• search

ಮೈಸೂರು ದಸರಾ : ರೈತ ದಸರಾ ಕಾರ್ಯಕ್ರಮಗಳ ಪಟ್ಟಿ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮೈಸೂರು, ಅಕ್ಟೋಬರ್ 11 : ಮನ್ಮಥ ನಾಮ ಸಂವತ್ಸರ, ಶರದ್ ಋತು, ಅಶ್ವಿನ ಮಾಸ, ಪಾಡ್ಯ ತಿಥಿ, ಅಕ್ಟೋಬರ್ 13ರಿಂದ ಒಂಬತ್ತು ದಿನಗಳ ನವರಾತ್ರಿ ಆರಂಭ. ದುಷ್ಟ ಶಕ್ತಿ ನಾಶದ ದ್ಯೋತಕವಾಗಿ ನವರಾತ್ರಿ ಆಚರಿಸಲಾಗುತ್ತದೆ. ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ನಾಡಹಬ್ಬದ ಸಂಭ್ರಮ.

  ಕರ್ನಾಟಕದಲ್ಲಿ ಬರದ ಛಾಯೆ ಇದ್ದು, ಐನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ವೈಭವದ ಮೈಸೂರು ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಪ್ರಗತಿಪರ ರೈತ ಪುಟ್ಟಯ್ಯ ಅವರು ಅಕ್ಟೋಬರ್ 13ರಂದು, ಬೆಳಗ್ಗೆ 11.05ರಿಂದ 11.55ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಮೈಸೂರು ದಸರಾಗೆ ಚಾಲನೆ ನೀಡಲಿದ್ದಾರೆ.

  ಸರಳವಾಗಿಯಾದರೂ ಮೈಸೂರು ದಸರಾ ಆಚರಣೆಯನ್ನು ಬಿಡಲಾದೀತೆ? ವಸ್ತು ಪ್ರದರ್ಶನ, ಗ್ರಾಮೀಣ ಕ್ರೀಡೆ, ಕಲಾ ಪ್ರದರ್ಶನ, ನಾಟಕ, ಚರ್ಚಾಕೂಟ ಸೇರಿದಂತೆ ನಾನಾ ಸ್ಪರ್ಧೆಗಳಿಗೆ ಅಂಕಣ ಸಿದ್ಧವಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಅಕ್ಟೋಬರ್ 13ರಿಂದ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳ ಪಟ್ಟಿ ಕೆಳಗಿನಂತಿದೆ.

  Mysuru Dasara 2015 : Sports, Cultural activities
  ದಿನಾಂಕ ಕಾರ್ಯಕ್ರಮಗಳು ಕಾರ್ಯಕ್ರಮ ನಡೆಯುವ ಸ್ಥಳ
  ಮೈಸೂರು ತಾಲೂಕು
  ಅ. 13 * ಮದ್ಯಾಹ್ನ 1.30 ಗಂಟೆಗೆ ರೈತ ದಸರಾ ಕಾರ್ಯಕ್ರಮಕ್ಕೆ ಚಾಲನೆ - ಕೃಷ್ಣ ಭೈರೇಗೌಡ, ಕೃಷಿ ಸಚಿವರು
  * ಉಪಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಜಿ.ಟಿ. ದೇವೇಗೌಡ, ಶಾಸಕರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
  * ವಸ್ತು ಪ್ರದರ್ಶನ ಉದ್ಘಾಟನೆ
  * ರಂಗಾಯಣದ ವತಿಯಿಂದ : ರಂಗಾಯಣದ ನಡಿಗೆ ರೈತರ ಕಡೆಗೆ (ಬೀದಿ ನಾಟಕ)
  * ಕೃಷಿ ತರಬೇತಿ ಕೇಂದ್ರದ ಆವರಣ, ನಾಗನಹಳ್ಳಿ, ಮೈಸೂರು ತಾಲ್ಲೂಕು.
  ಕೃಷಿ ತರಬೇತಿ ಕೇಂದ್ರದ ಆವರಣ, ನಾಗನಹಳ್ಳಿ, ಮೈಸೂರು ತಾಲ್ಲೂಕು
  ಅ. 14 * ರೈತ ದಸರಾ ಕ್ರೀಡಾಕೂಟ / ಗ್ರಾಮೀಣ ಕ್ರೀಡೆಗಳ ಸ್ಪರ್ಧೆ
  ಅ. 15 * ರೈತರ ಸಂವಾದ ಕಾರ್ಯಕ್ರಮ
  * ವೇದಿಕೆ ಕಾರ್ಯಕ್ರಮ
  * ಕ್ರೆಡಿಟ್ ಐ ಸಂಸ್ಥೆಯವರಿಂದ ನಾಟಕ
  ಟಿ ನರಸೀಪುರ ತಾಲೂಕು
  ಅ. 13 * ಬೆಳಿಗ್ಗೆ 10 ಗಂಟೆಗೆ ರೈತ ದಸರಾ ಕ್ರೀಡಾಕೂಟ ಹಾಗೂ ವಸ್ತುಪ್ರದರ್ಶನ ಉದ್ಘಾಟನೆ ವಿದ್ಯೋದಯ ಕಾಲೇಜು ಆವರಣ, ಟಿ ನರಸೀಪುರ
  ಅ. 14 * ಸಾಂಸ್ಕೃತಿಕ ಕಾರ್ಯಕ್ರಮ ರೈತರ / ಸ್ಥಳೀಯ ಕಲಾವಿದರಿಂದ ಗ್ರಾಮೀಣ ಕಲೆಗಳ ಪ್ರದರ್ಶನ
  ಅ. 15 * ವೇದಿಕೆ ಕಾರ್ಯಕ್ರಮ, ರೈತರ ಸಂವಾದ ಕಾರ್ಯಕ್ರಮ
  * ರಂಗಾಯಣದ ವತಿಯಿಂದ ನಾಟಕ : ರಂಗಾಯಣದ ನಡಿಗೆ ರೈತರ ಕಡೆಗೆ
  ನಂಜನಗೂಡು ತಾಲೂಕು
  ಅ. 14
  * ಬೆಳಿಗ್ಗೆ 10 ಗಂಟೆಗೆ ರೈತ ದಸರಾ ಕ್ರೀಡಾಕೂಟ ಹಾಗೂ ವಸ್ತುಪ್ರದರ್ಶನ ಉದ್ಘಾಟನೆ
  * ಕ್ರೆಡಿಟ್ ಐ ಸಂಸ್ಥೆಯವರಿಂದ ನಾಟಕ
  ಶ್ರೀ ಶ್ರೀಕಂಠೇಶ್ವರ ಕಲಾಮಂದಿರ ಆವರಣ, ನಂಜನಗೂಡು
  ಅ. 15
  * ಸಾಂಸ್ಕೃತಿಕ ಕಾರ್ಯಕ್ರಮ ರಂಗಾಯಣದ ವತಿಯಿಂದ ನಾಟಕ ಪ್ರದರ್ಶನ : ರಂಗಾಯಣದ ನಡಿಗೆ ರೈತರ ಕಡೆಗೆ
  ಅ. 16
  * ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ, ರೈತರ ಸಂವಾದ ಕಾರ್ಯಕ್ರಮ
  ಹುಣಸೂರು ತಾಲೂಕು
  ಅ. 14 * ಬೆಳಿಗ್ಗೆ 10 ಗಂಟೆಗೆ ರೈತರ ದಸರಾ ಕ್ರೀಡಾಕೂಟ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆ ನಗರಸಭಾ ಮೈದಾನ, ಹುಣಸೂರು
  ಅ. 15 * ಸಾಂಸ್ಕೃತಿಕ ಕಾರ್ಯಕ್ರಮ ರೈತರ / ಸ್ಥಳೀಯ ಕಲಾವಿದರಿಂದ ಗ್ರಾಮೀಣ ಕಲೆಗಳ ಪ್ರದರ್ಶನ
  ಅ. 16 * ಬೆಳಿಗ್ಗೆ 10 ಗಂಟೆಗೆ ವೇದಿಕೆ ಕಾರ್ಯಕ್ರಮ, ರೈತರ ಸಂವಾದ ಕಾರ್ಯಕ್ರಮ ಹಾಗೂ ರಂಗಾಯಣದ ವತಿಯಿಂದ ನಾಟಕ : ರಂಗಾಯಣದ ನಡಿಗೆ ರೈತರ ಕಡೆಗೆ
  ಪಿರಿಯಾಪಟ್ಟಣ ತಾಲೂಕು
  ಅ. 15

  * ರೈತರ ಸಂವಾದ ಕಾರ್ಯಕ್ರಮ
  * ಸಾಂಸ್ಕೃತಿಕ ಕಾರ್ಯಕ್ರಮ- ರಂಗಾಯಣದ ವತಿಯಿಂದ ನಾಟಕ ಪ್ರದರ್ಶನ

  ಶ್ರೀ ಸಾಯಿ ಛತ್ರ, ಪಿರಿಯಾಪಟ್ಟಣ
  ಅ. 16 * ವೇದಿಕೆ ಕಾರ್ಯಕ್ರಮ / ರಂಗಾಯಣದ ನಡಿಗೆ ರೈತರ ಕಡೆಗೆ
  * ಕ್ರೆಡಿಟ್ ಐ ಸಂಸ್ಥೆಯಿಂದ ನಾಟಕ ಪ್ರದರ್ಶನ
  ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ಪಿರಿಯಾಪಟ್ಟಣ

  ದಸರಾ ಕ್ರೀಡಾಕೂಟದ ವಿವರ

  ಪುರುಷರಿಗೆ :
  1. ಕೆಸರು ಗದ್ದೆ ಓಟ
  2. ಗುಂಡು ಎತ್ತುವ ಸ್ಪರ್ಧೆ
  3. ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ

  ಮಹಿಳೆಯರಿಗೆ :
  1. ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ
  2. ಛಮಚದಲ್ಲಿ ನಿಂಬೆಹಣ್ಣು ಇಟ್ಟು ಓಡುವ ಸ್ಪರ್ಧೆ

  ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ :

  1. ಮೈಸೂರು ರಂಗಾಯಣದ ವತಿಯಿಂದ ಮೂರು ಕಲಾ ತಂಡಗಳು ಒಳಗೊಂಡಂತೆ ತಾಲ್ಲೂಕು/ ಗ್ರಾಮಗಳಲ್ಲಿ ಬೀದಿ ನಾಟಕ, ರೈತ ಪರ ಹಾಡುಗಳು, ಸಾಧಕ ಕೃಷಿಕರೊಂದಿಗೆ ಮತ್ತು ತಜ್ಞರೊಂದಿಗೆ ಸಂವಾದ ಕಾರ್ಯಕ್ರಮವನ್ನು- ರೈತನ ಕಡೆಗೆ ರಂಗಾಯಣದ ನಡಿಗೆ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.

  2. ಕ್ರೆಡಿಟ್ ಐ ಸಂಸ್ಥೆ ಮೈಸೂರು ಇವರ ವತಿಯಿಂದ ರೈತರಿಗೆ ಆತ್ಮಸ್ಥೈರ್ಯ ತುಂಬುವ ನಾಟಕ ಪ್ರದರ್ಶನ.

  3. ವಿವಿಧ ಸಂಬಂಧಿಸಿದ ತಾಲ್ಲೂಕುಗಳಲ್ಲಿನ ರೈತರ / ಸ್ಥಳೀಯ ಕಲಾವಿದರಿಂದ ಗ್ರಾಮೀಣ ಕಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Navaratri begins from October 13. Mysore Dasara will be also be inaugurated on the same day in Mysuru Karnataka by progressive farmer from HD Kote Puttaiah. Various cultural, sports activities are lined up for the biggest festival of Karnataka. Program details are here.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more