ಫಲಪುಷ್ಪ ಪ್ರದರ್ಶನದಲ್ಲಿ ತೆರೆದಿದೆ ಇಂಡಿಯನ್ ಗೇಟ್ ವೇ..

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್. 04: ಐತಿಹಾಸಿಕ ಮೈಸೂರು ದಸರಾದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ನೋಡುಗರ ಮನಸೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ವಿಭಿನ್ನ ಮತ್ತು ವಿಶಿಷ್ಟವಾಗಿ ಗಮನಸೆಳೆಯುವುದರಿಂದ ಹೆಚ್ಚಿನ ಜನ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಕುಪ್ಪಣ್ಣ ಪಾರ್ಕ್‍ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುಷ್ಪಲೋಕವನ್ನೇ ತೆರೆದಿಡಲಾಗಿದೆ. ಒಳಗೆ ಹೆಜ್ಜೆ ಹಾಕುತ್ತಾ ಹೋದರೆ ನಾವು ನೋಡದ ಅದೆಷ್ಟೋ ಪುಷ್ಟಗಳು ನಮ್ಮನ್ನು ಆಕರ್ಷಿಸುತ್ತದೆ. ಕುಂಡಗಳಲ್ಲಿ ಜೋಡಿಸಲಾಗಿರುವ ವಿವಿಧ ಬಗೆಯ ಹೂಗಿಡಗಳು, ಎಲೆಗಿಡಗಳು ಸೇರಿದಂತೆ ಅಲಂಕಾರಿಕ ಪುಷ್ಪಗಿಡಗಳು ಮನಕ್ಕೆ ಮುದ ನೀಡುತ್ತಿವೆ.

ಬಣ್ಣ ಬಣ್ಣದ ಸೇವಂತಿಗೆ, ಚೆಂಡುಹೂ ಅರಳಿ ಕಂಗೊಳಿಸುತ್ತಿವೆ. ಸ್ಟ್ಯಾಂಡ್‍ನಲ್ಲಿ ಗಾಳಿಗೆ ತೂಗಾಡುವ ಹೂಬಳ್ಳಿಗಳು ಗಮನಸೆಳೆಯುತ್ತವೆ. ಕುಂಡಗಳನ್ನು ಜೋಡಿಸಿ ನಿರ್ಮಿಸಲಾಗಿರುವ ವೃತ್ತಾಕಾರದ ಹೂಗಿಡಗಳ ಸುಂದರ ಮಂಟಪ ತನ್ನತ್ತ ಸೆಳೆಯುತ್ತದೆ.

ಇನ್ನು ಪುಷ್ಟಗಳಲ್ಲೇ ನಿರ್ಮಿಸಲಾದ ಗೇಟ್‍ವೇ ಆಫ್ ಇಂಡಿಯಾ, ತೇಜಸ್ ಯುದ್ಧ ವಿಮಾನ, ಕಾರುಗಳ ಪಳೆಯುಳಿಕೆ ಎನ್ನುವಂತಿರುವ ವಿಂಟೇಜ್ ಕಾರು, ವಿವಿಧ ತರಕಾರಿಗಳಲ್ಲಿ ಕೆತ್ತಲಾದ ಸುಂದರ ಕೆತ್ತನೆಗಳು ಫಲಪುಷ್ಪ ಪ್ರದರ್ಶನಕ್ಕೆ ಮೆರುಗು ನೀಡುತ್ತಿವೆ.

ಶಾವಿಗೆಯಲ್ಲಿ ಅರಳಿದ ದಿ. ದೇವರಾಜ ಅರಸು

ಶಾವಿಗೆಯಲ್ಲಿ ಅರಳಿದ ದಿ. ದೇವರಾಜ ಅರಸು

ಹಲವು ಬಗೆಯ ಹೂಗಳನ್ನು ಬಳಸಿ ನಿರ್ಮಿಸಿ ಪ್ರಾಣಿ-ಪಕ್ಷಿಗಳನ್ನು ಸೃಷ್ಟಿಸಲಾಗಿದೆ, ಶಾವಿಗೆಯಲ್ಲಿ ನಿರ್ಮಾಣಗೊಂಡ ಸಾಮಾಜಿಕ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು, ತೋಟಗಾರಿಕೆ ತಜ್ಞನಾಗಿದ್ದ ದಿ. ಮರಿಗೌಡರ ಕಲಾ ಕೃತಿಗಳು ನಮಗೆ ಸಂದೇಶ ಸಾರಲು ನಿಂತಿರುವಂತೆ ಭಾಸವಾಗುತ್ತದೆ.

ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳು

ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳು

ಹಲಸಿನ ಹಣ್ಣು, ಸಿಹಿಗುಂಬಳ, ಬೂದುಗುಂಬಳಕಾಯಿ, ಪರಂಗಿ, ಸೊರೆಕಾಯಿಂದ ಮೊಸಳೆ, ಮುಸುಕಿನ ಜೋಳದಿಂದ ಪಕ್ಷಿಗಳು, ಹಣ್ಣು ತರಕಾರಿಗಳಿಂದಲೇ ಪ್ರಾಣಿ ಪಕ್ಷಿಗಳು ಸೃಷ್ಠಿಯಾಗಿ ಅಡ್ಡಾಡುತ್ತಿವೆಯೇನೋ ಎಂಬಂತೆ ಅಚ್ಚರಿ ಮೂಡಿಸುತ್ತವೆ.

ಗುಲಾಬಿಯಲ್ಲಿ ಅರಳಿದ ಗೇಟ್ ವೇ ಆಫ್ ಇಂಡಿಯಾ

ಗುಲಾಬಿಯಲ್ಲಿ ಅರಳಿದ ಗೇಟ್ ವೇ ಆಫ್ ಇಂಡಿಯಾ

ಗೇಟ್ ವೇ ಆಫ್ ಇಂಡಿಯಾ ಸುಮಾರು ಹತ್ತು ಅಡಿ ಎತ್ತರ ಮತ್ತು ಇಪ್ಪತ್ತೆಂಟು ಅಡಿ ಉದ್ದವಿದ್ದು, ಇದರ ನಿರ್ಮಾಣಕ್ಕೆ ಸುಮಾರು ಒಂದೂವರೆ ಲಕ್ಷ ಗುಲಾಬಿ ಹೂಗಳನ್ನು ಬಳಸಲಾಗಿದೆ.

ತೇಜಸ್ ಯುದ್ಧ ವಿಮಾನ

ತೇಜಸ್ ಯುದ್ಧ ವಿಮಾನ

ಇಪ್ಪತ್ತು ಅಡಿ ಉದ್ದ, ಹನ್ನೆರಡು ಅಡಿ ಅಗಲ, ನಾಲ್ಕು ಅಡಿ ಉದ್ದದ ತೇಜಸ್ ಯುದ್ಧ ವಿಮಾನ ನಿರ್ಮಿಸಲಾಗಿದೆ. ಇದಕ್ಕಾಗಿ ಒಂದು ಲಕ್ಷ ಹೂಗಳನ್ನು ಬಳಸಿಕೊಳ್ಳಲಾಗಿದೆ.

ಹೂಗಳಲ್ಲಿ ವಿಂಟೇಜ್ ಕಾರು

ಹೂಗಳಲ್ಲಿ ವಿಂಟೇಜ್ ಕಾರು

ಇನ್ನು ಕಾರು, ಟಾಂಗಾ ಗಾಡಿಗಳು ಕೂಡ ಹೂಗಳಲ್ಲಿ ಸೃಷ್ಠಿಯಾಗಿದೆ. ಒಟ್ಟಾರೆ ಫಲಪುಷ್ಪ ಪ್ರದರ್ಶನ ಪುಷ್ಪ ಪ್ರೇಮಿಗಳನ್ನು ಸೆಳೆಯುವಲ್ಲಿ ಸಫಲವಾಗಿದ್ದು, ಇಲ್ಲಿ ಹೆಜ್ಜೆಯಿಡುವ ಪ್ರತಿಯೊಬ್ಬರಿಗೂ ಮೂಗಿಗೆ ಸುವಾಸನೆ, ಕಣ್ಣಿಗೆ ತಂಪು ನೀಡುವುದರಲ್ಲಿ ಸಂಶಯವಿಲ್ಲ.

ವಿವಿಧ ಜಾತಿಯ ಹೂಗಳು

ವಿವಿಧ ಜಾತಿಯ ಹೂಗಳು

ಬಣ್ಣ ಬಣ್ಣದ ಸೇವಂತಿಗೆ, ಚೆಂಡುಹೂ ಅರಳಿ ಕಂಗೊಳಿಸುತ್ತಿವೆ. ಸ್ಟ್ಯಾಂಡ್‍ನಲ್ಲಿ ಗಾಳಿಗೆ ತೂಗಾಡುವ ಹೂಬಳ್ಳಿಗಳು ಗಮನಸೆಳೆಯುತ್ತವೆ. ಕುಂಡಗಳನ್ನು ಜೋಡಿಸಿ ನಿರ್ಮಿಸಲಾಗಿರುವ ವೃತ್ತಾಕಾರದ ಹೂಗಿಡಗಳ ಸುಂದರ ಮಂಟಪ ತನ್ನತ್ತ ಸೆಳೆಯುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 28 ft tall floral model of the Gateway of India at Mumbai fashioned out of 1.50 lakh rose buds promises to be the show stopper during the 12 day Dasara flower show at Kuppannada Park mysuru.
Please Wait while comments are loading...