ಮೈಸೂರಿನಲ್ಲಿ ಕಣ್ಮನ ಸೆಳೆಯುವ ಘಮ ಘಮ ಪುಷ್ಪ ಜಾತ್ರೆ

Flower Show in Mysore
ಮೈಸೂರು, ಅ.12: ಈ ಬಾರಿಯ ದಸರಾ ವಿಶೇಷತೆಗಳಲ್ಲಿ ಕಣ್ಮನ ಸೆಳೆಯುವ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಿವಿಧ ನಮೂನೆಯ ಬಣ್ಣಬಣ್ಣದ ಪುಷ್ಪಗಳು ಕಣ್ಣಿಗೆ ಮುದ ನೀಡಲಿದ್ದು ನೋಡುಗರ ಮನ ಸೂರೆಗೊಳ್ಳಲಿದೆ.

ಪೌರಾಣಿಕ ಪಾತ್ರಗಳ ಲ್ಲಿ ಅಲಂಕರಿಸಿರುವ ಬಣ್ಣಬಣ್ಣದ ಪುಷ್ಪಗಳನ್ನು ಕಣ್ಮನ ತುಂಬಿಕೊಳ್ಳಬಹುದು. ಸರುಸುಮಾರು 35,000 ಹೂಕುಂಡಗಳಲ್ಲಿ ಬಗೆಬಗೆಯ ಪುಷ್ಪಗಳನ್ನು ಪ್ರದರ್ಶಿಸಲಾಗುತ್ತಿದೆ. ಮೈಸೂರು ಒಡೆಯರ ರಾಜ ಲಾಂಛನವಾಗಿದ್ದ 'ಗಂಡಭೇರುಂಡ' ಮಾದರಿಯ ಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ.

ಒಟ್ಟು 30,000 ಗುಲಾಬಿ ಹೂಗಳನ್ನು ಬಳಕೆ ಮಾಡಿ ಗಂಡಭೇರುಂಡವನ್ನು ನಿರ್ಮಿಸಲಾಗಿದೆ. ಬಣ್ಣಬಣ್ಣದ ಪುಷ್ಪಗಳಲ್ಲಿ ಮೈದಳೆದ 'ಮಹಿಷಾಸುರ' ಮತ್ತೊಂದು ಆಕರ್ಷಣೆಯಾಗಲಿದೆ. ಮೈಸೂರಿನ ಕರ್ಜನ್ ಉದ್ಯಾನವನದಲ್ಲಿ ಈ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಮಂಟಪ, ನಂದಿ, ಚಾಮುಂಡಿ ಬೆಟ್ಟ ಇವೆಲ್ಲವೂ ಮತ್ತಷ್ಟು ಆಕರ್ಷಣೆಯನ್ನು ನೀಡಲಿವೆ. ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಜಿಲ್ಲಾ ತೋಟಗಾರಿಕಾ ಸೊಸೈಟಿ ಜಂಟಿಯಾಗಿ ಆಯೋಜಿಸಿವೆ. ಹೂಗಳ ಘಮ ಘಮದ ಜೊತೆಗೆ ಕಣ್ಣಿಗೆ ಹಬ್ಬ ಉಂಟು ಮಾಡುವ ಫಲಪುಷ್ಪ ಪ್ರದರ್ಶನವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+