ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದಿದೆ ದೀಪಾವಳಿ: ರಂಗೋಲಿಯ ಅಲಂಕಾರಕ್ಕೆ ಇಲ್ಲಿದೆ ಟಿಪ್ಸ್‌

|
Google Oneindia Kannada News

ದೀಪಾವಳಿಗಾಗಿ ನೀವು ಈಗಲೇ ತಯಾರಿಯನ್ನು ಬಹುತೇಕ ಪೂರ್ಣ ಮಾಡಿರಬಹುದು. ಈ ಸಂದರ್ಭದಲ್ಲಿ ಹಬ್ಬದ ಸಂಭ್ರಮದಲ್ಲಿ ಇರುವ ಜನರು ಮನೆಯನ್ನು ಸ್ವಚ್ಛ ಮಾಡಿ ಅಲಂಕಾರವನ್ನು ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಜನರಿಗೆ ರಂಗೋಲಿಯ ಅಲಂಕಾರವು ಮುಖ್ಯವಾಗಿದೆ. ಇದು ಹಿಂದೂ ಸಂಸ್ಕೃತಿಯ ಪ್ರತೀಕವೂ ಹೌದು.

ಈ ದೀಪಾವಳಿ ಸಂದರ್ಭದಲ್ಲಿ ಮನೆಯ ಮುಂಭಾಗದಲ್ಲಿ ರಂಗವಲ್ಲಿಗಳು ಕಂಡು ಬರುತ್ತದೆ. ಹಿಂದೂಗಳ ಮನೆಯಲ್ಲಿ ಈ ದೀಪಾವಳಿಯ ಸಂದರ್ಭದಲ್ಲಿ ರಂಗೋಲಿಯು ನಮ್ಮನ್ನು ಸ್ವಾಗತಿಸುತ್ತದೆ. ಹಣತೆ ಹಾಗೂ ಬೇರೆ ಅಲಂಕಾರಗಳ ನಡುವೆ ಈ ರಂಗವಲ್ಲಿಯೂ ಅಲಂಕಾರದ ಪ್ರಮುಖ ಭಾಗವಾಗಿದೆ. ಈ ದೀಪಾವಳಿಯ ಸಂದರ್ಭದಲ್ಲಿ ದೇವಿ ಲಕ್ಷ್ಮೀ ಮನೆಗೆ ಪ್ರವೇಶ ಮಾಡುತ್ತಾರೆ ಎಂಬ ನಂಬಿಕೆಯ ಹಿನ್ನೆಲೆ ಲಕ್ಷ್ಮೀ ದೇವಿಯನ್ನು ಸ್ವಾಗತ ಮಾಡುವ ನಿಟ್ಟಿನಲ್ಲಿ ಈ ಅಲಂಕಾರಗಳನ್ನು ಮಾಡಲಾಗುತ್ತದೆ.

ದೀಪಾವಳಿ; ಜಾನಪದ ಲೋಕದ ಮಣ್ಣಿನ ಹಣತೆಗೆ ಬಹು ಬೇಡಿಕೆದೀಪಾವಳಿ; ಜಾನಪದ ಲೋಕದ ಮಣ್ಣಿನ ಹಣತೆಗೆ ಬಹು ಬೇಡಿಕೆ

ರಂಗವಲ್ಲಿಯನ್ನು ಹಾಕಲು ನಾವು ಬಣ್ಣ, ಹೂವು, ಎಲೆ, ಅಕ್ಕಿ, ಹಿಟ್ಟು ಹಾಗೂ ಒಣ ಮರಳನ್ನು ಬಳಸಬಹುದು. ಈ ವಸ್ತುಗಳನ್ನು ಬಳಸಿಕೊಂಡು ಬೇರೆ ಬೇರೆ ರೀತಿಯ ಕ್ರಿಯಾತ್ಮಕ ರಂಗವಲ್ಲಿಯನ್ನು ನಾವು ಹಾಕಬಹುದು. ಈ ಎಲ್ಲಾ ವಸ್ತುಗಳನ್ನು ಬಳಸುವ ಸಂದರ್ಭದಲ್ಲಿ ಕ್ರಿಯಾಶೀಲತೆಯೂ ಮುಖ್ಯವಾಗಿದ್ದು, ಈ ಮೂಲಕ ನಾವು ಹಾಕುವ ರಂಗವಲ್ಲಿ ಸುಂದರವಾಗಿ ಕಾಣಲು ಸಾಧ್ಯವಾಗುತ್ತದೆ. ಈ ದೀಪಾವಳಿ ಸಂದರ್ಭದಲ್ಲಿ ರಂಗವಲ್ಲಿ ಸ್ಪರ್ಧೆ ಕೂಡಾ ನಡೆಯುತ್ತದೆ. ಹಾಗಾದರೆ ನೀವು ಯಾವೆಲ್ಲಾ ವಸ್ತುಗಳನ್ನು ಬಳಸಿಕೊಂಡು ರಂಗವಲ್ಲಿಯನ್ನು ಹಾಕಬಹುದು ಎಂದು ತಿಳಿಯಲು ಮುಂದೆ ಓದಿ...

 ಬಣ್ಣದ ಅಕ್ಕಿಯಿಂದ ರಂಗವಲ್ಲಿಯ ಚಿತ್ತಾರ

ಬಣ್ಣದ ಅಕ್ಕಿಯಿಂದ ರಂಗವಲ್ಲಿಯ ಚಿತ್ತಾರ

ನೀವು ಬೇರೆ ಬೇರೆ ಬಣ್ಣವನ್ನು ಅದ್ದಿರುವ ಅಕ್ಕಿಯನ್ನು ಗಣಪತಿಯ ರಂಗವಲ್ಲಿಯನ್ನು ಹಾಕಲು ಬಳಸಬಹುದು. ಈ ಶುಭ ಸಂದರ್ಭದಲ್ಲಿ ಶಾಂತಿ ಹಾಗೂ ಸಂಪತ್ತಿ ಪ್ರತೀಕವಾಗಿ ನೀವು ದೇವರ ರಂಗವಲ್ಲಿಯನ್ನು ಹಾಕಬಹುದು. ಈ ರಂಗವಲ್ಲಿಯಲ್ಲಿ ನೀವು ತುದಿಗಳಲ್ಲಿ ದೀಪವನ್ನು ಇಟ್ಟು ಅಲಂಕಾರ ಮಾಡಬಹುದು. ಈ ಸಂದರ್ಭದಲ್ಲಿ ನೀವು ಬಣ್ಣದ ಅಕ್ಕಿಯನ್ನು ಬಳಸುವಾಗ ಜಾಗರೂಕರಾಗಿರಬೇಕು. ಬಣ್ಣವು ಒಂದಕ್ಕೆ ಒಂದು ಹೋಲುತ್ತದೆಯೇ ಎಂದು ನೋಡಿಕೊಳ್ಳಿ.

 ಹಿಟ್ಟು ಹಾಗೂ ಬಣ್ಣವು ಆಯಿತು ರಂಗವಲ್ಲಿ

ಹಿಟ್ಟು ಹಾಗೂ ಬಣ್ಣವು ಆಯಿತು ರಂಗವಲ್ಲಿ

ಹಲವಾರು ಮಂದಿ ಹಿಟ್ಟು ಹಾಗೂ ನೈಸರ್ಗಿಕ ಬಣ್ಣವನ್ನು ಬಳಸಿಕೊಂಡು ರಂಗವಲ್ಲಿಯನ್ನು ಹಾಕುತ್ತಾರೆ. ಹಿಟ್ಟಿನಲ್ಲಿ ನೈಸರ್ಗಿಕ ವಸ್ತುಗಳನ್ನು ಮಿಶ್ರಣ ಮಾಡಿಕೊಂಡು ರಂಗವಲ್ಲಿಯನ್ನು ನಾವು ಹಾಕಬಹುದು. ನಾವು ಹಿಟ್ಟಿಗೆ ಬೇರೆ ಬೇರೆ ನೈಸರ್ಗಿಕ ಬಣ್ಣವನ್ನು ಬೆರೆಸಿಕೊಂಡು ಮನೆಯಲ್ಲಿಯೇ ಬೇರೆ ಬೇರೆ ಬಣ್ಣದ ರಂಗೋಲಿ ಹುಡಿಯನ್ನು ತಯಾರಿ ಮಾಡಬಹುದು. ಇದು ಪರಿಸರ ಸ್ನೇಹಿ ಕೂಡಾ ಆಗಿರುತ್ತದೆ.

ದೀಪಾವಳಿ 2021: ಆಚರಣೆ, ಮಹತ್ವ, ಪ್ರೀತಿ ಪಾತ್ರರಿಗೆ ಶುಭ ಸಂದೇಶಗಳುದೀಪಾವಳಿ 2021: ಆಚರಣೆ, ಮಹತ್ವ, ಪ್ರೀತಿ ಪಾತ್ರರಿಗೆ ಶುಭ ಸಂದೇಶಗಳು

 ಬಣ್ಣದ ನೀರಿನಿಂದ ರಂಗವಲ್ಲಿ ಪೇಂಟ್‌

ಬಣ್ಣದ ನೀರಿನಿಂದ ರಂಗವಲ್ಲಿ ಪೇಂಟ್‌

ನೀವು ಬಣ್ಣದ ನೀರಿನಿಂದ ರಂಗವಲ್ಲಿಯನ್ನು ಪೇಂಟ್‌ ಕೂಡಾ ಮಾಡಬಹುದು. ಇದು ನಿಮಗೆ ಬಹು ಕಾಲದವರೆಗೆ ಉಳಿಯುವಂತದ್ದು ಆಗಿದೆ. ಸಾಮಾನ್ಯವಾಗಿ ಇದು ಒಣಗಿದ ಮೇಲೆ ನೆಲದ ಒಂದು ಭಾಗವಾಗಿಯೇ ಬಿಡುತ್ತದೆ. ನೀವು ಈ ಬಣ್ಣದ ನೀರಿನಿಂದ ರಂಗವಲ್ಲಿ ಪೇಂಟ್‌ ಮಾಡಿಕೊಂಡು ಬಳಿಕ ದೀಪಗಳಿಂದ ಅಲಂಕಾರ ಮಾಡಿಕೊಳ್ಳಬಹುದು. ನಿಮಗೆ ಬೇಕಾದ ರೀತಿಯಲ್ಲಿ ದೀಪಗಳ ಅಲಂಕಾರವನ್ನು ಮಾಡಿಕೊಳ್ಳಬಹುದು. ಇನ್ನು ಕೆಲವು ಬಣ್ಣದ ರಂಗವಲ್ಲಿಗಳು ಬೇಕಾದಾಗ ಅಳಿಸಬಹುದಾದ ಮಿಶ್ರಣವಾಗಿರುತ್ತದೆ. ಇದರಿಂದಾಗಿ ನಿಮಗೆ ಬೇಕಾದಂತೆ ನೀವು ಪ್ರತಿ ದಿನ ಬದಲಾವಣೆಯನ್ನು ಮಾಡಿಕೊಳ್ಳಬಹುದು.

 ಹೂವು, ಎಲೆಗಳಿಗೆ ರಂಗವಲ್ಲಿಯ ಚಿತ್ತಾರ

ಹೂವು, ಎಲೆಗಳಿಗೆ ರಂಗವಲ್ಲಿಯ ಚಿತ್ತಾರ

ಸಾಮಾನ್ಯವಾಗಿ ಕೇರಳದಲ್ಲಿ ಓಣಂ ಸಂದರ್ಭದಲ್ಲಿ ಈ ರೀತಿಯಾಗಿ ಹೂವಿನ ರಂಗವಲ್ಲಿಯನ್ನು ಹಾಕುತ್ತಾರೆ. ಪುಕಳಂ ಎಂದೇ ಪ್ರಸಿದ್ಧವಾಗಿರುವ ಈ ರಂಗವಲ್ಲಿಯನ್ನು ನಾವು ದೀಪವಾಳಿ ಸಂದರ್ಭದಲ್ಲಿ ಹಾಕಬಹುದು. ನೀವು ಬಣ್ಣದ ಕಡ್ಡಿಯಿಂದ ರಂಗೋಲಿಯನ್ನು ಹಾಕಿಕೊಂಡು ಬಳಿಕ ಅದನ್ನು ಹೂವುಗಳಿಂದ ಅಲಂಕಾರ ಮಾಡಿಕೊಳ್ಳಬಹುದು. ಬೇರೆ ಬೇರೆ ಬಣ್ಣದ ಹೂವುಗಳನ್ನು ಬಳಸಿಕೊಂಡು ರಂಗವಲ್ಲಿಯ ಶೃಂಗಾರ ಮಾಡಬಹುದು. ಎಲೆಗಳನ್ನು ಕೂಡಾ ಬಳಸಿಕೊಳ್ಳಬಹುದು.

ದೀಪಾವಳಿ ಹಬ್ಬಕ್ಕಾಗಿ ಆನ್‌ಲೈನ್ ಶಾಪಿಂಗ್‌: ಕೇಂದ್ರದಿಂದ ಹೊಸ ಸಲಹೆ ಬಿಡುಗಡೆ!ದೀಪಾವಳಿ ಹಬ್ಬಕ್ಕಾಗಿ ಆನ್‌ಲೈನ್ ಶಾಪಿಂಗ್‌: ಕೇಂದ್ರದಿಂದ ಹೊಸ ಸಲಹೆ ಬಿಡುಗಡೆ!

 ಹಣತೆಯ ರಂಗವಲ್ಲಿ ದೀಪಗಳ ಹಬ್ಬಕ್ಕೆ ಮೆರುಗು

ಹಣತೆಯ ರಂಗವಲ್ಲಿ ದೀಪಗಳ ಹಬ್ಬಕ್ಕೆ ಮೆರುಗು

ನೀವು ಹೂವು, ಎಲೆ, ಬೇರೆ ಅಲಂಕಾರಿಕ ವಸ್ತುಗಳು, ಬಣ್ಣಗಳನ್ನು ಬಳಸಿ ರಂಗವಲ್ಲಿಯನ್ನು ಮಾಡುವುದಿಲ್ಲ ಎಂದು ಆದರೆ ಹಣತೆಯನ್ನು ಕೂಡಾ ಬಳಸಿಕೊಂಡು ರಂಗವಲ್ಲಿಯನ್ನು ಮಾಡಿಕೊಳ್ಳಬಹುದು. ಹಣತೆಯ ರಂಗವಲ್ಲಿಯು ಈ ದೀಪಗಳ ಹಬ್ಬಕ್ಕೆ ಮೆರುಗು ನೀಡಲಿದೆ. ನೀವು ನಿಮಗೆ ಬೇಕಾದ ವಿನ್ಯಾಸದಲ್ಲಿ ದೀಪಗಳನ್ನು ಇರಿಸಿಕೊಳ್ಳಬಹುದು. ಅದಕ್ಕಾಗಿ ಮೊದಲೇ ಮಾರ್ಕ್ ಮಾಡಿಕೊಂಡರೂ ಅಡ್ಡಿಯಿಲ್ಲ.

(ಒನ್‌ಇಂಡಿಯಾ ಸುದ್ದಿ)

English summary
Try These Rangoli Ideas To Brighten Up Your Home in Diwali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X