ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿ 2021: ವಿದ್ಯಾದೇವಿ ಸರಸ್ವತಿ ಪೂಜಾ ವಿಧಿ ವಿಧಾನ

|
Google Oneindia Kannada News

ನವರಾತ್ರಿಯಲ್ಲಿ ಒಂದು ದಿನ ವಿದ್ಯಾ ದೇವಿ ಸರಸ್ವತಿಯನ್ನು ಆರಾಧಿಸಲು ಮೀಸಲಿಡಲಾಗುತ್ತದೆ. ಅಶ್ವಯುಜ ಮಾಸ ಶುಕ್ಲಪಕ್ಷ ಪಾಡ್ಯದಿಂದ ದುರ್ಗಾರಾಧನೆ, ನವರಾತ್ರಿ ಉತ್ಸವ ಆರಂಭವಾದರೆ ಸಪ್ತಮಿಯಿಂದ ಶಾರದಾ ಪೂಜೆ ಆರಂಭವಾಗಿ ದಶಮಿಯಂದು ಸಮಾಪ್ತಿಯಾಗುತ್ತದೆ. ಸಮಸ್ತ ಬ್ರಹ್ಮಾಂಡದ ಜ್ಞಾನಸಂಪನ್ನೆಯಾದ ಸರಸ್ವತಿಯನ್ನು ಜ್ಞಾನವನ್ನು, ವಿದ್ಯೆಯನ್ನು ಅನುಗ್ರಹಿಸೆಂದು ಪ್ರಾರ್ಥಿಸುವುದು. ವಿದ್ಯೆಯಿಲ್ಲದೇ, ಜ್ಞಾನವಿಲ್ಲದೇ ಯಾವುದೇ ಕಾರ್ಯವೂ ಅಪೂರ್ಣ. ವಿದ್ಯಾ ವಿಹೀನಂ ಪಶುಸಮಾನಂ ಎಂಬಂತೆ ವಿದ್ಯೆಗಾಗಿ ಅನವರತ ತುಡಿಯಬೇಕು, ಶ್ರಮಿಸಬೇಕು.

ಆದಿಶಕ್ತಿ ಶ್ರೀಲಲಿತೆಯ ರೂಪಗಳು ಅಸಂಖ್ಯ. ಜ್ಞಾನಮಾತೆ, ವೀಣಾಪಾಣಿ ಮಹಾಸರಸ್ವತಿಯ ರೂಪ ಅದರಲ್ಲಿ ಪ್ರಮುಖವಾದುದು. ನವರಾತ್ರಿಯ ಸಂದರ್ಭದಲ್ಲಿ ಶಾರದಾ ಪೂಜೆಗೆ ವಿಶೇಷ ಮಹತ್ವ.

ಉತ್ತಮ ಮನುಷ್ಯರಾಗಲು ಹಣವಿಲ್ಲದಿದ್ದರೂ ಒಳ್ಳೆಯ ಅಗತ್ಯವಾಗಿರಬೇಕು. ವಿದ್ಯಾದೇವತೆಯನ್ನು ಆರಾಧಿಸುವ ಮೂಲಕ ವಿದ್ಯೆ ವಿವೇಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಒಂಭತ್ತು ದಿನಗಳಲ್ಲೂ ಒಂದೊಂದು ದೇವಿಯನ್ನು ಆರಾಧಿಸಲಾಗುತ್ತದೆ. ಅದರಲ್ಲಿ ಸರಸ್ವತಿ ಪೂಜೆ ಅತ್ಯಂತ ಪ್ರಮುಖವಾದುದು.

Dasara Saraswati Puja 2021: Date, Significance, Shubh Muhurat and Puja Vidhi During Navratri in Kannada

ಅಕ್ಟೋಬರ್ 11 ರಂದು ಸೋಮವಾರ ಷಷ್ಠಿ ತಿಥಿ ರಾತ್ರಿ 11:50 ರವರೆಗೆ ಇರುತ್ತದೆ, ನಂತರ ಸಪ್ತಮಿ ತಿಥಿ ಇರುತ್ತದೆ. ಜ್ಯೇಷ್ಠ ನಕ್ಷತ್ರವು ಮಧ್ಯಾಹ್ನ 12:56 ರವರೆಗೆ ಚಾಲ್ತಿಯಲ್ಲಿರುತ್ತದೆ. ನಂತರ ಮೂಲ ನಕ್ಷತ್ರವು ಆರಂಭವಾಗುವುದು. ಇಂದು, ಚಂದ್ರನು ವೃಶ್ಚಿಕ ರಾಶಿಯಲ್ಲಿ ತನ್ನ ವಾಸ್ತವ್ಯವನ್ನು ಮಧ್ಯಾಹ್ನ 12:56 ಕ್ಕೆ ಕೊನೆಗೊಳಿಸುತ್ತಾನೆ ಮತ್ತು ಧನು ರಾಶಿಗೆ ತೆರಳುತ್ತಾನೆ. ಕನ್ಯಾ ರಾಶಿಯಲ್ಲಿ ಮಾತ್ರ ಸೂರ್ಯ ಉಳಿಯುತ್ತಾನೆ.

ವಿಶೇಷವಾಗಿ ಪುಸ್ತಕಗಳು, ಸಂಗೀತ ಉಪಕರಣಗಳು, ಮಾಹಿತಿ ಸಾಧನಗಳು, ಒಟ್ಟಾರೆ ವಿದ್ಯೆಗೆ ಪೂರಕವಾದ ಯಾವುದೇ ವಸ್ತುಗಳಿದ್ದರೂ ಸ್ವಚ್ಛಗೊಳಿಸಿ ಒಪ್ಪ ಓರಣಗೊಳಿಸಿ ಮನೆಯನ್ನು ಸಜ್ಜುಗೊಳಿಸಬೇಕು. ಇದಕ್ಕೆ ಕಂಪ್ಯೂಟರ್ ಲ್ಯಾಪ್ ಟಾಪ್‍ಗಳೂ ಹೊರತಲ್ಲ.

ಸರಸ್ವತಿ ದೇವಿಯನ್ನು ಜ್ಞಾನ, ಸಂಗೀತ, ಕಲೆ ಮತ್ತು ಬುದ್ಧಿವಂತಿಕೆಯ ದೇವತೆ ಎಂದು ಪರಿಗಣಿಸಲಾಗಿದೆ. ಸರಸ್ವತಿಯು ಲಕ್ಷ್ಮಿ, ಪಾರ್ವತಿ, ಸರಸ್ವತಿಯ ತ್ರಿಮೂರ್ತಿಗಳ ಭಾಗವಾಗಿದ್ದಾಳೆ. ಮಕ್ಕಳು ಅಧ್ಯಯನದಲ್ಲಿ ಉತ್ಕೃಷ್ಟರಾಗಲು, ಬುದ್ಧಿವಂತ ಮತ್ತು ಜ್ಞಾನಿಗಳಾಗಲು ದೈವಿಕ ದೇವತೆಯಾದ ಸರಸ್ವತಿಯ ಆಶೀರ್ವಾದವನ್ನು ಬಯಸುತ್ತಾರೆ.

ಪೂಜೆ ಮುಗಿಯುವವರೆಗೂ ಪುಸ್ತಕಗಳನ್ನು ಮುಟ್ಟಬಾರದು ಪೂಜೆ ಮುಗಿಯುವವರೆಗೂ ಪುಸ್ತಕಗಳನ್ನು ಮುಟ್ಟಬಾರದು. ಸಾಮಾನ್ಯವಾಗಿ ನವರಾತ್ರಿಯ ಒಂಬತ್ತನೆಯ ದಿನದ ಸಂಜೆ ಅಥವಾ ರಾತ್ರಿಯ ಹೊತ್ತು ಸರಸ್ವತಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಸರಸ್ವತಿ ಆವಾಹನ ಪೂಜಾ ವಿಧಾನ:

-ಸರಸ್ವತಿ ದೇವಿಯನ್ನು ಆವಾಹನ ಮಾಡಲು ನಿರ್ದಿಷ್ಟಪಡಿಸಿದ ಮಂತ್ರಗಳನ್ನು ಪಠಿಸಬೇಕು.

-ಸರಸ್ವತಿ ಆವಾಹನವನ್ನು ನಿಗದಿತ ಮುಹೂರ್ತದಲ್ಲಿ ಮಾಡಬೇಕು.

-ಸಂಕಲ್ಪ ಅಥವಾ ಪ್ರತಿಜ್ಞೆಯನ್ನು ಭಕ್ತರು ತೆಗೆದುಕೊಳ್ಳುತ್ತಾರೆ.

-ಸರಸ್ವತಿ ದೇವಿಯ ಪಾದಗಳನ್ನು ತೊಳೆಯಬೇಕು.

-ವಿಗ್ರಹವನ್ನು ಶ್ರೀಗಂಧದ ಪೇಸ್ಟ್ ಮತ್ತು ಕುಂಕುಮ ಇತ್ಯಾದಿಗಳಿಂದ ಅಲಂಕರಿಸಬೇಕು.

-ದೇವರಿಗೆ ಬಿಡಿ ಹೂವು ಶ್ರೇಷ್ಠ, ಬಿಳಿ ಹೂವು ಅರ್ಪಣೆ ಮಾಡಬೇಕು

-ನೈವೇದ್ಯವನ್ನು ದೇವಿಗೆ ನೀಡಲಾಗುತ್ತದೆ.

-ಪೂಜೆಯ ಕೊನೆಯಲ್ಲಿ ದೇವಿಗೆ ಆರತಿಯನ್ನು ಮಾಡಿ ಪೂಜೆ ಮುಕ್ತಾಯಗೊಳಿಸಲಾಗುತ್ತದೆ

ಇದರಿಂದ ಸರಸ್ವತಿ ದೇವಿ ನಿಮ್ಮ ಪೂಜಾ ಸ್ಥಳದಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಸರಸ್ವತಿ ಎಂದರೆ ವಿದ್ಯೆಯ ದೇವತೆ ಮಾತ್ರವಲ್ಲ, ಸ್ವಚ್ಛತೆಯ ಹರಿಕಾರಳೂ ಆಗಿದ್ದಾಳೆ. ಬಿಳಿಬಣ್ಣ ಸ್ವಚ್ಛತೆಯ ಸಂಕೇತವಾಗಿರುವ ಕಾರಣ ಪೂಜೆಯಲ್ಲಿ ಬಿಳಿಯ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ವಿಜಯದಶಮಿಯ ಪೂಜೆ ಬಳಿಕವೇ ಈ ಎಲ್ಲ ವಸ್ತುಗಳನ್ನು ತೆಗೆದಿಡಬಹುದು. ಸರಸ್ವತಿಯ ಆರಾಧನೆ ಪುಸ್ತಕ ಜ್ಞಾನಕ್ಕಷ್ಟೆ ಮೀಸಲಲ್ಲ. ನಿಜವಾದ ಸರಸ್ವತಿಯ ಆರಾಧನೆ ಮಸ್ತಕದೊಳಗಿನ ವಿವೇಕದಲ್ಲಿದೆ. ಸುತ್ತಣ ಪ್ರಪಂಚದೊಡನೆ ವ್ಯವಹರಿಸುವ ರೀತಿಯಲ್ಲಿದೆ, ನಡಾವಳಿಯಲ್ಲಿದೆ. ನವರಾತ್ರಿಯ ಸರಸ್ವತಿಯ ಪೂಜೆ ಅಂತಹ ಬದಲಾವಣೆಗೊಂದು ಆರಂಭವಷ್ಟೆ.

ವೀಣಾಪಾಣಿ, ಪುಸ್ತಕಧಾರಿಣಿಯಾದ ಸರಸ್ವತಿ ಕಲೆ ಮತ್ತು ವಿದ್ಯೆಯ ಪ್ರತಿರೂಪ. ಆಕೆಯ ಆರಾಧನೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪೂರಕವಾಗುತ್ತದೆ. ಒಟ್ಟಾರೆ ದೇವಿ ಸರಸ್ವತಿಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಮಾಡುವುದು ಹಿಂದೂಗಳ ಸಂಪ್ರದಾಯವಾಗಿದೆ.

ಅಲಂಕಾರದಲ್ಲಿ ಬಿಳಿಯ ವಸ್ತುಗಳನ್ನೇ ಹೆಚ್ಚು ಬಳಸಿ. ವಿಶೇಷವಾಗಿ ನೈವೇದ್ಯಕ್ಕಾಗಿ ಬಿಳಿಯ ಬಣ್ಣದ ಖಾದ್ಯಗಳನ್ನೇ ತಯಾರಿಸಿ. ಉದಾಹರಣೆಗೆ ಅಕ್ಕಿಯ ಪಾಯಸ, ಹಾಲು, ಅವಲಕ್ಕಿಯ ಖಾದ್ಯ, ತಾಜಾ ತೆಂಗಿನ ತುರಿಯ ಖಾದ್ಯಗಳು ಇತ್ಯಾದಿಗಳನ್ನೇ ತಯಾರಿಸಿ ಪೂಜೆಯ ಸಮಯದಲ್ಲಿ ಅರ್ಪಿಸಿದರೆ ತಾಯಿ ಸಂಪನ್ನಳಾಗುತ್ತಾಳೆ.

Recommended Video

ಕೆ. ಎಲ್ ರಾಹುಲ್ RCBಯ ನೆಕ್ಟ್ಸ್ ಕ್ಯಾಪ್ಟನ್ ಆಗೋದು ಕನ್ಫರ್ಮ್!! | Oneindia Kannada

ಸರಸ್ವತಿ ಪೂಜೆಯ ಸಂದರ್ಭವನ್ನು 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡುವ ಉಡುಗೊರೆಗೆ ಸರಸ್ವತಿ ಧನಂ ಎಂದು ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಬಳೆ, ಅಲಂಕಾರಿಕಾ ವಸ್ತುಗಳು, ವೀಳ್ಯದ ಎಲೆ, ಅಡಿಕೆ ಮತ್ತು ಬಾಳೆಹಣ್ಣುಗಳಿರುವ ಬುಟ್ಟಿಯನ್ನು ಉಡುಗೊರೆಯಾಗಿ ನೀಡಿ ಅವರನ್ನು ಕುಳ್ಳಿರಿಸಿ ಅರಿಶಿನ-ಕುಂಕುಮ ಹಚ್ಚಿ ಪೂಜೆ ಮಾಡಲಾಗುವುದು.
ಇವೆಲ್ಲವೂ ಸರಸ್ವತಿಯ ಸಂಕೇತಗಳಾಗಿದ್ದು ಹೆಣ್ಣು ಮಕ್ಕಳಲ್ಲಿ ವಿವೇಕ ಮೂಡಲು ನೆರವಾಗುತ್ತದೆ ಎಂದು ಹಿರಿಯರು ನಂಬುತ್ತಾರೆ.

English summary
The 9-day long Navratri, also known as Shardiya Navratri, is celebrated all over the country in various ways, reflecting the rich diversity and at the same time the joy of unity amid the diversity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X