ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್‌ಸೈಟ್‌ನಲ್ಲಿ ಮೈಸೂರು ದಸರಾ ಮಾಹಿತಿ ಲಭ್ಯ

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

Mysore Dasara website launched
ಮೈಸೂರು, ಸೆ. 8 : ವೈಭವದ ಮೈಸೂರು ದಸರಾಗೆ ದಿನಗಣನೆ ಆರಂಭಗೊಂಡಿದೆ. ಸಿದ್ಧತೆಗಳು ಕೂಡ ಸಮಾರೋಪಾದಿಯಲ್ಲಿ ಸಾಗತೊಡಗಿವೆ. ಈ ಬಾರಿ ದಸರಾಕ್ಕೆ ಆಗಮಿಸುವ ಜನರಿಗೆ ಯಾವುದೇ ಸಮಸ್ಯೆಗಳಾಗದಂತೆ ಹಾಗೂ ಯಾವುದೇ ಅಡೆತಡೆಗಳಿಲ್ಲದೆ ನಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ದಸರಾ ಕುರಿತಂತೆ ಮಾಹಿತಿಗಳನ್ನು ತಿಳಿಸುವ ನಿಟ್ಟಿನಲ್ಲಿ ವೆಬ್‌ಸೈಟ್‌ನ್ನು ಆರಂಭಿಸಲಾಗಿದೆ. ಇದರಲ್ಲಿ ದಸರಾ ಮಾಹಿತಿಯಲ್ಲದೆ, ರಾಜ ಮಹಾರಾಜರ ಕಾಲದ ಜಂಬೂಸವಾರಿ ಹಾಗೂ ಇತ್ತೀಚೆಗಿನ ದಸರಾದ ಛಾಯಾಚಿತ್ರಗಳು ಹಾಗೂ ವಿಡಿಯೋಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.

ಮೈಸೂರು ಸುತ್ತಮುತ್ತ ಇರುವ ಜಿಲ್ಲೆಗಳಾದ ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳ ಪ್ರವಾಸಿ ತಾಣಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ. ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಚಿಗುರೆಲೆ, ಮೈಸೂರು ಸ್ಯಾಂಡಲ್ ಸೋಪ್, ನಂಜನಗೂಡು ರಸಬಾಳೆ, ಮೈಸೂರು ಪ್ರಾಚೀನ ಕಲೆ, ಕಸೂತಿ ಹಾಗೂ ಪ್ರವಾಸಿ ತಾಣಗಳಿಗೆ ತೆರಳುವ ಮಾರ್ಗಸೂಚಿಯನ್ನು ನೀಡಲಾಗಿದೆ.

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಅರಮನೆಯಿಂದ ಹೊರಟು ಬನ್ನಿಮಂಟಪ ತಲುಪುವವರೆಗಿನ ಮಾರ್ಗವನ್ನು ಕೂಡ ವಿಶಿಷ್ಟವಾಗಿ ತೋರಿಸಲಾಗಿದೆ. ಇನ್ನು ದಸರಾ ಉದ್ಘಾಟನೆ ಬಳಿಕ ಜಂಬೂ ಸವಾರಿವರೆಗೆ ಪ್ರತಿದಿನ ನಡೆಯುವ ಕಾರ್ಯಕ್ರಮಗಳ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ. ದಸರಾ ಕ್ವಿಜ್, ದಸರಾ ಇ-ಟಿಕೆಟ್‌ಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ.

ಈ ವೆಬ್‌ಸೈಟ್‌ನ್ನು ಮೈಸೂರಿನ ಇಂಜಿನಿಯರಿಂಗ್ ಕಾಲೇಜು ಹಾಗೂ ದಸರಾ ತಾಂತ್ರಿಕ ಸ್ವಯಂ ಸೇವಾ ತಂಡಗಳ ಸಹಕಾರದೊಂದಿಗೆ ರೂಪಿಸಲಾಗಿದ್ದು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿದೆ. ಈ ವೆಬ್‌ಸೈಟ್‌ಗೆ ಉಸ್ತುವಾರಿ ಸಚಿವ ಎಸ್.ಎ.ರಾಮ್‌ದಾಸ್ ಚಾಲನೆ ನೀಡಿದ್ದಾರೆ. ಆದರೆ, ಸದ್ಯಕ್ಕೆ www.mysoredasara.co.in ವೆಬ್ ಸೈಟ್ ತೆರೆದುಕೊಳ್ಳುತ್ತಿಲ್ಲ.

English summary
Mysore in-charge minister A Ramdas launched website on Mysore Dasara. It includes comprehensive information about the world famous Mysore Dasara, places around the city and programs during Dasara festivities. It has gallery and videos too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X