ದಸರಾ : ಸ್ತಬ್ಧಚಿತ್ರಗಳೆಡೆ ಚಿತ್ರವಿಚಿತ್ರ ನಡೆ!
ಪ್ರಿಯ ವೀಕ್ಷಕರೇ, ಅಲ್ಲ, ಪ್ರಿಯ ಓದುಗರೇ, ಇದು ಈ ಸಲದ ಮೈಸೂರು ದಸರಾ ಜಂಬೂಸವಾರಿಯ ಸ್ತಬ್ಧಚಿತ್ರಗಳ ಎಡೆ(ಯಲ್ಲಿ) ನಾನು ಗಮನಿಸಿದ ಚಿತ್ರ ವಿಚಿತ್ರ ನಡೆ.
* ಎಚ್. ಆನಂದರಾಮ ಶಾಸ್ತ್ರೀ
* "ವೀಕ್ಷಕರೇ, ನಿಮಗೆಲ್ಲ ಸ್ವಾಗತ, ಸುಸ್ವಾಗತ."
* "......ಆದಂಥ ಡಾ......ಅವರು ಜನರತ್ತ ಕೈಬೀಸ್ತಾ ಇದ್ದಾರೆ. ನಿಜಕ್ಕೂ ಒಂದು ಆನಂದದ ಕ್ಷಣ."
* "ಡಾ.....ಅವರು ಪ್ರೇಕ್ಷಕರತ್ತ ಕೈಬೀಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರೇಕ್ಷಕರು ಅತೀ ಆನಂದದಿಂದ ಇದನ್ನು ನೋಡ್ತಾ ಇದ್ದಾರೆ."
- ಹೀಗೆ ದೂರದರ್ಶನದ 'ಚಂದನ' ವಾಹಿನಿಯ ನಿರೂಪಕರಿಂದ ಪರಾಕು ಹೇಳಿಸಿಕೊಳ್ಳುತ್ತ, ಸುಮ್ಮಸುಮ್ಮನೇ ಜನರ ಕೈಲುಕುತ್ತ, ಕಲಾವಿದರ ಬೆನ್ನು ತಟ್ಟುತ್ತ, ಈ ಸಲದ ಮೈಸೂರು ದಸರಾ ಜಂಬೂ ಸವಾರಿಯ ನೇರ ಪ್ರಸಾರದಲ್ಲಿ (ಪ್ರತಿ ವರ್ಷದಂತೆ ಈ ವರ್ಷವೂ) ಅತಿ ಹೆಚ್ಚು ಚೌಕಟ್ಟುಗಳಲ್ಲಿ ವೀಕ್ಷಕರಿಗೆ ದರ್ಶನ ಕೊಟ್ಟ ಅತಿ ಗಣ್ಯ ವ್ಯಕ್ತಿ ಅದೇ 'ಚಂದನ' ವಾಹಿನಿಯ ಮುಖ್ಯಸ್ಥ ಡಾ. ಮಹೇಶ ಜೋಶಿ!
***
* "ವೀಕ್ಷಕರೇ, ಈಗ ಒಂದು ವಾಣಿಜ್ಯ ಬ್ರೇಕ್."
* "ನಮ್ಮ ಕ್ಯಾಮರಾದವರು ಅಡ್ವಾಂಟೇಜಿಯಸ್ ಪೊಜಿಷನ್‌ನಲ್ಲಿ ಕ್ಯಾಮರಾ ಇಟ್ಟು ನಮಗೆ ಈ ದೃಶ್ಯ ತೋರಿಸ್ತಾ ಇದ್ದಾರೆ."
* "ವಿ ಆರ್ ಗೋಯಿಂಗ್ ಟು ಟೇಕ್ ಎ ಷಾರ್ಟ್ ಬ್ರೇಕ್ ನೌ."
* "ಲೆಟ್ ಅಸ್ ಟೇಕ್ ಎ ಕಮರ್ಷಿಯಲ್ ಬ್ರೇಕ್."
* "ಹೋಸ್ಟ್ ಟ್ಯಾಬುಲೋ ಲಾಸ್ಟ್ ಬರುತ್ತೆ."
* "ನೀವೆಲ್ಲ ನೇರಪ್ರಸಾರ ಎಂಜಾಯ್ ಮಾಡಿದೀರಿ ಅನ್ಸುತ್ತೆ. ನಮಸ್ಕಾರ."
- ಹೀಗೆ ಕನ್ನಡನಾಡಿನ ಹಬ್ಬದಲ್ಲಿ ಆಂಗ್ಲ ಆಣಿಮುತ್ತುಗಳನ್ನು ಉದುರಿಸುತ್ತಿದ್ದುದು ಶಂಕರ್ ಪ್ರಕಾಶ್, ನಾಗಣ್ಣ, ಜಗದೀಶ್ ಈ ನಿರೂಪಕ ತ್ರಿಮೂರ್ತಿ ತಂಡ. ಕನ್ನಡಕ್ಕಾಗಿ ಕೈಯೆತ್ತುವುದು ದಂಡ!
***
* "ಆನೆ ಬಲರಾಮ ತನ್ನ ಸಹಪಾಠಿ(!)ಗಳೊಂದಿಗೆ ಬರ್‍ತಾ ಇದ್ದಾನೆ."
* "ದಸರಾ ವೈಭವ ಆಹೋ(!)ರಾತ್ರಿ ಇರುವಂಥದು."
* "ದಸರಾ ಸಂದರ್ಭದ ಸಂದರ್ಭದಲ್ಲಿ..."
* "ಈಗ ಒಂದು ಷಿಪ್ ನೋಡ್ತಾ ಇದೀವಿ. ದೋಣಿಯನ್ನ ನೋಡ್ತಾ ಇದೀವಿ."
* "ಅಣ್ಣಿಗೇರಿಯ ದೇವಸ್ಥಾನದಲ್ಲಿ ಪಂಪಕವಿಯ ಪ್ರೌಢಿಮೆಯನ್ನು(?)(!) ನೋಡಿದಿವಿ."
- ಇವು ವಿರೂಪಕ, ಕ್ಷಮಿಸಿ, ನಿರೂಪಕ ಶಂಕರ್ ಪ್ರಕಾಶರ ಪ್ರಕಾಶಮಾನ ನುಡಿಗಳು. ಅರ್ಥಶುದ್ಧಿ, ಭಾಷಾಶುದ್ಧಿ, ವ್ಯಾಕರಣ? ಲೇಕರ್ ಕ್ಯಾ ಕರ್‌ನಾ?
***
* "ಜಿಲ್ಲಾ ಪಂಚಾಯತ್ ಉಡುಪಿಯನ್ನು ನೋಡುತ್ತಿದ್ದೇವೆ. ಜಿಲ್ಲಾ ಪಂಚಾಯತ್ ಕೊಪ್ಪಳವನ್ನು ನೋಡುತ್ತಿದ್ದೇವೆ..."
- ಇದು ಶಂಕರ ಉವಾಚ. ಆದರೆ ನಾವು ಅಲ್ಲಿ ನೋಡುತ್ತಿದ್ದುದು ಸ್ತಬ್ಧಚಿತ್ರರೂಪಿ ದೇವಸ್ಥಾನ, ಕೋಟೆ...! ಶಂಭೋ ಶಂಕರ!
***
* 'ಚಂದನ' ನಿರೂಪಕನ ಅಳತೆಗೋಲಿನ ಪ್ರಕಾರ ಜಂಬೂ ಸವಾರಿ ಮೆರವಣಿಗೆಯ ಉದ್ದ ನಾಲ್ಕು ಕಿಲೋಮೀಟರ್.
- 'ಟಿವಿ 9' ನಿರೂಪಕನ ಅಳತೆಗೋಲಿನ ಪ್ರಕಾರ ಮೆರವಣಿಗೆಯ ಉದ್ದ ಎರಡು ಕಿಲೋಮೀಟರ್!
***
* ಶಂಕರ್ ಪ್ರಕಾಶ್ ಅವರು ವೀಕ್ಷಕ ವಿವರಣೆಯುದ್ದಕ್ಕೂ "ಬಹುಶಃ, ಬಹುಶಃ" ಎನ್ನುತ್ತಿದ್ದರು.
- ಬಹುಶಃ ಅವರಿಗೆ ತಮ್ಮ ಮಾತಿನಮೇಲೇ ನಂಬಿಕೆಯಿರಲಿಲ್ಲ! ಇಂತಹವರನ್ನು ಹೊಂದಿರುವ ಭಾರತ ನಿಜಕ್ಕೂ ಪ್ರಕಾಶಿಸುತ್ತಿದೆ.
***
* ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈದು ವೇದಿಕೆಯಿಂದ ಕೆಳಗಿಳಿದು ಹೋದ ಮುಖ್ಯಮಂತ್ರಿಗಳು ಮಾಧ್ಯಮದವರ ಕೋರಿಕೆಯಂತೆ ಅವರ ಕ್ಯಾಮೆರಾಗಳಿಗಾಗಿ ಮತ್ತೊಮ್ಮೆ ವೇದಿಕೆ ಹತ್ತಿ ಮತ್ತೊಮ್ಮೆ ಪುಷ್ಪಾರ್ಚನೆ ಮಾಡಿದರು!
- ಮಾಧ್ಯಮವು ನಿಜಕ್ಕೂ ಶಕ್ತಿಶಾಲಿ.
***
* 'ನವಭಾರತ ರಥ' ಎಂಬ ಹೆಸರು ಹೊತ್ತ, ಲೋಕಸಭೆ ಕಟ್ಟಡದ ಸ್ತಬ್ಧಚಿತ್ರವನ್ನು ಯಂತ್ರದೋಷದಿಂದಾಗಿ ಒಂದಷ್ಟು ದೂರದವರೆಗೆ ಜನರು ತಳ್ಳಬೇಕಾಯಿತು!
- ಎಷ್ಟು ಅರ್ಥಪೂರ್ಣ!
- ಪ್ರಿಯ ವೀಕ್ಷಕರೇ, ಅಲ್ಲ, ಪ್ರಿಯ ಓದುಗರೇ, ಇದು ಈ ಸಲದ ಮೈಸೂರು ದಸರಾ ಜಂಬೂಸವಾರಿಯ ಸ್ತಬ್ಧಚಿತ್ರಗಳ ಎಡೆ(ಯಲ್ಲಿ) ನಾನು ಗಮನಿಸಿದ ಚಿತ್ರ ವಿಚಿತ್ರ ನಡೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications