30 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಿ ಪರಿಸರ ಸ್ನೇಹಿ ಗಣಪತಿ: ಮಾಡುವ ವಿಧಾನ ಇಲ್ಲಿದೆ....
ಗಣೇಶ ಚತುರ್ಥಿ ಇನ್ನೇನು ದೂರವಿಲ್ಲ. ಅದಾಗಲೇ ಮಾರುಕಟ್ಟೆಯಲ್ಲಿ ಗಣೇಶನ ಮೂರ್ತಿಗಳು ಒಂದಕ್ಕಿಂತ ಒಂದು ನೋಡುಗರ ಗಮನ ಸೆಳೆಯುತ್ತಿವೆ. ಮೂರ್ತಿ ಖರೀದಿಗೆ ಈಗಾಗಲೇ ಬುಕ್ಕಿಂಗ್ ಕೂಡ ಶುರುವಾಗಿದೆ. ಗಣೇಶನ ಹಬ್ಬ ಆಚರಿಸಲು ಬಹುತೇಕ ಜನ ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಈ ಹಬ್ಬವನ್ನು ಪರಿಸರಕ್ಕೆ ಹಾನಿಯಾಗದಂತೆ ಆಚರಿಸುವುದು ತುಂಬಾನೇ ಮುಖ್ಯ.
ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ಗಣೇಶನ ಬಳಕೆ ಕಡಿಮೆಯಾಗುತ್ತಿದೆ. ಹೀಗಾಗಿ ಅದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಾವು ನಿಮಗೆ ಮನೆಯಲ್ಲೇ ಜೇಡಿ ಮಣ್ಣಿನಿಂದ ಮುದ್ದಾದ ಗಣಪತಿ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಸುತ್ತೇನೆ. ಇದನ್ನು ಅನುಸರಿಸಿ ಚಂದದ ಗಣೇಶನ ಮೂರ್ತಿಯನ್ನು ನೀವು ಮನೆಯಲ್ಲೇ ತಯಾರಿಸಬಹುದು. ಆ ಮೂಲಕ ಪರಿಸರ ಹಾಳಾಗುದಂತೆ ಹಬ್ಬವನ್ನು ಆಚರಿಸಬಹುದು. ಹಾಗಾದರೆ ಪರಿಸರ ಸ್ನೇಹಿ ಗಣೇಶ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.
ಅಗತ್ಯವಿರುವ ಸಾಮಗ್ರಿಗಳು:-
ಜೇಡಿ ಮಣ್ಣು
ನೀರು
ಬೀಜಗಳು
ಚಮಚ
ಟೂತ್‌ಪಿಕ್
ಬೇಕಾಗುವ ಅಂದಾಜು ಸಮಯ: 3-4 ಇಂಚಿನ ಗಣೇಶ ಮೂರ್ತಿಗೆ 30 ನಿಮಿಷಗಳು.
ಪರಿಸರ ಸ್ನೇಹಿ ಗಣಪತಿ ತಯಾರಿಸುವ ಹಂತಗಳು:-
1. ಮೊದಲು ಜೇಡಿಮಣ್ಣಿನಲ್ಲಿ ನೀರು ಬೆರೆಸಿ ಗಟ್ಟಿಯಾಗಿ ಮಿಶ್ರಣ ಮಾಡಿ. ನಿಮ್ಮ ವಿಗ್ರಹ ನಿಮಗೆ ಸಸ್ಯವನ್ನು ನೀಡಬೇಕೆಂದು ನೀವು ಬಯಸಿದರೆ, ನಿಮ್ಮ ಆಯ್ಕೆಯ ಯಾವುದೇ ಬೀಜದೊಂದಿಗೆ ಮಣ್ಣನ್ನು ಮಿಶ್ರಣ ಮಾಡಿ.
2. ಈ ಮಿಶ್ರಣದ ಜೇಡಿ ಮಣ್ಣಿನ ಉಂಡೆಯನ್ನು ತುಂಡುಗಾಳಾಗಿ ಮಾಡಿ. ಅದರಿಂದ ಮುಂಡ, ಕೈಗಳು, ಕಿವಿಗಳು, ಮುಖ ಮತ್ತು ಕಾಲುಗಳನ್ನು ತಯಾರಿಸಿ. ಇದಕ್ಕೆ ಬೇಕಾಗುವಷ್ಟು ಮಣ್ಣನ್ನು ತುಂಡಾಗಿಸಿಕೊಳ್ಳುವುದು ಇಲ್ಲಿ ಮುಖ್ಯ. ನಿಮ್ಮ ಅನುಕೂಲಕ್ಕಾಗಿ ಫೋಟೋದಲ್ಲಿ ನಿಮಗೆ ಇದರ ಚಿತ್ರವನ್ನು ನೀಡಲಾಗಿದೆ.

3. ವಿಗ್ರಹವನ್ನು ಇಡಲು ಪ್ರತ್ಯೇಕ ತುಂಡನ್ನು ತೆಗೆದುಕೊಳ್ಳಿ. ಅದನ್ನು ಚಪ್ಪಟೆಗೊಳಿಸಿ ಮತ್ತು ಅದನ್ನು ಗಣೇಶ ಮೂರ್ತಿ ಇಡಲು ಸಿದ್ಧಪಡಿಸಿ. ಅದಕ್ಕೆ ಛಕಾಕಾರವನ್ನು ನೀಡಿ.
4. ಈಗ ಈಗಾಗಲೇ ಸಿದ್ಧಪಡಿಸಿದ ಮುಂಡಕ್ಕೆ ಕೈ ಕಾಲು ಜೋಡಿಸಲು 2 ಟೂತ್‌ಪಿಕ್‌ಗಳನ್ನು ಬಳಸಿ ಅಥವಾ ನೀವು ನೀರಿನ ಹನಿಗಳನ್ನು ಸಹ ಬಳಸಬಹುದು. ನೀರು ಸವರುತ್ತಾ ಎರಡನ್ನು ಜೋಡಿಸಬಹುದು.

5. ನೆನಪಿರಲ್ಲಿ ವಿಗ್ರಹದ ಎರಡು ಕಾಲುಗಳು ಒಂದೇ ಗಾತ್ರದಲ್ಲಿ ಇರಬೇಕು. ಮೊದಲು ಇದಕ್ಕೆ ಕಾಲುಗಳನ್ನು ಮಾಡೋಣ. ಕಾಲುಗಳು ಮಾಡಲು ಜೇಡಿ ಮಣ್ಣಿನ ಮೇಲ್ಬಾಗ ಮುಂಡ ತಯಾರಿಸಿದ ಕಾಲುಭಾಗಕ್ಕಿಂತಲೂ ಕಡಿಮೆ ಇರಬೇಕು. ಜೊತೆಗೆ ತೊಡೆ ಕೊಂಚ ದಪ್ಪಾಗಿ ಕಾಣಬೇಕು. ಕಾಲುಗಳನ್ನು ಮಡಚಿರುವಂತೆ ಜೋಡಿಸಬೇಕು. ಮುಂಡಕ್ಕೆ ಅದರ ಅಂಚುಗಳನ್ನು ಚಪ್ಪಟೆಗೊಳಿಸಿ ಅಂಟಿಕೊಳ್ಳಿ. ಟೂತ್‌ಪಿಕ್‌ಗಳಿಂದ ಪಾದ ಹಾಕು ಬೆರಳುಗಳನ್ನು ಮಾಡಿ.

6. ಬಳಿಕ ವಿಗ್ರಹದ ಎರಡು ಕೈಗಳು ಒಂದೇ ಗಾತ್ರದಲ್ಲಿ ಇರಬೇಕು. ಈ ಮಣ್ಣು ಕಾಲುಗಳಿಗಿಂತ ಕೊಂಚ ಕಡಿಮೆ ಇರಲಿ. ಇದನ್ನು ಉದ್ದ ಮಾಡಿ ಮುಂಡಕ್ಕೆ ಚಪ್ಪಟೆಗೊಳಿಸಿ ಅಂಟಿಸಿ. ಎರಡು ಬದಿ ಹೀಗೆ ಮಾಡಿದ ಬಳಿಕ ಬೆರಳುಗಳನ್ನು ಮಾಡಿ. ಎಡಗೈಯಲ್ಲಿ ಸಣ್ಣ ಲಡ್ಡೂ ಕೂಡ ಇಡಬಹುದು.

7. ಬಳಿಕ ತಲೆಯನ್ನು ಮುಂಡದ ಮೇಲೆ ಅಂಟಿಸಿ. ತಲೆಗೆ ಉದ್ದವಾದ ರೋಲ್ ತಯಾರಿಸಿ ಕಿರೀಟ ಮಾಡುವುದನ್ನು ಮರೆಯದಿರಿ.

8. ತಲೆಗೆ ಉದ್ದವಾದ ರೋಲ್ ತಯಾರಿಸಿ ಕಿರೀಟ ಮಾಡುವುದನ್ನು ಮರೆಯದಿರಿ.

9. ಈಗ ಮೂರ್ತಿಗೆ ಕಣ್ಣು ಮತ್ತು ಕಿವಿಗಳನ್ನು ಮಾಡಿ. ಚಿಕ್ಕ ಗಾತ್ರದ ಉಂಡೆಗಳನ್ನು ತೆಗೆದುಕೊಂಡು ಚಪ್ಪಡೆ ಮಾಡಿ ಕಿವಿಯಾಗಿ ಅಂಟಿಸಿ. ಜೋಳದಷ್ಟು ಚಿಕ್ಕದಾದ ಉಂಡೆಗಳನ್ನು ಮಾಡಿ ಕಣ್ಣುಗಳಾಗಿ ಅಂಟಿಸಿ. ಎದೆಲ್ಲವು ಮುಗಿದ ಬಳಿಕ ಮೂರ್ತಿ ಸೊಂಡಿಲುಗೆ ದಂತವನ್ನು ಮಾಡಿ.

10. ಗಣಪತಿ ವಿಗ್ರಹ ಸಿದ್ಧವಾದ ನಂತರ ಧೋತಿ ವಿನ್ಯಾಸಗಳನ್ನು ಮಾಡಲು ಚಾಕು ಅಥವಾ ಟೂತ್‌ಪಿಕ್‌ಗಳನ್ನು ಬಳಸಿ. ನೀರಿನಿಂದ ಮೂರ್ತಿಗೆ ಅಂತಿಮ ರೂಪವನ್ನು ನೀಡಿ. ಮೂರ್ತಿಯನ್ನು ಸ್ಟೀಲ್ ಬಟ್ಟಲಿನಲ್ಲಿ ಅಥವಾ ಬಾಳೆ ಎಲೆಯ ಮೇಲೆ ಇರಿಸಿ.
ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ ನೀವು ನಿಮ್ಮ ಮನೆಯಲ್ಲಿ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರಿಸಬಹುದು. ಗಣೇಶ ಚತುರ್ಥಿಗೆ ನಿಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಇಟ್ಟು ಪೂಜೆ ಮಾಡಿ. ಆ ಫೋಟೋವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಈ ಎಲ್ಲಾ ಚಿತ್ರಗಳನ್ನು ಪರಿಸರ ಸ್ನೇಹಿ ರಿಷಿತಾ ಶರ್ಮಾ ಅವರಿಂದ ಪಡೆಯಲಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications