ರಾಮಲಕ್ಷ್ಮಣರ ಗೌರಿ- ಗಣೇಶ
ಪ್ರತಿವರ್ಷ ಗಣಪತಿ ಮಾಡಿ ಮಾರುವುದು ಒಂದು ಬೃಹತ್ ಉದ್ಯಮವಾಗಿ ಅದರಲ್ಲಿ ಲಕ್ಷಗಟ್ಟಲೆ ಸಂಪಾದನೆಯಾಗುತ್ತಿರುವಾಗ, ಇಲ್ಲಿಬ್ಬರು ಸಂಪ್ರದಾಯವಾದಿ ಗಣೇಶ ಭಕ್ತರು 33 ಮೂರ್ತಿಗಳನ್ನು ಪ್ರತಿವರ್ಷ ಪುಕ್ಕಟೆ ಕೊಡುತ್ತಿದ್ದಾರೆ.
ಲಾಗಾಯ್ತಿನಿಂದ ಪಾಲಿಸಿಕೊಂಡು ಬರುತ್ತಿರುವ ಮನೆತನದ ಸಂಪ್ರದಾಯ ಅನುಸರಿಸುವ ದೃಷ್ಟಿಯಿಂದ ಪ್ರತಿವರ್ಷ ಯಾವುದೇ ಅಪೇಕ್ಷೆಯಿಲ್ಲದೆ, ಯಾವ ಸಹಾಯವಿಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಮರತೇ ಹೋಗಿರುವ ಕಲೆಯಾಗಿರುವ ಮಣ್ಣಿನಲ್ಲಿ ಗಣಪನ ಮೂರ್ತಿ ಮಾಡುತ್ತಾರೆ- ರಾಮಚಂದ್ರರಾವ್ ಕಲ್ಲೀಮನಿ ಮತ್ತು ಲಕ್ಷ್ಮಣರಾವ್ ಕಲ್ಲೀಮನಿ.
ರಾಮಣ್ಣನವರ ಮನೆತನ ಗಣಪತಿ ಮೂರ್ತಿಗಳನ್ನು 1942ರಿಂದ ಮಾಡಿಕೊಂಡು ಬರುತ್ತಿದೆ. ಮೊದಲೆಲ್ಲಾ ರಾಮಣ್ಣನವರ ತಾತ ಮನೆಗಾಗಿ ಗಣಪತಿಯನ್ನು ಗೋಪಿಚಂದನದಿಂದ ತಯಾರಿಸುತ್ತಿದ್ದರು. ಇದು ಕ್ರಮೇಣ ನೆರೆಹೊರೆಯವರಿಗೂ ಕೊಡುವ ಸಂಪ್ರದಾಯವಾಗಿ ಪರಿವರ್ತಿತವಾಯಿತು. ಕ್ರಮೇಣ ಬೇಡಿಕೆ ಅಧಿಕವಾಗುತ್ತಾ ಹೋದದ್ದರಿಂದ ಗೋಪಿಚಂದನದಿಂದ ಜೇಡಿಮಣ್ಣಿನ ಮೂರ್ತಿಗಳ ಮಾಡುವುದು ಅನಿವಾರ್ಯವಾಯಿತು.
ಗಣಪತಿ ಮಾಡಲು ಬೇಕಾಗುವುದು ಜೇಡಿಮಣ್ಣು ಮತ್ತು ಬಣ್ಣಗಳೇ ಆದರೂ, ಈಗ ಒಂದು ಗಾಡಿ ಜೇಡಿಮಣ್ಣು ತರಿಸುವುದು ಒಂದು ಸಾಹಸವೇ ಸರಿ ಎನ್ನುತ್ತಾರೆ ರಾಮಣ್ಣ. ಹಿಂದೆಲ್ಲಾ ಜೇಡಿಮಣ್ಣಿಗೆ ತೊಂದರೆಯಿರುತ್ತಿರಲಿಲ್ಲವಂತೆ. ಬಸವನಗುಡಿಯ ರಾಮಕೃಷ್ಣ ಆಶ್ರಮದ ಹಿಂದೆ ಹೇರಳವಾಗಿ ಸಿಗುತ್ತಿತಂತೆ. ಕ್ರಮೇಣ ಜನಸಂಖ್ಯೆ ಹೆಚ್ಚಾಗಿ ಹೊಸ ಹೊಸ ಬಡಾವಣೆಗಳು ತಲೆಯೆತ್ತಿ ನಿಂತಿರುವಾಗಿ ಜೇಡಿಮಣ್ಣು ಸಿಗುವುದು ಬಹಳ ಕಷ್ಟವಾಗಿದೆಯಂತೆ. ಈಗ ಜೇಡಿಮಣ್ಣು ತರಲು ಉತ್ತರಹಳ್ಳಿ ಮತ್ತು ವಸಂತಪುರಕ್ಕೆ ಹೋಗುವ ಸ್ಥಿತಿ ಬಂದಿದೆ.
ಯುಗಾದಿ ಮುಗಿದ ಮೇಲೆ ಪ್ರಾರಂಭವಾಗುವ ಗಣೇಶನ ಸೃಷ್ಟಿಸುವ ಕೆಲಸ, ಗಣಪತಿ ಹಬ್ಬಕ್ಕೆ ಸರಿಯಾಗಿ ಮುಗಿಯುತ್ತದೆ. ಪ್ರತಿ ಗಣಪತಿ ಮಾಡುವುದಕ್ಕೂ ಸುಮಾರು 2 ರಿಂದ 4 ದಿವಸ ಹಿಡಿಯುತ್ತದೆ. ನಂತರ ಅದು ಒಣಗುವುದಕ್ಕೆ ಒಂದು ವಾರವಾದರೂ ಬೇಕು. ಮೊದಲು ಅದಕ್ಕೆ ಬಿಳಿ ಬಣ್ಣ ಹಚ್ಚಿ ಒಣಗಿದ ಮೇಲೆ, ಅದಕ್ಕೆ ಬೇರೆ ಬೇರೆ ಬಣ್ಣ ಹಚ್ಚುವ ಕೆಲಸಕ್ಕೆ 2 ದಿನವಾದರೂ ತಗಲುತ್ತದೆ. ಕೊನೆಯದಾಗಿ ಗಣೇಶನಿಗೆ ಕಿರೀಟ ತೊಡಿಸುವ ಕೆಲಸ. ಕಿರೀಟಕ್ಕೆ ಸುನೆಹರಿ ಬಣ್ಣದ ಲೇಪನವಿರುತ್ತದೆ. ಹೀಗೆ ಒಂದು ಗಣಪತಿ ಮಾಡಲು ಸುಮಾರು 10 ದಿವಸ ಬೇಕು. ಶ್ರಾವಣದಲ್ಲಿ ಮನೆ ಮಂದಿಯೆಲ್ಲಾ ಬಣ್ಣ ಹಚ್ಚುವ ಕೆಲಸದಲ್ಲಿ ಸಹಕರಿಸುತ್ತಾರೆ.
ಹೀಗೆ ಪ್ರತಿವರ್ಷ ಒಂದು-ಒಂದೂವರೆ ಅಡಿಯ 33 ಗಣಪತಿ ಮೂರ್ತಿಗಳನ್ನು ರಾಮಣ್ಣ ಮಾಡುತ್ತಾರೆ. ಅವರು ವಾಸಿಸುವ ಸರ್ವೇಯರ್ ರಸ್ತೆಯ ಶ್ರೀ ವಿನಾಯಕ ಸೇವಾ ಮಂಡಳಿಯವರು ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸುವ ಗಣೇಶೋತ್ಸವಕ್ಕೂ ಸುಮಾರು 5 ಅಡಿಯ ಗಣಪತಿಯನ್ನು ಮಾಡಿಕೊಡುತ್ತಾರೆ. ಗಣಪನ ಜೊತೆಗೆ ಗೌರಿ ಮೂರ್ತಿಗಳನ್ನೂ ರಾಮಣ್ಣ ಮಾಡುತ್ತಾರೆ. ಆದರೆ ಅದಕ್ಕೆ ಹೆಚ್ಚಾಗಿ ಬೇಡಿಕೆಯಿಲ್ಲದಿರುವ ಕಾರಣ ಕಡಿಮೆ ಮೂರ್ತಿಗಳನ್ನು ತಯಾರಿಸುತ್ತಾರೆ.
ಕೆಎಸ್ಸಾರ್ಟಿಸಿಯಲ್ಲಿ ನೌಕರಿಯಲ್ಲಿದ್ದ ರಾಮಣ್ಣ ಮತ್ತು ಲಕ್ಷ್ಮಣ ರಾವ್ ಈಗ ನಿವೃತ್ತಿ ಹೊಂದಿದ್ದಾರೆ. ಮುಂಚೆಲ್ಲಾ ಇಬ್ಬರೇ ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದರು. ಕ್ರಮೇಣ ಇವರ ಮಕ್ಕಳು ಈ ಕೆಲಸದಲ್ಲಿ ಇವರಿಗೆ ನೆರವಾದರು. ಈಗ ಲಕ್ಷ್ಮಣರ ಮಗ ನಟೇಶ ಈ ಕಲೆಯನ್ನು ಕಲಿತು, ಯಾರ ಸಹಾಯವಿಲ್ಲದೇ ಒಬ್ಬನೇ ಅದ್ಭುತವಾಗಿ ಗಣಪತಿ ಮೂರ್ತಿಗಳನ್ನು ಮಾಡುವುದನ್ನು ಕಲಿತಿದ್ದಾನೆ. ನಟೇಶ ತಮ್ಮ ಸಂಪ್ರದಾಯವನ್ನು ಮುಂದುವರೆಸುತ್ತಾನೆ ಎಂಬ ನೆಮ್ಮದಿ ರಾಮ- ಲಕ್ಷ್ಮಣರದ್ದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications