ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗಾ ಪೂಜೆ 2021: ಮಹತ್ವ ಹಾಗೂ ಪೂಜಾ ವಿಧಾನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆತ ವಿಶೇಷತೆ ಇದೆ. ಎಲ್ಲಾ ಹಬ್ಬಂದಂತೆ ನವರಾತ್ರಿಯೂ ಸಹ ವಿಶೇಷವನ್ನು ಹೊಂದಿದ್ದು, ಈ ಹಬ್ಬವನ್ನು ಮಹಾಶಕ್ತಿಯ ಆರಾಧನೆಯ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಗೊಂಬೆಗಳ ಹಬ್ಬ ಎಂದೂ ಕರೆಯುತ್ತಾರೆ.

ದುರ್ಗಾ ಪೂಜೆಯು ಅಕ್ಟೋಬರ್ 11 ರಂದು ಶುರುವಾಗಿದ್ದು 15ರವರೆಗೆ ಇರಲಿದೆ. ನವರಾತ್ರಿಯಲ್ಲಿ ಮಾತೆ ದುರ್ಗೆಯ ಪೂಜೆ ಮಹತ್ವವಾಗಿದೆ. ಹಬ್ಬದಲ್ಲಿ ದೇವಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಪೂಜೆ ಮಾಡುವುದುಂಟು. ಶೈಲಪುತ್ರಿ, ಬ್ರಹ್ಮಚಾರಿಣಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಲ್ಲಿ ದುರ್ಗೆಯನ್ನು ಪೂಜೆ ಮಾಡುತ್ತಾರೆ.

ನವರಾತ್ರಿ 2021: ವಿದ್ಯಾದೇವಿ ಸರಸ್ವತಿ ಪೂಜಾ ವಿಧಿ ವಿಧಾನ ನವರಾತ್ರಿ 2021: ವಿದ್ಯಾದೇವಿ ಸರಸ್ವತಿ ಪೂಜಾ ವಿಧಿ ವಿಧಾನ

ದುರ್ಗಾಷ್ಟಮಿಯನ್ನು ನವರಾತ್ರಿಯ ಎಂಟನೇ ದಿನದಂದು ಆಚರಣೆ ಮಾಡುವುದುಂಟು. ಹತ್ತನೆಯ ದಿನವನ್ನು ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ವಿಜಯದಶಮಿಯ ಅರ್ಥ ಹೆಸರೇ ಸೂಚಿಸುವಂತೆ ವಿಜಯ, ಗೆಲುವು ಸೂಚಿಸುವ ಹಬ್ಬ. ವಿಜಯದಶಮಿ ಆಚರಿಸುವುದಕ್ಕೂ ಹಲವು ಸಂಕೇತಗಳಿದ್ದು, ಮಹಾದುರ್ಗೆ ರಾಕ್ಷಸರನ್ನು ಸಂಹಾರ ಮಾಡಿದ ವಿಜಯದ ದಿನ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನ ಎಂಬುದರ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುವುದುಂಟು.

Durga Puja 2021: Dates, Puja Vidhi, History, Theme, Significance, Covid protocols and More In Kannada

ನವರಾತ್ರಿಯಲ್ಲಿ ಮಾತೆ ದುರ್ಗೆಯ ಪೂಜೆ ಮಹತ್ವವಾಗಿದೆ. ಹಬ್ಬದಲ್ಲಿ ದೇವಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಪೂಜೆ ಮಾಡುವುದುಂಟು. ಶೈಲಪುತ್ರಿ, ಬ್ರಹ್ಮಚಾರಿಣಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಲ್ಲಿ ದುರ್ಗೆಯನ್ನು ಪೂಜೆ ಮಾಡುತ್ತಾರೆ.

ದುರ್ಗಾಪೂಜೆ ಮಹತ್ವ:
ದುರ್ಗಾಪೂಜೆಯನ್ನು ಮಹಾಲಯ,ಷಷ್ಠಿ, ಮಹಾಸಪ್ತಮಿ, ಮಹಾಅಷ್ಟಮಿ, ಮಹಾನವಮಿ ಮತ್ತು ವಿಶಯದಶಮಿಯಂದು ಮಾಡಲಾಗುತ್ತದೆ. ದುರ್ಗಾಪೂಜಾ ಆಚರಣೆಗಳ ದಿನಾಂಕವನ್ನು ಸಾಂಪ್ರದಾಯಿಕವಾಗಿ ಹಿಂದೂ ಪಂಚಾಂಗದ ಪ್ರಕಾರ ನಿಗದಿ ಮಾಡಲಾಗುತ್ತದೆ. ದುರ್ಗಾ ಪೂಜೆಯ ಆಚರಣೆಯು ಎಲ್ಲಾ ದೇವಾನು ದೇವತಗಳನ್ನು ಒಳಗೊಳ್ಳುತ್ತದೆ. ದೇವಿ ಪಕ್ಷ ಅಥವಾ ಪೂಜೆಯ ಆಚರಣೆಗಳು ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಆರಂಭವಾಗಿ 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಅದರಲ್ಲೂ ಪ್ರಮುಖವಾದ ಪೂಜೆಯು ಆರಂಭವಾಗುವುದು ಮಹಾಷಷ್ಠಿಯಂದು.ಅಂದರೆ ನವರಾತ್ರಿಯ ಆರನೇ ದಿನದಂದು.
ಮಹಾಲಯ ಅಮಾವಾಸ್ಯೆ ದಿನ ದೇವಿ ಪಕ್ಷವು ಆರಂಭಗೊಳ್ಳುತ್ತದೆ. ಆ ದಿನ ದುರ್ಗಾದೇವಿಯು ಕೈಲಾಸದಿಂದ ತನ್ನ ಪ್ರಯಾಣವನ್ನು ಆರಂಭಿಸುತ್ತಾಳೆ ಎನ್ನಲಾಗುತ್ತದೆ. ಮಹಾಷಷ್ಠಿಯಂದು ದುರ್ಗೆಯು ಮರ್ತ್ಯಲೋಕವನ್ನು ಪ್ರವೇಶಿಸುತ್ತಾಳೆ.

ದುರ್ಗಾಪೂಜೆ ವಿಧಿ, ವಿಧಾನ:
ದುರ್ಗಾ ಪೂಜೆಯಂದು ಮಾಡುವ ಕಾಲ್ ಪರಂಭ ಎನ್ನುವ ಆರಂಭಿಕ ಪೂಜಾ ವಿಧಿ ಪ್ರಮುಖವಾದುದು.ಮುಂಜಾನೆ ಎದ್ದು ಕಲಶವನ್ನು ನೀರಿನಿಂದ ತುಂಬಿ ದುರ್ಗಾ ಮಾತೆಯ ಮುಂದೆ ಇರಿಸಲಾಗುತ್ತದೆ. ಇದನ್ನು ಘಟಸ್ಥಾಪನೆ ಎಂದೂ ಕರೆಯಲಾಗುತ್ತದೆ. ಇಲ್ಲಿಂದ ನಂತರ ಭಕ್ತರು ಮಹಾಸಪ್ತಮಿ, ಮಹಾಅಷ್ಟಮಿ ಹಾಗೂ ಮಹಾನವಮಿಯಂದು ವಿವಿಧ ಪೂಜಾ ವಿಧಾನಗಳನ್ನು ಅನುಸರಿಸಲಾಗುತ್ತದೆ.

ದುರ್ಗಾ ನಾಮಜಪದಲ್ಲಿ 'ದುರ್ಗಾ' ಶಬ್ದದ 'ದ'ಕಾರವು ದೈತ್ಯನಾಶದ ಸೂಚಕ, 'ದುರ್ಗಾ'ದಲ್ಲಿನ 'ದುರ್‌' ಶಬ್ದದ ಅರ್ಥವೆಂದರೆ ಕೆಟ್ಟದ್ದು 'ಗ' ಎಂದರೆ ಹೋಗಲಾಡಿಸುವ. ಹಾಗಾಗಿ ಕೆಟ್ಟದ್ದನ್ನು ನಾಶ ಮಾಡುವವಳು ದುರ್ಗಾ ಎನ್ನಲಾಗುತ್ತದೆ.

''ಶ್ರೀ ದುರ್ಗಾದೇವ್ಯೈ ನಮಃ'' ಎನ್ನುವ ನಾಮಜಪವನ್ನು ಮಾಡುವುದರಿಂದ ದೇವಿಯ ಅನುಭೂತಿಯು ಸಿಗುವುದು. ನವರಾತ್ರಿಯ ಸಂದರ್ಭದಲ್ಲಿ ದೇವೀತತ್ವವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುವುದರಿಂದ ದೇವೀತತ್ವದ ಲಾಭವನ್ನು ಪಡೆದುಕೊಳ್ಳಲು ಈ ನಾಮಜಪವನ್ನು ಹೆಚ್ಚು ಮಾಡಬೇಕು.

1ನೇ ದಿನವನ್ನು ಪಾಡ್ಯದ ದಿನವೆಂದು ಅಂದರೆ ಯೋಗನಿದ್ರಾ ದುರ್ಗಾ ಪೂಜೆಯಂದು ಪೂಜಿಸುತ್ತಾರೆ.
2ನೇ ದಿನವನ್ನು ಬಿದಿಗೆ ದಿನ ಅಂದರೆ ದೇವಜಾತ ದುರ್ಗಾ ಪೂಜೆಯಂದು ಪೂಜಿಸುತ್ತಾರೆ.
3ನೇ ದಿನವನ್ನು ತದಿಗೆ ದಿನ ಅಂದರೆ ಮಹಿಷಾಸುರ ಮರ್ಥಿನಿ ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.
4ನೇ ದಿನವನ್ನು ಚತುರ್ದಶಿ ದಿನ ಅಂದರೆ ಶೈಲ ಜಾತಾ ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.
5ನೇ ದಿನವನ್ನು ಪಂಚಮಿ ದಿನ ಅಂದರೆ ದೂಮೃಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.
6ನೇ ದಿನವನ್ನು ಶಷ್ಠಿ ದಿನ ಅಂದರೆ ಚಂಡ-ಮುಂಡಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.
7ನೇ ದಿನವನ್ನು ಸಪ್ತಮಿ ಅಂದರೆ ರಕ್ತಬೀಜ ದುರ್ಗಾಪೂಜಾದಿನವೆಂದು ಪೂಜಿಸುತ್ತಾರೆ.
8ನೇ ದಿನವನ್ನು ಅಷ್ಟಮಿ ದಿನ ಅಂದರೆ ದುರ್ಗಾಷ್ಠಮಿ ಎಂದು ಪೂಜಿಸುತ್ತಾರೆ.
9ನೇ ದಿನದ ಕಡ ನವರಾತ್ರಿ ಮಹಾನವಮಿ ದಿನ ಅಂದರೆ ಶುಂಭಹಾ ದುರ್ಗಾ ಪೂಜೆಯೆಂದು ಪೂಜಿಸುತ್ತಾರೆ

English summary
The five-day festival of Durga Puja is celebrated with much zeal and pageantry across the country, particularly in West Bengal. This festival is said to be one of the biggest festivals in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X