ಮೈಸೂರು ಯುವ ದಸರಾ: ಸ್ಯಾಂಡಲ್ ವುಡ್ ನೈಟ್ಸ್ ಮೂಲಕ ತೆರೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 3: ಅ.3: ಸಂಜೆ 5.30ರಿಂದ 6ಗಂಟೆವರೆಗೆ ಉದ್ಘಾಟನಾ ಕಾರ್ಯಕ್ರಮ. 7.10 ರಿಂದ 8ರವರೆಗೆ ಅಖಿಲ ಕರ್ನಾಟಕ ಮಹಿಳಾ ಆಸರೆ ಬಳಗ ಕಲಾವಿದರಿಂದ ನೃತ್ಯ, ಲೇಸರ್ ಡ್ಯಾನ್ಸ್ ಶೋ, 8ರಿಂದ 10ರವರೆಗೆ ಬೆನ್ನಿ ದಯಾಳ್ ತಂಡದಿಂದ ಸಂಗೀತ ಕಾರ್ಯಕ್ರಮ. ಈಗಾಗಲೇ ನಡೆದ ಯುವ ಸಂಭ್ರಮದಲ್ಲಿ ಆಯ್ಕೆಯಾದ ಆರು ಕಾಲೇಜು ತಂಡಗಳ ಪ್ರದರ್ಶನ ನಿತ್ಯ 6 ರಿಂದ 7.20ರವರೆಗೆ ನಡೆಯಲಿದೆ.

ಅ.4: ರಾತ್ರಿ 7.20 ರಿಂದ 7.40 ರವರೆಗೆ ಮೈಸೂರಿನ ರಾಘವ ಡ್ಯಾನ್ಸ್ ಅಕಾಡೆಮಿ ಕಲಾವಿದರಿಂದ ನೃತ್ಯ. 7.40ರಿಂದ 8ರವರೆಗೆ ಹಾಸನ ಭಾರತೀಯ ಸಂಗೀತ ನೃತ್ಯ ಶಾಲಾ ವಿದ್ಯಾರ್ಥಿಗಳಿಂದ 'ಕರ್ನಾಟಕ ವೈಭವ' ನೃತ್ಯ. 8 ರಿಂದ 10 ಗಾಯಕ ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ.[ಮೈಸೂರಿನ ಯುವ ದಸರಾದಲ್ಲಿ ನಟ ಶಿವ ರಾಜಕುಮಾರ್]

Mysuru yuva dasara will end with sandalwood nights

ಅ.5: ರಾತ್ರಿ 7.20 ರಿಂದ 7.40ರವರೆಗೆ ಮೈಸೂರಿನ ಹೈಕ್ಳು ಬ್ರಾಂಡ್ ನೃತ್ಯ ಕಲಾತಂಡದಿಂದ ಫ್ಯೂಷನ್ ನೃತ್ಯ, 8 ರಿಂದ 10ರವರೆಗೆ ಗಾಯಕ ಶಾಲ್ ಮಲಿಕೋಲ್‍ಗಡೆ ತಂಡದಿಂದ ಸಂಗೀತ ಕಾರ್ಯಕ್ರಮ.

ಅ.6: ರಾತ್ರಿ 7ರಿಂದ 7.30ರವರೆಗೆ ಫ್ಯಾಷನ್ ಶೋ, 7.30 ರಿಂದ 8ರವರೆಗೆ ಸ್ಕ್ರಾಟ್ ಬ್ಯಾಂಡ್ ಶೋ, 8 ರಿಂದ 10 ಟಿಪ್ಪು ತಂಡದಿಂದ ಸಂಗೀತ ಕಾರ್ಯಕ್ರಮ.[ಗಾಂಧೀಜಿಗೂ ಪ್ರಿಯವಾಗಿತ್ತಂತೆ ಮೈಸೂರು!]

ಅ.7: ರಾತ್ರಿ 7ರಿಂದ 7.15ರವರೆಗೆ ಮೈಸೂರಿನ ಕಂಸಾಳೆ, 7.15ರಿಂದ 7.30ರವರೆಗೆ ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ಯೋಗ ನೃತ್ಯ ರೂಪಕ, 7.30 ರಿಂದ 8ರವರೆಗೆ ಆಪ್ತಮಿತ್ರ ಖ್ಯಾತಿಯ ನಟ ಶ್ರೀಧರ್ ಜೈನ್ ತಂಡದಿಂದ ಫ್ಯೂಷನ್ ನೃತ್ಯ, 8ರಿಂದ 10ರವರೆಗೆ ಜಾವೇದ್ ಅಲಿ ಹಾಗೂ ತಂಡದಿಂದ ಸಂಗೀತ ಸಂಜೆ.

Mysuru yuva dasara will end with sandalwood nights

ಅ.8: ರಾತ್ರಿ 7ರಿಂದ 7.30ರವರೆಗೆ ಮೈಸೂರು ವಿವಿ ಲಲಿತಾ ಕಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. 7.30ರಿಂದ 10ರವರೆಗೆ ಕೋಕ್ ಸ್ಟುಡಿಯೋ ಸಂಗೀತ ಸಂಜೆ.[ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]

ಅ.9: ಸಂಜೆ 6 ರಿಂದ 7ರವರೆಗೆ ಬೆಂಗಳೂರಿನ ಕಲಾಸತ್ಪಥ ತಂಡದಿಂದ ನೃತ್ಯ ರೂಪಕ. ಕೊಳ್ಳೇಗಾಲ ರವಿಕುಮಾರನ್ ತಂಡದಿಂದ ಸ್ವರ ಸಂಗಮ, 7 ರಿಂದ 8ರವರೆಗೆ ಬೆಳದಿಂಗಳಲ್ಲಿ ಬೆಳ್ಳಿ ತಾರೆಯರು, 8ರಿಂದ 10ರವರೆಗೆ ಕನ್ನಡ ಚಲನಚಿತ್ರ ನಟ ನಟಿಯರ ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮದೊಂದಿಗೆ ಯುವ ದಸರಾಗೆ ತೆರೆ ಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru yuva dasara will end with Kannada movie stars 'sandalwood star nights' on 10th of October. Cultural activities scheduled till October 9th. Actor Shivaraj kumar will pariticipate in yuva dasara.
Please Wait while comments are loading...