• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ ತುಳಸಿ ನಮೋ ನಮಃ

By Vanitha
|
Google Oneindia Kannada News

ನಮ್ಮಲ್ಲಿ ಮೊದಲಿನಿಂದಲೂ ಪರಿಸರವನ್ನು ದೇವತೆಯೆಂದು ಪರಿಭ್ರಮಿಸುವ ವಿಶಿಷ್ಟ ಸಂಪ್ರದಾಯವಿದೆ. ನಮ್ಮ ಹಿಂದೂ ಧರ್ಮದಲ್ಲಿ ದೇವಾನು-ದೇವತೆಗಳಿಗೆ ಉಪವಾಸ ವ್ರತ ಪೂಜೆಗಳು ಸಲ್ಲಿಕೆಯಾಗುವಂತೆ ಸಸ್ಯ, ಮರಗಳಿಗೂ ಪೂಜೆ ಪುನಸ್ಕಾರ ವ್ರತ ಉಪವಾಸಗಳು ಸಲ್ಲುತ್ತದೆ. ಆದರೆ ಎಲ್ಲಾ ಸಸ್ಯಗಳು ಪೂಜೆಗೆ ಅರ್ಹವಾಗುವುದಿಲ್ಲ. ಅವುಗಳಲ್ಲಿ ಕೆಲವೇ ಕೆಲವು ಅಂದರೆ ಅರಳಿಮರ, ಎಕ್ಕದಗಿಡ, ತುಳಸಿಗಿಡಗಳು ಹೀಗೆ ಇವುಗಳ ಪಟ್ಟಿ ದೊಡ್ಡದಾಗಿಯೇ ಬೆಳೆಯುತ್ತಾ ಹೋಗುತ್ತದೆ.

ನಮಗೆಲ್ಲಾ ತಿಳಿದಿರುವಂತೆ ಪ್ರತಿಯೊಂದು ಸಸ್ಯ, ಮರಗಳು ಅದರದೇ ಆದ ವಿಶೇಷ ಗುಣ, ಉಪಯೋಗಗಳೊಂದಿಗೆ ಸಸ್ಯಕಾಶಿಯಲ್ಲಿ ಮೇರು ಸ್ಥಾನದಲ್ಲಿರುತ್ತದೆ. ಅಲ್ಲದೇ ಭಗವಂತನಿಗೂ ಪ್ರಿಯನಾಗಿ, ಜನರ ಜೀವನಾಡಿಯಾಗಿಯೂ, ಶುಭದ ಸಂಕೇತವಾಗಿಯೂ, ಸಮಸ್ಯೆಗಳ ನಿವಾರಕವಾಗಿಯೂ, ಮಾನವರ ಅಗತ್ಯತೆಗಳ ಪೂರೈಕವಾಗಿ ಹೀಗೆ ವ್ಯಕ್ತಿಯ ಮನೋಭಾವಕ್ಕನುಗುಣವಾಗಿ ಸಸ್ಯಗಳು ತಮ್ಮ ಬದುಕನ್ನು ಪರರಿಗಾಗಿಯೇ ಸವೆಸುತ್ತಿರುತ್ತದೆ. ಆದರೆ ಒಂದು ಮಾತ್ರ ಸತ್ಯ ಎಲ್ಲಾ ಸಸ್ಯ-ಮರಗಳು ಪೂಜಿತಗೊಳ್ಳುವುದಿಲ್ಲ.

ಸಸ್ಯಸಿರಿಯಲ್ಲಿ ಮಾನವರಿಗೆ ಜೀವನಾಡಿಯಾಗಿ , ಔ‍ಷಧಿಯ ಲೋಕವನ್ನೇ ತನ್ನಲ್ಲಿ ಮೈಗೂಡಿಸಿಕೊಂಡಿರುವ, ಮಹಿಳಾ ಪ್ರಿಯವಾಗಿ, ಎಲ್ಲರ ಮನೆಯ ಅಂಗಳದಲ್ಲಿ ಶುಭದ ಸಂಕೇತವಾಗಿ ರಾರಾಜಿಸುವ ಏಕೈಕ ಸಸ್ಯವೇ ತುಳಸಿ. ತುಳಸಿ ಮುತ್ತೈದೆಯ ಸಂಕೇತವಾಗಿದ್ದು, ಕಾರ್ತಿಕ ಮಾಸದಲ್ಲಿ ವಿಶೇಷ ಹಬ್ಬವಾಗಿ, ನಾನಾ ದೀಪ, ಹಲವಾರು ನೆಲ್ಲಿಕಾಯಿಗಳ ಹಾರದ ನಡುವಲ್ಲಿ ಸುಂದರಿಗಳಾಗಿ ರಾರಾಜಿಸುತ್ತಾಳೆ ಮಾತೆ ತುಳಸಿ. ಅದೇ ವಿಶೇಷ ಹಬ್ಬ ತುಳಸಿ ಹಬ್ಬವೇ.[ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ ಒಂದೇ ಎರಡೇ]

ಹಾಗಾದರೆ ಬನ್ನಿ ತುಳಸಿಯ ಕುರಿತಾಗಿ ನಿಮಗೆ ಗೊತ್ತಿರದ ಹಲವಾರು ವೈವಿಧ್ಯ ಅಂಶಗಳನ್ನು ನಾವು ಹೇಳ್ತೇವೆ. ಆಧಾರ ಗ್ರಂಥ : ಶ್ರೀ ತುಳಸೀ- ಸಂಗ್ರಹ-ಅನುವಾದ: ಪಂ. ವಾದಿರಾಜಾಚಾರ್ಯ ಕರಣಂ

ತುಳಸಿ ಹಬ್ಬದ ನಿಮಗೆ ಗೊತ್ತಿರದ ಕೆಲವು ವೈವಿಧ್ಯ ಅಂಶ

ತುಳಸಿ ಹಬ್ಬದ ನಿಮಗೆ ಗೊತ್ತಿರದ ಕೆಲವು ವೈವಿಧ್ಯ ಅಂಶ

ತುಳಸಿಗೆ ವೈಷ್ಣವರ ಮನೆಗಳಲ್ಲಿ ವಿಶೇಷ ಸ್ಥಾನವಿದೆ. ವಿಷ್ಣುವಿನ ಅರ್ಚನೆಗೆ ಪ್ರಧಾನವಾದ ಸಾಧನವಾಗಿದೆ ಈ ತುಳಸಿ. ಗೋಪಿ ಚಂದನವಿಲ್ಲದಿರುವಾಗ ಆಸ್ಥಾನದಲ್ಲಿ ತುಳಸಿ ದಳವನ್ನು ಉಪಯೋಗಿಸಬಹುದೆಂದು ಸ್ಮೃತಿಗಳು ಸಾರುತ್ತವೆ. ಯಾವುದೇ ವಯಸ್ಸಿನ ಭೇದವಿಲ್ಲದೇ ಎಲ್ಲರಿಂದ ಪೂಜ್ಯವಾದ ವೈಷ್ಣವ ಸಸ್ಯವೇ ತುಳಸಿ, ಲಕ್ಷ್ಮೀಯ ಸ್ಥಾನವನ್ನು ಕೊಂಚ ಮಟ್ಟಿಗೆ ತುಂಬುವ ಈಕೆ ಮಹಿಳೆಯರ ಪಾಲಿಗೆ ಕಲ್ಪವೃಕ್ಷ, ಮುತ್ತೈದೆತನದ ಸಿರಿತನವೂ ಹೌದು.[ತುಳಸಿ ಹಬ್ಬದಂದು ಸಂಭ್ರಮದಿ ದೀಪ ಬೆಳಗಿಸಿ]

ತುಳಸಿ ಸಸ್ಯ ಹುಟ್ಟಿದ್ದು ಹೇಗೆ?

ತುಳಸಿ ಸಸ್ಯ ಹುಟ್ಟಿದ್ದು ಹೇಗೆ?

ಅಮೃತ ಪ್ರಾಪ್ತಿಗಾಗಿ ದೇವತೆಗಳು-ಅಸುರರು ಕ್ಷೀರಸಾಗರವನ್ನು ಮಥಿಸುವ ಸಂದರ್ಭದಲ್ಲಿ ಸಾಕ್ಷಾತ್ ನಾರಾಯಣ ಧನ್ವಂತರಿಯ ರೂಪದಿಂದ ಸುಧಾಕಮಂಡಲವನ್ನು ಧರಿಸಿ ಬರುತ್ತಾನೆ. ದೇವತೆಗಳಿಗೆ ಅಮೃತವನ್ನು ಬಡಿಸುವ ಆನಂದ ಧನ್ವಂತರಿಯ ಕಣ್ಣುಗಳಲ್ಲಿ ಹರಿದಾಡಿತು. ಆ ಆನಂದ ಅಶ್ರುಗಳಾಗಿ ಅಮೃತ ಕಳಸದಲ್ಲಿ ಉದುರಿದವು. ಆಗಲೇ ತುಳಸಿ ಸಸ್ಯ ಹುಟ್ಟಿತು ಎಂದು ಪುರಾಣದ ಹಿನ್ನೆಲೆ ಇದೆ.

ತುಳಸಿ ಪದದ ಅರ್ಥ?

ತುಳಸಿ ಪದದ ಅರ್ಥ?

ತುಳಸಿ ಎಂಬ ಪದದಲ್ಲಿ 'ತ್-ಉ-ಲಸೀ' ಎಂಬ ಮೂರು ಅಕ್ಷರಗಳಿವೆ. 'ತ್' ಎಂದರೆ ಮರಣವೆಂದರ್ಥ. 'ಉ' ಎಂದರೆ ಸಂಬಂಧ ಉಳ್ಳವರು. ಒಟ್ಟಾರೆ 'ತು' ಎಂದರೆ ಮೃತರಾದವರು ಎಂದರ್ಥ. ಮೃತರಾದವರು ಲಸತಿ ಶೋಭಿಸುತ್ತಾರೆ. ಅರ್ಥಾತ್ 'ಯಾವ ವ್ಯಕ್ತಿ ತುಳಸಿಯ ಸ್ಮರಣಾದಿಗಳನ್ನು ಮಾಡಿ ಮೃತರಾಗಿರುತ್ತಾರೋ ಅವರು ಸ್ವರ್ಗಾದಿಲೋಕದಲ್ಲಿ ಶೋಭಾಯಮಾನರಾಗಿ ಇರುತ್ತಾರೆ' ಎಂಬ ಅರ್ಥವಿದೆ.[ತುಳಸಮ್ಮ ಯಾರು? ಅವಳಿಗಾದ ಅನ್ಯಾಯವೇನು?]

ತುಳಸಿಗಿರುವ ನಾನಾ ಹೆಸರುಗಳು:

ತುಳಸಿಗಿರುವ ನಾನಾ ಹೆಸರುಗಳು:

ವೈಷ್ಣವಿ, ವಿಷ್ಣುವಲ್ಲಭ, ಹರಿಪ್ರಿಯ, ವಿಷ್ಣುತುಳಸಿ, ರಾಮ ತುಳಸಿ, ಶ್ಯಾಮ ತುಳಸಿ, ಕೃಷ್ಣ ತುಳಸಿ ಹೀಗೆ ನಾನಾ ಹೆಸರುಗಳು ತುಳಸಿ ಸಸ್ಯಕ್ಕಿದೆ.

ತುಳಸಿ ಸಸ್ಯ ಇದ್ದಲ್ಲಿ ಯಾವ ಯಾವ ದೇವತೆಗಳು ನೆಲೆಸಿರುತ್ತಾರೆ?

ತುಳಸಿ ಸಸ್ಯ ಇದ್ದಲ್ಲಿ ಯಾವ ಯಾವ ದೇವತೆಗಳು ನೆಲೆಸಿರುತ್ತಾರೆ?

ಯಾವ ಪ್ರದೇಶದಲ್ಲಿ ಒಂದು ತುಳಸಿ ಸಸ್ಯ ಇರುತ್ತದೋ ಅಲ್ಲಿ ತ್ರಿಮುರ್ತಿಗಳಾದ ಬ್ರಹ್ಮ, ವಿಷ್ಣು, ರುದ್ರಾದಿ ದೇವತೆಗಳು, ಲಕ್ಷ್ಮೀ, ಸರಸ್ವತಿ, ಗಾಯತ್ರಿ, ಉಮಾದೇದೇವಿ, ಶಚೀದೇವಿ, ಇಂದ್ರ, ಅಗ್ನಿ, ಯಮ, ವರುಣ, ವಾಯು, ಕುಬೇರ, ಆದಿತ್ಯಾದಿಗ್ರಹದೇವತೆಗಳು, ವಿಶ್ವೇದೇವತೆಗಳು, ಅಷ್ಟವಸ್ತುಗಳು, ಚತುರ್ಧಶಮನುಗಳು, ದೇವರ್ಷಿಗಳು, ವವಿದ್ಯಾದರರು, ಗಂಧರ್ವರು, ಸಿದ್ಧರು, ಅಪ್ಸರೆಯರು ಸೇರಿದಂತೆ ಇನ್ನಿತರ ದೇವತೆಗಳ ಪತ್ನಿಯರು ತುಳಸಿ ಪುಷ್ಪದಲ್ಲಿ ಸನ್ನಿಹಿತರಾಗಿರುತ್ತಾರೆ ಎಂದು ಅದನ್ನು ಸಾಮಾನ್ಯವಾಗಿ ಮನೆಯ ಮುಂಬದಿಯಲ್ಲೇ ನೆಟ್ಟಿರುತ್ತಾರೆ.

ತುಳಸಿಯು ಯಾವುದರಿಂದ ಅಭ್ಯಂಜನಗೊಳ್ಳುತ್ತಾಳೆ?

ತುಳಸಿಯು ಯಾವುದರಿಂದ ಅಭ್ಯಂಜನಗೊಳ್ಳುತ್ತಾಳೆ?

ತುಳಸಿಯನ್ನು ಮೂರು ಕಾಲದಲ್ಲಿಯೂ ಪೂಜಿತಗೊಳ್ಳುತ್ತಾಳೆ. ದೀಪಾವಳಿ ಹಬ್ಬದ ನಂತರ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಈ ಮಾತೆಗೆ ಸಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ನೀರು, ಹಾಲು, ಎಳನೀರು, ಜೇನುತುಪ್ಪ, ಕಬ್ಬಿನರಸದಿಂದ ಅಭ್ಯಂಜನಗೊಳ್ಳುತ್ತಾಳೆ.[ಉತ್ಥಾನ ದ್ವಾದಶಿಯಂದು ತುಳಸಿ ಹಬ್ಬ]

ತುಳಸಿಯ ಸೇವೆಯಿಂದ ಏನು ಲಾಭ?

ತುಳಸಿಯ ಸೇವೆಯಿಂದ ಏನು ಲಾಭ?

ತುಳಸಿಯನ್ನು ಪ್ರಾತಃಕಾಲದಲ್ಲಿ ಪೂಜಿಸುವುದರಿಂದ ದುಸ್ವಪ್ನಗಳು ನಾಶವಾಗುತ್ತವೆ. ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತವಾಗುತ್ತವೆ. ಕೋಟಿ ಆಕಳು ದಾನ ಮಾಡಿದ ಫಲವಿ ಲಭ್ಯವಾಗುತ್ತದೆ, ತನುವೆಲ್ಲಾ ಪುನೀತವಾಗುತ್ತದೆ. ತುಳಸಿಗೆ ಅಭಿಮುಖವಾಗಿ ನಿಂತು ನಮಸ್ಕರಿಸುವುದರಿಂದ ರೋಗ-ರುಜಿನ ನಾಶವಾಗುತ್ತವೆ.

ರೋಗನಿರೋಧಕಿ ತುಳಸಿ ದೇವತೆ

ರೋಗನಿರೋಧಕಿ ತುಳಸಿ ದೇವತೆ

ಆಯುರ್ವೇದದಲ್ಲಿಯೂ ಪ್ರಧಾನವಾದ ಸ್ಥಾನ ತುಳಸಿಗೆ ಇದೆ. ಅಜೀರ್ಣ, ಅತಿಸಾರ, ಹೃದಯರೋಗ, ಅಪಸ್ಮಾರ, ಜ್ವರ, ಕೆಮ್ಮು, ಶೀತ, ತಲೆನೋವು, ಕಿಡ್ನಿಸ್ಟೋನ್,
ರಾಮಬಾಣವಾಗಿ ತುಳಸಿ ಕಾರ್ಯ ನಿರ್ವಹಿಸುತ್ತಾಳೆ.

ತುಳಸಿ ಹಬ್ಬದಲ್ಲಿ ನೆಲ್ಲಿಕಾಯಿ ಶ್ರೇಷ್ಠ

ತುಳಸಿ ಹಬ್ಬದಲ್ಲಿ ನೆಲ್ಲಿಕಾಯಿ ಶ್ರೇಷ್ಠ

ತುಳಸಿ ಹಬ್ಬದಲ್ಲಿ ತುಳಸಿ ಸಸ್ಯಕ್ಕೆ ನೆಲ್ಲಿಕಾಯಿ ಹಾರು, ಬತ್ತಿಹಾರ, ಹೂವಿನ ಹಾರದಿಂದ ಶೃಂಗಾರ ಮಾಡುತ್ತಾರೆ. ಜೊತೆಗೆ ತುಪ್ಪದ ದೀಪ ಕೂಡ ಹಚ್ಚಿ, ಹಲವಾರು ಹಮನತೆಗಳ ನಡುವಲ್ಲಿ ತುಳಸಿ ಹಬ್ಬದಂದು ತುಳಸಿ ಮಾತೆ ಸುಂದರವಾಗಿ ಗೋಚರಿಸುತ್ತಾಳೆ. ಬಳಿಕ ರೀತಿ ರಿವಾಜಿನ ಮೂಲಕ ಮಹಿಳೆಯರಿಂದ ಪೂಜಿತಗೊಳ್ಳುತ್ತಾಳೆ

English summary
Ocimum tenuiflorum also known as, Ocimum Sanctum, Holy basil or Tulsi is the Hindus sacrade plant. Many Hindus have tulsi plant growing in front of the home. it's a consort of the God Vishnu. Tulsi festival celebrate in Karthik Masa, Tulsi plants cures a fever, kidney stones, protect the heart, cancers, helps of quit smoking, solve skin and hair problems. etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X