ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ 2021: ಆಚರಣೆ, ಮಹತ್ವ, ಪ್ರೀತಿ ಪಾತ್ರರಿಗೆ ಶುಭ ಸಂದೇಶಗಳು

|
Google Oneindia Kannada News

ಮನುಷ್ಯನನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿಗೆ ದಿನಗಣನೆ ಆರಂಭವಾಗಿದೆ.
ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವುದರಿಂದ ಆಚರಣೆಯ ಆಡಂಬರ ಸ್ವಲ್ಪ ಕಡಿಮೆ ಇರಬಹುದು ಆದರೆ ಮನಸ್ಸಿನಲ್ಲಿ ಭಕ್ತಿ ಎಂದಿನಂತೆಯೇ ಮುಂದುವರೆಯಲಿದೆ.

ಈ ಬಾರಿ ನವೆಂಬರ್ 4 ರಂದು ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ನೆಲದ ಸಿರಿಯ ಜೀವಸತ್ವ, ಸಂಪ್ರದಾಯದ ಸಾರ.ಹಿರಿಯರು, ಕಿರಿಯರು, ಮೇಲು ಕೀಳು ಹೀಗೆ ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಖುಷಿಯಾಗಿ ಆಚರಿಸುವಂತಹ ಹಬ್ಬವಿದು. ದೀಪಾವಳಿ ಎಂದರೇನೆ ಸಡಗರ, ದೀಪಾವಳಿ ಎಂದರೇನೆ ನೆನಪಿನ ಬುತ್ತಿಯ ಖುಷಿಯ ಚಿತ್ತಾರ,ದೀಪಾವಳಿ ಎಂದರೇನೆ ಭಕ್ತಿ ಭಾವದ ಸಂಭ್ರಮ.

ನರಕಚತುರ್ದಶಿಯ ಮುಂಚಿನ ದಿನ ಸಂಜೆ ಹಂಡೆಯನ್ನು ಸ್ವಚ್ಛವಾಗಿ ತೊಳೆದು ಸಿಂಗಾರ ಮಾಡಿ ನೀರು ತುಂಬಿಸಿ ಮರುದಿನ ಮುಂಜಾನೆ ಎಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವ ಮೂಲಕ ಹಬ್ಬದ ಆರಂಭವಾಗುತ್ತದೆ. ನರಕಚತುರ್ದಶಿಯಂದು ಎದ್ದು ಅಭ್ಯಂಗಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಹೀಗೆ ಲಕ್ಷ್ಮೀಪೂಜೆ, ಬಲಿಪಾಡ್ಯಮಿ ದಿನ ಬಲೀಂದ್ರನ ಆರಾಧನೆಯೊಂದಿಗೆ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡುತ್ತಿರುತ್ತದೆ.

Happy Deepavali 2021 Wishes, Images, Greetings, Quotes, Whatsapp and Facebook Status Messages in Kannada

ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ.

ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಹಬ್ಬ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೆಲವರು ಮನೆಗೆ ಹೊಸ ವಸ್ತುಗಳನ್ನು ತರುತ್ತಾರೆ.

ದೀಪಾವಳಿ ಹಬ್ಬದ ಮಹತ್ವ:

ದೀಪಾವಳಿ 'ದೀಪಾ' ಎಂದರೆ ಮಣ್ಣಿನ ದೀಪ ಹಾಗೂ 'ವಲಿ' ಎಂದು ಯಾವುದಾದರು ವಸ್ತು ಸರಣಿಯಾಗಿಯಿಡುವುದು. ದೀಪಾವಳಿಯ ಅಮವಾಸ್ಯೆಯನ್ನು ದೀವಾಳಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಆ ದಿನ ಕತ್ತಲೆಯಿಂದ ಕೂಡಿರುತ್ತದೆ. ದೀಪಾವಳಿ ಹಬ್ಬವನ್ನು ಹಿಂದೂಗಳ ಹಬ್ಬ ಮಾತ್ರ ಆಗಿರದೇ ಈ ಹಬ್ಬವನ್ನು ಜೈನ್, ಸಿಖ್‍ಗಳು ಹಾಗೂ ಬೌದ್ಧರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.

ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ.
ರಾವಣನನ್ನು ಸಂಹಾರ ಮಾಡಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಲಂಕೆಯಿಂದ ಆಯೋಧ್ಯೆಗೆ ಹಿಂದಿರುಗಿದ ದಿನ. ಅಲ್ಲದೇ ರಾಮ ಪಟ್ಟಾಭಿಷೇಕಗೊಂಡ ದಿನ. ಹಾಗಾಗಿ ಜನರು ಆ ದಿನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮನನ್ನು ಸ್ವಾಗತಿಸಿದ್ದರು. ಅಲ್ಲದೇ ಪಾಂಡವರು ಕೂಡ ಅದೇ ದಿನ ತಮ್ಮ ಅಜ್ಞಾತವಾಸವನ್ನು ಮುಗಿಸಿದ ದಿನ ಎನ್ನುವ ಕಥೆಯು ಇದೆ.

ದನ್ತೇರಸ್: ಈ ದಿನ ಜನರು ತಮ್ಮ ಮನೆಗೆ ಅಡುಗೆ ಪಾತ್ರೆಗಳು, ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ಖರೀದಿಸಲು ಹೋಗುತ್ತಾರೆ. ಅಲ್ಲದೇ ತಮ್ಮ ಮನೆ ಹಾಗೂ ಕಚೇರಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಣ್ಣಿನ ದೀಪವನ್ನು ಹಚ್ಚಿ ಅಲಂಕರಿಸುತ್ತಾರೆ.

ನರಕ ಚತುರ್ದಶಿ: ನರಕ ಚತುರ್ದಶಿಯನ್ನು ಚೋಟಾ ದೀಪಾವಳಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪನ್ನು ಈ ಹಬ್ಬ ತರುತ್ತದೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ಈ ಹಬ್ಬದಂದು ಸಿಹಿ ತಿನುಸುಗಳನ್ನು ಖರೀದಿಸಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ. ಸಿಹಿ ತಯಾರಿಸುವವರು ನರಕ ಚತುರ್ದಶಿದಂದು ಹೆಚ್ಚು ಸಮಯ ಕೆಲಸ ಮಾಡುತ್ತಾರೆ.

ದೀಪಾವಳಿ: ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ. ಲಕ್ಷ್ಮೀ ಕೇವಲ ಧನಲಕ್ಷ್ಮೀ ಮಾತ್ರವಲ್ಲ. ಸಕಲ ಶ್ರೇಯಸ್ಸುಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ. ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ.

ಗೋಪೂಜೆ: ದೀಪಾವಳಿಯ ನಾಲ್ಕನೇ ದಿನ ಗೋ ಪೂಜೆ ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ, ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುತ್ತಾರೆ. ಉತ್ತರ ಭಾರತದಲ್ಲಿ ಅಥವಾ ಕೆಲವರ ಸಂಪ್ರದಾಯದಲ್ಲಿ ಈ ದಿನದಂದು ಪತಿ ತಮ್ಮ ಪತ್ನಿಯರಿಗೆ ಉಡುಗೊರೆ ನೀಡುತ್ತಾರೆ. ಅಲ್ಲದೇ ಹೊಸದಾಗಿ ಮದುವೆಯಾದ ಜೋಡಿಯನ್ನು ಮನೆಗೆ ಔತಣಕ್ಕೆ ಕರೆದು ಉಡುಗೊರೆ ನೀಡಲಾಗುತ್ತದೆ.

ಬಾಯ್ ದೂಜ್: ಬಾಯ್ ದೂಜ್ ಅನ್ನು ಬಯ್ಯಾ ದೂಜ್ ಎಂದು ಕರೆಯುತ್ತಾರೆ. ದೀಪಾವಳಿಯ ಐದನೇ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಅಣ್ಣ-ತಂಗಿಯರ ಹಬ್ಬವಾಗಿದ್ದು, ಅಣ್ಣಂದಿರು ತಮ್ಮ ತಂಗಿಯ ಮನೆಗೆ ಊಟಕ್ಕೆ ಹೋಗುತ್ತಾರೆ. ಅಲ್ಲದೇ ತಿಲಕ ಶಾಸ್ತ್ರ ಮಾಡುತ್ತಾರೆ. ಸಹೋದರಿಯರು ತಮ್ಮ ಸಹೋದರನಿಗೆ ತಿಲಕ ಶಾಸ್ತ್ರ ಮಾಡುತ್ತಾರೆ. ಇದನ್ನು ಮತ್ತೊಂದು ರಕ್ಷಾ ಬಂಧನ ಎಂದೂ ಕರೆಯಲಾಗುತ್ತದೆ.

ದೀಪಾವಳಿಯ ಶುಭ ಸಂದೇಶಗಳು:

-ನಿಮ್ಮೆಲ್ಲಾ ಕನಸುಗಳು ಈಡೇರಲಿ, ನಿಮ್ಮ ಬದುಕಿನ ಹಾದಿಯಲ್ಲಿದ್ದ ಅಡೆತಡೆಗಳು ಬೆಳಕಿನ ಹಬ್ಬದಲ್ಲಿ ನಿವಾರಣೆಯಾಗಲಿ, ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗಲಿ. ಸರ್ವರಿಗೂ ಬೆಳಕಿನ ಹಬ್ಬದ ಶುಭಾಶಯಗಳು

-ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ., ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

-ಕರುಣಾಮಯಿ ದೇವರು ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಆರೋಗ್ಯ, ಆಯುಷ್ಯ, ಸಂತೋಷ, ಶಾಂತಿಯನ್ನು ನಿಮಗೆ ಆಶೀರ್ವದಿಸಲಿ. ಎಲ್ಲರಿಗೂ ಶುಭವ ತರಲಿ ದೀಪಾವಳಿ

-ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

-ಇದು ಬಲು ಕಷ್ಟದ ವರ್ಷ. ಆದರೆ, ಈ ಕಷ್ಟದಲ್ಲೂ ನಾವು ಸಾಕಷ್ಟು ಕಲಿತಿದ್ದೇವೆ. ಈ ದೀಪಾವಳಿ ನಿಮ್ಮ ಬದುಕಿನ ಈ ಎಲ್ಲಾ ಕಷ್ಟಗಳನ್ನು ದೂರ ಮಾಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು

-ಅಜ್ಞಾನ, ಅಂಧಕಾರ ದೂರವಾಗಲಿ, ದ್ವೇಷ, ಅಸೂಯೆ ದೂರವಾಗಲಿ, ಬಾಳಲ್ಲಿ ಸಂತಸ ಬೆಳಗಲಿ, ದೀಪಾವಳಿ ಹಬ್ಬದ ಶುಭಾಶಯಗಳು

-ನೀವು ಉರಿಸುವ ಒಂದೊಂದು ದೀಪವೂ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಸುಟ್ಟು ಹಾಕಲಿ, ಖುಷಿಯೊಂದೇ ನಿಮ್ಮ ಬದುಕಿನಲ್ಲಿ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬೆಳಕಿನ ಹಬ್ಬದ ಶುಭಾಶಯಗಳು

English summary
Deepavali 2021 is on 5th November. Here are the Happy Deepavali 2021 Wishes, Images, Greetings, Quotes, Whatsapp and Facebook Status Messages in Kannada to share with your loved ones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X