ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನದ ಬೆಳಕಿನ ಉತ್ಸವ ದೀಪಾವಳಿ ಶುಭತರಲಿ

By ಗುರುದೇವ್ ಶ್ರೀ ಶ್ರೀ ರವಿಶಂಕರ್
|
Google Oneindia Kannada News

ಬೆಳಕಿನ ಹಬ್ಬವಾದ ದೀಪಾವಳಿಯು ದುಷ್ಟತನದ ಮೇಲೆ ಒಳ್ಳೆಯದರ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುತ್ತದೆ.

ಐದು ದಿವಸಗಳ ದೀಪಾವಳಿ ಹಬ್ಬವು ಕಾರ್ತಿಕ ಮಾಸದ ಹದಿನೈದನೆಯ ದಿನದಂದು ಆರಂಭವಾಗುತ್ತದೆ. ಮೊದಲನೆಯ ದಿನ ಧನತೇರಸ್ , ಎರಡನೆಯ ಛೋಟಿ ದೀಪಾವಳಿ, ಮೂರನೆಯ ದಿನ ಮುುಖ್ಯವಾದ ದೀಪಾವಳಿ. ಮೂರನೆಯ ದಿನದಂದು ಲಕ್ಷ್ಮಿ ಪೂಜೆಯನ್ನು ಮನೆಮನೆಗಳಲ್ಲಿ ಆಚರಿಸಲಾಗುತ್ತದೆ. ಅಂದು ಅಮಾವಾಸ್ಯೆಯ ಕತ್ತಲಿನ ರಾತ್ರಿ. ಅಮಾವಾಸ್ಯೆಯ ಮಾರನೆಯ ದಿನ ಅಂದರೆ ಹಬ್ಬದ ನಾಲ್ಕನೆಯ ದಿನದಂದು ಕಾರ್ತಿಕ ಶುದ್ಧ ಬಿದಿಗೆಯನ್ನು ಆಚರಿಸುತ್ತಾರೆ. ದೀಪಾವಳಿಯ ಐದನೆಯ ದಿನವನ್ನು ಭಾರತದ ಅನೇಕ ಭಾಗಗಳಲ್ಲಿ ಭಾಯಿ ದೂಜ್ ಎಂದು ಆಚರಿಸಲಾಗುತ್ತದೆ.

ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ

ಪೂಜೆ ಮಾಡಿ, ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಬೆಳಕಿನಿಂದ ಮಾತ್ರ ಈ ಜಗತ್ತಿನ ಸೌಂದರ್ಯ ಪ್ರಕಟವಾಗುವುದು ಮತ್ತು ಆ ಸೌಂದರ್ಯವನ್ನು ಅನುಭವಿಸಲು ಆಗ ಮಾತ್ರ ನಮ್ಮಿಂದ ಸಾಧ್ಯ. ದೀಪಗಳನ್ನು ಹಚ್ಚುವುದು ಕೇವಲ ಮನೆಗಳನ್ನು ಅಂದವಾಗಿ ಮಾಡಲು ಅಲ್ಲ. ಜೀವನದ ಬಗೆಗಿನ ಗಹನವಾದ ಸತ್ಯವನ್ನು ಸೂಚಿಸಲು ದೀಪಗಳನ್ನು ಬೆಳಗಿಸುತ್ತಾರೆ. ಕತ್ತಲು ಅಜ್ಞಾನದ ಸೂಚಕ. ಬೆಳಕು ಕತ್ತಲನ್ನು ನೀಗಿಸುತ್ತದೆ. ಜ್ಞಾನದ ಬೆಳಕಿನಿಂದ ಆಂತರ್ಯದ ಕತ್ತಲನ್ನು ನೀಗಿಸಿದಾಗ, ದುಷ್ಟ ತನದ ಮೇಲೆ ಒಳ್ಳೆಯತನದ ಜಯವಾಗುತ್ತದೆ. ಬೆಳಗುತ್ತಿರುವ ದೀಪವು ಕತ್ತಲಿನ, ನಕಾರಾತ್ಮಕವಾದ ಶಕ್ತಿಗಳಾದಂತಹ ಕಾಮ, ಕ್ರೋಧ, ಲೋಭ, ಹಿಂಸೆ, ಅನ್ಯಾಯ, ದುರುಳುತನದ ನಾಶವು ಜ್ಞಾನದ ಬೆಳಕಿನಿಂದ ಆಗುತ್ತದೆಂದು ಸೂಚಿಸುತ್ತದೆ.

ಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳುಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳು

ದೀಪಾವಳಿ ಎಂದರೆ ದೀಪಗಳ ಸಾಲು. ಜೀವನದಿಂದ ದೊರೆತ ಜ್ಞಾನದ ಮೇಲೆ ಬೆಳಕನ್ನು ಚೆಲ್ಲುತ್ತವೆ. ಅಜ್ಞಾನದ ಮೇಲೆ ಬೆಳಕಿನ ಜಯವನ್ನು , ಸತ್ಯದ, ಪ್ರೇಮದ ಜಯವನ್ನು ಈ ದೀಪಗಳ ಸಾಲು ಸೂಚಿಸುತ್ತವೆ.
ನರಕಾಸುರನ ಮೇಲೆ ಸತ್ಯಭಾಮೆಯು ಸಾಧಿಸಿದ ಜಯವೂ ಸಹ ಇದನ್ನೇ ಸೂಚಿಸುತ್ತದೆ. ಇಂದಿನ ದಿನದಂದು ನರಕಾಸುರನ ಸಂಹಾರವಾಯಿತು. ಒಂದು ಹಣ್ಣಿನಿಂದ ಮಾತ್ರ ತನ್ನನ್ನು ವಧೆ ಮಾಡಲು ಸಾಧ್ಯ ಎಂಬ ವರವನ್ನು ನರಕಾಸುರನು ಪಡೆದಿದ್ದನು. ಭಗವಾನ್ ಕೃಷ್ಣನ ಪತ್ನಿಯಾದ ಸತ್ಯಭಾಮೆಯೆ ಆತನನ್ನು ವಧಿಸುವ ಹೆಣ್ಣಾದಳು.

ಸತ್ಯಭಾಮೆಗೆ ಮಾತ್ರ ನರಕಾಸುರನನ್ನು ಕೊಲ್ಲಲು ಹೇಗೆ ಸಾಧ್ಯವಾಯಿತು? ಭಾಮೆಯೆಂದರೆ ಪ್ರಿಯಳಾದವಳು. ಸತ್ಯಭಾಮೆ ಎಂದರೆ ಸತ್ಯಕ್ಕೆ ಪ್ರಿಯಳಾದವಳು. ಅಸತ್ಯದಿಂದ ಅಥವಾ ಪ್ರೇಮದ ಅಭಾವದಿಂದ ನರಕವನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಉದ್ರಿಕ್ತರಾಗಿ ನರಕವನ್ನು ಮುಗಿಸಲು ಸಾಧ್ಯವಿಲ್ಲ. ಕೇವಲ ಪ್ರೇಮ ಮತ್ತು ಶರಣಾಗತಿಯಿಂದ ಮಾತ್ರ ನರಕವನ್ನು ಅಂತ್ಯಗೊಳಿಸಲು ಸಾಧ್ಯ. ಪ್ರಶಾಂತವಾಗಿರುವುದು, ಪ್ರೇಮ ಮತ್ತು ಶರಣಾಗತಿ ಹೆಣ್ಣಿನ ಸಹಜವಾದ ಗುಣಗಳು. ತಾನು ಈ ಲೋಕವನ್ನು ಬಿಟ್ಟು ತೆರಳುವುದನ್ನು ಇಡೀ ಜಗತ್ತು ಬೆಳಕಿನಿಂದ ಉತ್ಸವವನ್ನು ಆಚರಿಸಿ, ಕತ್ತಲಿನ ಅಂತ್ಯವಾದುದಕ್ಕೆ ಸಂಭ್ರಮಿಸಬೇಕೆಂಬುದೇ ನರಕಾಸುರನ ಕೊನೆಯ ಬಯಕೆಯಾಗಿತ್ತು.

ಪಟಾಕಿ ದುಷ್ಪರಿಣಾಮಗಳೇನು? ಆರೋಗ್ಯಕ್ಕೆ ಹೇಗೆ ಮಾರಕ?ಪಟಾಕಿ ದುಷ್ಪರಿಣಾಮಗಳೇನು? ಆರೋಗ್ಯಕ್ಕೆ ಹೇಗೆ ಮಾರಕ?

ಹೀಗೆ ಜನಿಸಿದ ಪ್ರೇಮದ, ಜ್ಞಾನದ ಹಬ್ಬವೆ ದೀಪಾವಳಿ. ಅದಲ್ಲದೆ ಇಂದಿನ ದಿನದಂದು ರಾಕ್ಷಸನಾದ ರಾವಣನನ್ನು ಸಂಹರಿಸಿ ಜಯಶೀಲನಾದ ಭಗವಾನ್ ಶ್ರೀರಾಮನು ಅಯೋಧ್ಯೆಗೆ ಮರಳಿ ಬಂದ. ಯಾವುದನ್ನು ನಾಶ ಮಾಡಲು, ವಧಿಸಲು ಸಾಧ್ಯವಿಲ್ಲವೊ ಅದೇ ಅಯೋಧ್ಯೆ. ಆತ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ಆತ್ಮವು ಜೀವನವನ್ನು ಆಳಿದಾಗ ಜ್ಞಾನದ ದೀಪ ತಾನಾಗಿಯೇ ಬೆಳಗುತ್ತದೆ. ಎಲ್ಲವೂ ಜೀವಂತವಾಗುತ್ತದೆ. ಆತ್ಮವು ಎಚ್ಚೆತ್ತುಕೊಂಡಾಗ ದೀಪಾವಳಿ ಆಗುತ್ತದೆ.

ಪ್ರತಿ ಹೃದಯದೊಳಗಿರಲಿ ಜ್ಞಾನದ ಬೆಳಕು

ಪ್ರತಿ ಹೃದಯದೊಳಗಿರಲಿ ಜ್ಞಾನದ ಬೆಳಕು

ಈ ಹಬ್ಬವನ್ನು ಕುರಿತ ಅನೇಕ ಐತಿಹಾಸಿಕ ಘಟನೆಗಳಿದ್ದರೂ, ಪ್ರತಿಯೊಬ್ಬರ ಹೃದಯದೊಳಗೆ ಜ್ಞಾನದ ಬೆಳಕನ್ನು ಮತ್ತು ಎಲ್ಲರ ಮುಖಗಳ ಮೇಲೆ ಮುಗುಳು ನಗೆಯನ್ನು ಮೂಡಿಸಲು ದೀಪಾವಳಿಯನ್ನು ಆಚರಿಸಲಾಗುತ್ತದೆ. ಜೀವನಕ್ಕೆ ಅನೇಕ ಮುಖಗಳಿವೆ ಮತ್ತು ಅನೇಕ ಹಂತಗಳಿವೆ. ಅವುಗಳೆಲ್ಲದ್ದರ ಮೇಲೆ ಬೆಳಕನ್ನು ಚೆಲ್ಲಬೇಕು. ನಿಮ್ಮ ಜೀವನದ ಒಂದು ಅಂಶ ಕತ್ತಲಲ್ಲೆ ಇದ್ದುಬಿಟ್ಟರೂ ಜೀನವನದ ಪರಿಪೂರ್ಣ ಅಭಿವ್ಯಕ್ತಿ ಸಾಧ್ಯವಿಲ್ಲ. ನಿಮ್ಮ ಜೀವನದ ಪ್ರತಿಯೊಂದು ಅಂಶದ ಮೇಲೂ ಗಮನವನ್ನಿಡಬೇಕು, ಜ್ಞಾನದ ಬೆಳಕನ್ನು ತರಬೇಕು ಎಂದು ಸೂಚಿಸುವ ಸಲುವಾಗಿ ದೀಪಗಳ ಸಾಲನ್ನು ಬೆಳಗಿಸುತ್ತಾರೆ. ಎಲ್ಲೆಡೆಯೂ ಜ್ಞಾನ ಅವಶ್ಯಕ. ನಮ್ಮ ಕುಟುಂಬದ ಒಬ್ಬರು ಸದಸ್ಯರು ದುಃಖಿಗಳಾಗಿದ್ದರೂ ನಾವು ಸಂತೋಷವಾಗಿರಲು ಸಾಧ್ಯವಿಲ್ಲ. ಕುಟುಂಬದ ಪ್ರತಿಯೊಬ್ಬರಿಗೂ ಜ್ಞಾನದ ಬೆಳಕು ಬೇಕು. ಸಮಾಜದ ಪ್ರತಿಯೊಬ್ಬರಿಗೂ, ಈ ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಜ್ಞಾನದ ಬೆಳಕನ್ನು ಚೆಲ್ಲಿ.

ನಿಜವಾದ ಜ್ಞಾನದ ಉದಯವೇ ನಿತ್ಯೋತ್ಸವ

ನಿಜವಾದ ಜ್ಞಾನದ ಉದಯವೇ ನಿತ್ಯೋತ್ಸವ

ನಿಜವಾದ ಜ್ಞಾನದ ಉದಯವಾದಾಗ ನಿತ್ಯೋತ್ಸವಾಗುತ್ತದೆ. ಸಾಮಾನ್ಯವಾಗಿ ಸಂಭ್ರಮಾಚರಣೆಯ ವೇಳೆ ನಮ್ಮ ಏಕಾಗ್ರತೆಯನ್ನು, ಗಮನವನ್ನು ಕಳೆದುಕೊಳ್ಳುತ್ತೇವೆ.ಉತ್ಸವಾಚರಣೆಯ ವೇಳೆ ನಮ್ಮ ಅರಿವನ್ನು ಉಳಿಸಿಕೊಳ್ಳಬೇಕೆಂಬ ನಮ್ಮ ಋಷಿಗಳು ಪ್ರತಿಯೊಂದು ಉತ್ಸವಕ್ಕೂ ಪವಿತ್ರತೆಯನ್ನು ಮತ್ತು ಪೂಜಾವಿಧಿಗಳನ್ನು ತಂದರು. ಆದ್ದರಿಂದ ದೀಪಾವಳಿಯು ಪೂಜಾ ಸಮಯವೂ ಹೌದು. ಸನ್ಮನಿಸುವುದು ದೈವೀ ಗುಣ. ಈ ಸನ್ಮಾನದ ಪ್ರಕ್ರಿಯೆಯನ್ನೆ ಪೂಜೆಯೆಂದು ಕರೆಯುತ್ತೇವೆ.

ಪ್ರೇಮದ ಸೂಚಕ ಹೂಗಳನ್ನು ಭಗವಂತನಿಗೆ ಅರ್ಪಿಸಿ

ಪ್ರೇಮದ ಸೂಚಕ ಹೂಗಳನ್ನು ಭಗವಂತನಿಗೆ ಅರ್ಪಿಸಿ

ಪ್ರಕೃತಿ ನಮಗೀಗಾಗಲೆ ಮಾಡುತ್ತಿರುವುದನ್ನು ನಾವು ಮತ್ತೆ ಮಾಡುವುದೇ ಪೂಜೆ. ಪೂಜೆಯಲ್ಲಿ ನಾವು ಮತ್ತೆ ಭಗವಂತನಿಗೆ ಹಿಂದಿರುಗಿಸುತ್ತೇವೆ. ಪೂಜೆಯೆಂದರೆ ಎಲ್ಲವನ್ನೂ ಸನ್ಮಾನದಿಂದ ಕಂಡು, ನಮ್ಮನ್ನು ದೈವಕ್ಕೆ ಅರ್ಪಿಸುವುದು. ನಮಗೆ ಭಗವಂತ ನೀಡಿರುವ ಎಲ್ಲದ್ದಕ್ಕೂ ಕೃತಜ್ಞರಾಗುವುದೇ ಪೂಜೆ. ಪ್ರಕೃತಿ ನಿಮಗೆ ನೀಡಿರುವ ಆಶೀರ್ವಾದಕ್ಕಾಗಿ ಕೃತಜ್ಞರಾಗಿ. ಸನ್ಮಾನದಿಂದ ಭಕ್ತಿ ಉದಯಿಸುತ್ತದೆ. ಪೂಜೆಯಲ್ಲಿ ಹೂಗಳನ್ನು ಅರ್ಪಿಸುತ್ತೇವೆ. ಹೂಗಳು ಪ್ರೇಮದ ಸಂಕೇತ. ಭಗವಂತ ನಿಮಗೆ ಪ್ರೀತಿಯನ್ನು ನೀಡಲು ಅನೇಕ ರೂಪಗಳಲ್ಲಿ ಬಂದಿದ್ದಾನೆ. ನಿಮ್ಮ ತಾಯಿಯಾಗಿ, ತಂದೆಯಾಗಿ, ಮಕ್ಕಳಾಗಿ, ಪತಿಯಾಗಿ, ಪತ್ನಿಯಾಗಿ, ಸ್ನೇಹಿತರಾಗಿ ಬಂದಿದ್ದಾನೆ. ಅದೇ ದೈವವು ಗುರುವಾಗಿ ನಿಮ್ಮ ಬಳಿಗೆ ಬಂದು ನಿಮ್ಮ ಪ್ರೇಮವನ್ನು ದೈವ ಪ್ರೇಮವಾಗಿ ಉತ್ಥಾಪಿಸುತ್ತದೆ. ಪ್ರೇಮವು ನಿಮ್ಮ ನಿಜ ಸ್ವಭಾವ. ಹೀಗೆ ಎಲ್ಲಾ ಕಡೆಗಳಿಂದಲೂ ನಮ್ಮ ಬಳಿಗೆ ಬರುವ ಪ್ರೇಮದ ಸೂಚಕವಾಗಿ ಹೂಗಳನ್ನು ಭಗವಂತನಿಗೆ ಅರ್ಪಿಸುತ್ತೇವೆ.

ಎಲ್ಲವನ್ನೂ ಕೊಡುವ ಭಗವಂತ

ಎಲ್ಲವನ್ನೂ ಕೊಡುವ ಭಗವಂತ

ಕಾಲಕಾಲಕ್ಕೆ ಭಗವಂತ ಕೊಡುವ ಹಣ್ಣಿನ ಬದಲಿಗೆ ಹಣ್ಣುಗಳನ್ನು ಭಗವಂತನಿಗೆ ಅರ್ಪಿಸುತ್ತೇವೆ. ಭಗವಂತ ನಮಗೆ ಧಾನ್ಯಗಳನ್ನು ನೀಡುತ್ತಿರುವ ಕೃತಜ್ಞತೆಗಾಗಿ ಅಕ್ಷತೆಗಳನ್ನು ಅರ್ಪಿಸುತ್ತೇವೆ. ಪ್ರತಿನಿತ್ಯ ಸೂರ್ಯ ಚಂದ್ರರನ್ನು ನಮ್ಮ ಸುತ್ತಲೂ ಸುತ್ತಿಸುವ ಭಗವಂತನಿಗೆ ಕರ್ಪೂರದ ಆರತಿಯನ್ನು ಬೆಳಗಿಸುತ್ತೇವೆ. ಪರಿಮಳಕ್ಕೆ ಧೂಪವನ್ನು ಅರ್ಪಿಸುತ್ತೇವೆ. ಪೂಜೆಯಲ್ಲಿ ಎಲ್ಲಾ ಪಂಚೇಂದ್ರಿಯಗಳನ್ನೂ ಉಪಯೋಗಿಸುತ್ತೇವೆ ಮತ್ತು ಆಳವಾದ ಭಾವನೆಯಿಂದ ಪೂಜಿಸುತ್ತೇವೆ.

ಉತ್ಸವವು ಆತ್ಮದ ಸ್ವಭಾವ

ಉತ್ಸವವು ಆತ್ಮದ ಸ್ವಭಾವ

ದೀಪಾವಳಿಯ ಪಟಾಕಿಗಳು ಒಂದು ಗಹನವಾದ ಸಂಕೇತವನ್ನು ಹೊಂದಿದೆ. ನಮ್ಮಲ್ಲಿ ಅಡಗಿಕೊಂಡಿರುವ ಭಾವನೆಗಳನ್ನು ಕೋಪ ಮತ್ತು ಆಶಾಭಂಗದಿಂದ ಹೊರಹಾಕುತ್ತೇವೆ. ಪಟಾಕಿಗಳನ್ನು ಸಿಡಿಸಿದಾಗ ಅಡಗಿರುವ ಭಾವನೆಗಳು ಸ್ಫೋಟಿಸಿದಂತಾಗಿ ನಾವು ಖಾಲಿ ಮತ್ತು ಟೊಳ್ಳಾಗುತ್ತೇವೆ. ದೀಪಾವಳಿಯ ಆಧ್ಯಾತ್ಮಿಕ ಮಹತ್ವವನ್ನು ಅರಿತು ಆಚರಿಸಬೇಕು. ಆಧ್ಯಾತ್ಮಿಕತೆಯಿಲ್ಲದ ಉತ್ಸವದಲ್ಲಿ ಆಳವಿರುವುದಿಲ್ಲ. ಉತ್ಸವವು ಆತ್ಮದ ಸ್ವಭಾವ. ಆದ್ದರಿಂದ ಉತ್ಸವವನ್ನು ಆಚರಿಸಲು ಯಾವ ನೆಪವಾದರೂ ಸರಿಯೆ. ಈ ದೀಪಾವಳಿಯಂದು ನಿಮ್ಮ ಹೃದಯಗಳಲ್ಲಿ ಪ್ರೇಮದ ಜ್ಯೋತಿಯನ್ನು ಬೆಳಗಿಸಿ. ನಿಮ್ಮ ಮನೆಗಳಲ್ಲಿ ಸಮೃದ್ಧಿಯ ಬೆಳಕನ್ನು ಬೆಳಗಿಸಿ. ನಿಮ್ಮಲ್ಲಿ ಕರುಣೆಯ ದೀಪವನ್ನು ಬೆಳಗಿಸಿ ಸೇವೆಯನ್ನು ಮಾಡಿ. ಜ್ಞಾನದ ಬೆಳಕನ್ನು ಹಚ್ಚಿ ಭೂಮಿಯ ಕತ್ತಲನ್ನು ಹೋಗಲಾಡಿಸಿ. ನಮಗೆ ಭಗವಂತ ನೀಡಿರುವ ಎಲ್ಲದ್ದಕ್ಕೂ ಕೃತಜ್ಞತೆಯ ದೀಪವನ್ನು ಬೆಳಗಿ.

English summary
Charm of Festivals of Light is filling all around. Deepavali light is symbol of knowledge. And it is the symbolic success of good or truth over evil. Here is an article by chief of Art Of Living Shri Ravishankar on Deepavali
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X