Get Updates
Get notified of breaking news, exclusive insights, and must-see stories!

ಮಸೀದಿಯಲ್ಲಿ ಗಣೇಶೋತ್ಸವ !

ಬೆಳಗಾವಿ : ಗಣಪತಿಯ ಮೆರವಣಿಗೆ ಸಂಭ್ರಮದ ವಿಷಯವಾಗಿ ಈಗ ಉಳಿದಿಲ್ಲ . ಒಂದೆಡೆ ಭಕ್ತಿಭಾವ ಮೈದುಂಬಿದ್ದರೆ, ಒಳಗೊಳಗೇ ಭಯ ಮಡುಗಟ್ಟಿರುತ್ತದೆ. ಗಣೇಶೋತ್ಸವ ಮೆರವಣಿಗೆ ಎಂದರೆ ಊರ ಹಿರಿಯರ ಪಾಲಿಗಂತೂ ಬಿಸಿ ಗಂಟಲಲ್ಲಿನ ಕಡುಬು!

ಚೆಂಡೆ, ಭಜನೆ, ಪ್ರಭಾವಳಿ, ಸಾಲು ಸಾಲು ಜನ- ಗಣೇಶೋತ್ಸವ ಅಂದರೆ ಈ ಸಂಭ್ರಮದ ಚಿತ್ರಗಳು ಮಾತ್ರವಾ? ಊಹ್ಞೂಂ. ಊರಿನ ಮಸೀದಿಯ ಮುಂದೆ ಮೆರವಣಿಗೆ ಸಾಂಗವಾಗಿ ಮುಂದೆ ಹೋಗುತ್ತದೆಯೇ ಎಂಬುದು ಗಣೇಶೋತ್ಸವ ಮಂಡಳಿಯ ಹಿರಿಯರ ಪ್ರತಿ ವರ್ಷದ ಆತಂಕ. ಮಸೀದಿ ಮುಂದೆ ಘೋಷ ವಾದ್ಯಗಳನ್ನು ಮೊಳಗಿಸಬೇಡಿ ಎಂಬುದು ಭಿನ್ನ ಧರ್ಮೀಯರ ಪಟ್ಟು. ಸ್ವತಂತ್ರ ರಾಜ್ಯದಲ್ಲಿ ಇವರದೇನು ಕಟ್ಟು ಪಾಡು, ನಾವ್ಯಾಕೆ ಮೌನ ಮೆರವಣಿಗೆ ಮಾಡಬೇಕು ಎಂಬ ಹಿಂದೂಗಳ ಮರು ಪ್ರಶ್ನೆ. ಹೀಗೆ, ನಾ ಬಿಡೆ ತಾ ಬಿಡೆ ಎಂಬ ಮೌನ ಯುದ್ಧ ಯಾವಾಗ ಸ್ಫೋಟಿಸುತ್ತದೋ ಯಾರಿಗೆ ಗೊತ್ತು ? ಎಲ್ಲಾ ಸಾಂಗವಾಗಿ ನಡೆಯಲಪ್ಪಾ ದೇವರೇ .. ಎಂದು ಹಿರಿಯರು ಗಣೇಶನಿಗೆ ಅಡಿಗಡಿಗೆ ಪ್ರಾರ್ಥಿಸುತ್ತಿರುತ್ತಾರೆ.

ಆದರೆ, ಕೊಲ್ಹಾಪುರ ಜಿಲ್ಲೆಯ ಈ ಹಳ್ಳಿಯಲ್ಲಿ ಹಾಗಲ್ಲ. ದೇಶವಿಡೀ ಒಡಕಿನ ಮಾತು ಕೇಳಿಬರುತ್ತಿರುವಾಗ ಈ ಹಳ್ಳಿಯದು ಒಗ್ಗಟ್ಟಿನ ಗಾಥೆ! ಎಲ್ಲ ಊರುಗಳಿಗೂ ಮಾದರಿಯಾದ ಯಶೋಗಾಥೆ ಅನ್ನಲಿಕ್ಕಡ್ಡಿಯಿಲ್ಲ .

ಅದು ಶಿರೋಳ ತಾಲ್ಲೂಕಿನ ಕುರುಂದವಾಡ ಗ್ರಾಮ. ಅಲ್ಲಿ ಗುಡಿಗಳೂ ಇವೆ, ಮಸೀದಿಗಳೂ ಇದೆ. ಪ್ರತಿ ವರ್ಷ ಊರಲ್ಲಿ ಗಣೇಶೋತ್ಸವ ನಡೆಯುತ್ತದೆ. ಆದರೆ ಗಣಪತಿಯ ಸಂಭ್ರಮ ಮಂದಿರದಲ್ಲಿ ಮಾತ್ರವಲ್ಲ- ಹಬ್ಬದಂದು ಮಸೀದಿಯನ್ನೂ ತುಂಬಿಕೊಳ್ಳುತ್ತದೆ. ಹಬ್ಬದ ದಿನ ಬೆಳಗ್ಗೆ ಗಣೇಶ ಪ್ರತಿಮೆಯನ್ನು ಸಿಂಗರಿಸಿದ ಮಸೀದಿಗೆ ತರಲಾಗುತ್ತದೆ. ಅಚ್ಚುಕಟ್ಟಾಗಿ ನಿರ್ಮಿಸಿದ ಪೀಠದಲ್ಲಿ ಕುಳ್ಳಿರಿಸಲಾಗುತ್ತದೆ. ಹಿಂದೂ- ಮುಸ್ಲಿಂ ಎರಡೂ ಜನಾಂಗದವರು ಒಗ್ಗಟ್ಟಿನಿಂದ ಗಣೇಶೋತ್ಸವ ಆಚರಿಸುತ್ತಾರೆ. ಜೈ ಗಣೇಶ ಎನ್ನುತ್ತಾರೆ.

ಕುರುಂದವಾಡದ ಜನಸಂಖ್ಯೆ ಸುಮಾರು 75 ಸಾವಿರ. ಈ ಪೈಕಿ ಶೇ. 40ರಷ್ಟು ಮುಸ್ಲಿಮರಿದ್ದಾರೆ. ಕುರುಂದವಾಡದಲ್ಲಿ 18 ಮಸೀದಿಗಳಿವೆ. 18ರಲ್ಲಿ ಐದು ಮಸೀದಿಗಳು ಗಣೇಶ ಹಬ್ಬವನ್ನು ಪ್ರತಿ ವರ್ಷ ಸಡಗರದಿಂದ ಆಚರಿಸುತ್ತವೆ. ಇದು ಕಳೆದ 25 ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಉತ್ಸವದ ಆಚರಣೆಗಾಗಿ ಕಾರ್ಖನಫಿರ್‌ ಗಣೇಶೋತ್ಸವ ಮಂಡಳಿ ರಚಿಸಲಾಗಿದೆ. ಮಂಡಳಿಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮ್‌ ಸದಸ್ಯರು ಸಮ ಸಂಖ್ಯೆಯಲ್ಲಿದ್ದಾರೆ. ಈ ಮಂಡಳಿಗೆ ಈ ಬಾರಿ ಬೆಳ್ಳಿ ಹಬ್ಬದ ಖುಷಿ. ಆ ಖುಷಿಯಲ್ಲಿ ಈ ಬಾರಿ 8 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಕುರುಂದವಾಡದ ಬೈರಗೆರೆ ಮಸೀದಿಯಲ್ಲಿ ಈ ವರ್ಷದ ಗಣೇಶೋತ್ಸವ ಜೋರೊ ಜೋರು. ಗಣೇಶನ ಹುಟ್ಟು ಹಬ್ಬಕ್ಕೆ ಬ್ಯಾಂಡು ಭಜಂತ್ರಿ ಭಜನೆ ಎಲ್ಲವೂ ಉಂಟೆನ್ನುತ್ತಾರೆ ಬೈರಗೆರೆ ಮಸೀದಿಯ ಸನ್ಮಿತ್ರ ಯುವಕ ಮಂಡಲದ ಅಧ್ಯಕ್ಷ ಬಾಬಾ ಸಾಹೇಬ್‌ ಫಕೀರ್‌.

ಕೇಸರಿಯ ಭಗವಾ ಧ್ವಜ ಕಂಡರೆ ಮುಸ್ಲಿಮರು ಇಲ್ಲಿ ಕೆಂಡ ಕಾರುವುದಿಲ್ಲ. ಮುಸ್ಲಿಮರ ಹಸಿರು ಧ್ವಜವನ್ನು ಹಿಂದೂಗಳು ದ್ವೇಷಿಸುವುದಿಲ್ಲ. ಈ ಬೈರಗೆರೆ ಮಸೀದಿಯ ಹಸಿರು ಮತ್ತು ಕೇಸರಿ ಧ್ವಜಗಳೆರಡನ್ನೂ ಗಣೇಶ ಹಬ್ಬದಂದು ಮಸೀದಿ ಸುತ್ತ ಕಟ್ಟಿ ಸಿಂಗರಿಸಲಾಗುತ್ತದೆ. ಬೈರಗೆರೆ ಮಸೀದಿಯಲ್ಲಿ ಈ ಸಾಮರಸ್ಯ ಗಣೇಶೋತ್ಸವ ಕಳೆದ 40 ವರ್ಷಗಳಿಂದ ನಡೆದು ಕೊಂಡು ಬಂದಿದೆ ಎಂದು ಬಾಬಾ ಸಾಹೇಬ್‌ಫಕೀರ್‌ ಹೆಮ್ಮೆಯಿಂದ ಹೇಳುತ್ತಾರೆ.

ಅಲ್ಲಿ ಮಸೀದಿಗೆ ಬರುವ ಮುಸ್ಲಿಮರನ್ನು ಮಾತನಾಡಿಸಿದರೆ - ನಮಗೆ ಮೊಹರಂ ಮತ್ತು ಗಣೇಶ ಹಬ್ಬದ ನಡುವೆ ಅಂಥ ವ್ಯತ್ಯಾಸವೇನಿಲ್ಲ. ಹಬ್ಬದ ಖುಷಿಗೆ ಜಾತಿಯ ಕಟ್ಟಳೆಯೇಕೆ ಎಂದು ಮರು ಪ್ರಶ್ನಿಸುತ್ತಾರೆ. ಹಬ್ಬಲಿ ಇವರ ರಸಬಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+