ಜರಡಿ ಫ್ರೀ ತಂದು ಅತ್ತೆ ಕೈಗಿತ್ತ 'ಜಾಣ' ಸುಬ್ಬು!

Subbu's gift to mother-in-law
ಏನಾದರೇನು ಸುಬ್ಬ ಮನೆ ಮುಂದೆ ಇಳಿದಿದ್ದಾಯ್ತು... ಒಂದು ಬ್ಯಾಗ್ ಹೆಗಲಿಗೆ ನೇತುಹಾಕಿಕೊಂಡು ಇಳಿದವನ ಕಂಡು ಎಲ್ಲರೂ ಅಂದುಕೊಂಡಿದ್ದು ಕೆಲವೇ ದಿನಗಳ ಅತಿಥಿ ಇರಬೇಕು ಅಂತ. ಒಳ ನೆಡೆದ ಮೇಲೆ, ತನ್ನ ಬ್ಯಾಗಿನಿಂದ ಒಂದು ಜರಡಿಯನ್ನು ತೆಗೆದು ತನ್ನತ್ತೆಗೆ ಕೊಟ್ಟ. ಅರ್ಥವೇ ಆಗದ ಕೆಲಸ ಮಾಡುವುದರಲ್ಲಿ ಸುಬ್ಬ ನಿಸ್ಸೀಮ ಅಂತ ಎಲ್ಲರಿಗೂ ಗೊತ್ತು. ಈ ವಿಷಯ ಎನು ಅಂತ ಅವನೇ ಬಾಯಿಬಿಡಲಿ ಅಂತ ಕಾದರು.

"ನಮ್ಮೂರಿನ ದಿನಸಿ ಅಂಗಡಿಯಲ್ಲಿ ಕರ್ವಾ ಚೌಥ್ ಹಬ್ಬಕ್ಕೆ ಸಾಮಾನು ಕೊಂಡರೆ ಜರಡಿ ಫ್ರೀ ಅಂತ ಒಳ್ಳೇ ಆಫರ್ ಇತ್ತು. ಆ ಜರಡಿ ಇದು" ಅಂತ ಹಲ್ಲು ಕಿರಿದ ಸುಬ್ಬ. ಧನ್ಯನಾದೆ ಅಂದುಕೊಂಡು ಒಳ ನೆಡೆದರು ಆ ಅತ್ತೆ. "ಕಾಫಿ ಕೊಡಲೇ?" ಅಂದಳು ರಾಧ. ಸುಬ್ಬ ನುಡಿದ "ಇಲ್ಲ ಬೇಡ, ಹಣ್ಣಿನ ರಸ ಇದ್ರೆ ಒಳ್ಳೇದು" ಅಂದ! ಯಾವಾಗಲೂ ಸ್ಟ್ರಾಂಗ್ ಕಾಫಿ ಹೀರುತ್ತಿದ್ದವನದು, ಇದೇನು ಹೊಸ ಅವತಾರ ಎಂದು ಎಲ್ಲರೂ ಮುಖ ಮುಖ ನೋಡಿಕೊಂಡರು.

ರಾಮು ಹೊರ ನೆಡೆದು ಒಂದು ಆರೆಂಜ್ ಜ್ಯೂಸ್ ಕ್ಯಾನ್ ತಂದ. ಸುಬ್ಬು ಅದರ ಮೇಲೆ ಬರೆದಿದ್ದ Nutrition facts ನೋಡಿ, "ಓಹ್ ಸಕ್ಕರೆ ಇಪ್ಪತ್ತೇಳು ಗ್ರಾಂ ಇದೆ. ಒಂದು ಕೆಲಸ ಮಾಡು, ಜ್ಯೂಸ್ ಅನ್ನು ಒಂದು ಲೋಟದಲ್ಲಿ ಹಾಕಿ ಕೊಡು, ಲೋಟಕ್ಕೆ ಗೊತ್ತಾಗೋಲ್ಲ." ಭಾವನ ವಿದ್ವತ್ತಿಗೆ ತಲೆದೂಗಿ ಸುಮ್ಮನೆ ಒಳ ನೆಡೆದು ಲೋಟ ತಂದು ಕೈಯಲ್ಲಿಟ್ಟ!

ಕಾಲ ನಿಲ್ಲುತ್ತದೆಯೇ? ಹಬ್ಬದ ದಿನ ಬಂದೇ ಬಿಡ್ತು. ಈ ಬಾರಿ ಏನು ಆವಾಂತರ ಆಗುತ್ತೋ ಎಂಬುದೇ ಎಲ್ಲರಿಗೂ ಯೋಚನೆ. ಹೌದು, ಸರಿಯಾಗಿ ಊಹಿಸಿದಿರಿ. ಮೊದಲ ವರ್ಷ ಆವಾಂತರ ಆಗಿತ್ತು. ಅಲ್ಲಾ, ಸುಬ್ಬ ಇದ್ದೆಡೆ ಆವಾಂತರ ಅಲ್ಲದೇ ಅವತಾರ ಆಗುತ್ಯೇ? ಇಷ್ಟಕ್ಕೂ ಏನಾಯ್ತು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+