾನವನ್ನು ನಾಶಮಾಡುವ ಲಯಕರ್ತನೆ ಮಹೇಶ್ವರ. ಹಾಗೆಂದೇ ನಾವು:

ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುದೇವೋ ಮಹೇಶ್ವರಃ|

ಗುರುರ್ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ||

ಎಂಬುದಾಗಿ ವಂದಿಸುತ್ತೇವೆ. ಇಂತಹ ಜ್ಞಾನಸಂಪನ್ನರಾದ ಅನೇಕ ಗುರುಗಳಿದ್ದುದರಿಂದಲೇ ತಕ್ಷಶಿಲೆ ಭರತಭೂಮಿಯ ತಿಲಕಪ್ರಾಯವಾಗಿದ್ದುದು, ನಳಂದ ವಿಶ್ವವಿದ್ಯಾಲಯ ವಿಶ್ವವಿಖ್ಯಾತವಾಗಿದ್ದುದು. ಆದ್ದರಿಂದ ಮಾತಾ ಪಿತೃಗಳ ನಂತರ ನಮ್ಮ ಜೀವನವನ್ನು ರೂಪಿಸಿದ ನಮ್ಮ ಗುರುಗಳಿಗೆ ಈ ದಿನ ನಾವೆಲ್ಲ ಭಕ್ತಿಪೂರ್ವಕವಾಗಿ ನೆನೆದು ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We should follow the foot steps of ideal teacher. An article by Malathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more