ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯಲ್ಲಿ ನಂಬರ್‌ ಹರಟೆ

By Staff
|
Google Oneindia Kannada News


ನನ್ನ ಹೆಸರೇ ನಂ.1, ನಾನೇ ನಂ.1?
ಈ ಸಲ ನವರಾತ್ರಿಗೆ ದಟ್ಸ್‌ ಕನ್ನಡದಲ್ಲಿ ಏನಾದರೂ ಸ್ಪೆಷಲ್‌ ಇದೆಯಾ ಅನ್ನುವಿರಾ? ಸಾಕಷ್ಟು ವಿಶೇಷಗಳಿವೆ. ದಸರಾ, ವಿಜಯದಶಮಿಗೆ ಸಂಬಂಧಿಸಿದಂತೆ ಸುದ್ದಿ-ವರದಿ-ಚಿತ್ರಗಳ ಜೊತೆಗೆ, ವಿಶೇಷ ಲೇಖನ ಮಾಲಿಕೆ ಇಂದಿನಿಂದ ಆರಂಭಗೊಳ್ಳುತ್ತಿದೆ. ದಿನಕ್ಕೊಂದರಂತೆ ಒಂಭತ್ತು ದಿನ ಪ್ರಕಟಗೊಳ್ಳುವ ಈ ಲೇಖನಗಳಲ್ಲಿ, ಅಂಕಿಗಳ ಅಚ್ಚರಿಯ ಜಗತ್ತು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ. ನಾಡಹಬ್ಬದ ಬೆನ್ನಲ್ಲಿ ನಾಡ ಜನರ ಮೆದುಳನ್ನು ಚುರುಕುಗೊಳಿಸಲು ಇದು ಸಕತ್ತು ಸರಕು!

ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣ ದಸರಾ ಎತ್ತಣ ಗಣಿತ
ಎತ್ತಣಿಂದೆತ್ತಣ ಸಂಬಂಧವಯ್ಯಾ...

ಆಶ್ಚರ್ಯವೇ, ಹೌದು ಸಂಬಂಧ ಇದೆ, ಮಾಮರಕ್ಕೂ ಕೋಗಿಲೆಗೂ ಹೇಗೆ ಹಾಡಿನ ನಂಟೋ ಹಾಗೇ ನವರಾತ್ರಿಗೂ ಗಣಿತಕ್ಕೂ ಸಂಖ್ಯೆಯ ನಂಟು. ನವರಾತ್ರಿಯಲ್ಲಿ ನವ(ಒಂಬತ್ತು) ಅಡಗಿದ್ದರೆ ದಸರಾನಲ್ಲಿ ದಶ(ಹತ್ತು) ಕೈ ಬೀಸುತ್ತದೆ. ಈ ನವರಾತ್ರಿ ಸಂದರ್ಭದಲ್ಲಿ ಸ್ವಲ್ಪ ಸ್ವಲ್ಪ ಸಂಖ್ಯಾ ಲೋಕದ ವಿಸ್ಮಯ ತಿಳಿಯೋಣ, ಸಂಖ್ಯೆಗಳ ಸುಳಿಯಲ್ಲಿ ಸಿಲುಕಿ ಈಜಾಡೋಣ.

***

ಪ್ರಾರಂಭಿಸುವ ಮೊದಲು ಗಣೇಶಂಗೆ ನಮಿಸಿಬಿಡೋಣ. ಯಾಕೆ ಅಂದ್ರೆ... ಯಾವುದೇ ಕೆಲಸದ ಮೊದಲು ವಿಘ್ನೕಶ್ವರನ ಪೂಜೆ ನಮ್ಮ ಸಂಪ್ರದಾಯ. ಗೊಡ್ಡು ಸಂಪ್ರದಾಯ, ನಂಬಿಕೆ ಇಲ್ವಾ, ಹೋಗಲಿ ಬಿಡಿ. ನಮ್ಮ ಗಣೇಶ ಗಣಿತದ ಅಧಿದೇವತೆ. ಪುರಾವೆ ಬೇಕಾ? ಓಕೆ. ಶರಣು ಶರಣುವಯ್ಯ ಗಣನಾಯಕ... ಗಣೇಶ ನಿನ್ನ ಮಹಿಮೆ ಅಪಾರ... ವಂದಿಪೆ ನಿನಗೆ ಗಣನಾಥ.... ಹೀಗೆ ಸಂಯುಕ್ತಗಣ, ಛೇದನಗಣ, ವಿಶ್ವಗಣ ಹೀಗೇ ಎಲ್ಲಾ ಗಣಗಳಿಗೂ ಅವನೇ ಗಣಾಧಿಪ !

ಮಕ್ಕಳಿಗೆಲ್ಲ ಗಣೇಶ ಯಾಕೆ ಇಷ್ಟ ಗೊತ್ತಾಯ್ತಲ್ಲ...ಅವನ ದಯೆಯಿಂದ ಆದರೂ ಗಣಿತ ಪಾಸ್‌ ಆಗ್ಲಿ ಅಂತ. ಅದಕ್ಕೆ ಗಣೇಶೋತ್ಸವ ಜೋರಾಗಿ ನಡೆಯೋದು, ಗಣಿತ ತಲೆಗೆ ಹತ್ತಲಿ ಅಂತ. ಆಯ್ತು, ಏಕದಂತನ ಆಶೀರ್ವಾದ ಸಿಕ್ತು. ಇನ್ನು ನಮ್ಮ ಮೊದಲನೇ ಸಂಖ್ಯೆ ಏಕ, 1ರಿಂದ ಪ್ರಾರಂಭಿಸೋಣ.

ನೋಡಿ, ನಾವೆಲ್ಲಾ ಒಂದೇ ಒಂದು ಆಸೆಯು... ಅಂತಾನೇ ಬಹಳಷ್ಟು ಸಲ ಹೇಳಿ ನಮ್ಮ
Un ಏಕ ಆಸೆಗಳನ್ನು ಈಡೇರಿಸಿಕೊಳ್ತೇವೆ. ಹೀಗೆ ಬಳಕೆಯಲ್ಲಿ 1, ನಂಬರ್‌ ಒನ್‌.

ಗಂಡನ ಮನೆಗೆ ಬಂದ ಮದುವಣಗಿತ್ತಿಗೆ ಮೊದಲ ದಿನ ಮೌನ. ಆದರೆ, ನಮ್ಮ ಮೊದಲನೇ ಅಂಕಿ 1ರದ್ದು ತುಂಬಾ ಗದ್ದಲ. ಪ್ರೂಫ್‌ ಬೇಕಾ... ನೀವು ಪ್ರಾಥಮಿಕ ಶಾಲೆಯಲ್ಲಿ ಮಗ್ಗಿ ಹೇಳ್ತಿದ್ರಾ ? ಯಾವ ಅಂಕಿ ಮಗ್ಗಿ ಹೇಳಲು ಜಾಸ್ತಿ ಕಾಂಪಿಟೇಷನ್‌ ಇರ್ತಿತ್ತು ? ಕರೆಕ್ಟ್‌, ಸರಿಯಾಗಿ ಹೇಳಿದ್ರಿ. ನಂಬರ್‌ 1. ಮತ್ತೆ ನಮ್ಮ ಶಾಲೆಯಲ್ಲಿ ದಿನಾ ಸಂಜೆ ತರಗತಿಯ ಎಲ್ಲ ಮಕ್ಕಳಿಂದಲೂ ಒಟ್ಟಿಗೆ ಮಗ್ಗಿ ಹೇಳಿಸ್ತಾ ಇದ್ರು. ಒಂದರ ಮತ್ತು ಹತ್ತರ ಮಗ್ಗಿ ಬಂದಾಗ ಎಲ್ಲರೂ ಕಂಠದಾನ ಮಾಡುತಿದ್ರು. ಊರಿಗೇ ಕೇಳಿಸ್ತಿತ್ತು. 5, 20ಕ್ಕೂ ಮೋಸವಿಲ್ಲ. 7, 9, ಪರವಾಗಿಲ್ಲ. ಅಟ್ಲೀಸ್ಟ್‌ ಮೇಡಮ್‌ ಹೇಳ್ತಿದ್ರು.

13, 17, 19 ಬಂದಾಗ ಪಾಪ ಕೆಲವರಿಗೆ ಕೆಮ್ಮು, ಕೆಲವರಿಗೆ ನೆತ್ತಿ ಹತ್ತಿಬಿಡೋದು, ಬೇರೆಯವರಿಗೆ (ಮೇಡಮ್ನೂ ಸೇರಿಸಿ) ಅಷ್ಟೊಂದು ಮಗ್ಗಿ ಹೇಳಿ ಹೇಳಿ ಸುಸ್ತಾಗಲ್ವೇ! ಆದ್ದರಿಂದ ಹಾಗೂ ಹೀಗು ಕೇಳಿಸೋದು.

ಮತ್ತೆ ಈ ಕಂಪ್ಯೂಟರ್‌ ಕಲಿತು ಕೋಡಂಗಿಗಳಾಗುವ ನಿರ್ಧಾರ ಮಾಡಿದವರೆಲ್ಲಾ ಅನಲಿಟಿಕಲ್‌, ಲಾಜಿಕ್‌, ಪಜಲ್‌ ಅದೂ ಇದೂ ಅಂತ ಒದ್ದಾಡ್ತಾ ಇದ್ವಿ. ಒಂದು ಪಜಲ್‌ ಸಾಲ್ವ್‌ ಮಾಡಿದರಂತೂ ಬಿಡಿ, ಅಭಿನವ ಶ್ರೀನಿವಾಸ ರಾಮಾನುಜನ್‌ ! ಆಗ ನಮ್ಮ ಒಂದು ಫೇವರಿಟ್‌, ಅಂಕಿಗಳ ಪಿರಮಿಡ್‌.

1

121

12321

1234321

.... ಹೀಗೆ. ಬೇಕಾದಷ್ಟು ತರಾ ಲಾಜಿಕ್ನಲ್ಲಿ ಬರೀ ಬಹುದು ಇದನ್ನು, ಅದರಲ್ಲಿ ಸುಲಭದ ವಿಧಾನ ಅಂಕಿ 1ರ ವಿಶೇಷ.
1 x 1 = 1

11 x 11 = 121

111 x 111 = 12321

1111 x 1111 = 1234321

11111 x 11111 = 123454321

111111 x 111111 = 12345654321

1111111 x 1111111 = 1234567654321

11111111 x 11111111 = 123456787654321

111111111 x 111111111 = 12345678987654321

ಬಂತಲ್ಲಾ ಪಿರಮಿಡ್‌, ಹೇಗಿದೆ ಅಂಕಿಗಳ ಆಟ, ಗಣಿತದ ವಿನೋದ ? ಈ ಸಂಖ್ಯಾಲೋಕದಲ್ಲಿ ನನ್ನನ್ನು ಒಂಟಿ ಮಾಡದೆ ನೀವೆಲ್ಲಾ ಜೊತೆಗೆ ಬರ್ತೀರಿ ಅಂತ ತುಂಬಾ ಭರವಸೆ ಇಟ್ಟುಕೊಂಡಿದ್ದೇನೆ. ನಿಮಗೆ 1ರ ಬಗ್ಗೆ ಯಾವ ವಿಶೇಷ ಗೊತ್ತು ತಿಳಿಸ್ತೀರಾ?


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X