Ganesh Chaturthi Theme: ಗಣಪತಿ ಇಡುವ ಸ್ಥಳವನ್ನು ಅಲಂಕರಿಸಲು ಐಡಿಯಾ ಇಲ್ಲಿದೆ
ನಾಳೆ ಅಂದರೆ ಸೆಪ್ಟೆಂಬರ್ 7ರಂದು ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ ಸೆಪ್ಟೆಂಬರ್ 7ರಿಂದ ಪ್ರಾರಂಭವಾಗಿ ಮುಂದಿನ 10 ದಿನಗಳವರೆಗೆ ಮುಂದುವರಿಯುತ್ತದೆ. ಈ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಜನರು ಗಣೇಶನ ಮೂರ್ತಿಯನ್ನು ತಮ್ಮ ಮನೆಗಳಿಗೆ ತಂದು ಪೂಜಿಸುತ್ತಾರೆ.
ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲು ಭಕ್ತರು ತಮ್ಮ ಮನೆಯನ್ನು ಬಹಳ ಸುಂದರವಾಗಿ ಅಲಂಕರಿಸುತ್ತಾರೆ. ನೀವು ಕೂಡ ಮನೆಯನ್ನು ಅಲಂಕರಿಸಲು ಯೋಚಿಸುತ್ತಿದ್ದರೆ, ಇಂದು ನಾವು ನಿಮಗಾಗಿ ಅಂತಹ ಕೆಲವು ಆಕರ್ಷಕ ಮತ್ತು ಟ್ರೆಂಡಿ ಥೀಮ್ ಐಡಿಯಾಗಳನ್ನು ನಿಮಗೆ ನೀಡುತ್ತೇವೆ. ಇದು ನಿಮ್ಮ ಗಣೇಶ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲಿದೆ.

ಗಣೇಶ ಚತುರ್ಥಿಯಂದು ಗಣೇಶನಿಡುವ ಸ್ಥಳವನ್ನು ಆಕರ್ಷಕವಾಗಿ ಅಲಂಕಾರ ಮಾಡಬೇಕು ಅನ್ನೋರಿಗೆ ಇಲ್ಲಿದೆ ಕೆಲ ಐಡಿಯಾಗಳು. ಇದು ಗಣೇಶ ಹಬ್ಬದ ಸಡಗರವನ್ನು ಹಾಗೂ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಮೋದಕ ಥೀಮ್:
ಗಣೇಶನಿಗೆ ಮೋದಕ ಅಂದರೆ ತುಂಬಾ ಪ್ರೀತಿ. ಹೀಗಾಗಿ ಆತನಿಗೆ ಪೂಜೆ ಸಲ್ಲಿಸಿದಾಗಲೆಲ್ಲಾ ಲಡ್ಡು ಮತ್ತು ಮೋದಕಗಳನ್ನು ಇಡಲಾಗುತ್ತದೆ. ಆದುದರಿಂದ ಗಣಪತಿ ವಿಗ್ರಹವನ್ನು ಇಡುವಾಗ ಹೂವುಗಳು ಅಥವಾ ವರ್ಣರಂಜಿತ ಕಾಗದದಿಂದ ಮೋದಕದ ಆಕಾರವನ್ನು ಮಾಡಿ ಸ್ಥಳವನ್ನು ಅಲಂಕರಿಸಬಹುದು. ಈ ಥೀಮ್ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ.
ಪರಿಸರ ಸ್ನೇಹಿ ಥೀಮ್:
ಗಣೇಶನಿಡುವ ಸ್ಥಳವನ್ನು ಅಲಂಕರಿಸಲು ನೀವು ಬಣ್ಣಬಣ್ಣದ ಹೂವುಗಳು ಮತ್ತು ಸಸ್ಯಗಳನ್ನು ಸಹ ಬಳಸಬಹುದು. ಇದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಜೊತೆಗೆ ನಿಮ್ಮ ಮನೆಯಲ್ಲಿ ಇದು ಆಕರ್ಷಕವಾಗಿ ಕಾಣುತ್ತದೆ. ನೋಡುಗರ ಗಮನವನ್ನು ಸೆಳೆಯುತ್ತದೆ. ಹೀಗಾಗಿ ಗಣೇಶನಿಡುವ ಸ್ಥಳವನ್ನು ಅಲಂಕರಿಸಲು ಸಸ್ಯಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಹುಟ್ಟುಹಬ್ಬದ ಪಾರ್ಟಿ ಥೀಮ್:
ಗಣೇಶ ಚತುರ್ಥಿಯ ದಿನದಂದು ಗಣೇಶನ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ದಿನ ತಾಯಿ ಪಾರ್ವತಿ ಗಣೇಶನಿಗೆ ಜನ್ಮ ನೀಡಿದಳು ಎಂದು ಹೇಳಲಾಗುತ್ತದೆ. ಹೀಗಾಗಿ ಗಣೇಶನ ಹುಟ್ಟುಹಬ್ಬದ ಆಚರಣೆಯ ರೀತಿ ಅಲಂಕಾರ ಮಾಡಬಹುದು. ಬಲೂನ್‌ಗಳು, ಜನ್ಮದಿನದ ಶುಭಾಶಯ ಟ್ಯಾಗ್‌ಗಳು ಮತ್ತು ಇತರ ಅನೇಕ ಸುಂದರವಾದ ವಸ್ತುಗಳನ್ನು ಬಳಸಿಕೊಂಡು ನೀವು ಗಣೇಶನಿಡುವ ಸ್ಥಳವನ್ನು ಅಲಂಕರಿಸಬಹುದು.
ರಾಮಮಂದಿರ ಥೀಮ್:
ರಾಮಮಂದಿರವನ್ನು ನಿರ್ಮಿಸಿದಾಗ ಅದು ಭಕ್ತರಿಗೆ ಬಹಳ ಭಾವನಾತ್ಮಕ ಮತ್ತು ಪೂಜ್ಯ ಕ್ಷಣವಾಗಿತ್ತು. ಈ ಗಣೇಶ ಚತುರ್ಥಿಯಂದು ನೀವು ರಾಮಮಂದಿರವನ್ನು ಗಮನದಲ್ಲಿಟ್ಟುಕೊಂಡು ಅದೇ ಥೀಮ್‌ನಲ್ಲಿ ದೇವಾಲಯವನ್ನು ಅಲಂಕರಿಸಬಹುದು. ಇದು ನೋಡುಗರ ಗಮನವನ್ನು ಸೆಲೆಯುತ್ತದೆ.

ವರ್ಣರಂಜಿತ ಚುನರಿಯೊಂದಿಗೆ ವಿಶಿಷ್ಟವಾದ ಅಲಂಕಾರ:
ಗಣಪತಿಯನ್ನು ಇಡುವ ಸ್ಥಳವನ್ನು ಅಲಂಕರಿಸಲು ನೀವು ವರ್ಣರಂಜಿತ ಚುನರಿಗಳನ್ನು ಬಳಸಬಹುದು. ಇದು ಸಾಂಪ್ರದಾಯಿಕ ಮತ್ತು ಭವ್ಯವಾದ ನೋಟವನ್ನು ನೀಡುತ್ತದೆ. ಚುನರಿಯ ಅಲಂಕಾರಕ್ಕೆ ದೀಪಗಳನ್ನು ಸೇರಿಸುವ ಮೂಲಕ ನೀವು ಪಂಡಲ್‌ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಹುದು.












Click it and Unblock the Notifications