ದೀಪಾವಳಿಗೆ ಟ್ವಿಟ್ಟರ್ ನಲ್ಲಿ ಶುಭ ಕೋರಿದ ಮೋದಿ, ಕೋವಿಂದ್

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 19: ಇಡೀ ದೇಶವೂ ಬೆಳಕಿನ ಗುಂಗಿನಲ್ಲಿ ಮುಳುಗೇಳುತ್ತಿದೆ. ದೀಪಾವಳಿಯ ಹಣತೆ ಎಲ್ಲೆಲ್ಲೂ ಬೆಳಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿರುವ ಸಮಸ್ತ ಭಾರತೀಯರಿಗೂ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯ ಕೋರಿದ್ದಾರೆ.

ದೀಪಾವಳಿಯಲ್ಲಿ ಪಟಾಕಿ ಸಿಡಿಸುವವರು ಎಚ್ಚರವಾಗಿರಿ!

ಉತ್ತರ ಭಾರತದಲ್ಲಿ ಐದು ದಿನ, ದಕ್ಷಿಣ ಭಾರತದಲ್ಲಿ ಮೂರು ದಿನ ಸಂಭ್ರಮದಿಂದ ಆಚರಿಸಲ್ಪಡುವ ಬೆಳಕಿನ ಹಬ್ಬ, ಕೆಲವು ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಿದ ಕುರಿತಾಗಿ ವಿವಾದಕ್ಕೆ ಗುರಿಯಾಗಿತ್ತು. ಪರಿಸರ ಪ್ರೇಮಿಗಳು ಇದನ್ನು ಬೆಂಬಲಿಸಿದರೆ, ಕೆಲವರು ಪಟಾಕಿ ಹಚ್ಚುವುದು ನಮ್ಮ ಸಂಪ್ರದಾಯ, ನಾವದನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ದೀಪಾವಳಿ ಆಚರಣೆ ಹಿಂದಿದೆ ಪುರಾಣದ ಬೆಸುಗೆ!

ಆ ಎಲ್ಲ ಗಲಾಟೆಗಳ ನಡುವಲ್ಲೂ ಸಂಭ್ರಮ ಕಳೆದುಕೊಳ್ಳದೆ ದೀಪಾವಳಿ ಅದ್ಧೂರಿಯಾಗಿಯೇ ಆಚರಣೆಗೊಳ್ಳುತ್ತಿದೆ. ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಸೇರಿದಂತೆ ಹಲವು ಗಣ್ಯರು ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಲ್ಲದೆ, ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.

ನರೇಂದ್ರ ಮೋದಿ

ದೀಪಾವಳಿಯ ಶುಭಪರ್ವದಂದು ಸಮಸ್ತ ದೇಶವಾಸಿಗಳಿಗೂ ಹಾರ್ದಿಕ ಶುಭಾಶಯಗಳು ಎಂದು ಹಿಂದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿದ್ದಾರೆ.

ರಾಮನಾಥ್ ಕೋವಿಂದ್

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ನಮ್ಮೆಲ್ಲರ ಕುಟುಂಬದೊಂದಿಗೆ ನಾವು ಹೇಗೆ ದೀಪಾವಳಿ ಆಚರಿಸುತ್ತೇವೋ, ಹಾಗೆಯೇ ಪರಿಸರವನ್ನು ರಕ್ಷಿಸುವ ಕುರಿತೂ ಸಂವೇದನಾಶೀಲತೆ ಬೆಳೆಸಿಕೊಳ್ಳೋಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ

ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸುವ ಜೊತೆಗೆ ಸುರಕ್ಷತೆ, ಪರಿಸರ ಸ್ನೇಹಿ ಕಾಳಜಿಯಿರಲಿ. ಸಮಾನತೆ, ಸಹಿಷ್ಣುತೆ, ಜ್ಞಾನದ ಹಣತೆಗಳು ಎಲ್ಲೆಡೆ ಬೆಳಗಲಿ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ

ಪ್ರತಿಯೊಬ್ಬರಿಗೂ ದೀಪಾವಳಿಯ ಶುಭಾಶಯಗಳು. ಈ ಶುಭ ಪರ್ವ ಎಲ್ಲರಿಗೂ ಸಂತಸ ತರಲಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಜನಾಥ್ ಸಿಂಗ್

ದೀಪಾವಳಿಯ ಶುಭದಿನದಂದು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಹಾರ್ದಿಕ ಶುಭಕಾಮನೆಗಳು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಬಿ ಎಸ್ ಯಡಿಯೂರಪ್ಪ

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹರ್ಷ, ಉಲ್ಲಾಸ, ಉತ್ಸಾಹ ಮತ್ತು ಸಂತಸ ತರಲೆಂದು ಹಾರೈಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Whole country is celebrating festivals of lights with new home and joy. National leaders including prime minister Narendra Modi and President Ram Nath Kovind conveyed their wishes to every Indians throught twitter. Here are some twitter statements.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ