ಗಣಪ ನಿನ್ನ ಕೃಪೆ ನಮ್ಮ ಮೇಲಿರಲಿ..
ಬರುವುದು ಗಣೇಶ ಚತುರ್ಥಿ
ತಪ್ಪದೇ ಪ್ರತಿ ವರುಷಕ್ಕೊಂದು ಸರತಿ
ಭಾದ್ರಪದ ಶುಕ್ಲದಾ ಚೌತಿ
ನೀಡುವವನವ ಸರ್ವರಿಗೂ ಸುಮತಿ
ಪೂಜಿಸುವ ಗಣಪನಂದು ಭಕ್ತಿಯಿಂದ
ಫಲ, ಪುಷ್ಪ, ಗರಿಕೆ, ವಸ್ತ್ರಗಳಾದಿಯಿಂದ
ಪೊರೆವನವ ಎಲ್ಲರನು ಕಷ್ಟ ಕಾರ್ಪಣ್ಯಗಳಿಂದ
ಫಲಿಸುವುದೆಲ್ಲ ಕಾರ್ಯಗಳು ನಿರ್ವಿಘ್ನದಿಂದ
ನೋಡದಿರಿ ಚಂದ್ರನನು ಚೌತಿಯಂದು
ನಲಿಯಿರಿ ಚಮತ್ಕಾರದಿಂದಂದು
ಸವಿಯಿರಿ ಕಡುಬು, ಮೋದಕಗಳಂದು
ಶ್ರವಿಸಿರಿ ಕುಳಿತು ಶಮಂತಕೋಪಖ್ಯಾನವಂದು
ದುಃಖ-ದಾರಿದ್ರ್ಯಗಳ ವಿನಾಶಕ
ಸಿದ್ಧಿ-ಬುದ್ಧಿ ಪ್ರದಾಯಕ
ನಮಾಮಿ-ಶಿರಸಾ ವಿಘ್ನೕಶ್ವರ
ದಯಮಾಡು ನಿನ್ನಕೃಪೆ, ನಿರಂತರ
ಮೀನಾ ಸುಬ್ಬರಾವ್












Click it and Unblock the Notifications