ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯು ಎಲ್ಲವನ್ನೂ ನಡೆಸುವ ಶಕ್ತಿಯ ಆಹ್ವಾನ

|
Google Oneindia Kannada News

ನಾವೆಲ್ಲರೂ ದೇವಿ ಎಂಬ ಅಗೋಚರವಾದ, ವೈಶ್ವಿಕವಾದ ಮತ್ತು ಪ್ರಕಾಶಮಾನವೂ ಆಗಿರುವ ಶಕ್ತಿಯ ಸಾಗರದಲ್ಲಿ ತೇಲುತ್ತಿದ್ದೇವೆ. ಜಗನ್ಮಾತೆ ಅಥವಾ ದೇವಿಯು ಇಡೀ ಸೃಷ್ಟಿಯ ಗರ್ಭ. ಎಲ್ಲಾ ಕ್ರಿಯಾಶೀಲತೆಯ, ಹೊಳಪಿನ, ಸೌಂದರ್ಯದ, ಸಮಚಿತ್ತತೆಯ, ಶಾಂತಿಯ, ಪೋಷಣೆಯ ಬೀಜ ಅವಳು.

ವೈಭವದ ದಸರಾ ವಿಶೇಷ ಪುಟ

ಅವಳೇ ಪ್ರಾಣಶಕ್ತಿ. ದುರ್ಗಾದೇವಿಯನ್ನು ಎಲ್ಲಾ ದುಷ್ಟತೆಯನ್ನೂ ನಿವಾರಿಸುವ ಸಾಕಾರ ಎಂದು ಪೂಜಿಸಲಾಗುತ್ತದೆ. ದುರ್ಗ ಎಂದರೆ ಬೆಟ್ಟ ಎಂಬ ಅರ್ಥವನ್ನೂ ಹೊಂದಿದೆ. ಬಹಳ ಕಷ್ಟಕರವಾದ ಕೆಲಸವನ್ನು ಗುಡ್ಡವೇರಿದಂತೆ ಎಂದು ಬಣ್ಣಿಸುತ್ತಾರೆ. ದುರ್ಗಾಶಕ್ತಿಯ ಸಾನ್ನಿಧ್ಯದಲ್ಲಿ ನಕಾರಾತ್ಮಕ ಶಕ್ತಿಗಳೆಲ್ಲವೂ ಮಾಸಿ ಹೋಗುತ್ತವೆ.

In Pics : ಖಾಸಗಿ ದರ್ಬಾರ್ ನಲ್ಲಿ ಯದುವೀರರಿಗೆ ತ್ರಿಷಿಕಾರಿಂದ ಪೂಜೆ

ದುರ್ಗೆಯು ಜಯವನ್ನು ತರುವುದರಿಂದ ಅವಳನ್ನು ಜಯದುರ್ಗ ಎಂದೂ ಕರೆಯುತ್ತಾರೆ. ಅವಳು ದುರ್ಗ ಪರಿಹಾರಿಣಿ ವಿಘ್ನಗಳನ್ನು ಪರಿಹರಿಸುವವಳೂ ಹೌದು. ಅವಳು ನಕಾರಾತ್ಮಕತೆಯನ್ನು ಸಕಾರಾತ್ಮಕವಾಗಿ ಪರಿವರ್ತಿಸುತ್ತಾಳೆ. ಅವಳ ಬಳಿಗೆ ಕಷ್ಟಗಳು ಬರಲು ಸಾಧ್ಯವೇ ಇಲ್ಲ.

Navaratri special article by Sri Sri Ravi Shankar sister Bhanumati Narasimhan

ಜಗನ್ಮಾತೆಯನ್ನು ದುರ್ಗೆಯಾಗಿ ಪ್ರಾರ್ಥಿಸಿದಾಗ ಧೈರ್ಯವಂತರಾಗುತ್ತೀರಿ, ಜಯಶಾಲಿಗಳಾಗುತ್ತೀರಿ ಮತ್ತು ಕರುಣಾಮಯಿಗಳಾಗುತ್ತೀರಿ. ದೈವವನ್ನು ತಾಯಿಯೊಡನೆ ಸಂಬಂಧಪಡಿಸುವುದರ ಸೌಂದರ್ಯವಿದು. ಅವಳು ಎಲ್ಲಾ ಸದ್ಗುಣಗಳನ್ನೂ ಪೋಷಿಸುವವಳು. ಸೌಭಾಗ್ಯವನ್ನು ಶೇಖರಿಸಿಕೊಂಡಂತೆಯೆ ಇದು.

ಉದಾಹರಣೆಗೆ, ತಾಯಿಯೊಡನಿದ್ದಾಗ ನಮಗೆ ಬೇಕಾದುದೆಲ್ಲವನ್ನೂ ಕೊಡುತ್ತಾಳೆ. ನಾವು ಪುಣ್ಯವಂತರಾಗುತ್ತೇವೆ ಮತ್ತು ಸೌಭಾಗ್ಯವನ್ನು ಪ್ರಕಟಿಸಲು ಸಮರ್ಥರಾಗುತ್ತೇವೆ, ಅದನ್ನು ಹಿಡಿದಿಟ್ಟುಕೊಂಡು ಸಂರಕ್ಷಿಸುವ ಸಾಮರ್ಥ್ಯವನ್ನು ಹೊಂದುತ್ತೇವೆ. ಅನೇಕ ಸಲ ಜೀವನವು ನಿಮಗೆ ಶೌರ್ಯವನ್ನು, ಸಮೃದ್ಧಿಯನ್ನು ಮತ್ತು ಹೇರಳತೆಯನ್ನು ಸುರಿಸುತ್ತದೆಯಾದರೂ ಅದನ್ನು ಹಿಡಿದಿಟ್ಟುಕೊಳ್ಳುವ ಮತ್ತು ಈ ಶಕ್ತಿಯನ್ನು ಸಂತೋಷಕ್ಕೆ ಮತ್ತು ಕರುಣೆಗೆ ಮಾರ್ಪಡಿಸುವ ಸಾಮರ್ಥ್ಯವಿರುವುದಿಲ್ಲ.

ಮೈಸೂರು ದಸರಾ: ಯದುವೀರ್ ಖಾಸಗಿ ದರ್ಬಾರ್ ವಿಶೇಷ ಕ್ಷಣಗಳುಮೈಸೂರು ದಸರಾ: ಯದುವೀರ್ ಖಾಸಗಿ ದರ್ಬಾರ್ ವಿಶೇಷ ಕ್ಷಣಗಳು

ದುರ್ಗೆಯ ಈ ಗುಣಗಳು ನಮ್ಮಲ್ಲಿ ಉಂಟಾಗಲಿ, ಒಂದಾಗಿ ಸಾಮರಸ್ಯದಿಂದಿರಲಿ, ಅನೇಕ ಪಟ್ಟು ಹೆಚ್ಚಾಗಲಿ ಮತ್ತು ನಮ್ಮ ಜೀವನದ ಭಾಗವೇ ಆಗಿಬಿಡಲಿ ಎಂದು ಪ್ರಾರ್ಥಿಸುವ ಸಮಯ ನವರಾತ್ರಿ.

ನಾವು ಸದಾ ಜಯಶೀಲರಾಗಿದ್ದೂ ಸಂತೋಷವಾಗಿ ಇರದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ದುರ್ಗಶಕ್ತಿ ನಿಮಗೆ ಇವನ್ನು ಒಟ್ಟಾಗಿ ಕೊಡುತ್ತದೆ. ಎಲ್ಲಾ ಗುಣಗಳೂ ಒಂದಾಗಿ ನಿಮಗೆ ಲಭ್ಯವಾಗುತ್ತವೆ. ನಮ್ಮ ಚೇತನದಲ್ಲಿ ಈ ಗುಣಗಳು ಸ್ಥಾಪಿತವಾಗಲಿ, ದೈಹಿಕ ಒಳಿತನ್ನು ನೀಡಲಿ, ಭೌತಿಕ ತೃಪ್ತಿಯನ್ನು ನೀಡಲಿ, ಆಧ್ಯಾತ್ಮಿಕವಾಗಿ ಉತ್ಥಾಪನೆಯಾಗಲಿ ಎಂದು ದುರ್ಗೆಯನ್ನು ಪ್ರಾರ್ಥಿಸುತ್ತೇವೆ.

ಮಹಾರಾಜರ ಖಾಸಗಿ ದರ್ಬಾರಿನಲ್ಲಿ ಏನು ನಡೆಯುತ್ತೆ?ಮಹಾರಾಜರ ಖಾಸಗಿ ದರ್ಬಾರಿನಲ್ಲಿ ಏನು ನಡೆಯುತ್ತೆ?

ದುರ್ಗೆಯು ಕೆಂಪು ಬಣ್ಣದೊಡನೆ ಸಂಬಂಧಪಟ್ಟಿದ್ದಾಳೆ. ಅವಳು ಕೆಂಪು ಸೀರೆಯನ್ನು ಧರಿಸಿರುವಂತೆ ಚಿತ್ರಿಸಲಾಗಿದ್ದಾಳೆ. ಕೆಂಪು ಕ್ರಿಯಾಶೀಲತೆಯ ಬಣ್ಣ, ಹೊಳೆಯುವ ಧೋರಣೆ, ನಡೆಸುವ ಶಕ್ತಿ. ನಿಮಗೆ ತರಬೇತಿ ನೀಡಿರಬಹುದು, ನೀವು ಕುಶಲರಾಗಿರಬಹುದು, ಆದರೆ ವಿಷಯಗಳನ್ನು ಒಂದಾಗಿ ನಡೆಸಲು ಸಾಧ್ಯವಾಗದಿದ್ದರೆ, ಜನರನ್ನು ನಡೆಸಲು ಸಾಧ್ಯವಾಗದಿದ್ದರೆ, ನಿಮ್ಮ ಪ್ರಯತ್ನವನ್ನು ಸಮಗ್ರವಾಗಿ ಮಾಡಲಾಗದಿದ್ದರೆ ಫಲವು ವಿಳಂಬವಾಗಿ ದೊರಕುತ್ತದೆ. ಆದರೆ ದುರ್ಗೆಯನ್ನು ಪ್ರಾರ್ಥಿಸಿದಾಗ ಅವಳು ಇದನ್ನು ಸಾಧ್ಯವಾಗಿಸುತ್ತಾಳೆ. ತಕ್ಷಣವೆ ಫಲ ದೊರಕುತ್ತದೆ.

ಪ್ರಾರ್ಥನೆಯು ಸದಾ ಬಯಕೆಯ ಪೂರ್ಣತೆಯೊಂದಿಗೆ ಸಂಬಂಧಪಟ್ಟಿರುತ್ತದೆ. ನೀವು ಪರಿಪೂರ್ಣರಾದಾಗ, ಅದೊಂದು ಸರಪಳಿಯ ಪ್ರತಿಕ್ರಿಯೆಯಾಗುತ್ತದೆ. ಒಂದರಲ್ಲಿ ನೀವು ಯಶಸ್ವಿಗಳಾದರೆ, ಮತ್ತೊಂದನ್ನು ಪ್ರಯತ್ನಿಸಲು ಬಯಸುತ್ತೀರಿ ಮತ್ತು ಇನ್ನಷ್ಟಕ್ಕಾಗಿ, ಮತ್ತಷ್ಟಕ್ಕಾಗಿ ಮತ್ತೆ ಪ್ರಯತ್ನಿಸಲು ಬಯಸುತ್ತೀರಿ. ಇದರಿಂದ ನೀವು ತೃಪ್ತಿ ಪಡೆಯುತ್ತೀರೆಂದಲ್ಲ. ಚೈತನ್ಯದ ಸ್ವಭಾವ ಕ್ರಿಯಾಶೀಲತೆ, ಕಾರ್ಯ ಪ್ರವೃತ್ತವಾಗುವುದು. ಕ್ರಿಯಾಶೀಲತೆಗಾಗಿ ಪ್ರಾರ್ಥಿಸಿ, ಆದರೆ ಸ್ತಬ್ಧತೆಯನ್ನೂ ಅನುಭವಿಸಿ.

ಜಗನ್ಮಾತೆಯು ಪ್ರಕೃತಿ ಅಥವಾ ಇಡೀ ಸೃಷ್ಟಿ. ಈ ಸೃಷ್ಟಿಯಲ್ಲಿರುವ ಎಲ್ಲವೂ ಮೂರು ಗುಣಗಳಿಂದ ಮಾಡಲ್ಪಟ್ಟಿವೆ :- ಸತ್ವ, ರಜಸ್ಸು ಮತ್ತು ತಮಸ್ಸು. ಸತ್ವವು ಪ್ರಶಾಂತತೆಯೊಡನೆ, ಮನಸ್ಸಿನ ಸ್ಪಷ್ಟತೆಯೊಡನೆ, ಉತ್ಸಾಹ ಮತ್ತು ಶಾಂತಿಯೊಡನೆ ಸಂಬಂಧಪಟ್ಟಿದೆ. ರಜಸ್ಸು ಕಾರ್ಯ ಮಾಡಲು ಅವಶ್ಯಕವಾದರೂ ಸಾಮಾನ್ಯವಾಗಿ ಜ್ವರತೆಯನ್ನೂ ಉಂಟು ಮಾಡುತ್ತದೆ. ತಮಸ್ಸು ಎಂದರೆ ಜಡತೆ ಮತ್ತು ತಮಸ್ಸಿನ ಅಸಮತೋಲನದಿಂದ ಸೋಂಭೇರಿತನ, ಮಂಕುತನ ಮತ್ತು ಖಿನ್ನತೆಗೂ ಕಾರಣವಾಗುತ್ತದೆ.

ತಮಸ್ಸನ್ನು ಸರಿಯಾಗಿ ನಿಭಾಯಿಸಿದರೆ ನೀವು ಸತ್ವದೊಳಗೆ ತೆರಳುತ್ತೀರಿ. ಈ ಸೃಷ್ಟಿಯಲ್ಲಿ ಎಲ್ಲವೂ ಗುಣಗಳ ಆಟದಲ್ಲಿ ಸಿಲುಕಿಕೊಂಡಿವೆ. ಈ ಚಕ್ರದಿಂದ ಒಬ್ಬರು ಹೇಗೆ ಹೊರಬರುವುದು, ಈ ಗಡಿಗಳನ್ನು ಹೇಗೆ ಮೆಟ್ಟಿ ನಿಲ್ಲುವುದು?

ಇದಕ್ಕಾಗಿ ನಿಮ್ಮ ಸತ್ವವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಸರಿಯಾದ ಧ್ಯಾನದಿಂದ, ಮೌನ ಮತ್ತು ಆಹಾರದ ನಿಯಂತ್ರಣದಿಂದ ಈ ಚಕ್ರದಿಂದ ಹೊರಬರಬೇಕು. ಗುಣಗಳನ್ನು ದಾಟಿದಾಗ ಶಿವತತ್ವದಲ್ಲಿ ಸ್ಥಾಪಿತರಾಗುತ್ತೇವೆ, ಶುದ್ಧವಾದ, ಅನಂತ ಚೇತನದಲ್ಲಿ ಸ್ಥಾಪಿತರಾಗುತ್ತೇವೆ.

ಪ್ರಕೃತಿಯು ಪೂರ್ಣವಾಗಿ ವೈರುಧ್ಯಗಳಿಂದ ತುಂಬಿದೆ - ಹಗಲು ಮತ್ತು ಇರುಳು, ಬಿಸಿ ಮತ್ತು ಚಳಿ, ನೋವು ಮತ್ತು ನಲಿವು, ಸುಖ ಮತ್ತು ದುಃಖ. ವಿರುದ್ಧವಾದವುಗಳಿಂದ ಮೇಲೆದ್ದು, ದ್ವೈತವನ್ನು ದಾಟಿದಾಗ ಮತ್ತೊಮ್ಮೆ ಶಿವತತ್ವವನ್ನು ಪಡೆಯುತ್ತೇವೆ.

ನವರಾತ್ರಿಯ ಎಲ್ಲಾ ಪೂಜೆಗಳ ಉದ್ದೇಶವೇ ಇದು. ಅಪ್ರಕಟಿತವಾದ ಮತ್ತು ಅಗೋಚರವಾದ ಶಕ್ತಿಯನ್ನು, ದುರ್ಗಶಕ್ತಿಯನ್ನು ಪ್ರಕಟಿಸುವುದು. ಈ ದುರ್ಗಶಕ್ತಿಯ ಕೃಪೆಯಿಂದ ಗುಣಗಳನ್ನು ದಾಟಿ ಪರಮವಾದುದನ್ನು, ಅವಿಭಾಜ್ಯವಾದುದನ್ನು, ಶುದ್ಧವಾದುದನ್ನು, ಅನಂತವಾದ ಚೇತನವನ್ನು ಪಡೆಯಬಹುದು. ಗುರುತತ್ವದಲ್ಲಿ ನಿಮಗ್ನವಾದಾಗ ಮಾತ್ರ, ಗುರುಗಳ ಸಾನ್ನಿಧ್ಯದಿಂದಾಗಿ ಮಾತ್ರ ಇದು ಸಾಧ್ಯವಾಗುತ್ತದೆ.

(ಲೇಖಕಿ ಶ್ರೀ ಶ್ರೀ ರವಿಶಂಕರರ ಸಹೋದರಿ, ಧ್ಯಾನದ ಶಿಕ್ಷಕಿ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ನಿರ್ದೇಶಕರು)

English summary
Sri Sri Ravi Shankar sister Bhanumati Narasimhan writes an article about the importance and significance of Navaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X