ಮೈಸೂರಿನಲ್ಲಿ ಗಣೇಶನ ಪ್ರತಿಮೆ ಮಾರಾಟಕ್ಕೆ ಬರ

ಮೈಸೂರು : ಗಣಪನ ಹಬ್ಬ ದೂರವಿದ್ದಾಗಲೇ ಎಲ್ಲ ಕಡೆ ಗಣೇಶನ ವಿಗ್ರಹಗಳನ್ನು ಕೊಳ್ಳುವವರು ಹಾಗೂ ಮಾರುವವರ ಜಾತ್ರೆ ಪ್ರತಿ ವರ್ಷ ಸಾಮಾನ್ಯ. ಆದರೆ ಅಂಥ ಸಂಭ್ರಮ ಹಾಗೂ ಉತ್ಸಾಹ ಈ ವರ್ಷ ಮೈಸೂರಿನಲ್ಲಿ ಕಂಡು ಬರುತ್ತಿಲ್ಲ.

ನಿರೀಕ್ಷೆಯಷ್ಟು ಗಣೇಶ ವಿಗ್ರಹಗಳ ಮಾರಾಟ ಈ ವರ್ಷ ನಡೆದಿಲ್ಲ. ಕಳೆದ ವರ್ಷಕ್ಕಿಂತ ವ್ಯಾಪಾರದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ ಎಂದು ಗಣಪನ ಸೃಷ್ಟಿಕರ್ತರು ಹಾಗೂ ಮಾರಾಟಗಾರರು ನೋವಿನಿಂದ ಹೇಳುತ್ತಿದ್ದಾರೆ.

ಮಳೆಬೆಳೆಯಿಲ್ಲದೇ ತೀವ್ರಬರ ಮತ್ತಿತರ ಸಮಸ್ಯೆಗಳಿದ್ದರೂ ಕಳೆದ ವರ್ಷ ಮಾರಾಟ ಆಶಾದಾಯಕವಾಗಿತ್ತು. ಕಳೆದ ವರ್ಷಕ್ಕಿಂತ ಕಡಿಮೆ ಬೆಲೆಗೆ, ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದರು, ಗ್ರಾಹಕರು ಗಣೇಶನ ವಿಗ್ರಹಗಳನ್ನು ಖರೀದಿಸುತ್ತಿಲ್ಲ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದಿಂದ ವ್ಯಾಪಾರಕ್ಕೆ ಮತ್ತ ಷ್ಟು ಅಡಚಣೆಯಾಗಿದೆ. ಬೀದಿಯಲ್ಲಿ ಗಣಪನ ಕಾಯುವುದು ಮಾರಾಟಗಾರರಿಗೆ ಕಷ್ಟವಾಗಿದೆ. ಗ್ರಾಹಕರಿಗೆ ಮೂರ್ತಿ ಗಳನ್ನು ಮನೆಗೆ ಒಯ್ಯಲು ತೊಂದರೆಯಾಗಿದೆ.

(ಏಜನ್ಸಿಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+