ಗಣೇಶ ವಿಸರ್ಜನೆಗಾಗಿ ಮನೆಬಾಗಿಲಿಗೆ ಸಂಚಾರಿಟ್ಯಾಂಕ್
ಬೆಂಗಳೂರು : ಗಣೇಶ ವಿಗ್ರಹಗಳ ವಿಸರ್ಜನೆಗೆ ಅನುಕೂಲವಾಗುವಂತೆ ನಾಗರಿಕರ ಮನೆಬಾಗಿಲಿಗೆ ಸಂಚಾರಿ ಟ್ಯಾಂಕ್‌ಗಳನ್ನು ಒಯ್ಯುವ ವಿನೂತನ ಯೋಜನೆಯನ್ನು ವಿವಿಧ ಸ್ಥಳೀಯ ಸಂಘಗಳೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ರೂಪಿಸಿವೆ.
2500 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕುಗಳನ್ನು ಹೊಂದಿರುವ ನಾಲ್ಕುಚಕ್ರ ವಾಹನಗಳು ಜನರ ಮನೆಬಾಗಿಲಿಗೇ ಗಣೇಶ ಚತುರ್ಥಿಯ ದಿನದಂದು (ಸೆ.18ರ ಶನಿವಾರ) ಬರಲಿದ್ದು , ನಾಗರಿಕರು ಈ ಸೌಲಭ್ಯ ಪಡೆದುಕೊಳ್ಳಬಹುದು.
ವಿದ್ಯಾರಣ್ಯಪುರ, ಸಹಕಾರ ನಗರ, ರಾಮಮೂರ್ತಿ ನಗರ, ಮಲ್ಲೇಶ್ವರಂನ 4, 10, 15 ಹಾಗೂ 18ನೇ ಕ್ರಾಸ್, ಲಾಲ್‌ಬಾಗ್ ಪಶ್ಚಿಮ ದ್ವಾರ, ಸರ್ವೇಯರ್ ಸ್ಟ್ರೀಟ್, ಡಿವಿ ಗುಂಡಪ್ಪ ರಸ್ತೆ , ಕೆಆರ್ ರಸ್ತೆ , ರಾಮೋಜಿ ರಾವ್ ರಸ್ತೆ , ರಾಘವೇಂದ್ರ ಸ್ವಾಮಿ ಮಠದ ರಸ್ತೆ ಮುಂತಾದೆಡೆಗಳಲ್ಲಿ ಈ ಮೊಬೈಲ್ ಟ್ಯಾಂಕ್‌ಗಳು ಸಂಚರಿಸಲಿವೆ. ಮಧ್ಯಾಹ್ನ 3ರಿಂದ ರಾತ್ರಿ 9.30ರವರೆಗೂ ಗಣೇಶ ವಿಗ್ರಹ ವಿಸರ್ಜನೆಗೆ ಅವಕಾಶವಿದೆ.
ಪ್ರತಿಯಾಂದು ಟ್ಯಾಂಕ್‌ನಲ್ಲಿ ಸಣ್ಣ ಗಾತ್ರದ ನೂರು ಗಣೇಶಗಳನ್ನು ಮುಳುಗಿಸಬಹುದು ಎಂದು ಪರಿಸರ ನಿಯಂತ್ರಣ ಮಂಡಳಿ ಪ್ರಕಟಣೆ ತಿಳಿಸಿದೆ.












Click it and Unblock the Notifications