ಕ್ರಿಸ್ಮಸ್ ಹಬ್ಬದ ಸಡಗರ ಹೆಚ್ಚಿಸಲು ಆಂಡ್ರಾಯ್ಡ್ ಆಪ್

ಯಸ್, ಇಟ್ಸ್ ಟೈಮ್ ಫಾರ್ ಕ್ರಿಸ್ಮಸ್. ಕ್ರಿಸ್ಮಸ್ ಹಬ್ಬ ಅಂದ್ರೆ ಕ್ರಿಶ್ಚಿಯನ್ನರಿಗೆ ಮಾತ್ರ ಹಬ್ಬವಲ್ಲ. ಇತರರ ಕಣ್ಣಿಗೂ ಹಬ್ಬ. ಕ್ರಿಶ್ಚಿಯನ್ನರಿಗೆ ವರ್ಷಕ್ಕೊಂದೇ ದೊಡ್ಡ ಹಬ್ಬವಾದ್ದರಿಂದ ಚರ್ಚುಗಳಲ್ಲಿ ಸಡಗರ, ಅಂಗಳದಲ್ಲಿ ಅಲಂಕರಿಸಿ ನಿಲ್ಲಿಸಿದ ಕ್ರಿಸ್ಮಸ್ ಟ್ರೀಯಲ್ಲಿ ಏನೋ ಕಲರವ! ಫ್ರೂಟ್ ಕೇಕಿನ ಘಮಲು, ವೈನಿನ ಅಮಲು!

ಕ್ರಿಸ್ಮಸ್ ಸಡಗರವನ್ನು ಇನ್ನಷ್ಟು ಹೆಚ್ಚಿಸಲೆಂದು ಗೂಗಲ್ ಪ್ಲೇಸ್ಟೋರ್ ನಲ್ಲಿ ಹೊಸದೊಂದು ಅಪ್ಲಿಕೇಷನ್ (ಆಪ್) ಕಾದು ಕುಳಿತಿದೆ. ಎಲ್ಲರ ಕೈಯಲ್ಲಿ ಓಡಾಡುತ್ತಿರುವ ಸ್ಮಾರ್ಟ್ ಹುಡುಗ, ಹುಡುಗಿಯರ ಸ್ಮಾರ್ಟ್ ಫೋನುಗಳಲ್ಲಿ ಈ ಆಪ್ ಈಗಾಗಲೆ ಸಂಚಲನ ಮೂಡಿಸಿದೆ.

ಮಾಡಬೇಕಾದುದಿಷ್ಟೆ : ಗೂಗಲ್ ಪ್ಲೇ ಸ್ಟೋರ್ ನ ಆಪ್ ಸರ್ಚ್ ನಲ್ಲಿ 'It's Time for Christmas' ಎಂದು ಟೈಪಿಸಿ ಆಂಡ್ರಾಯ್ಡ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.


ಯುವಜನತೆ ಮಾತ್ರವಲ್ಲ ಎಲ್ಲ ವಯಸ್ಸಿನವರಿಗೆ ಏನೇನು ಬೇಕೋ ಅದೆಲ್ಲವೂ ಇಲ್ಲಿದೆ. ಅನಿಮೇಟೆಡ್ ವಾಲ್ ಪೇಪರ್, ಶುಭಾಶಯ ಪತ್ರಗಳು, ಸೋಷಿಯಲ್ ತಾಣಗಳಿಗಾಗಿ ವಿಶೇಷ ಕವರ್ ಫೋಟೋಗಳು, ತಿನಿಸನ್ನು ಇಷ್ಟಪಡುವವರಿಗೆ ತರಹೇವಾರಿ ಖಾದ್ಯಗಳ ಕುರಿತು ಮಾಹಿತಿ, ಮಕ್ಕಳಿಗಾಗಿ ರೋಚಕ ಕಥೆಗಳು... ಜಿಂಗ್ ಜಿಂಗಲ್ ಬೆಲ್ ಜಿಂಗಲ್ ಆಲ್ ದಿ ವೇ...

ಕಸ್ಟಮೈಜ್ ಮಾಡಿರುವ ವಾಲ್ ಪೇಪರುಗಳನ್ನು ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಬಹುದು. ಫೇಸ್ ಬುಕ್, ಗೂಗಲ್ ಪ್ಲಸ್, ಟ್ವಿಟ್ಟರ್ ಪುಟಗಳನ್ನು ಮತ್ತಷ್ಟು ಅಂದಗೊಳಿಸಲೆಂದು ವಿಶೇಷವಾದ ಕವರ್ ಫೋಟೋಗಳನ್ನು ಕೂಡ ಇಲ್ಲಿ ನೀಡಲಾಗಿದೆ. [ಕ್ರಿಸ್ಮಸ್ ಕುರಿತ ಸೋಜಿಗ ಸ್ವಾರಸ್ಯಗಳು]

ಕ್ರಿಸ್ಮಸ್ ಯಾಕೆ ಆಚರಿಸ್ತಾರೆ, ಸಾಂತಾ ಕ್ಲಾಸ್ ಯಾಕೆ ಬರುತ್ತಾನೆ, ಏನೇನು ತರುತ್ತಾನೆ... ಕಥೆಗಳನ್ನು ಮಕ್ಕಳಿಗೆ ಹೇಳಬೇಕಾ? ಪುಟ್ಟಪುಟ್ಟ ಕಥೆಗಳ ಹಂದರ ಇಲ್ಲಿದೆ. ಕ್ರಿಸ್ಮಸ್ ಟ್ರೀಯನ್ನು ಹೇಗೆ ಅಲಂಕರಿಸಬೇಕು ಎಂಬ ಚಿಂತೆಯೆ, ಅದಕ್ಕೂ ಇಲ್ಲಿ ಮಾರ್ಗದರ್ಶನ ನೀಡಲಾಗಿದೆ.


ಇನ್ನು ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಏನೇನು ತಿಂಡಿತಿನಿಸುಗಳನ್ನು ಮಾಡಬೇಕೆಂಬ ರೆಸಿಪಿ ವಿಭಾಗವೇ ಇಲ್ಲಿ ತೆರೆದುಕೊಂಡಿದೆ. ಜೊತೆಗೆ, ಬಂಧುಗಳಿಗೆ, ಸ್ನೇಹಿತರಿಗೆ ಎಂಥ ಉಡುಗೊರೆ ಕೊಡಬೇಕೆಂಬ ಸಂದಿಗ್ಧತೆ ಇದ್ದರೆ, ಅದಕ್ಕೂ ಇಲ್ಲಿ ಪರಿಹಾರವಿದೆ. [ರೆಡಿ ಮಾಡಿ ಎಗ್ ನಾಗ್ ರೆಸಿಪಿ]

ಇನ್ನು, ನಿಮ್ಮ ಮಗು ಕ್ರಿಸ್ಮಸ್ ಸಮಯದಲ್ಲಿ ಶುಭಾಶಯ ತಿಳಿಸಬೇಕೆಂದು ಬಯಸಿದ್ದರೆ, ಅವನ್ನು ಕಳಿಹಿಸಬಹುದು. ನಮ್ಮ ಸಂಪಾದಕರು ಅವೆಲ್ಲವನ್ನು ಕ್ರೋಢೀಕರಿಸಿ ಅತ್ಯುತ್ತಮವಾದ ಶುಭಾಶಯ, ಸಂದೇಶವನ್ನು ಬೋಲ್ಡ್ ಸ್ಕೈ ತಾಣದಲ್ಲಿ ಪ್ರಕಟಿಸುತ್ತಾರೆ. ಈ ಆಪ್ ನಿಮ್ಮ ಕ್ರಿಸ್ಮಸ್ ಸಡಗರವನ್ನು ಇನ್ನಷ್ಟು ಹೆಚ್ಚಿಸಲಿ, ಮೆರ್ರಿ ಕ್ರಿಸ್ಮಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+