ಮೈಸೂರು ದಸರಾಗೆ ಬಂದಿರುವ ಆನೆಗಳ ಮಾವುತರಿಗೆ ಕ್ಷೌರ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 30: ದಸರಾ ಜಂಬೂ ಸವಾರಿಯನ್ನು ಯಶಸ್ವಿಯಾಗಿ ನಡೆಸಲು ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರಿಗೆ ಕನ್ನಡ ಕಲಾ ಅಭಿಮಾನಿ ಕ್ಷೌರಿಕ ಬಳಗ ಹಾಗೂ ಮೈಸೂರು ಕನ್ನಡ ವೇದಿಕೆಯಿಂದ ಕ್ಷೌರ ಮಾಡುವ ಮೂಲಕ ಮಾನವೀಯತೆ ಮೆರೆದರು.

ಅರಮನೆ ಆವರಣದಲ್ಲಿ ಟೆಂಟ್ ಶಾಲೆಯ ಮಕ್ಕಳಿಗೆ, ಮಾವುತರು ಹಾಗೂ ಕಾವಾಡಿಗಳಿಗೆ ಹೇರ್ ಕಟಿಂಗ್, ಶೇವಿಂಗ್ ಮಾಡುವ ಮೂಲಕ ತಮ್ಮ ಸೇವೆಯನ್ನು ಸಮರ್ಪಿಸಿದ ಕನ್ನಡ ಕಲಾ ಅಭಿಮಾನಿ ಕ್ಷೌರಿಕ ಸಂಘದ ಕಾರ್ಯಕರ್ತರು ದಸರಾ ಮಹೋತ್ಸವದಲ್ಲಿ ಮಾವುತರು ಹಾಗೂ ಕಾವಾಡಿಗಳು ಪ್ರಮುಖ ಆಕರ್ಷಣೆಯಾಗಿದ್ದು, ಅವರು ಆರೋಗ್ಯವಂತರಾಗಿದ್ದರೆ ಮಾತ್ರ ದಸರೆಯ ಜಂಬೂಸವಾರಿ ಸುಸೂತ್ರವಾಗಿ ನಡೆಯುತ್ತದೆ ಎಂದು ಹೇಳಿದರು.[ಗೋಲ್ಡ್ ಕಾರ್ಡ್, ಪ್ಯಾಲೆಸ್ ಆನ್ ವೀಲ್ಸ್, ಲಲಿತಮಹಲ್ ನಲ್ಲಿ ಊಟ]

Free cutting and shaving for Mysuru dasara mahouts, kavadis

ಈ ಸಂದರ್ಭ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ಕಾಡಿನ ವಾತಾವರಣ, ಪರಿಸ್ಥಿತಿಗೆ ಹೊಂದಿಕೊಂಡಿರುವ ಕಾವಾಡಿಗಳು, ಮಾವುತರು ಹಾಗೂ ಅವರ ಮಕ್ಕಳು ಸೌಂದರ್ಯದ ಕಡೆ ಗಮನ ಹರಿಸುವುದಿಲ್ಲ. ಕಾಡಿನಲ್ಲಿ ಸೌಲಭ್ಯಗಳ ಕೊರತೆಯಿರುವುದರಿಂದ ಸರಿಯಾದ ಸಮಯಕ್ಕೆ ಕ್ಷೌರ ಮಾಡಿಸಲು ಆಗುವುದಿಲ್ಲ. ಇದರಿಂದ ಅವರ ಮುಖದ ಅಂದ ಹದಗೆಟ್ಟಿರುತ್ತದೆ ಎಂದು ಅಭಿಪ್ರಾಯಪಟ್ಟರು.[ಅಕ್ಟೋಬರ್ 1ರಂದು ಧನುರ್ ಲಗ್ನದಲ್ಲಿ ದಸರಾಗೆ ಚಾಲನೆ]

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಇವರಿಗೆ ಕನ್ನಡ ಕಲಾ ಅಭಿಮಾನಿ ಕ್ಷೌರಿಕ ಬಳಗ ಹಾಗೂ ಮೈಸೂರು ಕನ್ನಡ ವೇದಿಕೆ ವತಿಯಿಂದ ಉಚಿತವಾಗಿ ಕ್ಷೌರ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಕನ್ನಡ ಕಲಾ ಅಭಿಮಾನಿ ಕ್ಷೌರಿಕ ಬಳಗದ ಅಧ್ಯಕ್ಷ ನಟೇಶ್, ನಾಲಾಬೀದಿ ರವಿ, ರಾಧಾಕೃಷ್ಣ, ಉತ್ತನಹಳ್ಳಿ ಮಹದೇವು, ಪ್ಯಾಲೇಸ್ ಬಾಬು, ಸಮಾಜ ಸೇವಕ ಕೆ.ರಘುರಾಂ ಮೊದಲಾದವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru dasara will start from Saturday. Free cutting, shaving done for mahouts and kavadis who are participating in dasara. Kannada kala abhimani kshourika balaga and Mysore Kannada vedike organised the event.
Please Wait while comments are loading...