ಭಜಿಸು ಭಜಿಸು ಮನವೇ ಭಜಿಸು ಗಣೇಶನಾ...
'ಅಜಂ ನಿರ್ವಿಕಲ್ಪಂ ನಿರಾಕಾರ ಮೇಕಂ... ಗಣೇಶಂ ಭಜೇಮ" ಭಜನೆ ಹೇಳುತ್ತಿದ್ದ ದಿನಗಳನ್ನು ನೆನಪು ಮಾಡಿಕೊಟ್ಟಿದ್ದು ಈಗ ತಾನೆ ಮೈಕು ಕೂಗಿದ 'ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು...".
ದೇವರುಗಳ ಮೇಲೆ ಏನೆಲ್ಲ ಹಾಡುಗಳನ್ನು ಕಟ್ಟಿದ್ದರೂ, ಪ್ರಾಯಶಃ ಹೊಸೆದ ಹಾಡುಗಳ ಸಂಖ್ಯೆಯಲ್ಲಿ ಗಣೇಶನಿಗೇ ಸಿಂಹಪಾಲು ಅನಿಸುತ್ತದೆ. ಸಿನಿಮಾಗಳಲ್ಲೂ ಒಂದು ಗಣಪತಿಯ ಹಾಡಿದ್ದರೆ ತಂತಾನೇ ಆ ಹಾಡು ಹಬ್ಬಕಾಲದಲ್ಲಿ ಜಾಹೀರಾತಾಗುತ್ತದೆ ಎಂಬ ನಂಬಿಕೆ ಬಲವಾಗಿದ್ದ ಕಾಲವೂ ಇತ್ತು. ಇವತ್ತಿಗೂ ಗಣೇಶನ ಹಬ್ಬದ ಆಸುಪಾಸು ಸಾಲುಸಾಲು ಗಣೇಶನ ಕುರಿತ ಚಿತ್ರಗೀತೆಗಳನ್ನು ನಾವು ಕೇಳುತ್ತಿರುವುದು ಈ ಕಾರಣಕ್ಕೇ. ಒಟ್ಟಿನಲ್ಲಿ ಗಣೇಶ ದೊಡ್ಡ ದೇವ, ಆದಿ ಪ್ರೇಕ್ಷಕ. ಮಕ್ಕಳಿಗೆ ಅವನೆಂದರೆ ಇಷ್ಟ. ದೊಡ್ಡವರಿಗೆ ಅವನೆಂದರೆ ಪರಮ ಭಕ್ತಿ. ಮಟ್ಟುಗಾರರು, ಹಾಡುಗಾರರಿಗೂ ಅವನ ಭಜಿಸುವುದು ಏನೋ ಖುಷಿ.
ಗಣೇಶನ ಸ್ತುತಿಗಳ ಸಿ.ಡಿ. ನಮಗೆ ಬೇಕು, ನಿಮ್ಮ ಅಂಗಡಿಯಲ್ಲಿ ಇದೆಯಾ ಅಂತ ಅನೇಕರು ವಿ- ಅಂಚೆ ಕಳಿಸಿದರು. ಆ ಭಕ್ತ ಮಹಾಶಯರ ಮನವಿಗೆ ಓಗೊಟ್ಟು ನಮ್ಮ ಅಂಗಡಿಯಲ್ಲಿ ಗಣೇಶನ ಕುರಿತ ನಾಲ್ಕು ಚೆನ್ನಾದ ಆಡಿಯೋ ಸಿ.ಡಿ.ಗಳನ್ನು ಇಟ್ಟಿದ್ದೇವೆ-
1. ಗಣಪತಿ ಸಂಕಷ್ಟ ಸ್ತುತಿ (ಬೆಲೆ 61 ರುಪಾಯಿ ಅಥವಾ 1.28 ಡಾಲರ್)
2. ಮಹಾ ದಿವ್ಯ ರೂಪ ಗಣಪ (ಬೆಲೆ 60 ರುಪಾಯಿ ಅಥವಾ 1.26 ಡಾಲರ್)
3. ವಿಜಯಿಸು ವಿನಾಯಕ (ಬೆಲೆ 42 ರುಪಾಯಿ ಅಥವಾ 0.88 ಡಾಲರ್)
4. ವಾತಾಪಿ (ಬೆಲೆ 70 ರುಪಾಯಿ ಅಥವಾ 1.47 ಡಾಲರ್)
'ಗಣಪತಿ ಸಂಕಷ್ಟ ಸ್ತುತಿ" ಸಿ.ಡಿ.ಯಲ್ಲಿ ರಾಜೇಶ್ ಕೃಷ್ಣನ್, ರತ್ನಮಾಲ ಪ್ರಕಾಶ್, ಲತಾ ಹಂಸಲೇಖ ಹಾಗೂ ವಿಷ್ಣು ಗಣಪತಿ ಕುರಿತು ಗೀತೆಗಳನ್ನು ಹಾಡಿದ್ದು, ಹಂಸಲೇಖ ಹಾಡುಗಳಿಗೆ ಮಟ್ಟು ಹಾಕಿದ್ದಾರೆ.
'ಮಹಾ ದಿವ್ಯ ರೂಪ ಗಣಪ" ಸಿ.ಡಿ. ಹೆಸರಿಗೆ ತಕ್ಕಂತೆ ದಿವ್ಯವಾಗಿದೆ. ಇದರಲ್ಲಿ ಡಾ.ರಾಜ್‌ಕುಮಾರ್, ಎಸ್ಪಿ ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ವಾಣಿ ಜಯರಾಂ, ಮಂಜುಳಾ ಗುರುರಾಜ್ ಹಾಗೂ ಬಿ.ಆರ್.ಛಾಯಾ ಕಂಠದ ಮಾಧುರ್ಯ ಭರಿತ ಹಳೆ- ಹೊಸ ಹಾಡುಗಳಿವೆ.
'ವಿಜಯಿಸು ವಿನಾಯಕ" ಅಪ್ಪಟ ಭಕ್ತಿ ಗೀತೆಗಳ ಸಿ.ಡಿ. ಎಸ್ಪಿಬಿ ಜೊತೆ ಇಲ್ಲಿ ಪುತ್ತೂರು ನರಸಿಂಹ ನಾಯಕ್ ಕಂಠ ಕೇಳುವ ಅವಕಾಶ. 'ಆದಿ ಕುಣಿದನು", 'ಬಾಲ ಗಣಪ", 'ನೋಡಿರಯ್ಯ ನಮ್ಮ" ಹಾಡುಗಳ ಕೇಳುವುದೇ ಕಿವಿಗೆ ಹಬ್ಬ.
ಸ್ಯಾಕ್ಸಫೋನ್ ವಾದಕ ಕದ್ರಿ ರಮೇಶ್‌ನಾಥ್ ವಾದ್ಯಸಂಗೀತದ ಸಿ.ಡಿ. 'ವಾತಾಪಿ". ಗಣಪತಿ ಕುರಿತ ಸ್ತೋತ್ರಗಳು ರಮೇಶ್‌ನಾಥ್ ಸ್ಯಾಕ್ಸಫೋನ್‌ನಲ್ಲಿ ಜೀವ ಪಡೆದಿವೆ. ಇದು ಅಪರೂಪದ ಸಿ.ಡಿ. ಆದ್ದರಿಂದ ಬೆಲೆ ಕೊಂಚ ಜಾಸ್ತಿ.
ಗಣೇಶ ನಿಮಗೆ ಒಳ್ಳೆಯದನ್ನು ಮಾಡಲಿ. ನಿಮ್ಮ ಮನೆ ಮನೆಗಳಲ್ಲಿ ಅವನ ಸ್ತೋತ್ರ ವರ್ಷಪೂರ್ತಿ ಅನುರಣಿಸಲಿ. ಭಜಿಸು ಭಜಿಸು ಭಜಿಸು...ಮನವೇ.. ಭಜಿಸು ಗಣೇಶನಾ...
ಗಣೇಶನ ಹಬ್ಬಕ್ಕಾಗೇ ಅಣಿಯಾಗಿರುವ ನಮ್ಮ ಅಂಗಡಿಗೂ ಬನ್ನಿ.












Click it and Unblock the Notifications