Festivals List in August 2024: ಆಗಸ್ಟ್ ತಿಂಗಳ ರಜಾ ದಿನಗಳು, ಹಬ್ಬಗಳ ಪಟ್ಟಿ, ರಕ್ಷಾ ಬಂಧನ ಯಾವಾಗ ತಿಳಿಯಿರಿ...
ಇಂದು ನಾವೆಲ್ಲಾ ಆಗಸ್ಟ್ ತಿಂಗಳಿಗೆ ಕಾಲಿಟ್ಟಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ಆಗಸ್ಟ್ ತಿಂಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಇವುಗಳನ್ನು ದೇಶದಾದ್ಯಂತ ಅತ್ಯಂತ ವೈಭವದಿಂದ ಆಚರಿಸಿ ಸಂಭ್ರಮಿಸಲಾಗುತ್ತದೆ. ಅಲ್ಲದೆ ಈ ತಿಂಗಳಲ್ಲಿ ಬಹಳಷ್ಟು ರಜಾದಿನಗಳಿವೆ.
ಹಾಗಾದರೆ ಆಗಸ್ಟ್ ತಿಂಗಳಲ್ಲಿ ಯಾವಾಗ ರಜಾ ದಿನಗಳು ಇವೆ? ಈ ತಿಂಗಳಲ್ಲಿ ಬರುವ ಹಬ್ಬಗಳು ಹಾಗೂ ಉಪವಾಸದ ದಿನಾಂಕವನ್ನು ತಿಳಿಯೋಣ. ಇದರೊಂದಿಗೆ ಈ ತಿಂಗಳಲ್ಲಿ ಆಚರಿಸಲಾಗುವ ರಕ್ಷಾ ಬಂಧನ ಹಾಗೂ ಕೃಷ್ಣ ಜನ್ಮಾಷ್ಟಮಿಯ ದಿನಾಂಕ ಯಾವಾಗ, ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ...

ಆಗಸ್ಟ್ 2024ರ ಹಬ್ಬಗಳ ಪಟ್ಟಿ
ಆಗಸ್ಟ್ 2, 2024 (ಶುಕ್ರವಾರ) - ಶ್ರಾವಣ ಶಿವರಾತ್ರಿ
ಆಗಸ್ಟ್ 4, 2024 (ಭಾನುವಾರ) - ಶ್ರಾವಣ ಅಮವಾಸ್ಯೆ
ಆಗಸ್ಟ್ 5, 2024 (ಸೋಮವಾರ) - ಶ್ರಾವಣ ಮೂರನೇ ಸೋಮವಾರ
6 ಆಗಸ್ಟ್ 2024 (ಮಂಗಳವಾರ)- ಮಂಗಳ ಗೌರಿ ವ್ರತ
7 ಆಗಸ್ಟ್ 2024 (ಬುಧವಾರ)- ಶ್ರಾವಣ ಬುಧ ಪೂಜೆ
9 ಆಗಸ್ಟ್ 2024 (ಶುಕ್ರವಾರ)- ನಾಗ ಪಂಚಮಿ
11 ಆಗಸ್ಟ್ 2024 (ಭಾನುವಾರ)- ಭಾನು ಸಪ್ತಮಿ, ಗೋಸ್ವಾಮಿ ತುಳಸಿದಾಸ್ ಜಯಂತಿ.
ಆಗಸ್ಟ್ 12, 2024 (ಸೋಮವಾರ) - ಶ್ರಾವಣ ತಿಂಗಳ ನಾಲ್ಕನೇ ಸೋಮವಾರ
13 ಆಗಸ್ಟ್ 2024 (ಮಂಗಳವಾರ)- ನಾಲ್ಕನೇ ಮಂಗಳ ಗೌರಿ ವ್ರತ
16 ಆಗಸ್ಟ್ 2024 (ಶುಕ್ರವಾರ)- ಪುತ್ರದಾ ಏಕಾದಶಿ ಉಪವಾಸ
19 ಆಗಸ್ಟ್ 2024 (ಸೋಮವಾರ) - ಶ್ರಾವಣ ಪೂರ್ಣಿಮಾ, ರಕ್ಷಾಬಂಧನ, ಶ್ರಾವಣ ತಿಂಗಳ ಕೊನೆಯ ಸೋಮವಾರ.
22 ಆಗಸ್ಟ್ 2024 (ಗುರುವಾರ)- ಹರತಾಳಿಕಾ ವ್ರತ
24 ಆಗಸ್ಟ್ 2025 (ಶನಿವಾರ)- ಬಲರಾಮ ಜಯಂತಿ
26 ಆಗಸ್ಟ್ 2024 (ಸೋಮವಾರ)- ಶ್ರೀ ಕೃಷ್ಣ ಜನ್ಮಾಷ್ಟಮಿ
29 ಆಗಸ್ಟ್ 2024 (ಗುರುವಾರ)- ಅಜ ಏಕಾದಶಿ ಉಪವಾಸ
ನಾಗ ಪಂಚಮಿ (7 ಆಗಸ್ಟ್ 2024)
ನಾಗ ಪಂಚಮಿ ಹಬ್ಬವನ್ನು ನಾಗದೇವತೆಗಳಿಗೆ ಸಮರ್ಪಿಸಲಾಗಿದೆ. ಈ ದಿನ ಜನರು ನಾಗದೇವತೆಯನ್ನು ಪೂಜಿಸಿ ಹಾಲನ್ನು ಅರ್ಪಿಸುತ್ತಾರೆ. ಈ ಬಾರಿ ಅದು ಆಗಸ್ಟ್ 7 ರಂದು ಆಚರಿಸಲಾಗುತ್ತದೆ. ಹಾವು ಶಿವನ ಕೊರಳಿನಲ್ಲಿರುವ ಹಾರ ಎಂದು ಪರಿಗಣಿಸಲಾಗುತ್ತದೆ.

ರಕ್ಷಾ ಬಂಧನ (19 ಆಗಸ್ಟ್ 2024)
ಸಹೋದರ ಸಹೋದರಿಯರ ನಡುವಿನ ಅವಿನಾಭಾವ ಪ್ರೀತಿಯನ್ನು ಸಂಕೇತಿಸುವ ರಕ್ಷಾ ಬಂಧನ ಹಬ್ಬ ಆಗಸ್ಟ್ 19 ರಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುತ್ತಾರೆ. ಜೊತೆಗೆ ಸಹೋದರನ ದೀರ್ಘಾಯುಷ್ಯ ಮತ್ತು ಸಂತೋಷ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆಯನ್ನು ನೀಡುತ್ತಾರೆ.
ಜನ್ಮಾಷ್ಟಮಿ (26 ಆಗಸ್ಟ್ 2024)
ಜನ್ಮಾಷ್ಟಮಿಯನ್ನು ಶ್ರೀಕೃಷ್ಣನ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 26ರಂದು ಇದನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿ ಮಥುರಾ ಮತ್ತು ವೃಂದಾವನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಕ್ತರು ರಾತ್ರಿಯಿಡೀ ಜಾಗರಣೆಯಿಂದ ಭಜನೆ ಮತ್ತು ಕೀರ್ತನೆಗಳನ್ನು ಹಾಡುತ್ತಾರೆ. ಭಗವಾನ್ ಕೃಷ್ಣನ ಲೀಲೆಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇಡೀ ದಿನ ಉಪವಾಸವನ್ನು ಆಚರಿಸುತ್ತಾರೆ ಮತ್ತು ರಾತ್ರಿ 12 ಗಂಟೆಗೆ ಕನ್ಹಾ ಜಿ ಹುಟ್ಟಿದ ನಂತರ ಪಾರಣ ಮಾಡುತ್ತಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications