ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನದ ಹುಣ್ಣಿಮೆ ಆಚರಣೆಗೆ ಸಕಲ ಸಿದ್ಧತೆ

By * ನಿಸ್ಮಿತಾ
|
Google Oneindia Kannada News

Devotees geared up for Banada Hunnime Celebration
ಜನವರಿ 10 ರಿಂದ 17ವರೆಗೆ 'ಬನಶಂಕರಿ ಅಮ್ಮನ ದೇವಸ್ಥಾನ' ಗಳಲ್ಲಿ ವಿಶೇಷ ಪೂಜೆ. ಬಾದಾಮಿಯ ಬನಶಂಕರಿ ಜೊತೆಗೆ,ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಿ ಮತ್ತು ಮಲ್ಲೇಶ್ವರಂ ಶ್ರೀ ಮಹಾಗಣಪತಿ ದೇವಸ್ಥಾನ ಆವರಣದಲ್ಲಿರುವ ಬನಶಂಕರಿ ದೇವಿಯ ಉತ್ಸವ ವಿಶೇಷವಾಗಿ ನಡೆಯುತ್ತದೆ.

ಶುದ್ಧ ಹುಣ್ಣಿಮೆಯಂದು ಬನಶಂಕರಿ ಅಮ್ಮನನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದು ಎಂಬುದು ನಂಬಿಕೆ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳ ರಾಹುಕಾಲಗಳಲ್ಲೇ ಈಕೆಗೆ ವಿಶೇಷ ಪೂಜೆ. ಈ ಬಾರಿ ಜ.10ಕ್ಕೆ ಬನದ ಹುಣ್ಣಿಮೆ. ಹಾಗಾಗಿ ಬನಶಂಕರಿ ಅಮ್ಮನಿಗೀಗ ವಿಶೇಷ ಅಲಂಕಾರ-ನೈವೇದ್ಯದ ಅಭಿಷೇಕ, ಚಿನ್ನ-ಬೆಳ್ಳಿ-ವಜ್ರಾಭರಣಗಳ ಹೊದಿಸಲಾಗುತ್ತದೆ.

ನಗರದ ಬನಶಂಕರಿ ದೇಗುಲಕ್ಕೆ ಬರುವ ಭಕ್ತಾದಿಗಳು ಇಚ್ಛಾನುಸಾರವಾಗಿ ನಿಂಬೆ ಹಣ್ಣು, ತೆಂಗಿನಕಾಯಿ ಹಣ್ಣು ಹೂವನ್ನು ಒಯ್ಯುವುದರಿಂದ ಸುತ್ತಮುತ್ತಲಿನ ವರ್ತಕರಿಗೂ ಈಗ ಸುದ್ಗ್ಗಿ ಕಾಲ. ಬಾದಾಮಿಯ ಬನಶಂಕರಿ ಹಾಗೂ ಬೆಂಗಳೂರಿನ ಬನಶಂಕರಿ ದೇವಸ್ಥಾನ ಎರಡೇ ದೇವಸ್ಥಾನಗಳು ಕರ್ನಾಟಕದಲ್ಲಿ ಜನಪ್ರಿಯ. ಬಾಗಲಕೋಟೆ ಜಿಲ್ಲೆಯ ಚೋಳಚಗುಡ್ಡದ ತುಂಬೆಲ್ಲಾ ಭಕ್ತ ಸಮೂಹ ಭಕ್ತಿ ಪರವಶತೆಯಲ್ಲಿ ಮೈ ಮರೆಯುತ್ತಾರೆ. ಪುಷ್ಯ ಮಾಸದಲ್ಲಿ ಒಂದು ತಿಂಗಳು ಜಾತ್ರೆ, ಉತ್ಸವಗಳನ್ನು ಮಾಡಿ ದೇವಿಯನ್ನು ಆರಾಧಿಸಲಾಗುತ್ತದೆ. ಕೆಲ ವರ್ಷಗಳ ಹಿಂದೆ ಟೂರಿಂಗ್ ಟಾಕೀಸುಗಳು, 10 ಕ್ಕೂ ಹೆಚ್ಚು ಪೌರಣಿಕ ನಾಟಕಕ್ಕೆ ಹೆಸರಾದ ಡ್ರಾಮಾ ಕಂಪೆನಿಗಳು ಇಲ್ಲಿ ಬೀಡುಬಿಡುತ್ತಿದ್ದವು. ಜೊತೆಗೆ ಮಕ್ಕಳನ್ನು ರಂಜಿಸಲು ಸರ್ಕಸ್, ಟೋರಾ ಟೋರಾ ಇರುತ್ತಿತ್ತು.

ಈಗ ಇವೆಲ್ಲಾ ಕಾಣಸಿಗುವುದೇ ಅಪರೂಪ. ಸುತ್ತಮುತ್ತಲ ಹಳ್ಳಿಯ ಜನತೆಗೆ ಸುಗ್ಗಿಯ ವಾತಾವರಣವನ್ನು ಸೃಷ್ಟಿಸುತ್ತಿದೆ ಬನದ ಹುಣ್ಣಿಮೆ. ಸಂಕ್ರಾಂತಿಗೂ ಮೊದಲೇ ಬರುವ ಈ ಜಾತ್ತೆಯಲ್ಲಿ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಮೆರಸಲಾಗುತ್ತದೆ. ದೂರದ ಊರುಗಳಿಂದ ಬಂದ ಭಕ್ತರು ತಮ್ಮಮ್ಮ ಎತ್ತಿನ ಬಂಡಿಗಳಲ್ಲಿ ಖಡಕ್ ಜೋಳದ ರೊಟ್ಟಿ, ಹೆಸರುಕಾಳು ಪಲ್ಯ(ಸಬ್ಜಿ), ಮೊಸರು, ಗೆರೆಳ್ಳು ಚಟ್ನಿ ಕಟ್ಟಿಕೊಂಡು ಬರುವುದನ್ನು ಮರೆಯುವುದಿಲ್ಲ.

badami sacred pond
ಬನಶಂಕರಿ ದೇಗುಲದ ಎಂದೂ ಬತ್ತದ ಕೊಳದಲ್ಲಿ ಮುಳುಗೆದ್ದರೆ ಪಾಪವೆಲ್ಲ ಪರಿಹಾರ ಎಂಬ ನಂಬಿಕೆಯಿದೆ. ಹಸುಗೂಸನ್ನು ಬಾಳೆದಿಂಡಿನ ತೆಪ್ಪದಲ್ಲಿ ಕುಳ್ಳರಿಸಿ ಕೊಳದಲ್ಲಿ ವಿಹಾರಿಸುವುದು ಒಂದು ವಾಡಿಕೆ. ಸೂರ್ಯನ ಸುಡು ಬಿಸಿಲಿನ ತಾಪ ಶುರುವಾಗುವ ಮೊದಲು ರೈತಾಪಿ ಜನರಿಗೆ ಒಂದಷ್ಟು ಮನರಂಜನೆ, ಭಕ್ತಿ ಭಾವನೆ ಮನಸ್ಸಿಗೆ ಮುದ ನೀಡುವ ಜಾತ್ರೆಯಾಗಿ ಇಂದಿಗೂ ಬನದ ಹುಣ್ಣಿಮೆ ಚಾಲ್ತಿಯಲ್ಲಿದೆ.

ಉಳಿದಂತೆ ಮಲ್ಲೇಶ್ವರದ 9 ನೇ ಅಡ್ಡರಸ್ತೆಯ ಶ್ರೀ ಮಹಾಗಣಪತಿ ಆವರಣದಲ್ಲಿರುವ ಅಮ್ಮನ ದೇವಸ್ಥಾನ ಭಕ್ತರಿಂದ ಸದಾ ತುಂಬಿರುತ್ತದೆ. ಮಲ್ಲೇಶ್ವರದಲ್ಲಿ ದೇವರುಗಳ ಕಾಂಪ್ಲೆಕ್ಸ್ ಎನ್ನಬಹುದಾದ ಈ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ, ಆಂಜನೇಯ, ರಾಮ, ಗಣಪತಿ, ನವಗ್ರಹ, ನಾಗರಕಟ್ಟೆ, ಅಶ್ವಥಕಟ್ಟೆ ಹಾಗೂ ಬನ್ನಿ ವೃಕ್ಷಗಳನ್ನು ಕಣ್ತುಂಬ ನೋಡಿ ಭಗವತ್ ಕೃಪೆಗೆ ಪಾತ್ರರಾಗಬಹುದು.

ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲದ ಅಮ್ಮ ವನದುರ್ಗಿ, ಶಾಕಾಂಬರಿ ಹಾಗೂ ಬನಶಂಕರಿ ಅಮ್ಮ ಎಂಬ ಮೂರು ಸ್ವರೂಪಗಳನ್ನು ಹೊಂದಿರುವ ಜಗನ್ಮಾತೆ ಭಕ್ತರನ್ನು ಹರಸಲು ಕಾಯುತ್ತಿದ್ದಾಳೆ. ಒಮ್ಮೆ ಭೇಟಿ ನೀಡಿ ಆಕೆಯ ಅನುಗ್ರಹಕ್ಕೆ ಪಾತ್ರರಾಗಿರಿ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಶಾಸ್ತ್ರಿಗಳು. ದೇವಿಯನ್ನು ಆರಾಧಿಸಿ ಎಲ್ಲರೂ ಸಂತೋಷದಿರಬೇಕೆಂದು ಶಾಸ್ತ್ರಿಗಳು ಹಾರೈಸಿದ್ದಾರೆ.

ಇದನ್ನೂ ಓದಿ:

ಭಕ್ತಿಯ ಮುಂದೆ ನಡೆಯದ ಆರ್ಥಿಕ ಆಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X